Cricket News: ನಿಟ್ಟುಸಿರು ಬಿಟ್ಟ ಟೀಮ್ ಇಂಡಿಯಾ; ಸ್ಟಾರ್ ಆಟಗಾರ ವಾಪಸ್ಸು ತಂಡಕ್ಕೆ. ಇನ್ನು ಮುಂದೆ ಸೋಲೇ ಇಲ್ಲ ಎಂದ ಫ್ಯಾನ್ಸ್.

Cricket News: ನಿಟ್ಟುಸಿರು ಬಿಟ್ಟ ಟೀಮ್ ಇಂಡಿಯಾ; ಸ್ಟಾರ್ ಆಟಗಾರ ವಾಪಸ್ಸು ತಂಡಕ್ಕೆ. ಇನ್ನು ಮುಂದೆ ಸೋಲೇ ಇಲ್ಲ ಎಂದ ಫ್ಯಾನ್ಸ್.

Cricket News: ಇಂಡಿಯಾ ವರ್ಸಸ್ ಶ್ರೀಲಂಕಾ (India vs Srilanka) ಟಿ20 ಪಂದ್ಯಗಳು ಇಂದಿನಿಂದ ಶುರುವಾಗಿದ್ದು, ಓಡಿಐ ಸರಣಿ ಪಂದ್ಯಗಳು ಜನವರಿ 10ರಿಂದ ಶುರುವಾಗಲಿದೆ. ಈ ಸರಣಿಗೆ ಭಾರತ ತಂಡದ ಸ್ಫೋಟಕ ಆಟಗಾರ, ಜಸ್ಪ್ರೀತ್ ಬುಮ್ರ (Jasprit Bumrah) ಅವರು ಕಂಬ್ಯಾಕ್ ಮಾಡುತ್ತಾರೆ ಎನ್ನುವ ಮಾಹಿತಿ ಸಿಕ್ಕಿದ್ದು, ಇದನ್ನು ಕೇಳಿ ಅಭಿಮಾನಿಗಳು ಸಂತೋಷಪಟ್ಟಿದ್ದಾರೆ. ಭಾರತ ತಂಡಕ್ಕೆ (Team India) ಜಸ್ಪ್ರೀತ್ ಬುಮ್ರ ಅವರ ವಾಪಸ್ ಬರುವಿಕೆ ಬಹಳ ಅಗತ್ಯವಿತ್ತು. ಇವರು ಪ್ರಬಲವಾದ ಬೌಲರ್ ಎನ್ನುವ ವಿಷಯ ನಮಗೆಲ್ಲಾ ಗೊತ್ತೇ ಇದೆ. ಸುಮಾರು ಐದು ತಿಂಗಳುಗಳ ಕಾಲ ಕ್ರಿಕೆಟ್ ಇಂದ ದೂರವೇ ಉಳಿದಿದ್ದರು ಜಸ್ಪ್ರೀತ್ ಬುಮ್ರ.

ಬುಮ್ರ ಅವರು ಕಳೆದ ವರ್ಷ ಇಂಜುರಿಗೆ ಒಳಗಾಗಿದ್ದರು, 2022ರ ಸೆಪ್ಟೆಂಬರ್ ನಲ್ಲಿ ನಡೆದ ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ (India vs Australia) ಪಂದ್ಯಗಳ ಮೂಲಕ ಕಂಬ್ಯಾಕ್ ಮಾಡಿದ ಬುಮ್ರ ಅವರಿಗೆ, ಎರಡು ಪಂದ್ಯಗಳ ನಂತರ ಮತ್ತೆ ನೋವು ಬರಲು ಶುರುವಾದ ಕಾರಣ, ಅವರು ವಿಶ್ರಾಂತಿ ಮತ್ತು ಚಿಕಿತ್ಸೆಗಾಗಿ, ತಂಡದಿಂದ ಹೊರಗೆ ಉಳಿದರು. ಎನ್.ಸಿ.ಎ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬುಮ್ರ ಅವರು ಈಗ ಸಂಪೂರ್ಣವಾಗಿ ಫಿಟ್ ಆಗಿರುವ ಕಾರಣ, ಇದೀಗ ಶ್ರೀಲಂಕಾ ವಿರುದ್ಧದ ಏಕದಿನ ಸೀರೀಸ್ ಮೂಲಕ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡುತ್ತಿದ್ದಾರೆ. ಇದನ್ನು ಓದಿ..Cricket News: ರಾಹುಲ್ ಬೇಡ ಬೇಡ, ರೋಹಿತ್ ಜೊತೆಗೆ ಈತ ಬ್ಯಾಟಿಂಗ್ ಆರಂಭಿಸಲಿ ಎಂದ ಗಂಭೀರ್, ಈತ ನಿಜಕ್ಕೂ ರಾಹುಲ್ ಸ್ಥಾನ ತುಂಬುವನೇ? ನೆಟ್ಟಿಗರು ಪ್ರಶ್ನೆ?

ಈ ಸುದ್ದಿ ಕೇಳಿ ಟೀಮ್ ಇಂಡಿಯಾ ಅಭಿಮಾನಿಗಳಂತೂ ಬಹಳ ಸಂತೋಷ ಪಡುತ್ತಿದ್ದಾರೆ. ಜನವರಿ 10 ರಿಂದ ಏಕದಿನ ಸರಣಿ ಪಂದ್ಯಗಳು ಶುರುವಾಗಲಿದ್ದು, ಮೊದಲ ಪಂದ್ಯ ಜನವರಿ 10ರಂದು ಗೌಹಾಟಿಯಲ್ಲಿ ನಡೆಯಲಿದೆ. ಎರಡನೇ ಪಂದ್ಯ ಜನವರಿ 12ರಂದು ಕೋಲ್ಕತಾದಲ್ಲಿ (Kolkata) ನಡೆಯಲಿದೆ. ಮೂರನೇ ಪಂದ್ಯ ಜನವರಿ 15ರಂದು ತಿರುವನಂತಪುರಂ (Tiruvananthapuram) ನಲ್ಲಿ ನಡೆಯಲಿದೆ. ಏಕದಿನ ಸರಣಿಗೆ ಭಾರತ ತಂಡ ಹೀಗಿದೆ, ರೋಹಿತ್ ಶರ್ಮಾ(Rohit Sharma) (ಕ್ಯಾಪ್ಟನ್), ಶುಭಮನ್ ಗಿಲ್ (Shubhman Gill), ವಿರಾಟ್ ಕೊಹ್ಲಿ (Virat Kohli), ಸೂರ್ಯಕುಮಾರ್ ಯಾದವ್ (Suryakumar Yadav), ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ವೈಸ್ ಕ್ಯಾಪ್ಟನ್), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್, ಜಸ್​ಪ್ರೀತ್ ಬುಮ್ರಾ. ಇದನ್ನು ಓದಿ..Cricket News: ಕ್ರಿಕೆಟ್ ವಲಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದ ಕ್ಯಾಚ್: ಇದು ಔಟ್ ಅಥವಾ ನಾಟ್ ಔಟ್ ಹಾ?? ವಿಡಿಯೋ ನೋಡಿ ಹೇಳುತ್ತೀರಾ??