Cricket News: ಅಂದು ಕೊಹ್ಲಿ ಹೇಳಿದ ಮಾತನ್ನು ಧಿಕ್ಕರಿಸಿದ್ದ ಬಿಸಿಸಿಐ: ಇಂದು ಕೊಹ್ಲಿ ಬಳಿಯೇ ತಂತ್ರ ರೂಪಿಸಲು ಮೊರೆ. ವಿಶ್ವಕಪ್ ಗೆಲ್ಲಲು ಏನು ಪ್ಲಾನ್ ಗೊತ್ತೇ??
Cricket News: ಅಂದು ಕೊಹ್ಲಿ ಹೇಳಿದ ಮಾತನ್ನು ಧಿಕ್ಕರಿಸಿದ್ದ ಬಿಸಿಸಿಐ: ಇಂದು ಕೊಹ್ಲಿ ಬಳಿಯೇ ತಂತ್ರ ರೂಪಿಸಲು ಮೊರೆ. ವಿಶ್ವಕಪ್ ಗೆಲ್ಲಲು ಏನು ಪ್ಲಾನ್ ಗೊತ್ತೇ??
Cricket News: ವಿರಾಟ್ ಕೊಹ್ಲಿ (Virat Kohli) ಅವರು ಟೀಮ್ ಇಂಡಿಯಾದ (Team India) ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಿ, ಹಲವು ಟೂರ್ನಿಗಳನ್ನು ಗೆದ್ದಿದ್ದಾರೆ. ವಿರಾಟ್ ಅವರು ಎಂಥಹ ಶ್ರೇಷ್ಠವಾದ ಕ್ಯಾಪ್ಟನ್ ಎಂದು ನಮಗೆಲ್ಲ ಗೊತ್ತು. ತಮ್ಮ ತಂಡಕ್ಕೆ ತಂಡದ ಪ್ಲೇಯರ್ ಗಳಿಗೆ ಏನು ಬೇಕು ಎಂದು ಕೋಹ್ಲಿ ಅವರಿಗೆ ಚೆನ್ನಾಗಿ ಗೊತ್ತಿತ್ತು. ಆದರೆ ಅಂದು 2019ರಲ್ಲಿ ನಡೆದ ಏಕದಿನ ವಿಶ್ವಕಪ್ ಸಮಯದಲ್ಲಿ ವಿರಾಟ್ ಕೋಹ್ಲಿ ಅವರು ನೀಡಿದ ಸಲಹೆಯನ್ನು ಬಿಸಿಸಿಐ (BCCI) ನಿರಾಕರಿಸಿತ್ತು. ಆದರೆ ಈಗ ಕೋಹ್ಲಿ ಅವರ ಸಲಹೆಯನ್ನೇ ಫಾಲೋ ಮಾಡುವ ಸಮಯ ಬಂದಿದೆ. ಈ ಮೂಲಕ ಕೆಟ್ಟಮೇಲೆ ಬಿಸಿಸಿಐಗೆ ಬುದ್ಧಿ ಬಂದಿದೆ.
2019ರ ಏಕದಿನ ವಿಶ್ವಕಪ್ (ODI World Cup) ಸಮಯದಲ್ಲಿ ವಿರಾಟ್ ಕೊಹ್ಲಿ ಅವರು ವಿಶ್ವಕಪ್ ನಲ್ಲಿ ಗೆಲ್ಲಬೇಕು ಎಂದರೆ, ತಂಡವನ್ನು ಫ್ರೆಶ್ ಆಗಿ ಇಡಬೇಕು ಅವರಿಗೆ ಹೆಚ್ಚು ಒತ್ತಡ ಇರಬಾರದು, ಹಾಗಾಗಿ ಫ್ರಂಟ್ ಲೈನ್ ವೇಗಿಗಳನ್ನು ಐಪಿಎಲ್ ಇಂದ ಕೆಲವು ಪಂದ್ಯಗಳಿಗೆ ವಿಶ್ರಾಂತಿ ಕೊಡಬೇಕು ಎಂದಿದ್ದರು, ಆಗ ಬಿಸಿಸಿಐ ಕೋಹ್ಲಿ ಅವರ ಮಾತುಗಳನ್ನು ಕೇಳಲಿಲ್ಲ, ಈಗಿನ ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma) ಕೂಡ ಅಂದು ಕೊಹ್ಲಿ ಅವರ ಮಾತಿಗೆ ವಿರುದ್ಧವಾಗಿ ನಿಂತಿದ್ದರು. ಆದರೆ ಇಂದು 4 ವರ್ಷಗಳಲ್ಲಿ ಹಲವು ಸೋಲುಗಳನ್ನು ಕಂಡ ಬಳಿಕ, ವಿರಾಟ್ ಅವರ ಮಾತನ್ನೇ ಅನುಸರಿಸುವ ಸುಮಯ ಬಂದಿದೆ, ಈಗ ಬಿಸಿಸಿಐ ಏಕದಿನ ವಿಶ್ವಕಪ್ ಗೆ ಆಯ್ಕೆಯಾಗಿರುವ ಆಟಗಾರರಿಗೆ ಏಕದಿನ ವಿಶ್ವಕಪ್ ಇಂದ ಕೆಲವು ಪಂದ್ಯಗಳಿಗೆ ವಿಶ್ರಾಂತಿ ನೀಡಲಿದೆ. ಇದನ್ನು ಓದಿ..Cricket News: ಅಶ್ವಿನ್ ಗಿಂತ ಚಾಹಲ್ ವಿಶ್ವಕಪ್ ಆಡಿದ್ದರೇ ಚೆನ್ನಾಗಿರುತ್ತದೆ ಎಂದ ದಿನೇಶ್ ಗೆ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು, DK ಗೆ ತಿರುಗು ಬಾಣ.
ಇಷ್ಟೇ ಅಲ್ಲರೆ, ಕೋಹ್ಲಿ ಅವರು ಕ್ಯಾಪ್ಟನ್ ಆಗಿದ್ದಾಗ ಫಿಟ್ನೆಸ್ ತುಂಬಾ ಮುಖ್ಯ ಇತ್ತು, ಫಿಟ್ ಆಗಿರದ ಆಟಗಾರರನ್ನು ತಂಡದಿಂದ ಹೊರಗಿಡುತ್ತಿದ್ದರು. ರೋಹಿತ್ ಶರ್ಮಾ ಅವರು ಕ್ಯಾಪ್ಟನ್ ಆದ ನಂತರ ಫಿಟ್ನೆಸ್ ವಿಚಾರಕ್ಕೆ ಅಷ್ಟು ತಲೆಕೆಡಿಸಿಕೊಂಡಿರಲಿಲ್ಲ. ಕೋಹ್ಲಿ ಅವರು ಟೀಮ್ ಇಂಡಿಯಾ ಪ್ಲೇಯರ್ಸ್ ಗಳಿಗೆ ಯೋ ಯೋ ಟೆಸ್ಟ್ ಕಂಪಲ್ಸರಿ ಮಾಡಿದ್ದರು, ರೋಹಿತ್ ಶರ್ಮಾ ಅವರ ಕ್ಯಾಪ್ಟನ್ಸಿಯಲ್ಲಿ ಈ ಟೆಸ್ಟ್ ಮರೆತ ಹಾಗಿತ್ತು. ಇನ್ನುಮುಂದೆ ಈ ಟೆಸ್ಟ್ ಜೊತೆಗೆ, ಡೆಕ್ಸ ಟೆಸ್ಟ್ ಅನ್ನು ಕೂಡ ಮಾಡಿಸಲಾಗುತ್ತದೆ. ಈ ಟೆಸ್ಟ್ ನ ಮೂಲಕ ಪ್ಲೇಯರ್ ನ ಬೋನ್ ಡೆನ್ಸಿಟಿ, ಬಾಡಿ ಫ್ಯಾಟ್ ಪರ್ಸಂಟೇಜ್, ಲೀನ್ ಮಸಲ್ ಮಾಸ್ ಎಲ್ಲದರ ಮಾಹಿತಿ ಸಿಗುತ್ತದೆ. ವಿರಾಟ್ ಕೊಹ್ಲಿ ಅವರ ತಂತ್ರಗಳನ್ನು ಅವರು ಹೇಳಿದ ಮಾತುಗಳನ್ನು ಬಳಿಸಿಕೊಂಡು ಏಕದಿನ ವಿಶ್ವಕಪ್ ಗೆಲ್ಲಲು ಮುಂದಾಗಿದೆ ಬಿಸಿಸಿಐ.. ಇದನ್ನು ಓದಿ..RCB IPL 2023: ಆರ್ಸಿಬಿ ಯಲ್ಲಿ ಈ ಮೂವರಿಗೆ ಹಣ ನೀಡಿರುವುದು ವ್ಯರ್ಥ: ಒಂದು ಪಂದ್ಯದಲ್ಲಿ ಅವಕಾಶ ನೀಡೋದು ಕೂಡ ಡೌಟ್. ಯಾರ್ಯಾರು ಗೊತ್ತೇ??