Cricket News: ಸರಣಿ ಗೆದ್ದರೂ ಹಾರ್ಧಿಕ್ ಗೆ ಇಲ್ಲ ಸಂತೋಷ: ಇಶಾನ್ ಮೇಲೆ ಕೋಪ ಮಾಡಿಕೊಂಡ ಪಾಂಡ್ಯ. ಯಾಕೆ ಗೊತ್ತೇ??
Cricket News: ಸರಣಿ ಗೆದ್ದರೂ ಹಾರ್ಧಿಕ್ ಗೆ ಇಲ್ಲ ಸಂತೋಷ: ಇಶಾನ್ ಮೇಲೆ ಕೋಪ ಮಾಡಿಕೊಂಡ ಪಾಂಡ್ಯ. ಯಾಕೆ ಗೊತ್ತೇ??
Cricket News: ಇಂಡಿಯಾ ವರ್ಸಸ್ ಶ್ರೀಲಂಕಾ (India vs Srilanka) ಟಿ20 ಸರಣಿಯಲ್ಲಿ 2-1 ಅಂತರದಲ್ಲಿ ಭಾರತ ತಂಡ ಸರಣಿಯನ್ನು ಗೆದ್ದಿದೆ. ಸರಣಿ ಗೆದ್ದಿದ್ದಕ್ಕೆ ಎಲ್ಲರಿಗು ಖುಷಿ ಇದ್ದರು ಕೂಡ, ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ (Hardik Pandya) ಅವರಿಗೆ ಅದೊಂದು ವಿಚಾರಕ್ಕೆ ಬೇಸರವಿದೆ. ಅದೇನು ಎಂದರೆ, ಟೀಮ್ ಇಂಡಿಯಾದ ಯುವ ಆಟಗಾರ, ನಂಬಿಕೆಯ ಆಟಗಾರ ಎನ್ನಿಸಿಕೊಂಡಿದ್ದ ಇಶಾನ್ ಕಿಶನ್ (Ishan Kishan) ಅವರು ಈ ಮೂರು ಟಿ20 ಪಂದ್ಯಗಳಲ್ಲು ಉತ್ತಮ ಪ್ರದರ್ಶನ ನೀಡಿಲ್ಲ, ಇದರಿಂದ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಅವರಿಗೆ ತೀವ್ರವಾಗಿ ನಿರಾಸೆ ಆಗಿದ್ದು, ಅದನ್ನು ಅವರು ಹೊರಹಾಕಿದ್ದಾರೆ.
ಇಶಾನ್ ಕಿಶನ್ ಅವರು ಮೂರು ಪಂದ್ಯಗಳಲ್ಲಿ ಒಟ್ಟಾರೆಯಾಗಿ ಗಳಿಸಿದ್ದು, ಕೇವಲ 40 ರನ್ ಗಳು ಮಾತ್ರ. ಮೊದಲ ಪಂದ್ಯದಲ್ಲಿ, 29 ಎಸೆತಗಳಲ್ಲಿ 37 ರನ್ಸ್ ಗಳಿಸಿದರು, ಇದರಲ್ಲಿ 3 ಬೌಂಡರಿ ಹಾಗು ಎರಡು ಸಿಕ್ಸರ್ ಗಳಿದ್ದವು. ಇನ್ನು ಎರಡನೇ ಪಂದ್ಯದಲ್ಲಿ 5 ಎಸೆತಗಳಲ್ಲಿ ಕೇವಲ 2 ರನ್ಸ್ ಗಳಿಸಿ ಔಟ್ ಆದರು, ಮೂರನೇ ಪಂದ್ಯದಲ್ಲಿ 1 ರನ್ ಗಳಿಸಿ ಡಗೌಟ್ ಗೆ ಹೋದರು. ಹೀಗೆ ಇಶಾನ್ ಕಿಶನ್ ಅವರ ಕಳಪೆ ಫಾರ್ಮ್ ಮೂರು ಪಂದ್ಯಗಳಲ್ಲೂ ಮುಂದಿವರೆದಿದೆ, ಇದರಿಂದ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ನಿರಾಶೆಗೊಂಡು ನೀಡಿರುವ ಪ್ರತಿಕ್ರಿಯೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ಓದಿ.. Cricket News: ಎಬಿಡಿ ಅಥವಾ ಸೂರ್ಯ ಕುಮಾರ್ ಯಾದವ್, ಇವರಿಬ್ಬರಲ್ಲಿ ಯಾರು ಬೆಸ್ಟ್ ಅಂತೇ ಗೊತ್ತೇ? ಇರ್ಫಾನ್ ಪಠಾಣ್ ಹೇಳಿದ್ದೇನು ಗೊತ್ತೇ??
ಮೂರನೇ ಪಂದ್ಯ ಗೆಲ್ಲುವಲ್ಲಿ ಸೂರ್ಯಕುಮಾರ್ ಯಾದವ್ (Suryakumar Yadav) ಅವರ ಪಾತ್ರ ತುಂಬಾ ಮುಖ್ಯವಾಗಿತ್ತು. ಕೇವಲ 51 ಎಸೆತಗಳಲ್ಲಿ ಭರ್ಜರಿ 112 ರನ್ಸ್ ಭಾರಿಸಿದರು ಸೂರ್ಯಕುಮಾರ್ ಯಾದವ್, 26 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿ, ಶತಕ ಸಿಡಿಸಲು ಇನ್ನು 19 ರನ್ಸ್ ತೆಗೆದುಕೊಂಡರು. ಇವರ ಈ ಬಿಗ್ ಸ್ಕೋರ್ ಇಂದ ಭಾರತ ತಂಡದ ಸ್ಕೋರ್ 228 ರನ್ಸ್ ತಲುಪಿತು. ಇನ್ನುಳಿದ ಹಾಗೆ ರಾಹುಲ್ ತ್ರಿಪಾಠಿ (Rahul Tripathi)16 ಎಸೆತಗಳಲ್ಲಿ 35 ರನ್ಸ್ ಗಳಿಸಿದರು, ಹಾರ್ದಿಕ್ ಪಾಂಡ್ಯ 5 ರನ್ ಗಳಿಸಿ ಔಟ್ ಆದರು. ದೀಪಕ್ ಹೂಡಾ (Deepak Hooda) ಅವರು ಕೂಡ 4 ರನ್ ಗಳಿಸಿ ಔಟ್ ಆದರು, ಅಕ್ಷರ್ ಪಟೇಲ್ (Axar Patel) ಅವರು 9 ಎಸೆತಗಳಲ್ಲಿ 21 ರನ್ಸ್ ಭಾರಿಸಿ, ಭಾರತದ ಸ್ಕೋರ್ ಅನ್ನು 228 ಮಾಡಿದರು. ಇದನ್ನು ಓದಿ..Cricket News: ಕೊನೆಗೂ ಸಿಕ್ತು ವಿಡಿಯೋ: ಧೋನಿಯನ್ನು ಮೀರಿಸುವಂತಹ ಕ್ಯಾಚ್ ಹಿಡಿದ ಇಶಾನ್ ಕಿಶನ್, ಈತನೇ ಮುಂದಿನ ಧೋನಿ ಅಂತೇ. ವಿಡಿಯೋ ನೋಡಿ.