Kannada News: ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯರಾದ ಕೆಲವೇ ದಿನಗಳಿಗೆ ಬದಲಾಯಿತೇ ಮಠ?? ನಡೆಯಬಾರದ ಘಟನೆ ನಡೆಯಿತು ಎಂದ ಭಕ್ತರು. ಬೇಸರ ವ್ಯಕ್ತ ಪಡಿಸಿದ್ದು ಯಾಕೆ??
Kannada News: ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯರಾದ ಕೆಲವೇ ದಿನಗಳಿಗೆ ಬದಲಾಯಿತೇ ಮಠ?? ನಡೆಯಬಾರದ ಘಟನೆ ನಡೆಯಿತು ಎಂದ ಭಕ್ತರು. ಬೇಸರ ವ್ಯಕ್ತ ಪಡಿಸಿದ್ದು ಯಾಕೆ??
Kannada news: ನಮಸ್ಕಾರ ಸ್ನೇಹಿತರೇ ಸಿದ್ದೇಶ್ವರ ಸ್ವಾಮಿಜಿ (Siddeshwara Swamy) ರವರ (ಜ್ಞಾನ ಯೋಗಾಶ್ರಮದ ಸ್ವಾಮೀಜಿಗಳ) ಬದುಕು ನಿಜಕ್ಕೂ ಎಲ್ಲರಿಗೂ ಆದರ್ಶವಾಗಿತ್ತು, ಆದರೆ ಇಂದು ಅವರು ನಮ್ಮ ಜೊತೆಗಿಲ್ಲ. ದೈಹಿಕವಾಗಿ ನಮ್ಮ ಜೊತೆ ಇಲ್ಲದಿದ್ದರೂ ಕೂಡ ಮಾನಸಿಕವಾಗಿ ಭಕ್ತಾದಿಗಳ ಮನದಲ್ಲಿ ಇಂದಿಗೂ ಕೂಡ ಅವರು ನೆಲೆಸಿದ್ದಾರೆ. ಎಂಬುವುದರಲ್ಲಿ ಎರಡು ಮಾತೇ ಇಲ್ಲ. ಆದರೆ ಈ ಸಮಯದಲ್ಲಿ ಆಶ್ರಮದಲ್ಲಿ ಒಂದು ಘಟನೆ ನಡೆದಿದೆ, ಈ ಘಟನೆ ಬಗ್ಗೆ ಹಲವಾರು ಭಕ್ತರು ಬೇಸರ ವ್ಯಕ್ತಪಡಿಸಿದ್ದು ನಾವು ಕಂಡ ಪುಣ್ಯಭೂಮಿ ಈ ಆಶ್ರಮದಲ್ಲಿ ಸ್ವಾಮೀಜಿಗಳು ಇಹಲೋಕ ತ್ಯಜಿಸಿದ ಕೇವಲ ಕೆಲವೇ ಕೆಲವು ದಿನಗಳಿಗೆ ಬದಲಾವಣೆ ಗಾಳಿ ಬೀಸಿದೆ ಎಂದು ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಅಷ್ಟಕ್ಕೂ ಯಾಕೆ ಈ ಮಹಾನ್ ವ್ಯಕ್ತಿ ನಡೆಸಿದ ಆಶ್ರಮದ ವಿರುದ್ಧ ಭಕ್ತಾದಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದರೆ ಬನ್ನಿ ನಾವು ತಿಳಿಸುತ್ತೇವೆ. ಸ್ನೇಹಿತರೆ ಜ್ಞಾನ ಯೋಗಿ ಶ್ರೀ ಸಿದ್ದೇಶ್ವರ ಅಪ್ಪಾಜಿ ರವರು ಒಬ್ಬ ಆದರ್ಶ ವ್ಯಕ್ತಿಯಾಗಿ ತಮ್ಮ ಜೀವನವನ್ನು ಸಾಗಿಸುತ್ತಿದ್ದರು. ಸಾವಿರಾರು ಅಲ್ಲ ಲಕ್ಷಾಂತರ ಜನರಿಗೆ ಜೀವನ ದಾರಿಯನ್ನು ತೋರಿಸಿ ಮಠವನ್ನು ನಡೆಸಿಕೊಂಡು ಬರುತ್ತಿದ್ದ ಸಿದ್ದೇಶ್ವರ ಸ್ವಾಮಿಜಿ ರವರು ಕೇವಲ ಒಂದೇ ಒಂದು ಮಾತು ಅಥವಾ ಒಂದೇ ಒಂದು ರಾಜಕೀಯ ನಡೆಯಿಂದ ಕೋಟ್ಯಂತರ ರೂಪಾಯಿ ಗಳಿಸಬಹುದಾಗಿತ್ತು. ಇದನ್ನು ಓದಿ..High Court Recruitment: ಕಡಿಮೆ ಅಂದರೆ 8 ನೇ ತರಗತಿ ಪಾಸ್ ಆಗಿದ್ದರೂ ಪಡೆಯಿರಿ ಹೈ ಕೋರ್ಟ್ ನಲ್ಲಿ ಉದ್ಯೋಗ. ಅರ್ಜಿ ಹೇಗೆ ಸಲ್ಲಿಸುವುದು ಗೊತ್ತೇ??
ಆದರೆ ತಾನು ಧರಿಸುತ್ತಿದ್ದ ಬಿಳಿ ಬಟ್ಟೆಯಲ್ಲಿ ಕೇವಲ ಒಂದು ಜೋಬು (ಕಿಸೆ) ಕೂಡ ಇಟ್ಟುಕೊಳ್ಳದಂತೆ ತನಗೆ ಯಾವುದೇ ರೀತಿಯಲ್ಲೂ ಹಣ ಬೇಡ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತಿದ್ದರು. ಅಷ್ಟೇ ಯಾಕೆ ಯಾವುದೇ ಒಂದು ಸಮುದಾಯವನ್ನು ಬೆಂಬಲಿಸಿಕೊಂಡು ಯಾವುದೇ ರೀತಿಯ ಮಾತುಗಳನ್ನು ಹೇಳುತ್ತಿರಲಿಲ್ಲ. ಕಾವಿ ಧರಿಸಿ ಎಂದರೂ ಕೂಡ ಅವುಗಳಿಂದ ಕೂಡ ದೂರ ಇದ್ದ ಸ್ವಾಮೀಜಿ ರವರು ಕೇವಲ ಸಾಮಾನ್ಯ ಬೆಲೆಯ ಬಿಳಿ ಬಟ್ಟೆಯನ್ನು ಧರಿಸಿ ಜೀವನದ ಉದ್ದಕ್ಕೂ ಆದರ್ಶ ವ್ಯಕ್ತಿಯಂತೆ ಬದುಕಿ ಎಲ್ಲರಿಗೂ ಆದರ್ಶ ವ್ಯಕ್ತಿಯಾಗಿದ್ದರು.
ಮಠಕ್ಕೆ ಹೋಗುವ ಭಕ್ತರಿಂದ ಕೇವಲ ಒಂದೊಂದು ರೂಪಾಯಿ ಹಣ ದೇಣಿಗೆ ಪಡೆದಿದ್ದರೂ ಕೂಡ ಭಕ್ತರೂ ಪದೇ ಪದೇ ಹೋಗುತ್ತಿದ್ದ ಕಾರಣ ಕೋಟ್ಯಂತರ ರೂಪಾಯಿ ಹಣವನ್ನು ಮಠ ಸಂಪಾದನೆ ಮಾಡಿಕೊಳ್ಳ ಬಹುದಾಗಿತ್ತು. ಆದರೆ ಎಂದಿಗೂ ಕೂಡ ಭಕ್ತರಿಂದ ಹಣ ಸಂಗ್ರಹಿಸಲು, ರಾಜಕೀಯ ನಾಯಕರಿಂದ ಅಥವಾ ಸರ್ಕಾರದಿಂದ ಅನುದಾನ ಪಡೆಯಲು ಸಿದ್ದೇಶ್ವರ ಸ್ವಾಮಿಗಳು ಮುಂದಾಗಲಿಲ್ಲ. ಹಣ ಬೇಡ ಎಂದು ಹಂಗಿಗೆ ಜೋಬಲ್ಲೇ ಇಟ್ಟುಕೊಳ್ಳದೆ ಇರುವ ಮಹಾನ್ ಸಂತ ಅವರು. ಇದನ್ನು ಓದಿ..Kannada News: ಕಾಲೇಜಿನಲ್ಲಿ ಟಾಪರ್, ಅಪ್ಪಟ ಬಂಗಾರದಂತಹ ಹುಡುಗಿ, ಮನೆಯವರ ಮಾತು ಕೂಡ ಮೀರುತ್ತಿರಲಿಲ್ಲ, ಆದರೆ ಈಕೆಯ ಬಾಳಲ್ಲಿ ಏನಾಯ್ತು ಗೊತ್ತೇ??
ಹೀಗೆ ಜೀವನದ ಉದ್ದಕ್ಕೂ ತಮ್ಮ ಇಡೀ ಜೀವನವನ್ನು ಕೇವಲ ಜನರಿಗಾಗಿ ಹಾಗೂ ಮಠಕ್ಕಾಗಿ ಮುಡಿಪಾಗಿಟ್ಟ ಸಿದ್ದೇಶ್ವರ ಸ್ವಾಮಿಗಳು ಇಂದು ನಮ್ಮ ಜೊತೆಗಿಲ್ಲ. ಇಂದು ಅವರು ನೀಡಿರುವ ಹಳೆಯ ಪ್ರವಚನಗಳೇ ಹಾಗೂ ಬದುಕು ಸಾಗಿಸಿದ ರೀತಿಯೇ ಎಲ್ಲರಿಗೂ ದಾರಿದೀಪ. ಹೀಗಿರುವಾಗ ಸ್ವಾಮೀಜಿಗಳು ಇಹಲೋಕವನ್ನು ತ್ಯಜಿಸಿದ ಕೆಲವೇ ಕೆಲವು ದಿನಗಳ ಬಳಿಕ ಮಠದಲ್ಲಿ ನಡೆದ ಒಂದು ಘಟನೆ ಭಕ್ತರಿಗೆ ಬಾರಿ ನೋವನ್ನು ಉಂಟುಮಾಡಿದೆ. ಹಲವಾರು ಜನ ಈ ಕುರಿತು ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ, ಅಷ್ಟಕ್ಕೂ ಏನಾಗಿದೆ ಗೊತ್ತ ಬನ್ನಿ ತಿಳಿಸಿಕೊಡುತ್ತೇವೆ.
ಸ್ನೇಹಿತರೆ ಜ್ಞಾನ ಯೋಗಿಗಳಾದ ಶ್ರೀ ಸಿದ್ದೇಶ್ವರ ಸ್ವಾಮೀಜಿ ರವರ ಮಠಕ್ಕೆ ನಾನು ವೈಯಕ್ತಿಕವಾಗಿ ಎಂದಿಗೂ ಭೇಟಿ ನೀಡಲು ಸಾಧ್ಯವಾಗಿಲ್ಲ, ಬಹುಶಹ ನಾನು ಆ ಪುಣ್ಯ ಮಾಡಿರಲಿಲ್ಲ ಎನಿಸುತ್ತದೆ. ಆದರೆ ಲಕ್ಷಾಂತರ ಭಕ್ತರು ಹೇಳಿದ ಪ್ರಕಾರ ಮಠದಲ್ಲಿ ಎಂದಿಗೂ ಒಂದು ದಿನ ದೇಣಿಗೆ ಪೆಟ್ಟಿಗೆಯನ್ನು ಯಾರು ಕಂಡಿರಲಿಲ್ಲ ಎಂಬ ಮಾತು ಇತ್ತು. ಯಾಕೆಂದರೆ ಸ್ವಾಮೀಜಿಗಳು ಅಂದಿನಿಂದಲೂ ಕೂಡ ಕಾಣಿಕೆಯ ಹುಂಡಿಗಳನ್ನು ಆಶ್ರಮದಲ್ಲಿ ಇರಿಸಲು ಅನುಮತಿ ನೀಡಿರಲಿಲ್ಲ. ಇದನ್ನು ಓದಿ..Kannada News: ನಿಜವಾಗಲೂ ಬೆಂಗಳೂರು-ಮೈಸೂರ್ ಎಕ್ಸ್ ಪ್ರೆಸ್ ಹೈವೇ ಬೈಕ್ – ಆಟೋಗೆ ಪ್ರವೇಶ ಇಲ್ಲ ಎಂದಿದ್ದು ಯಾಕೆ ಗೊತ್ತೇ? ಪ್ರತಾಪ್ ಸಿಂಹ ರವರು ಕೊಟ್ಟ ಕ್ಲಾರಿಟಿ ಏನು ಗೊತ್ತಾ?
ಆದರೆ ಜ್ಞಾನ ಯೋಗಶ್ರಮ ಸ್ವಾಮೀಜಿಗಳ ಚಿತಾಭಸ್ಮ ವಿಸರ್ಜನೆ ಮಾಡುವ ದಿನ ಭಕ್ತರಿಗೆ ಆಶ್ರಮಕ್ಕೆ ಬರಲು ಅನುಮತಿ ನೀಡಲಾಗಿತ್ತು. ಸ್ವಾಮಿಜಿಗಳು ಇಲ್ಲದೆ ಇದ್ದರೂ ಕೂಡ ಸ್ವಾಮೀಜಿಗಳು ಓಡಾಡಿದ ಪುಣ್ಯ ನೆಲದಲ್ಲಿ ಭಕ್ತಾದಿಗಳು ಎಂದಿನಂತೆ ಭಕ್ತಿಯಿಂದ ತೆರಳಿದ್ದರು. ಆದರೆ ಅಲ್ಲಿ ಸಿದ್ದೇಶ್ವರ ಸ್ವಾಮಿಜಿ ಅವರ ಫೋಟೋ ಇಟ್ಟು ಕೆಲವೊಂದು ಹಾರಗಳನ್ನು ಹಾಕಿ ನಂತರ ಆ ಫೋಟೋದ ಮುಂದೆ ಒಂದು ಕಾಣಿಕೆಯ ಡಬ್ಬಿಯನ್ನು ಇಡಲಾಗಿದೆ. ಹಣ ಬೇಡ ಎಂದು ತಾವು ಹಾಕಿಕೊಳ್ಳುತ್ತಿದ್ದ ಹಂಗಿಗೆ ಜೋಬನ್ನೇ ಇಟ್ಟುಕೊಳ್ಳದ ಮಹಾನ್ ಸಂತ ಲಿಂಗೈಕ್ಯರಾದ ತಕ್ಷಣ ಅವರ ಫೋಟೋ ಮುಂದೆ ದೇಣಿಗೆ ಪೆಟ್ಟಿಗೆಯನ್ನು ಇಡುವುದು ಎಷ್ಟು ಸರಿ ಎಂದು ಹಲವಾರು ಭಕ್ತರು ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ ಪ್ರಶ್ನೆ ಮಾಡುತ್ತಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.