Cricket News: ಬಂದಂತೆ ಬಂದು, ತಂಡದಿಂದ ಹೊರಬಿದ್ದ ಬುಮ್ರಾ: ಹೊರಬಿದ್ದಿದ್ದು ಯಾಕೆ ಗೊತ್ತೇ?? ಬಿಸಿಸಿಐ ಕೊಟ್ಟ ಅಧಿಕೃತ ಮಾಹಿತಿ ಏನು ಗೊತ್ತೇ??
Cricket News: ಬಂದಂತೆ ಬಂದು, ತಂಡದಿಂದ ಹೊರಬಿದ್ದ ಬುಮ್ರಾ: ಹೊರಬಿದ್ದಿದ್ದು ಯಾಕೆ ಗೊತ್ತೇ?? ಬಿಸಿಸಿಐ ಕೊಟ್ಟ ಅಧಿಕೃತ ಮಾಹಿತಿ ಏನು ಗೊತ್ತೇ??
Cricket News: ಟೀಮ್ ಇಂಡಿಯಾದ (Team India) ವೇಗಿ ಜಸ್ಪ್ರೀತ್ ಬುಮ್ರ (Jasprit Bumrah) ಅವರು 5 ತಿಂಗಳ ನಂತರ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡುತ್ತಾರೆ ಎನ್ನುವ ಸುದ್ದಿ ಕ್ರಿಕೆಟ್ ಪ್ರಿಯರಿಗೆ ಬಹಳ ಸಂತೋಷ ತಂದಿತ್ತು, ಟೀಮ್ ಇಂಡಿಯಾದ ದೊಡ್ಡ ಬಲ ಬಂದ ಹಾಗೆ ಆಯಿತು ಎಂದೇ ಎಲ್ಲರು ಅಂದುಕೊಂಡಿದ್ದರು. ಆದರೆ ಇದೀಗ ಇದ್ದಕ್ಕಿದ್ದ ಹಾಗೆ ಶ್ರೀಲಂಕಾ (India vs Srilanka) ವಿರುದ್ಧದ ಏಕದಿನ ಸರಣಿ ಇಂದ ಜಸ್ಪ್ರೀತ್ ಬುಮ್ರ ಅವರನ್ನು ಕೈಬಿಡಲಗಿದೆ. ಇದಕ್ಕೆ ಒಂದು ಮಹತ್ವದ ಕಾರಣವನ್ನು ಕೂಡ ಬಿಸಿಸಿಐ ತಿಳಿಸಿದೆ..
2022ರ ಸೆಪ್ಟೆಂಬರ್ ತಿಂಗಳಿನಲ್ಲಿ ಬುಮ್ರ ಅವರಿಗೆ ಬೆನ್ನು ನೋವು ಕಾಣಿಸಿಕೊಂಡ ಕಾರಣ ಅವರು ಟೀಮ್ ಇಂಡಿಯಾ ಇಂದ ಹೊರಗುಳಿದಿದ್ದರು, ಇದರಿಂದ ವಿಶ್ವಕಪ್ (T20 World Cup) ಟೂರ್ನಿಯನ್ನು ಸಹ ಆಡಲು ಆಗಿರಲಿಲ್ಲ. ಸುಮಾರು 6 ತಿಂಗಳು ಎನ್.ಸಿ.ಎ (NCA) ನಲ್ಲಿ ಚಿಕಿತ್ಸೆ ಪಡೆದ ನಂತರ ಜಸ್ಪ್ರೀತ್ ಬುಮ್ರ ಅವರನ್ನು ಇಂಡಿಯಾ ವರ್ಸಸ್ ಶ್ರೀಲಂಕಾ ಓಡಿಐ ತಂಡಕ್ಕೆ ಆಯ್ಕೆ ಮಾಡಲಾಗಿತ್ತು, ಈಗಾಗಲೇ ಇಡೀ ತಂಡ ಗುವಾಹಟಿಗೆ ತಲುಪಿದೆ, ಆದರೆ ಬುಮ್ರ ಅವರು ಮಾತ್ರ ಇರಲಿಲ್ಲ. ಅದೇ ಸಮಯಕ್ಕೆ ಬುಮ್ರ ಅವರು ತಂಡದಿಂದ ಹೊರಗುಳಿಯುತ್ತಾರೆ ಎಂದು ಹೇಳಲಾಗಿತ್ತು. ಅದಾದ ಬಳಿಕ ನಿನ್ನೆ ಸಂಜೆ ಸಮಯಕ್ಕೆ, ಬಿಸಿಸಿಐ (BCCI) ಅಧಿಕೃತವಾಗಿ ಹೇಳಿಕೆ ನೀಡಿದೆ. ಇದನ್ನು ಓದಿ..Cricket News: ಎಬಿಡಿ ಅಥವಾ ಸೂರ್ಯ ಕುಮಾರ್ ಯಾದವ್, ಇವರಿಬ್ಬರಲ್ಲಿ ಯಾರು ಬೆಸ್ಟ್ ಅಂತೇ ಗೊತ್ತೇ? ಇರ್ಫಾನ್ ಪಠಾಣ್ ಹೇಳಿದ್ದೇನು ಗೊತ್ತೇ??
ಬಿಸಿಸಿಐ ತಿಳಿಸಿರುವ ಹಾಗೆ, ಬುಮ್ರ ಅವರು ಎಸ್.ಸಿ.ಎ ನಲ್ಲಿ ಚಿಕಿತ್ಸೆ ಪಡೆದ ನಂತರ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ಬುಮ್ರ ಅವರು ಇನ್ನು ಪೂರ್ತಿಯಾಗಿ ಚೇತರಿಸಿಕೊಂಡಿಲ್ಲದ ಕಾರಣ, ಅವರ ಆರೋಗ್ಯದ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ಬುಮ್ರ ಅವರನ್ನು ತಂಡದಿಂದ ಕೈಬಿಡಲಾಗಿದೆ, ಅವರು ಚೇತರಿಸಿಕೊಂಡ ನಂತರ ತಂಡವನ್ನು ಸೇರಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. ಜನವರಿ 18ರಂದು ಶುರುವಾಗುವ, ಇಂಡಿಯಾ ವರ್ಸಸ್ ನ್ಯೂಜಿಲೆಂಡ್ (India vs New Zealand) ವೈಟ್ ಬಾಲ್ ಹೋಮ್ ಸೀರೀಸ್ ಗೆ ಬುಮ್ರ ಅವರು ಕಂಬ್ಯಾಕ್ ಮಾಡುತ್ತಾರಾ ಎಂದು ಕಾದು ನೋಡಬೇಕಿದೆ.. ಇದನ್ನು ಓದಿ.. Cricket News: ಸರಣಿ ಗೆದ್ದರೂ ಹಾರ್ಧಿಕ್ ಗೆ ಇಲ್ಲ ಸಂತೋಷ: ಇಶಾನ್ ಮೇಲೆ ಕೋಪ ಮಾಡಿಕೊಂಡ ಪಾಂಡ್ಯ. ಯಾಕೆ ಗೊತ್ತೇ??
NEWS – Jasprit Bumrah ruled out of 3-match #INDvSL ODI series.
More details here – https://t.co/D45VColEXx #TeamIndia
— BCCI (@BCCI) January 9, 2023