Cricket News: ಸದಾ ಕಳಪೆ ಫಾರ್ಮ್ ನಲ್ಲಿ ಇರುವ ರಾಹುಲ್ ಗೆ ಚಾನ್ಸ್ ನೀಡಿ ಸೂರ್ಯ ಕುಮಾರ್ ಯಾದವ್, ಇಶಾನ್ ಕಿಶನ್ ರನ್ನು ಹೊರಗಿಟ್ಟಿದ್ದು ಯಾಕೆ ಅಂತೇ ಗೊತ್ತೇ??

Cricket News: ಸದಾ ಕಳಪೆ ಫಾರ್ಮ್ ನಲ್ಲಿ ಇರುವ ರಾಹುಲ್ ಗೆ ಚಾನ್ಸ್ ನೀಡಿ ಸೂರ್ಯ ಕುಮಾರ್ ಯಾದವ್, ಇಶಾನ್ ಕಿಶನ್ ರನ್ನು ಹೊರಗಿಟ್ಟಿದ್ದು ಯಾಕೆ ಅಂತೇ ಗೊತ್ತೇ??

Cricket News: ಇಂಡಿಯಾ ವರ್ಸಸ್ ಶ್ರೀಲಂಕಾ (India vs Srilanka) ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯ ನಿನ್ನೆ ಶುರುವಾಗಿದೆ. ಟಾಸ್ ಸೋತ ಭಾರತ ತಂಡ ಬ್ಯಾಟಿಂಗ್ ಮಾಡಬೇಕಿದೆ, ಶ್ರೀಲಂಕಾ ತಂಡದ ಕ್ಯಾಪ್ಟನ್ ದುಸನ್ ಶಾನಕ ಅವರು ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದರು. ಪಂದ್ಯ ಶುರು ಆಗುವುದಕ್ಕಿಂತ ಮೊದಲು, ಭಾರತ ತಂಡದ (Team India) ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma) ಅವರು ಮಾತನಾಡಿ, ಪ್ಲೇಯಿಂಗ್ 1 ಟೀಮ್ ಘೋಷಣೆ ಮಾಡಿದರು. ಆಡುವ ಬಳಗದಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಅವರಿಗೆ ಸ್ಥಾನ ಸಿಗದೆ ಇರುವುದು ಹಲವರಿಗೆ ಅಚ್ಚರಿ ಮೂಡಿಸಿದೆ.

ಒಳ್ಳೆಯ ಫಾರ್ಮ್ ನಲ್ಲಿರುವ ಇಬ್ಬರು ಆಟಗಾರರನ್ನು ತಂಡ ಹೊರಗಿಟ್ಟಿರುವುದು ಯಾಕೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿದ್ದು ಅದಕ್ಕೆ ಈಗ ಉತ್ತರ ಕೊಡಲಿದ್ದೇವೆ, ಈ ಪಂದ್ಯದಲ್ಲಿ ಓಪನರ್ ಆಗಿ ಶುಬ್ಮನ್ ಗಿಲ್ (Shubhman Gill) ಅವರು ಕಣಕ್ಕೆ ಇಳಿಯುತ್ತಿರುವುದರಿಂದ ಇಶಾನ್ ಕಿಶನ್ (Ishan Kishan) ಅವರನ್ನು ತಂಡದಿಂದ ಹೊರಗಿಡಲಾಗಿದೆ, ಇಶಾನ್ ಕಿಶನ್ ಅವರಿಗಿಂತ ಗಿಲ್ ಅವರು ಏಕದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ, ಹಾಗಾಗಿ ಅವರನ್ನು ಆಯ್ಕೆ ಮಾಡಲಾಗಿದೆ. ಗಿಲ್ ಅವರು ಕಳೆದ ವರ್ಷ ಆಡಿದ 12 ಏಕದಿನ ಪಂದ್ಯಗಳಲ್ಲಿ 638 ರನ್ಸ್ ಗಳಿಸಿದ್ದಾರೆ, ಇದರಲ್ಲಿ 1 ಶತಕ 4 ಅರ್ಧಶತಕ ಸೇರಿದೆ. ಇಶಾನ್ ಕಿಶನ್ ಅವರು 7 ಏಕದಿನ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 417 ರನ್ಸ್ ಗಳಿಸಿದ್ದಾರೆ. ಈ ಕಾರಣದಿಂದ ಇವರ ಬದಲಾಗಿ, ಶುಭಮನ್ ಗಿಲ್ ಅವರನ್ನು ಆಯ್ಕೆ ಮಾಡಿದ್ದಾರೆ. ಇದನ್ನು ಓದಿ..Cricket News: ಬಂದಂತೆ ಬಂದು, ತಂಡದಿಂದ ಹೊರಬಿದ್ದ ಬುಮ್ರಾ: ಹೊರಬಿದ್ದಿದ್ದು ಯಾಕೆ ಗೊತ್ತೇ?? ಬಿಸಿಸಿಐ ಕೊಟ್ಟ ಅಧಿಕೃತ ಮಾಹಿತಿ ಏನು ಗೊತ್ತೇ??

ಇನ್ನು ಸೂರ್ಯಕುಮಾರ್ ಯಾದವ್ (Suryakumar Yadav) ಅವರ ಬದಲಾಗಿ ಶ್ರೇಯಸ್ ಅಯ್ಯರ್ (Shreyas Iyer) ಅವರನ್ನು ಭೇಟಿಯಾಗಿ ಆಯ್ಕೆ ಮಾಡಲಾಗಿದೆ. ಇವರು ಕಳೆದ ವರ್ಷ 15 ಏಕದಿನ ಪಂದ್ಯಗಳನ್ನು ಆಡಿದ್ದು, ಅವುಗಳಲ್ಲಿ 714 ರನ್ಸ್ ಗಳಿಸಿದ್ದಾರೆ, ಇಲ್ಲಿ ಒಂದು ಶತಕ ಹಾಗೂ 6 ಅರ್ಧಶತಕ ಇದೆ.. ಜೊತೆಗೆ 2022ರಲ್ಲಿ ಟೀಮ್ ಇಂಡಿಯಾ ಓಡಿಐ ಟೀಮ್ ನಲ್ಲಿ ಅತಿಹೆಚ್ಚು ರನ್ಸ್ ಗಳಿಸಿದ್ದಾರೆ. ಇತ್ತ ಸೂರ್ಯಕುಮಾರ್ ಯಾದವ್ ಅವರು ಕಳೆದ ವರ್ಷ ಆಡಿದ 12 ಏಕದಿನ ಪಂದ್ಯಗಳಲ್ಲಿ 260 ರನ್ಸ್ ಮಾತ್ರ ಗಳಿಸಿದ್ದಾರೆ. ಆದರೆ ಟಿ20 ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ಅವರು ಅತ್ಯುತ್ತಮ ದಾಖಲೆಗಳನ್ನು ಹೊಂದಿದ್ದಾರೆ. ಹಾಗಾಗಿ ಸೂರ್ಯಕುಮಾರ್ ಅವರ ಬದಲಾಗಿ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡಲಾಗಿದೆ. ಇದನ್ನು ಓದಿ.. Cricket News: ನಿವೃತ್ತಿ ಬಗ್ಗೆ ಕೇಳಿದಕ್ಕೆ ಕಡ್ಡಿ ಮುರಿದಂತೆ ಉತ್ತರ ನೀಡಿದ ನಾಯಕ ರೋಹಿತ್ ಶರ್ಮ; ಹೇಳಿದ್ದೇನು ಗೊತ್ತೇ?