Cricket News: ಪದೇ ಪದೇ ಗಾಯದ ಕಾರಣ ನೀಡಿ ತಂಡದಿಂದ ಹೊರಗುಳಿಯುತ್ತಿರುವ ಜಡೇಜಾಗೆ ಷರತ್ತು ವಿಧಿಸಿದ ಬಿಸಿಸಿಐ: ಈ ಕೆಲಸ ಮಾಡಿದರೆ ಮಾತ್ರ ಸ್ಥಾನ, ಇಲ್ಲವೇ??

Cricket News: ಪದೇ ಪದೇ ಗಾಯದ ಕಾರಣ ನೀಡಿ ತಂಡದಿಂದ ಹೊರಗುಳಿಯುತ್ತಿರುವ ಜಡೇಜಾಗೆ ಷರತ್ತು ವಿಧಿಸಿದ ಬಿಸಿಸಿಐ: ಈ ಕೆಲಸ ಮಾಡಿದರೆ ಮಾತ್ರ ಸ್ಥಾನ, ಇಲ್ಲವೇ??

Cricket News: ಟೀಮ್ ಇಂಡಿಯಾ (Team India) ಈ ವರ್ಷ ಭಾರತದಲ್ಲಿ ನಡೆಯಲಿರುವ ಓಡಿಐ ವರ್ಲ್ಡ್ ಕಪ್ (ODI World Cup) ಗಾಗಿ ಬಲಿಷ್ಠ ತಂಡವನ್ನು ಕಟ್ಟಲು ಸಿದ್ಧವಾಗಿದೆ. ಈ ಸಮಯದಲ್ಲಿ ಟೀಮ್ ಇಂಡಿಯಾದ ಪ್ರಮುಖ ಆಟಗಾರ ರವೀಂದ್ರ ಜಡೇಜಾ (Ravindra Jadeja) ಅವರು ತಂಡದಿಂದ ಕಳೆದ ಐದು ತಿಂಗಳುಗಳಿಂದ ದೂರ ಉಳಿದಿರುವ ವಿಷಯ ಗೊತ್ತೇ ಇದೆ. 2022ರಲ್ಲಿ ನಡೆದ ಏಷ್ಯಾಕಪ್ (Asiacup) ಟೂರ್ನಿಯಲ್ಲಿ ಜಡೇಜಾ ಅವರಿಗೆ ಇಂಜುರಿಗೆ ತುತ್ತಾದ ಕಾರಣ ತಂಡದಿಂದ ದೂರ ಉಳಿದರು. ಕೆಲವು ತಿಂಗಳುಗಳ ಕಾಲ ಚಿಕಿತ್ಸೆ ಪಡೆದು, ಎನ್.ಸಿ.ಎ (NCA) ನಲ್ಲಿದ್ದರು, ಬಳಿಕ ಬಾಂಗ್ಲಾದೇಶ್ ವಿರುದ್ಧದ ಪಂದ್ಯಕ್ಕೂ (India vs Bangladesh), ಆದರೆ ಬಾಂಗ್ಲಾದೇಶ್ ವಿರುದ್ಧದ ಸರಣಿ ಶುರು ಆಗುವುದಕ್ಕಿಂತ ಮೊದಲೇ ಇನ್ನು ಪೂರ್ತಿಯಾಗಿ ಫಿಟ್ ಆಗಿಲ್ಲ ಎಂದು ತಂಡದಿಂದ ಹೊರಗುಳಿದರು.

ಇದೀಗ ಫೆಬ್ರವರಿ 9 ರಿಂದ ಶುರುವಾಗುವ, ಬಾರ್ಡರ್ ಗವಾಸ್ಕರ್ ಟ್ರೋಫಿ (Border Gavaskar Trophy) ಪಂದ್ಯಾವಳಿ ಆಸ್ಟ್ರೇಲಿಯಾ ತಂಡದ ವಿರುದ್ಧ ನಡೆಯಲಿದೆ. ಎರಡು ಟೆಸ್ಟ್ ಪಂದ್ಯಗಳು ಈ ಸರಣಿಯಲ್ಲಿ ನಡೆಯಲಿದ್ದು, ಫೆಬ್ರವರಿ 9ರಂದು ಆಸ್ಟ್ರೇಲಿಯಾ ವಿರುದ್ಧ ನಾಗ್ಪುರದಲ್ಲಿ ಮೊದಲ ಪಂದ್ಯ ನಡೆಯಲಿದೆ. ಇದಕ್ಕಾಗಿ ಟೀಮ್ ಇಂಡಿಯಾ ತಂಡವನ್ನು ಆಯ್ಕೆ ಮಾಡಿದೆ, ಇದೀಗ ರವೀಂದ್ರ ಜಡೇಜಾ ಅವರು ಕೂಡ ತಂಡಕ್ಕೆ ಆಯ್ಕೆಯಾಗಿದ್ದಾರೆ, ಆದರೆ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಬಿಸಿಸಿಐ (BCCI) ಜಡೇಜಾ ಅವರಿಗೆ ಒಂದು ಸವಾಲು ಹಾಕಿದೆ, ಅದೇನೆಂದರೆ, ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ (India vs Australia) ಮೊದಲ ಟೆಸ್ಟ್ ಪಂದ್ಯಕ್ಕಿಂತ ಮೊದಲು ಒಂದು ದೇಶೀಯ ಪಂದ್ಯವನ್ನು ಜಡೇಜಾ ಅವರು ಆಡಲೇಬೇಕು, ಈ ಮೂಲಕ ಜಡೇಜಾ ಅವರು ತಾವು ಸಂಪೂರ್ಣ ಫಿಟ್ ಆಗಿರುವುದನ್ನು ನಿರೂಪಿಸಬೇಕು. ಇದನ್ನು ಓದಿ..Cricket News: 2023 ರಲ್ಲಿ ನಡೆಯುವ ವಿಶ್ವಕಪ್ ಗೆ ಸ್ಪಿನ್ನರ್ ಗಳನ್ನು ಆಯ್ಕೆ ಮಾಡಿದ ಗಂಭೀರ್: ಜಡೇಜಾ ಚಾಹಲ್ ಬಿಟ್ಟು ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??

ಒಂದು ವೇಳೆ ಜಡೇಜಾ ಅವರು ಫಿಟ್ ಆಗಿದ್ದರೆ, ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದಲ್ಲಿ ಲೆಫ್ಟ್ ಹ್ಯಾಂಡ್ ಬ್ಯಾಟ್ಸ್ಮನ್ ಇಲ್ಲದ ಕೊರತೆ ನೀಗುತ್ತದೆ. ಜಡೇಜಾ ಅವರು ಬೌಲಿಂಗ್ ನಲ್ಲಿ ಕೂಡ ನಿಸ್ಸಿಮರು ಎನ್ನುವುದು ಗೊತ್ತಿರುವ ವಿಚಾರ. ಈಗ ಜಡೇಜಾ ಅವರ ಬದಲಾಗಿ ಅಕ್ಷರ್ ಪಟೇಲ್ (Axar Patel) ಅವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ, ಇವರು ಬಾಂಗ್ಲಾದೇಶ್ ವಿರುದ್ಧದ ಪಂದ್ಯದಲ್ಲಿ ಅತಿ ಹೆಚ್ಚು ವಿಕೆಟ್ಸ್ ಪಡೆಯುವುದರ ಜೊತೆಗೆ, ಉತ್ತಮವಾಗಿ ಬ್ಯಾಟಿಂಗ್ ಮಾಡಿ ಕೊಡುಗೆ ನೀಡಿದ್ದರು. ಇವರು ಜಡೇಜಾ ಅವರ ಸ್ಥಾನದಲ್ಲಿ ಉತ್ತಮವಾಗಿದ್ದಾರೆ. ಆದರೆ ಅಂಕಿ ಅಂಶಗಳಲ್ಲಿ ಜಡೇಜಾ ಅವರು ಅತ್ಯುತ್ತಮರಾಗಿದ್ದು, ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕಿಂತ ಮೊದಲು ದೇಶೀಯ ಪಂದ್ಯವನ್ನಾಡಿ ತಂಡವನ್ನು ಸೇರಿಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Cricket News: ಶುರುವಾಯಿತು ನಾಯಕನ ಕೆಟ್ಟ ಅವತಾರ: ಭಾರತ ತಂಡದ ನಾಯಕನಾದ ತಕ್ಷಣ ಬಾಯಿಗೆ ಬಂದ ಹಾಗೆ ಮಾತನಾಡಬಹುದೇ? ಪಾಂಡ್ಯ ಮಾಡಿದ್ದೇನು ಗೊತ್ತೇ??