Cricket News: ನಿವೃತ್ತಿ ಬಗ್ಗೆ ಕೇಳಿದಕ್ಕೆ ಕಡ್ಡಿ ಮುರಿದಂತೆ ಉತ್ತರ ನೀಡಿದ ನಾಯಕ ರೋಹಿತ್ ಶರ್ಮ; ಹೇಳಿದ್ದೇನು ಗೊತ್ತೇ?

Cricket News: ನಿವೃತ್ತಿ ಬಗ್ಗೆ ಕೇಳಿದಕ್ಕೆ ಕಡ್ಡಿ ಮುರಿದಂತೆ ಉತ್ತರ ನೀಡಿದ ನಾಯಕ ರೋಹಿತ್ ಶರ್ಮ; ಹೇಳಿದ್ದೇನು ಗೊತ್ತೇ?

Cricket News: ಟೀಮ್ ಇಂಡಿಯಾದ (Team India) ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma) ಅವರು ವಿಶ್ರಾಂತಿ ಪಡೆದು ತಂಡಕ್ಕೆ ವಾಪಸ್ ಬಂದಿದ್ದಾರೆ. ಇಂಡಿಯಾ ವರ್ಸಸ್ ಶ್ರೀಲಂಕಾ (India vs Srilanka) ಟಿ20 ಸರಣಿಯಿಂದ ರೋಹಿತ್ ಶರ್ಮ ಅವರು ಹೊರಗುಳಿದು ವಿಶ್ರಾಂತಿ ಪಡೆದಿದ್ದರು. ಇದೀಗ ತಂಡಕ್ಕೆ ಮತ್ತೆ ಕಂಬ್ಯಾಕ್ ಮಾಡಿದ್ದಾರೆ. ರೋಹಿತ್ ಶರ್ಮಾ ಅವರಿಗೆ ಈ ಸೀರೀಸ್ ಬಹಳ ಮುಖ್ಯವಾದದ್ದು, ಏಕೆಂದರೆ ರೋಹಿತ್ ಶರ್ಮಾ ಅವರ ಫಿಟ್ನೆಸ್ ಮತ್ತು ಅವರ ಫಾರ್ಮ್ ಗಮನದಲ್ಲಿ ಇಟ್ಟುಕೊಂಡು, ಬಿಸಿಸಿಐ ರೋಹಿತ್ ಶರ್ಮ ಅವರನ್ನು ಟಿ20 ತಂಡದಿಂದ ಹೊರಗಿಡುವ ಪ್ಲಾನ್ ನಲ್ಲಿದೆ.

ಈಗಾಗಲೇ 2 ಟಿ20 ಸೀರೀಸ್ ಗಳಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ಆಗಿ ಹಾರ್ದಿಕ್ ಪಾಂಡ್ಯ (Hardik Pandya) ಅವರು ಉತ್ತಮವಾಗಿ ಜವಾಬ್ದಾರಿಗಳನ್ನು ನಿಭಾಯಿಸುವುದು ಮಾತ್ರವಲ್ಲದೆ, ಎರಡು ಸೀರೀಸ್ ಗಳನ್ನು ಗೆದ್ದಿದ್ದಾರೆ. ಹಾಗಾಗಿ ಟಿ20 ತಂಡಕ್ಕೆ ಹಾರ್ದಿಕ್ ಪಾಂಡ್ಯ ಅವರನ್ನೇ ಕ್ಯಾಪ್ಟನ್ ಮಾಡಬಹುದು ಎನ್ನಲಾಗುತ್ತಿದೆ. ಈ ಕಾರಣಗಳಿಂದ ರೋಹಿತ್ ಶರ್ಮಾ ಅವರಿಗೆ ಈ ಸೀರೀಸ್ ಬಹಳ ಮುಖ್ಯವಾದದ್ದು, ಈ ಸೀರೀಸ್ ನಲ್ಲಿ ಒಬ್ಬ ಕ್ಯಾಪ್ಟನ್ ಆಗಿ ತಂಡವನ್ನು ಚೆನ್ನಾಗಿ ನಿಭಾಯಿಸುವುದು ಮಾತ್ರವಲ್ಲದೆ, ಬ್ಯಾಟ್ಸ್ಮನ್ ಆಗಿಯೂ ಉತ್ತಮ ಪ್ರದರ್ಶನ ನೀಡಲೇಬೇಕಿದೆ, ಒಂದು ಬೆಲೆ ಕಳಪೆ ಪ್ರದರ್ಶನ ನೀಡಿದರೆ, 35 ವರ್ಷದ ರೋಹಿತ್ ಶರ್ಮಾ ಅವರನ್ನು ಟಿ20 ಇಂದ ಪೂರ್ತಿಯಾಗಿ ಹೊರಗಿಡಬಹುದು. ಇದನ್ನು ಓದಿ.. Cricket News: ಎಬಿಡಿ ಅಥವಾ ಸೂರ್ಯ ಕುಮಾರ್ ಯಾದವ್, ಇವರಿಬ್ಬರಲ್ಲಿ ಯಾರು ಬೆಸ್ಟ್ ಅಂತೇ ಗೊತ್ತೇ? ಇರ್ಫಾನ್ ಪಠಾಣ್ ಹೇಳಿದ್ದೇನು ಗೊತ್ತೇ??

ಮುಂದಿನ ವಿಶ್ವಕಪ್ ಗೆ ಯುವ ಆಟಗಾರರ ಹೊಸ ತಂಡ ಕಟ್ಟಬೇಕು ಎನ್ನುವ ಬಿಸಿಸಿಐ (BCCI) ಈ ನಿರ್ಧಾರ ತೆಗೆದುಕೊಂಡಿದ್ದು, ರೋಹಿತ್ ಶರ್ಮ ಅವರು ಈ ಬಗ್ಗೆ ಮಾತನಾಡಿದ್ದಾರೆ, ಇಂಡಿಯಾ ವರ್ಸಸ್ ಶ್ರೀಲಂಕಾ ಪಂದ್ಯಕ್ಕಿಂತ ಮೊದಲು ಮಾತನಾಡಿದ್ದು, “ಟಿ20 ಇಂದ ದೂರ ಹೋಗೋಕೆ ನನಗೆ ಇಷ್ಟವಿಲ್ಲ. ವಿಶ್ರಾಂತಿ ನನಗು ಮುಖ್ಯ, ಅದರಿಂದಲೇ ಇಷ್ಟು ದಿನ ಹೊರಗಿದ್ದೆ. ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನು ಆಡಲು ಆಗುವುದಿಲ್ಲ, ಆಗಾಗ ವಿಶ್ರಾಂತಿ ಬೇಕಾಗುತ್ತದೆ. ಅದರಲ್ಲಿ ನಾನು ಒಬ್ಬ. ಟ20 ಇಂದ ನಿವೃತ್ತಿ ಪಡೆಯುವ ನಿರ್ಧಾರವನ್ನು ಇನ್ನು ಕೈಗೊಂಡಿಲ್ಲ. ಐಪಿಎಲ್ ನಂತರ ಏನಾಗುತ್ತದೆ ಎಂದು ಕಾದು ನೋಡಬೇಕಿದೆ..” ಎಂದು ಹೇಳಿದ್ದಾರೆ ರೋಹಿತ್ ಶರ್ಮಾ. ಇದನ್ನು ಓದಿ..Cricket News: ಕೊನೆಗೂ ಸಿಕ್ತು ವಿಡಿಯೋ: ಧೋನಿಯನ್ನು ಮೀರಿಸುವಂತಹ ಕ್ಯಾಚ್ ಹಿಡಿದ ಇಶಾನ್ ಕಿಶನ್, ಈತನೇ ಮುಂದಿನ ಧೋನಿ ಅಂತೇ. ವಿಡಿಯೋ ನೋಡಿ.