ಕರುನಾಡ ವಾಣಿ
ಇದು ನಿಮ್ಮ ಧ್ವನಿ

Cricket News: ಅಶ್ವಿನ್ ಗಿಂತ ಚಾಹಲ್ ವಿಶ್ವಕಪ್ ಆಡಿದ್ದರೇ ಚೆನ್ನಾಗಿರುತ್ತದೆ ಎಂದ ದಿನೇಶ್ ಗೆ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು, DK ಗೆ ತಿರುಗು ಬಾಣ.

246

Get real time updates directly on you device, subscribe now.

Kannada News: 2022ರಲ್ಲಿ ನಡೆದ ಟಿ20 ವರ್ಲ್ಡ್ ಕಪ್ (T20 World Cup) ನಲ್ಲಿ ಟೀಮ್ ಇಂಡಿಯಾ (Team India) ಗೆಲ್ಲಲಿಲ್ಲ, ಸೆಮಿ ಫೈನಲ್ಸ್ ಹಂತಕ್ಕೆ ಬಂದು ಸೋತು ಹೋಯಿತು. ಟೀಮ್ ಇಂಡಿಯಾದ ಆರಂಭ ಚೆನ್ನಾಗಿಯೇ ಇತ್ತು, ಗ್ರೂಪ್ ಸ್ಟೇಜ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಟೀಮ್ ಇಂಡಿಯಾ, ಬರೋಬ್ಬರಿ 8 ಪಾಯಿಂಟ್ಸ್ ಗಳಿಸಿ, ಅಗ್ರಸ್ಥಾನದಲ್ಲಿತ್ತು. ಬಹುತೇಕ ಎಲ್ಲಾ ಪಂದ್ಯಗಳನ್ನು ಉತ್ತಮವಾಗಿ ಗೆದ್ದಿತ್ತು. ಆದರೆ ಸೆಮಿ ಫೈನಲ್ಸ್ ಹಂತದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಭಾರತ ತಂಡ ಮುಗ್ಗರಿಸಿ ಬಿದ್ದಿತು. ಸೆಮಿ ಫೈನಲ್ಸ್ ನಲ್ಲಿ ಇಂಗ್ಲೆಂಡ್ ತಂಡ 10 ವಿಕೆಟ್ಸ್ ನಲ್ಲಿ ಗೆದ್ದಿತು.

ಇದು ಭಾರತ ತಂಡಕ್ಕೆ ಹೀನಾಯವಾದ ಸೋಲು ಎಂದರೆ ತಪ್ಪಲ್ಲ. ಇದೀಗ ಟಿ20 ವಿಶ್ವಕಪ್ ಟೂರ್ನಿ ಬಗ್ಗೆ ಮಾತನಾಡಿರುವ ದಿನೇಶ್ ಕಾರ್ತಿಕ್ (Dinesh Karthik) ಅವರು, ರವಿಚಂದ್ರನ್ ಅಶ್ವಿನ್ ಅವರ ಪ್ರದರ್ಶನದ ಬಗ್ಗೆ ಮಾತನಾಡಿ, ಟೂರ್ನಿಯಲ್ಲಿ ಅವರು ಉತ್ತಮ ಪ್ರದರ್ಶನ ನೀಡುವ ಮೂಲಕವೇ ಶುರು ಮಾಡಿದರು, ಆದರೆ ಅದು ಸರಿಯಾಗಿ ಕೊನೆಯಾಗಲಿಲ್ಲ, ರವಿಚಂದ್ರನ್ ಅಶ್ವಿನ್ (Ravichandran Chahal) ಉತ್ತಮವಾಗಿಯೇ ಪ್ರದರ್ಶನ ನೀಡಿದ್ದಾರೆ. ಒಂದು ವೇಳೆ ಅವರ ಬದಲಾಗಿ ಯುಜವೇಂದ್ರ ಚಾಹಲ್ (Yuzvendra Chahal) ಅವರನ್ನು ಆಯ್ಕೆ ಮಾಡಿದ್ದರೆ, ತಂಡಕ್ಕೆ ಇನ್ನು ಹೆಚ್ಚು ಡ್ಯಾಮೇಜ್ ಆಗುತ್ತಿತ್ತು ಎಂದು ಹೇಳಿಕೆ ನೀಡಿದ್ದಾರೆ. ವಿಶ್ವಕಪ್ ನಲ್ಲಿ ಅಶ್ವಿನ್ ಅವರು 6 ವಿಕೆಟ್ಸ್ ಪಡೆದಿದ್ದಾರೆ. ಕೆಲವು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ಇದನ್ನು ಓದಿ..Cricket News: ಕ್ರಿಕೆಟ್ ವಲಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದ ಕ್ಯಾಚ್: ಇದು ಔಟ್ ಅಥವಾ ನಾಟ್ ಔಟ್ ಹಾ?? ವಿಡಿಯೋ ನೋಡಿ ಹೇಳುತ್ತೀರಾ??

ಅಶ್ವಿನ್ ಅವರು 25.83 ಆವರೇಜ್ ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಬೌಲಿಂಗ್ ನಲ್ಲಿ ಅಶ್ವಿನ್ ಅವರ ಎಕಾನಮಿ 8.15 ಇತ್ತು. ಇವರ ಬಗ್ಗೆ ದಿನೇಶ್ ಕಾರ್ತಿಕ್ ಅವರು ಹೇಳಿಕೆ ನೀಡುತ್ತಿದ್ದ ಹಾಗೆಯೇ, ನೆಟ್ಟಿಗರು ದಿನೇಶ್ ಕಾರ್ತಿಕ್ ಅವರನ್ನು ತರಾಟೆಗೆ ತೆಗೆದುಕೊಳ್ಳುವುದಕ್ಕೆ ಶುರು ಮಾಡಿದ್ದಾರೆ. ಟ್ವೀಟ್ ಗಳ ಮೂಲಕ, ನಿಮಗಿಂತ ರವಿಚಂದ್ರನ್ ಅಶ್ವಿನ್ ಅವರೇ ಉತ್ತಮ ಪ್ರದರ್ಶನ ನೀಡಿದ್ದಾರೆ ಡಿಕೆ ಎಂದು ದಿನೇಶ್ ಕಾರ್ತಿಕ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಅಶ್ವಿನ್ ಅವರ ಬಗ್ಗೆ ಮಾತನಾಡುವ ಭರದಲ್ಲಿ ಚಾಹಲ್ ಅವರನ್ನು ಎಳೆದು ತಂದು, ಈಗ ತಾವೇ ಟ್ರೋಲ್ ಆಗುತ್ತಿದ್ದಾರೆ ಡಿಕೆ. ಇದನ್ನು ಓದಿ.. Cricket News: ನಿಟ್ಟುಸಿರು ಬಿಟ್ಟ ಟೀಮ್ ಇಂಡಿಯಾ; ಸ್ಟಾರ್ ಆಟಗಾರ ವಾಪಸ್ಸು ತಂಡಕ್ಕೆ. ಇನ್ನು ಮುಂದೆ ಸೋಲೇ ಇಲ್ಲ ಎಂದ ಫ್ಯಾನ್ಸ್.

Get real time updates directly on you device, subscribe now.