ಕರುನಾಡ ವಾಣಿ
ಇದು ನಿಮ್ಮ ಧ್ವನಿ

Kannada News: 8 ಟೋಲಾ ಚಿನ್ನ, ಫ್ಲಾಟ್, 10 ಲಕ್ಷ ಕೊಟ್ಟು ಮದುವೆ ಮಾಡಿದರು, ಆದರೆ ನಂತರ ಮಗಳ ಜೀವನ ಏನಾಯ್ತು ಗೊತ್ತೇ?? ಜೀವನಕ್ಕೆ ಇವೆಲ್ಲ ಬೇಕಾ??

468

Kannada News: ಮದುವೆ ನಂತರ ಗಂಡಂದಿರ ಮೇಲೆ ತಮ್ಮ ಹೆಂಡತಿಯರು ಬಹಳ ಪ್ರೀತಿ, ಆಸೆ ಇಟ್ಟುಕೊಂಡಿರುತ್ತಾರೆ. ಗಂಡ ಎಂಥದ್ದೇ ತಪ್ಪು ಮಾಡಿದರು ಕೂಡ ಹೆಂಡತಿ ಸಹಿಸಬಹುದು, ಆದರೆ ಗಂಡ ಮತ್ತೊಬ್ಬ ಮಹಿಳೆಯ ಜೊತೆಗೆ ಸಂಬಂಧ ಇಟ್ಟುಕೊಂಡರೆ, ಅದನ್ನು ಯಾವ ಮಹಿಳೆ ಕೂಡ ಸಹಿಸುವುದಿಲ್ಲ, ಇದು ಅತಿರೇಕಕ್ಕೆ ಹೋಗಿ, ಹೆಂಡತಿ ನೋವು ತಡೆಯಲಾಗದೆ, ಆಕೆ ತನ್ನ ಮೇಲೆಯೇ ತಾನು ಏನು ಬೇಕಾದರೂ ಮಾಡಿಕೊಳ್ಳುವ ಹಂತಕ್ಕೆ ಹೋಗಬಹುದು. ಇಂಥದ್ದೇ ಒಂದು ಘಟನೆ ಈಗ, ಹೈದರಾಬಾದ್ ನಲ್ಲಿ ನಡೆದಿದೆ.

ತಮ್ಮ ಪತಿ ಒಬ್ಬ ಮಹಿಳೆಯ ಜೊತೆಗೆ ಸಂಬಂಧ ಇಟ್ಟುಕೊಂಡಿರುವುನ್ನು ಸಹಿಸಲಾಗದೆ, ಆಕೆ ತನ್ನ ಉಸಿರನ್ನೇ ನಿಲ್ಲಿಸಿಕೊಂಡಿದ್ದಾರೆ. ಅಷ್ಟಕ್ಕೂ ನಡೆದಿದ್ದೇನು ಎಂದು ನೋಡುವುದಾದರೆ. ಹೈದರಾಬಾದ್ ನ ನಿಜಾಮಬಾದ್ ನ ದರ್ಪನಪಲ್ಲಿಯ ದಮ್ಮನಪೇಟೆಯ ಮಂಜುಳಾ ಎನ್ನುವ ಹುಡುಗಿ 2021ರ ಜನವರಿ 8ರಂದು ಪ್ರಸಾದ್ ಎನ್ನುವ ಹುಡುಗನ ಜೊತೆಗೆ ಮದುವೆಯಾಗಿದ್ದರು. ಮದುವೆಗಾಗಿ, ವರನಿಗೆ ತೊಲ ಬಂಗಾರ, ಒಂದು ಫ್ಲ್ಯಾಟ್ ಮತ್ತು 10 ಲಕ್ಷ ವರದಕ್ಷಿಣೆ ಹೀಗೆ ಭಾರಿ ವರದಕ್ಷಿಣೆ ನೀಡಿ ಮದುವೆ ಮಾಡಿಕೊಡಲಾಯಿತು ಮದುವೆ ನಂತರ ಇಬ್ಬರು ಹೈದರಾಬಾದ್ ಗೆ ಬಂದು ಅಲ್ಲಿಯೇ ಇದ್ದರು. ಪ್ರಸಾದ್ ಗೆ ಹೈದರಾಬಾದ್ ನಲ್ಲೇ ಕೆಲಸ ಸಿಕ್ಕಿ, ಈ ಜೋಡಿಗೆ ಒಂದು ಗಂಡು ಮಗು ಕೂಡ ಹುಟ್ಟಿತು. ಇದನ್ನು ಓದಿ..ಕೆಲಸಕ್ಕೆ ಹೋದ ಹೆಂಡತಿ ಅಲ್ಲಿ ಮಾಡಿದ್ದು ಮಾಡಬಾರದ ಕೆಲಸ. ಅಸಲಿ ಕಥೆ ತಿಳಿದ ಆಕೆಯ ತಮ್ಮ ಒಂದು ಹೆಜ್ಜೆ ಮುಂದೆ ಹೋಗಿ ಏನು ಮಾಡಿದ್ದಾನೆ ಗೊತ್ತೇ??

ಮದುವೆಯಾಗಿ ಮಗು ಹುಟ್ಟಿ ಕೆಲ ಸಮಯದವರೆಗೆ ಎಲ್ಲವೂ ಚೆನ್ನಾಗಿದ್ದು, ಬಳಿಕ ಪ್ರಸಾದ್ ಸ್ವಪ್ನ ಎನ್ನುವ ಹುಡುಗಿಯ ಜೊತೆಗೆ ಸಂಬಂಧ ಶುರು ಮಾಡಿಕೊಂಡಿದ್ದು, ಈ ವಿಚಾರ ಮಂಜುಳಾ ಅವರಿಗೆ ಗೊತ್ತಾಗಿ, ತನ್ನ ಮೇಲೆ ಮತ್ತು ತನ್ನ ಮಗನ ಮೇಲೆ ಗಂಡ ಕಾಳಜಿ ವಹಿಸುತ್ತಿಲ್ಲ ಎಂದು ಮನೆಯಲ್ಲಿ ಹೇಳಿ, ದೊಡ್ಡವರು ಸೇರಿ ಕೂತು ಮಾತನಾಡಿ, ಸಮಸ್ಯೆ ಬಗೆಹರಿಸಿದ್ದಾರೆ. ಆದರೂ ಪ್ರಸಾದ್ ವರ್ತನೆಯಲ್ಲಿ ಏನು ಬದಲಾವಣೆ ಆಗದ ಕಾರಣ, ಮಂಜುಳಾ ಅವರಿಗೆ ದುಃಖ ತಡೆಯಲಾಗದೆ, ಗಂಡ, ಮಗ ಕುಟುಂಬ ಎಲ್ಲರನ್ನು ಬಿಟ್ಟು, ತಮ್ಮ ಉಸಿರು ನಿಲ್ಲಿಸಿದ್ದಾರೆ. ಈ ಘಟನೆಯ ಬಗ್ಗೆ ಈಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ನಡೆಸುತ್ತಿದ್ದಾರೆ. ಇದನ್ನು ಓದಿ.. Gold Rate in Kannada: ವಾರದ ಅಂತ್ಯಕ್ಕೆ ಮತ್ತಷ್ಟು ಕುಸಿತ ಕಂಡ ಚಿನ್ನದ ಬೆಲೆ: ಈಗಲೇ ಖರೀದಿಸಿ, ಸೂಕ್ತ ಸಮಯ. ಮಿಸ್ ಮಾಡಿದರೆ, 60000 ತಲುಪುತ್ತದೆ.