Cricket News: ಶುರುವಾಯಿತು ನಾಯಕನ ಕೆಟ್ಟ ಅವತಾರ: ಭಾರತ ತಂಡದ ನಾಯಕನಾದ ತಕ್ಷಣ ಬಾಯಿಗೆ ಬಂದ ಹಾಗೆ ಮಾತನಾಡಬಹುದೇ? ಪಾಂಡ್ಯ ಮಾಡಿದ್ದೇನು ಗೊತ್ತೇ??
Cricket News: ಶುರುವಾಯಿತು ನಾಯಕನ ಕೆಟ್ಟ ಅವತಾರ: ಭಾರತ ತಂಡದ ನಾಯಕನಾದ ತಕ್ಷಣ ಬಾಯಿಗೆ ಬಂದ ಹಾಗೆ ಮಾತನಾಡಬಹುದೇ? ಪಾಂಡ್ಯ ಮಾಡಿದ್ದೇನು ಗೊತ್ತೇ??
Cricket News: ರೋಹಿತ್ ಶರ್ಮ (Rohit Sharma) ಅವರು ಟೀಮ್ ಇಂಡಿಯಾಗೆ (Team India) ಅಲಭ್ಯರಾಗಿರುವಾಗ, ಟಿ20 ತಂಡದ ನಾಯಕತ್ವದ ಜವಾಬ್ದಾರಿಯನ್ನು ಹಾರ್ದಿಕ್ ಪಾಂಡ್ಯ (Hardik Pandya) ಅವರಿಗೆ ನೀಡಲಾಗಿತ್ತು. ಇಂಡಿಯಾ ವರ್ಸಸ್ ಶ್ರೀಲಂಕಾ (India vs Srilanka) 3 ಪಂದ್ಯಗಳ ಟಿ20 ಸರಣಿಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ವಾಪಸ್ ಬಂದಿರುವ ಕಾರಣ, ಅವರೇ ಕ್ಯಾಪ್ಟನ್ ಆಗಿದ್ದು, ಕೆ.ಎಲ್.ರಾಹುಲ್ (K L Rahul) ಅವರ ಬದಲಾಗಿ ಹಾರ್ದಿಕ್ ಪಾಂಡ್ಯ ಅವರನ್ನು ತಂಡದ ವೈಸ್ ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಗಿದೆ. ಈ ಸರಣಿಯಲ್ಲಿ ಇನ್ನು ಒಂದು ಪಂದ್ಯ ಬಾಕಿ ಇದೆ, ಆದರೆ ಈಗಾಗಲೇ 2-0 ಅಂತರದಲ್ಲಿ ಟೀಮ್ ಇಂಡಿಯಾ ಸರಣಿಯನ್ನು ಗೆದ್ದಿದೆ..
ಸರಣಿ ಗೆದ್ದಿರುವ ಖುಷಿ ಒಂದು ಕಡೆ ಇದ್ದರೆ ಮತ್ತೊಂದು ಕಡೆ ವೈಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಅವರ ವರ್ತನೆ ನೆಟ್ಟಿಗರಿಗೆ ಬೇಸರ ತರಿಸಿದೆ. ಪಂದ್ಯದ ನಡುವೆ ಹಾರ್ದಿಕ್ ಪಾಂಡ್ಯ ಅವರು ಸಹ ಆಟಗಾರನ ಮೇಲೆ ಕೋಪ ಮಾಡಿಕೊಂಡು ಕೆಟ್ಟದಾಗಿ ಬೈದಿರುವ ವಿಚಾರ ಈಗ ವೈರಲ್ ಆಗುತ್ತಿದೆ. 2ನೇ ಪಂದ್ಯದಲ್ಲಿ ಆಡಲು ಸ್ಪಿನ್ನರ್ ಯುಜವೇಂದ್ರ ಚಾಹಲ್ ಅವರು ಸಂಪೂರ್ಣವಾಗಿ ಫಿಟ್ ಆಗಿರದ ಕಾರಣ, ಅವರ ಬದಲಾಗಿ ಕುಲದೀಪ್ ಯಾದವ್ (Kuldeep Yadav) ಅವರನ್ನು ಪ್ಲೇಯಿಂಗ್ 11 ಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಅದಕ್ಕೆ ತಕ್ಕ ಹಾಗೆ ಕುಲದೀಪ್ ಯಾದವ್ ಅವರು ಮೂರು ವಿಕೆಟ್ಸ್ ಪಡೆದುಕೊಂಡರು. ಈ ಪಂದ್ಯದಲ್ಲಿ ಓವರ್ ಮುಗಿದ ಬಳಿಕ ಆಟಗಾರರಿಗೆ ನೀರು ತಂದುಕೊಡುವ ಜವಾಬ್ದಾರಿಯನ್ನು ಚಾಹಲ್ ಅವರಿಗೆ ನೀಡಲಾಗಿತ್ತು. ಇದನ್ನು ಓದಿ..IPL 2023: ವರ್ಷ ವರ್ಷ ದುಡ್ಡು ಖರ್ಚು ಮಾಡಿ IPL ನೋಡುತ್ತಿದ್ದವರಿಗೆ ಭರ್ಜರಿ ಸಿಹಿ ಸುದ್ದಿ. ಈ ಬಾರಿ ಫ್ರೀ. ಹೇಗೆ ಗೊತ್ತೇ?? ಅಂಬಾನಿ ಕೊಟ್ಟ ಭರ್ಜರಿ ಆಫರ್ ಏನು ಗೊತ್ತೇ?
ಆದರೆ ಆ ಒಂದು ಓವರ್ ಮುಗಿದ ನಂತರ ಚಾಹಲ್ (Yuzvendra Chahl) ಅವರು ನೀರು ತಂದುಕೊಡಲಿಲ್ಲ. ಡಗೌಟ್ ನಲ್ಲಿಯೇ ಕುಳಿತಿದ್ದರು, ಆ ಸಮಯದಲ್ಲಿ ಹಾರ್ದಿಕ್ ಪಾಂಡ್ಯ ಅವರಿಗೆ ನೀರು ಬೇಕಿತ್ತು ಆದರೆ ಚಾಹಲ್ ಅವರು ನೀರು ತಂದುಕೊಡಲಿಲ್ಲ, ಅಥವಾ ನೀರು ತಂದುಕೊಡುವುದು ಲೇಟ್ ಆಯಿತು ಎನ್ನುವ ಕಾರಣಕ್ಕೆ, ಚಾಹಲ್ ಅವರಿಗೆ ಕೆಟ್ಟದಾಗಿ ಬೈದಿದ್ದು, ಅದು ಸ್ಟಂಪ್ ಮೈಕ್ ನಲ್ಲಿ ರೆಕಾರ್ಡ್ ಆಗಿದ್ದು, ಇದರ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ನೆಟ್ಟಿಗರು ಹಾರ್ದಿಕ್ ಪಾಂಡ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಈ ರೀತಿ ಮಾಡಬಾರದು ಎಂದು ಕಮೆಂಟ್ಸ್ ಗಳ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ.. Cricket News: ಸದಾ ಕಳಪೆ ಫಾರ್ಮ್ ನಲ್ಲಿ ಇರುವ ರಾಹುಲ್ ಗೆ ಚಾನ್ಸ್ ನೀಡಿ ಸೂರ್ಯ ಕುಮಾರ್ ಯಾದವ್, ಇಶಾನ್ ಕಿಶನ್ ರನ್ನು ಹೊರಗಿಟ್ಟಿದ್ದು ಯಾಕೆ ಅಂತೇ ಗೊತ್ತೇ??