Income Tax Department: ನೀವು ಹತ್ತನೇ ತರಗತಿ ಪಾಸ್ ಆಗಿದ್ದರೆ ಸಾಕು, ಸಿಗುತ್ತಿದೆ ಆದಾಯ ತೆರಿಗೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗ: ಹೇಗೆ ಅರ್ಜಿ ಸಲ್ಲಿಸಬೇಕು ಗೊತ್ತೇ?

Income Tax Department: ನೀವು ಹತ್ತನೇ ತರಗತಿ ಪಾಸ್ ಆಗಿದ್ದರೆ ಸಾಕು, ಸಿಗುತ್ತಿದೆ ಆದಾಯ ತೆರಿಗೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗ: ಹೇಗೆ ಅರ್ಜಿ ಸಲ್ಲಿಸಬೇಕು ಗೊತ್ತೇ?

Income Tax Department: ಕೇಂದ್ರ ಸರ್ಕಾರದ ಕೆಲಸ ಪಡೆಯಬೇಕು ಎನ್ನುವ ಆಸೆ ಯಾರಿಗೆ ತಾನೇ ಇರುವುದಿಲ್ಲ. ಸರ್ಕಾರಿ ಕೆಲಸ ಪಡೆದು, ಜೀವನದಲ್ಲಿ ಒಳ್ಳೆಯ ಮಟ್ಟಕ್ಕೆ ಬೆಳೆಯಬೇಕು ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಅಂಥವರಿಗೆ ಇಂದು ಕೇಂದ್ರ ಸರ್ಕಾರದ ಕಡೆಯಿಂದ ಒಂದು ಒಳ್ಳೆಯ ಅವಕಾಶ ಸಿಕ್ಕಿದೆ. ಈ ಅವಕಾಶವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡು, ಸರ್ಕಾರಿ ಕೆಲಸ ಪಡೆಯಿರಿ..2023ರಲ್ಲಿ ಈಗ ಆದಾಯ ತೆರಿಗೆ ಇಲಾಖೆಯು (Income Tax Department) ಕೆಲಸಕ್ಕೆ ಅರ್ಜಿ ಆಹ್ವಾನ ನೀಡಿದೆ, ಉಳಿದಿರುವ ಕೆಲಸಗಳನ್ನು ಭರ್ತಿ ಮಾಡಲಿದೆ. ಈ ಕೆಲಸದಲ್ಲಿ ಆಸಕ್ತಿ ಇರುವವರು ತಪ್ಪದೇ ಅರ್ಜಿ ಸಲ್ಲಿಸಿ.

ಆದಾಯ ತೆರಿಗೆ ಇಲಾಖೆಯ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 2023ರ ಫೆಬ್ರವರಿ 6 ಕೊನೆಯ ದಿನಾಂಕ ಆಗಿದೆ. ಈ ಕೆಲಸಕ್ಕೆ ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳ ಬಗ್ಗೆ ಮಾಹಿತಿ ನೀಡುವುದಾದರೆ, ಆದಾಯ ತೆರಿಗೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳು 72, ಆದಾಗ ತೆರಿಗೆ ಇನ್ಸ್ಪೆಕ್ಟರ್ (Income Tax Inspector), ತೆರಿಗೆ ಸಹಾಯಕ (Tax Assistant) ಹಾಗು ಮಲ್ಟಿ ಟಾಸ್ಕಿಂಗ್ ಸ್ಟಾಫ್ (Multi Tasking Staff). ಈ ಕೆಲಸಕ್ಕಾಗಿ ಸಿಗಬಹುದಾದ ವೇತನ ₹34,800 ರೂಪಾಯಿಗಳು. ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗ ಖಾಲಿ ಇರುವುದು ತಮಿಳುನಾಡು (Tamil Nadu) ಪಾಂಡಿಚೇರಿಯಲ್ಲಿ (Pondichery). ಈ ಹುದ್ದೆಗಳ ಬಗ್ಗೆ ಹೆಚ್ಚಿನ ವಿವರಗಳು ಹೀಗಿದೆ. ಆದಾಯ ತೆರಿಗೆ ಇನ್ಸ್ಪೆಕ್ಟರ್ ಹುದ್ದೆಗೆ 28 ಪೋಸ್ಟ್ ಗಳು ಖಾಲಿ ಇದೆ, ಈ ಕೆಲಸಕ್ಕೆ ಅರ್ಜಿ ಹಾಕುವವರು ಪದವಿ ಪೂರ್ತಿ ಮಾಡಿರಬೇಕು. ಈ ಕೆಲಸಕ್ಕೆ ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ 18 ರಿಂದ 30 ವರ್ಷಗಳು, ಇದರಲ್ಲಿ ಒಬಿಸಿ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ, ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ ಇರುತ್ತದೆ. ಈ ಕೆಲಸಕ್ಕೆ ತಿಂಗಳಿಗೆ ₹9,300 ರಿಂದ ₹34,800 ರ ವರೆಗು ಸಂಬಳ ಸಿಗಬಹುದು. ಇದನ್ನು ಓದಿ..High Court Recruitment: ಕಡಿಮೆ ಅಂದರೆ 8 ನೇ ತರಗತಿ ಪಾಸ್ ಆಗಿದ್ದರೂ ಪಡೆಯಿರಿ ಹೈ ಕೋರ್ಟ್ ನಲ್ಲಿ ಉದ್ಯೋಗ. ಅರ್ಜಿ ಹೇಗೆ ಸಲ್ಲಿಸುವುದು ಗೊತ್ತೇ??

ತೆರಿಗೆ ಸಹಾಯಕ ಹುದ್ದೆಗೆ 28 ಪೋಸ್ಟ್ ಗಳು ಖಾಲಿ ಇದೆ, ಇದಕ್ಕೆ ಅರ್ಜಿ ಹಾಕುವವರು ಪದವಿ ಓದಿರಬೇಕು, ವಯಸ್ಸಿನ ಮಿತಿ 18 ರಿಂದ 27 ವರ್ಷ, ಇದರಲ್ಲಿ ಒಬಿಸಿ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ, ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ ಇರುತ್ತದೆ. ಇವರಿಗೆ ತಿಂಗಳ ಸಂಬಳ ₹5,200 ರಿಂದ ₹20,200ರ ವರೆಗೂ ಇರುತ್ತದೆ.
ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗೆ, 16 ಪೋಸ್ಟ್ ಗಳು ಖಾಲಿ ಇದೆ. ಈ ಕೆಲಸಕ್ಕೆ ಅರ್ಜಿ ಹಾಕುವವರು 10ನೇ ತರಗತಿ ಓದಿರಬೇಕು, ವಯಸ್ಸಿನ ಮಿತಿ 18 ರಿಂದ 27 ವರ್ಷಗಳು, ಇದರಲ್ಲಿ ಒಬಿಸಿ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ, ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ ಇರುತ್ತದೆ. ಇವರಿಗೆ ತಿಂಗಳ ಸಂಬಳ, ₹5,200 ರಿಂದ ₹20,200ರ ವರೆಗು ಇರುತ್ತದೆ. ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆಗಳ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ, ಬಳಿಕ ಸಂದರ್ಶನ ಇರುತ್ತದೆ. ಅರ್ಜಿ ಸಲ್ಲಿಕೆ ಶುರುವಾಗುವ ದಿನಾಂಕ 14/01/2023, ಅರ್ಜಿ ಸಲ್ಲಿಕೆ ಮುಕ್ತಾಯ ಆಗುವ ದಿನಾಂಕ 6/02/2023. ಇದನ್ನು ಓದಿ.. Post Office: ಜಸ್ಟ್ 399 ರುಪಾಯಿಗೆ 10 ಲಕ್ಷದ ಅಪಘಾತ ವಿಮೆ ಪೋಸ್ಟ್ ಆಫೀಸ್ ನಲ್ಲಿ ಲಭ್ಯ: ಹೇಗೆ ಮಾಡಿಸಬೇಕು ಗೊತ್ತೇ??