RCB IPL 2023: ಆರ್ಸಿಬಿ ಯಲ್ಲಿ ಈ ಮೂವರಿಗೆ ಹಣ ನೀಡಿರುವುದು ವ್ಯರ್ಥ: ಒಂದು ಪಂದ್ಯದಲ್ಲಿ ಅವಕಾಶ ನೀಡೋದು ಕೂಡ ಡೌಟ್. ಯಾರ್ಯಾರು ಗೊತ್ತೇ??
RCB IPL 2023: ಆರ್ಸಿಬಿ ಯಲ್ಲಿ ಈ ಮೂವರಿಗೆ ಹಣ ನೀಡಿರುವುದು ವ್ಯರ್ಥ: ಒಂದು ಪಂದ್ಯದಲ್ಲಿ ಅವಕಾಶ ನೀಡೋದು ಕೂಡ ಡೌಟ್. ಯಾರ್ಯಾರು ಗೊತ್ತೇ??
RCB IPL 2023: ಐಪಿಎಲ್ (IPL) ನಲ್ಲಿ ನಮ್ಮ ಬೆಂಗಳೂರಿನ ಆರ್ಸಿಬಿ (RCB) ತಂಡ ಮೂರು ಸಾರಿ ಫಿನಾಲೆ ಪ್ರವೇಶಿಸಿದೆ, ಆದರೆ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟಿರುವ ಆರ್ಸಿಬಿ, 2022ರಲ್ಲಿ ಕ್ವಾಲಿಫೈಯರ್ ಹಂತದ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ (Rajasthan Royals) ತಂಡದ ವಿರುದ್ಧ ಸೋತಿತು. ಆದರೆ ತಂಡದ ಪ್ರದರ್ಶನ ಚೆನ್ನಾಗಿದ್ದ ಕಾರಣ 2023ರ ಸೀಸನ್ ಗೆ ಬಹುತೇಕ ಆಟಗಾರರನ್ನು ಉಳಿಸಿಕೊಂಡಿದೆ, ಮಿನಿ ಹರಾಜಿನಲ್ಲಿ ರೀಸ್ ಟೋಪ್ಲೇ (Reece Topley) ಆವರಂತಹ 7 ಆಟಗಾರರನ್ನು ಬಲಿಷ್ಠ ತಂಡದ ಜೊತೆಗೆ ಈ ಬಾರಿ ಕಪ್ ಗೆಲ್ಲುವ ಯೋಜನೆಯಲ್ಲಿದೆ. ಆದರೆ ಈ ಬಾರಿ ಪ್ಲೇಯಿಂಗ್ 11 ಗೆ ಮೂಲ ತಂಡವನ್ನು ಆರ್ಸಿಬಿ ಉಳಿಸಿಕೊಂಡಿದ್ದು, ಅವರಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚು, ಮೂರು ಪ್ರತಿಭಾನ್ವಿತ ಆಟಗಾರರು ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆಯುವುದಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ಆ ಮೂವರು ಆಟಗಾರರು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ..
ವಿಲ್ ಜಾಕ್ಸ್ (Will Jacks) :- ಇಂಗ್ಲೆಂಡ್ (England) ತಂಡದ ಆಲ್ ರೌಂಡರ್ ಆಗಿರುವ ವಿಲ್ ಜಾಕ್ಸ್ ಅವರನ್ನು 3.2 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿದೆ. ಇವರನ್ನು ಸ್ಟಾರ್ ಪ್ಲೇಯರ್ ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell) ಅವರಿಗೆ ಬ್ಯಾಕಪ್ ಇವರನ್ನು ಖರೀದಿ ಮಾಡಲಾಗಿದ್. ಒಂದು ವೇಳೆ ಗ್ಲೆನ್ ಮ್ಯಾಕ್ಸ್ವೆಲ್ ಅವರು ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡು ಬಂದರೆ, ವಿಲ್ ಜಾಕ್ಸ್ ಅವರಿಗೆ ಪ್ಲೇಯಿಂಗ್ 11 ನಲ್ಲಿ ಅವಕಾಶ ಸಿಗುವುದಿಲ್ಲ. ವಿಲ್ ಜಾಕ್ಸ್ ಅವರು ಇಂಗ್ಲೆಂಡ್ ತಂಡದ ಉತ್ತಮ ಆಲ್ ರೌಂಡರ್ ಆಗಿದ್ದು, ಆರಂಭಿಕ ಆಟಗಾರನಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಹಾಗೆಯೇ ವೇಗದ ಬೌಲಿಂಗ್ ಉತ್ತಮವಾಗಿ ಮಾಡುತ್ತಾರೆ.. ಇದನ್ನು ಓದಿ..Cricket News: ಕ್ರಿಕೆಟ್ ವಲಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದ ಕ್ಯಾಚ್: ಇದು ಔಟ್ ಅಥವಾ ನಾಟ್ ಔಟ್ ಹಾ?? ವಿಡಿಯೋ ನೋಡಿ ಹೇಳುತ್ತೀರಾ??
ಡೇವಿಡ್ ವಿಲ್ಲಿ (David Villi) :- ಇವರನ್ನು 2022ರ ಐಪಿಎಲ್ ಸೀಸನ್ ನಲ್ಲಿ ಆರ್ಸಿಬಿ ತಂಡ ಖರೀದಿ ಮಾಡಿತ್ತು. ಆದರೆ ಗಾಯದ ಕಾರಣದಿಂದ ಇವರು ಹೆಚ್ಚಿನ ಪಂದ್ಯಗಳನ್ನು ಆಡಲು ಆಗಿರಲಿಲ್ಲ. ಆದರೆ ಮುಂದಿನ ಸೀಸನ್ ಗೆ ಉತ್ತಮವಾದ ಫಾರ್ಮ್ ನಲ್ಲಿದ್ದಾರೆ. ಇವರು ಉತ್ತಮವಾಗಿ ವೇಗದ ಬೌಲಿಂಗ್ ಮಾಡುತ್ತಾರೆ, ಹಾಗೆಯೇ ಬ್ಯಾಟಿಂಗ್ ನಲ್ಲೂ ಉತ್ತಮ ಪ್ರದರ್ಶನ ನೀಡುತ್ತಾರೆ. ಈಗಾಗಲೇ ತಂಡದಲ್ಲಿ ವಿದೇಶಿ ಬೌಲರ್ ಗಳು ಇದ್ದಾರೆ, ಜೋಶ್ ಹೇಜಲ್ ವುಡ್ ಅವರಿಗೆ ಬ್ಯಾಕಪ್ ಆಗಿ ಡೇವಿಡ್ ವಿಲ್ಲಿ ಅವರನ್ನು ಖರೀದಿ ಮಾಡಿರುವುದರಿಂದ, ಇವರಿಗೆ ಮುಂದಿನ ಸೀಸನ್ ನಲ್ಲಿ ಆಡುವ ಬಳಗದಲ್ಲಿ ಅವಕಾಶ ಸಿಗುವುದು ಕಷ್ಟವೇ ಆಗಿದೆ..
ಮಹಿಪಾಲ್ ಲೋಮ್ರೋರ್ (Mahipal Lomror) :- ಇವರನ್ನು ಕೂಡ ಆರ್ಸಿಬಿ ತಂಡ 2022ರಲ್ಲಿ ಖರೀದಿ ಮಾಡಿತ್ತು. ಇವರು ಕಳೆದ ಸೀಸನ್ ನಲ್ಲಿ 7 ಪಂದ್ಯಗಳನ್ನು ಆಡಿ, 150.88 ಸ್ಟ್ರೈಕ್ ರೇಟ್ ನಲ್ಲಿ 86 ರನ್ಸ್ ಗಳಿಸಿದ್ದಾರೆ. ಇವರು 2 ಓವರ್ ಬೌಲಿಂಗ್ ಮಾಡಿದರು ಆದರೆ ವಿಕೆಟ್ ಪಡೆದಿರಲಿಲ್ಲ. ಈಗಾಗಲೇ ಆರ್ಸಿಬಿ ತಂಡದಲ್ಲಿ ಸಾಕಷ್ಟು ಆಲ್ ರೌಂಡರ್ ಗಳಿದ್ದಾರೆ, ಮಹಿಪಾಲ್ ಮತ್ತು ಶಹಬಾಜ್ ಅಹ್ಮದ್ ನಡುವೆ ಭಾರಿ ಪೈಪೋಟಿ ಇದೆ, ಶಹಬಾಜ್ ಅಹ್ಮದ್ ಅವರು ಲೆಫ್ಟ್ ಹ್ಯಾಂಡ್ ಬ್ಯಾಟ್ಸ್ಮನ್ ಎನ್ನುವುದರ ಜೊತೆಗೆ, ಅನುಭಬಿ ಆಟಗಾರ ಸಹ ಹೌದು, ಹಾಗಾಗಿ ಮಹಿಪಾಲ್ ಅವರ ಬದಲು ಶಹಬಾಜ್ ಅವರಿಗೆ ಪ್ರಾಧಾನ್ಯತೆ ಕೊಡಬಹುದು. ಇದನ್ನು ಓದಿ.. Cricket News: ನಿಟ್ಟುಸಿರು ಬಿಟ್ಟ ಟೀಮ್ ಇಂಡಿಯಾ; ಸ್ಟಾರ್ ಆಟಗಾರ ವಾಪಸ್ಸು ತಂಡಕ್ಕೆ. ಇನ್ನು ಮುಂದೆ ಸೋಲೇ ಇಲ್ಲ ಎಂದ ಫ್ಯಾನ್ಸ್.