IPL 2023: ವರ್ಷ ವರ್ಷ ದುಡ್ಡು ಖರ್ಚು ಮಾಡಿ IPL ನೋಡುತ್ತಿದ್ದವರಿಗೆ ಭರ್ಜರಿ ಸಿಹಿ ಸುದ್ದಿ. ಈ ಬಾರಿ ಫ್ರೀ. ಹೇಗೆ ಗೊತ್ತೇ?? ಅಂಬಾನಿ ಕೊಟ್ಟ ಭರ್ಜರಿ ಆಫರ್ ಏನು ಗೊತ್ತೇ?
IPL 2023: ವರ್ಷ ವರ್ಷ ದುಡ್ಡು ಖರ್ಚು ಮಾಡಿ IPL ನೋಡುತ್ತಿದ್ದವರಿಗೆ ಭರ್ಜರಿ ಸಿಹಿ ಸುದ್ದಿ. ಈ ಬಾರಿ ಫ್ರೀ. ಹೇಗೆ ಗೊತ್ತೇ?? ಅಂಬಾನಿ ಕೊಟ್ಟ ಭರ್ಜರಿ ಆಫರ್ ಏನು ಗೊತ್ತೇ?
IPL 2023: ಭಾರತ ಕ್ರಿಕೆಟ್ ಪ್ರಿಯರಿಗೆ ಐಪಿಎಲ್ (IPL) ಎನ್ನುವುದು ಒಂದು ಲೀಗ್ ಟೂರ್ನಮೆಂಟ್ ಮಾತ್ರವಲ್ಲ ಅದೊಂದು ಎಮೋಷನ್ ಎಂದು ಹೇಳಿದರೆ ತಪ್ಪಲ್ಲ. ಐಪಿಎಲ್ ಶುರುವಾಗಿ 15 ವರ್ಷ ಕಳೆದು, 16ನೇ ಸೀಸನ್ ಇನ್ನೇನು ಮೂರು ತಿಂಗಳುಗಳಲ್ಲಿ ಶುರುವಾಗಲಿದೆ, ಐಪಿಎಲ್ ಶುರುವಾದರೆ ತಮ್ಮ ಇಷ್ಟದ ಟೀಮ್ ಗೆ ಸಪೋರ್ಟ್ ಮಾಡುವ ನೋಡುಗರ ಸಂಖ್ಯೆ ಕೂಡ ಹೆಚ್ಚಾಗುತ್ತದೆ. ಹಾಗೆಯೇ ಎಲ್ಲರೂ ಐಪಿಎಲ್ ನೋಡುವ ಸಲುವಾಗಿ ಟಿವಿ, ಮೊಬೈಲ್ ಗಳಿಗೆ ಅಡಿಕ್ಟ್ ಆಗುತ್ತಾರೆ. ಈ ರೀತಿ ಆಗುವುದು ಸಾಮಾನ್ಯ ಎಂದೇ ಹೇಳಬಹುದು, ಏಕೆಂದರೆ ಐಪಿಎಲ್ ಗೆ ಇರುವ ಕ್ರೇಜ್ ಅಂಥದ್ದು.
ಇಷ್ಟು ದಿವಸಗಳ ಕಾಲ ಮೊಬೈಲ್ ಗಳ ಮೂಲಕ ಐಪಿಎಲ್ ಪಂದ್ಯಗಳನ್ನು ವೀಕ್ಷಣೆ ಮಾಡುತ್ತಿರುವವರಿಗೆ ಫ್ರೀಯಾಗಿ ಲೈವ್ ಪಂದ್ಯಗಳನ್ನು ನೋಡಲು ಆಗುತ್ತಿರಲಿಲ್ಲ. ಅದಕ್ಕೆ ಅವರು ಹಣ ಖರ್ಚು ಮಾಡಿ ಚಂದಾದಾರಿಕೆ ತೆಗೆದುಕೊಳ್ಳಬೇಕಿತ್ತು, ಆದರೆ ಈ ಸೀಸನ್ ನಲ್ಲಿ ಐಪಿಎಲ್ ಅಭಿಮಾನಿಗಳಿಗೆ ಆ ತೊಂದರೆ ಇರುವುದಿಲ್ಲ. ಐಪಿಎಲ್ ನ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕನ್ನು ರಿಲಯನ್ಸ್ (Reliance) ಸಂಸ್ಥೆ ಖರೀದಿ ಮಾಡಿದೆ ಎಂದು ಮಾಹಿತಿ ಸಿಕ್ಕಿದ್ದು, ರಿಲಯನ್ಸ್ ಜಿಯೋ ಸಂಸ್ಥೆಯು ಐಪಿಎಲ್ ಟೂರ್ನಿಯ ಪಂದ್ಯಗಳನ್ನು ಉಚಿತವಾಗಿ ಸ್ಟ್ರೀಮ್ ಮಾಡುವ ಯೋಜನೆ ತಯಾರಿಸುತ್ತಿದೆ ಎಂದು ಮಾಹಿತಿ ಸಿಕ್ಕಿದೆ. ದಿ ಹಿಂದೂ ಬ್ಯುಸಿನೆಸ್ ಟೈಮ್ಸ್ ನಲ್ಲಿ ಈ ಕುರಿತು ಮಾಹಿತಿ ಲಭ್ಯವಾಗಿದೆ. ಇದನ್ನು ಓದಿ..Cricket News: ಕೊನೆಗೂ ಸಿಕ್ತು ವಿಡಿಯೋ: ಧೋನಿಯನ್ನು ಮೀರಿಸುವಂತಹ ಕ್ಯಾಚ್ ಹಿಡಿದ ಇಶಾನ್ ಕಿಶನ್, ಈತನೇ ಮುಂದಿನ ಧೋನಿ ಅಂತೇ. ವಿಡಿಯೋ ನೋಡಿ.
ರಿಲಯನ್ಸ್ ಸಂಸ್ಥೆ ಅಂದುಕೊಂಡಿರುವ ಹಾಗೆ ಈ ಯೋಜನೆ ಏನಾದರೂ ಸಕ್ಸಸ್ ಕಂಡರೆ, ಈ ಸಂಸ್ಥೆ ಮತ್ತೊಂದು ಹೊಸ ಸೆನ್ಸೇಷನ್ ಸೃಷ್ಟಿಸುವುದು ಖಂಡಿತ. 2023ರ ಐಪಿಎಲ್ ಸೀಸನ್ 16ರ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕನ್ನು ರಿಲಯನ್ಸ್ ಸಂಸ್ಥೆಯ ಭಾಗವೇ ಆಗಿರುವ ವಯಾಕಾಮ್ 18 (Viacom 18) ಖರೀದಿ ಮಾಡಿರುವುದಾಗಿ ಮಾಹಿತಿ ಸಿಕ್ಕಿದೆ. ಇತ್ತೀಚೆಗೆ ನಡೆದ ಫಿಫಾ ವರ್ಲ್ಡ್ ಕಪ್ (FIFA World Cup) ಪಂದ್ಯಗಳನ್ನು ಜಿಯೋ ಸಿನಿಮಾ (Jio Cinema) ಆಪ್ ನಲ್ಲಿ ಉಚಿತವಾಗಿ ನೋಡುವ ಅವಕಾಶವನ್ನು ಜಿಯೋ ಸಂಸ್ಥೆ ನೀಡಿತ್ತು. ಐಪಿಎಲ್ ಪಂದ್ಯಗಳಿಗೂ ಇದೇ ರೀತಿ ಮಾಡಲಾಗುವುದು ಎಂದು ಮಾಹಿತಿ ಸಿಕ್ಕಿದೆ. ಒಂದು ವೇಳೆ ಇದು ನಿಜವೇ ಆದರೆ, ಅಭಿಮಾನಿಗಳಿಗೆ ಇದಕ್ಕಿಂತ ಸಂತೋಷ ಬೇರೆನಿದೆ. ಇದನ್ನು ಓದಿ.. Cricket News: ಅಂದು ಕೊಹ್ಲಿ ಹೇಳಿದ ಮಾತನ್ನು ಧಿಕ್ಕರಿಸಿದ್ದ ಬಿಸಿಸಿಐ: ಇಂದು ಕೊಹ್ಲಿ ಬಳಿಯೇ ತಂತ್ರ ರೂಪಿಸಲು ಮೊರೆ. ವಿಶ್ವಕಪ್ ಗೆಲ್ಲಲು ಏನು ಪ್ಲಾನ್ ಗೊತ್ತೇ??