Cricket News: 2023 ರಲ್ಲಿ ನಡೆಯುವ ವಿಶ್ವಕಪ್ ಗೆ ಸ್ಪಿನ್ನರ್ ಗಳನ್ನು ಆಯ್ಕೆ ಮಾಡಿದ ಗಂಭೀರ್: ಜಡೇಜಾ ಚಾಹಲ್ ಬಿಟ್ಟು ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??

Cricket News: 2023 ರಲ್ಲಿ ನಡೆಯುವ ವಿಶ್ವಕಪ್ ಗೆ ಸ್ಪಿನ್ನರ್ ಗಳನ್ನು ಆಯ್ಕೆ ಮಾಡಿದ ಗಂಭೀರ್: ಜಡೇಜಾ ಚಾಹಲ್ ಬಿಟ್ಟು ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??

Cricket News: ಟೀಮ್ ಇಂಡಿಯಾಗೆ (Team India) 2022ರ ವರ್ಷ ಹೇಳಿಕೊಳ್ಳುವಂಥ ಯಶಸ್ಸು ನೀಡಿಲ್ಲ. ಉತ್ತಮವಾಗಿ ಪರ್ಫಾರ್ಮ್ ಮಾಡದೆ ಐಸಿಸಿ ಟ್ರೋಫಿಗಳನ್ನು (ICC Trophy) ಟೀಮ್ ಇಂಡಿಯಾ ಕಳೆದುಕೊಂಡಿತು. ಏಷಿಯಾ ಕಪ್, ಟಿ20 ವರ್ಲ್ಡ್ ಕಪ್ ಇವುಗಳನ್ನು ಕಳೆದುಕೊಂಡ ನಂತರ ಈಗ ಟೀಮ್ ಇಂಡಿಯಾ ಮತ್ತೆ ಕಂಬ್ಯಾಕ್ ಮಾಡಿ, ಈ ವರ್ಷ ಐಸಿಸಿ ಟ್ರೋಫಿ ಗೆಲ್ಲಲು ಸಜ್ಜಾಗುತ್ತಿದೆ. ಈ ವರ್ಷ, 2023ರ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಐಸಿಸಿ ಓಡಿಐ ವರ್ಲ್ ಕಪ್ (ODI World Cup) ನಡೆಯಲಿದ್ದು, ಇದಕ್ಕೆ ಟೀಮ್ ಇಂಡಿಯಾ ಸಜ್ಜಾಗುತ್ತಿದೆ. ಕಳೆದ ವರ್ಷ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಇದು ಸರಿಯಾದ ಸಮಯ ಆಗಿದೆ. ಈ ವರ್ಷ ಭಾರತದಲ್ಲೇ ಓಡಿಐ ವರ್ಲ್ಡ್ ಕಪ್ ನಡೆಯುವುದರಿಂದ ಟೀಮ್ ಇಂಡಿಯಾಗೆ ಟ್ರೋಫಿ ಗೆಲ್ಲಲು ಇದು ತುಂಬಾ ಒಳ್ಳೆಯ ಅವಕಾಶ ಆಗಿದೆ.

ವರ್ಲ್ಡ್ ಕಪ್ ಶುರು ಆಗುವುದಕ್ಕಿಂತ ಮೊದಲು ಭಾರತ ತಂಡವು 25 ಕ್ಕಿಂತ ಹೆಚ್ಚು ಓಡಿಐ ಪಂದ್ಯಗಳನ್ನು ಆಡಲಿದ್ದು, ಕಳೆದ ಸಾರಿ ತಮ್ಮಿಂದ ಆಗಿರುವ ತಮ್ಮಿಂದ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು, ವರ್ಲ್ಡ್ ಕಪ್ ಗಾಗಿ ಉತ್ತಮ ತಂಡ ಕಟ್ಟಲು ಈಗ ಹೆಚ್ಚಿನ ಸಮಯ ಕೂಡ ಇದೆ. ಈಗಿರುವ ಸಮಯವನ್ನು ಸದುಪಯೋಗ ಪಡಿಸಿಕೊಂಡು, ಯಾವ ಸ್ಥಾನಕ್ಕೆ ಯಾವ ಆಟಗಾರ ಸರಿ ಹೋಗುತ್ತಾರೆ ಅದೆಲ್ಲವನ್ನು ಭಾರತ ತಂಡ ಈ ಪಂದ್ಯಗಳಲ್ಲಿ ಕಂಡುಕೊಂಡು, ಉತ್ತಮ ತಂಡ ಕಟ್ಟಿದರೆ, ಓಡಿಐ ವರ್ಲ್ಡ್ ಕಪ್ ಗೆಲ್ಲಲು ಸಾಧ್ಯವಾಗುತ್ತದೆ. ಪ್ರಸ್ತುತ ಇಂಡಿಯಾ ವರ್ಸಸ್ ಶ್ರೀಲಂಕಾ (India vs Srilanka)ನಡುವಿನ ಪಂದ್ಯಗಳು ನಡೆಯುತ್ತಿದೆ. ಇದನ್ನು ಓದಿ..Cricket News: ಶುರುವಾಯಿತು ನಾಯಕನ ಕೆಟ್ಟ ಅವತಾರ: ಭಾರತ ತಂಡದ ನಾಯಕನಾದ ತಕ್ಷಣ ಬಾಯಿಗೆ ಬಂದ ಹಾಗೆ ಮಾತನಾಡಬಹುದೇ? ಪಾಂಡ್ಯ ಮಾಡಿದ್ದೇನು ಗೊತ್ತೇ??

ಎಲ್ಲೆಡೆ ಈಗ ಓಡಿಐವರ್ಲ್ಡ್ ಕಪ್ ಬಗ್ಗೆಯೇ ಚರ್ಚೆ ನಡೆಯುತ್ತಿದ್ದು, ಟೂರ್ನಮೆಂಟ್ ಗೆ ಯಾವ ಆಟಗಾರರು ಸೂಕ್ತರಾಗುತ್ತಾರೆ ಎಂದು ಚರ್ಚೆಗಳನ್ನು ನಡೆಸಲಾಗುತ್ತಿದೆ. ಇದರ ನಡುವೆ ಟೀಮ್ ಇಂಡಿಯಾದ ಮಾಜಿ ಆಟಗಾರ, 2011ರಲ್ಲಿ ವರ್ಲ್ಡ್ ಕಪ್ ಗೆದ್ದ ಭಾರತ ತಂಡದಲ್ಲಿದ್ದ ಆಟಗಾರ ಗೌತಮ್ ಗಂಭೀರ್ (Gautam Gambhir) ಅವರು ಓಡಿಐ ವರ್ಲ್ಡ್ ಕಪ್ ನಲ್ಲಿ ಟೀಮ್ ಇಂಡಿಯಾ ಪರವಾಗಿ ಆಡಲು ಸ್ಪಿನ್ನರ್ ಗಳನ್ನು ಆಯ್ಕೆ ಮಾಡಿದ್ದಾರೆ. ಆಶ್ಚರ್ಯ ಏನೆಂದರೆ, ಗಂಭೀರ್ ಅವದು ಯುಜವೇಂದ್ರ ಚಾಹಲ್ (Yuzvendra Chahal) ಮತ್ತು ರವೀಂದ್ರ ಜಡೇಜಾ (Ravindra Jadeja) ಅವರನ್ನು ತಮ್ಮ ತಂಡಕ್ಕೆ ಆಯ್ಕೆ ಮಾಡಿಕೊಂಡಿಲ್ಲ. ಬದಲಾಗಿ, ಅಕ್ಷರ್ ಪಟೇಲ್ (Azar Patel), ವಾಷಿಂಗ್ಟನ್ ಸುಂದರ್ (Washington Sundar), ಕುಲದೀಪ್ ಯಾದವ್ (Kuldeep Yadav) ಮತ್ತು ರವಿ ಬಿಷ್ನೋಯ್ (Ravishnoi) ಈ ನಾಲ್ವರನ್ನು ಆಯ್ಕೆ ಮಾಡಿದ್ದಾರೆ. ಇದನ್ನು ಓದಿ..IPL 2023: ವರ್ಷ ವರ್ಷ ದುಡ್ಡು ಖರ್ಚು ಮಾಡಿ IPL ನೋಡುತ್ತಿದ್ದವರಿಗೆ ಭರ್ಜರಿ ಸಿಹಿ ಸುದ್ದಿ. ಈ ಬಾರಿ ಫ್ರೀ. ಹೇಗೆ ಗೊತ್ತೇ?? ಅಂಬಾನಿ ಕೊಟ್ಟ ಭರ್ಜರಿ ಆಫರ್ ಏನು ಗೊತ್ತೇ?