Cricket News: ಕ್ರಿಕೆಟ್ ವಲಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದ ಕ್ಯಾಚ್: ಇದು ಔಟ್ ಅಥವಾ ನಾಟ್ ಔಟ್ ಹಾ?? ವಿಡಿಯೋ ನೋಡಿ ಹೇಳುತ್ತೀರಾ??
Cricket News: ಕ್ರಿಕೆಟ್ ವಲಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದ ಕ್ಯಾಚ್: ಇದು ಔಟ್ ಅಥವಾ ನಾಟ್ ಔಟ್ ಹಾ?? ವಿಡಿಯೋ ನೋಡಿ ಹೇಳುತ್ತೀರಾ??
Cricket News: ಕ್ರಿಕೆಟ್ ನಲ್ಲಿ ಕ್ಯಾಚ್ ಗಳು ಬಹಳ ಮುಖ್ಯ ಆಗುತ್ತದೆ. ಕ್ಯಾಚ್ ಗಳನ್ನು ಹಿಡಿದು, ಬ್ಯಾಟ್ಸ್ಮನ್ ಗಳನ್ನು ಔಟ್ ಮಾಡಿ, ಮ್ಯಾಚ್ ಗೆಲ್ಲುವುದಕ್ಕೆ ಸಹಾಯ ಆಗುತ್ತದೆ. ಇದೀಗ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಶ್ ಲೀಗ್ (Big Bash League) ನಲ್ಲಿ ಮೈಕಲ್ ನೇಸರ್ (Michael Neser) ಅವರು ಹಿಡಿದಿರುವ ಒಂದು ಕ್ಯಾಚ್ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಕ್ಯಾಚ್ ಔಟ್ ಹಾ ಅಥವಾ ನಾಟೌಟ್ ಹಾ ಎಂದು ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ. ಅಷ್ಟಕ್ಕೂ ಪಂದ್ಯದ ನಡುವೆ ನಡೆದಿದ್ದೇನು ಎಂದು ತಿಳಿಸುತ್ತೇವೆ ನೋಡಿ.. ಬಿಗ್ ಬ್ಯಾಶ್ ಲೀಗ್ ನ 25ನೇ ಪಂದ್ಯ ಸಿಡ್ನಿ ಸ್ಟ್ರೈಕರ್ಸ್ (Sidney Strikers) ಮತ್ತು ಬ್ರಿಸ್ಬೇನ್ ಹೀಟ್ (Brisbane Heat) ತಂಡಗಳ ನಡುವೆ ನಡೆಯಿತು.
ಈ ಪಂದ್ಯದಲ್ಲಿ ಬ್ರಿಸ್ಬೇನ್ ತಂಡ ಮೊದಲು ಬ್ಯಾಟಿಂಗ್ ಮಾಡಿ, 20 ಓವರ್ ಗಳಲ್ಲಿ 5 ವಿಕೆಟ್ಸ್ ನಷ್ಟಕ್ಕೆ, 224 ರನ್ಸ್ ಗಳಿಸಿತು, ಇದನ್ನು ಚೇಸ್ ಮಾಡಿದ ಸಿಡ್ನಿ ಸ್ಟ್ರೈಕರ್ಸ್ ತಂಡದ ಪರವಾಗಿ ಜೇಮ್ಸ್ ವಿನ್ಸ್ ಅವರು 41 ರನ್ಸ್ ಗಳಿಸಿದರು, ಜೋರ್ಡನ್ ಸಿಲ್ಕ್ (Jordan Silk) ಅವರು ಕೂಡ ಉತ್ತಮ ಬ್ಯಾಟಿಂಗ್ ನಡೆಸಿದರು, ಇವರು 21 ಎಸೆತಗಳಲ್ಲಿ ಭರ್ಜರಿ 41 ರನ್ಸ್ ಗಳಿಸಿದ್ದರು, ಇವರು ಪಂದ್ಯ ಗೆಲ್ಲಿಸುವ ಭರವಸೆಯನ್ನು ಕೂಡ ಮೂಡಿಸಿದ್ದರು. ಸಿಡ್ನಿ ಸ್ಟ್ರೈಕರ್ಸ್ ತಂಡ 18 ಓವರ್ ಗಳಲ್ಲಿ 199 ರನ್ಸ್ ಗಳಿಸಿ, ಗೆಲುವಿನ ಹಾದಿಯಲ್ಲಿತ್ತು, ಆ ಸಮಯದಲ್ಲಿ 19ನೇ ಓವರ್ ನಲ್ಲಿ ಬೌಲಿಂಗ್ ಮಾಡಲು ಬಂದ, ಮಾರ್ಕ್ ಸ್ಪೆಕೆಟಿ ಅವರು ಹಾಕಿದ ಬಾಲ್ ಅನ್ನು ಜೋರ್ಡನ್ ಸಿಲ್ಕ್ ಅದ್ಭುತವಾಗಿ ಭಾರಿಸಿದರು, ಈ ಬಾಲ್ ಅನ್ನು ಮೈಕಲ್ ನೇಸರ್ ಅವರು ಕ್ಯಾಚ್ ಹಿಡಿದರು, ಆದರೆ ಈ ಕ್ಯಾಚ್ ಬಗ್ಗೆ ಈಗ ಚರ್ಚೆ ಆಗುತ್ತಿದೆ.. ಇದನ್ನು ಓದಿ..Cricket News: ಶಿಖರ್ ಧವನ್ ಹೇಳಿದ ಆ ಒಂದು ಮಾತು ಕೇಳಿದ್ದರೇ, ರಿಷಬ್ ರವರಿಗೆ ಅಪಘಾತವೇ ಆಗುತ್ತಿರಲಿಲ್ಲ. ಏನೆಂದು ಹೇಳಿದ್ದರು ಗೊತ್ತೇ??
ಮೈಕಲ್ ನೇಸರ್ ಅವರು, ಬೌಂಡರಿ ಲೈನ್ ಒಳಗೆ ಕ್ಯಾಚ್ ಹಿಡಿದು, ನಂತರ ಬೌಂಡರಿ ಲೈನ್ ಒಳಗೆ ಹೋಗಿ, ಒಮ್ಮೆ ಚೆಂಡನ್ನು ಮೇಲಕ್ಕೆಸೆದು, ನಂತರ ಮತ್ತೆ ಬಾಲ್ ಅನ್ನು ಕ್ಯಾಚ್ ಹಿಡಿದು ಬೌಂಡರಿ ಲೈನ್ ಒಳಗೆ ಬಂದಿದ್ದಾರೆ. ಅಂಪೈರ್ ಇದಕ್ಕೆ ಔಟ್ ಎಂದು ತೀರ್ಪುನೀಡಿದ್ದಾರೆ, ಆದರೆ ಐಸಿಸಿ (ICC) ನಿಯಮದ ಪ್ರಕಾರ ಇದು ಔಟ್ ಆಗಿದೆ, ಐಸಿಸಿ ನಿಯಮದ ಅನುಸಾರ, ಬೌಂಡರಿ ಲೈನ್ ಒಳಗೆ ಕ್ಯಾಚ್ ಹಿಡಿದು, ಮತ್ತೆ ಹೊರಗೆ ಹೋಗಿ, ಚೆಂಡು ಎಸೆದದ್ದು ಔಟ್ ಕೊಡುವ ಹಾಗಿಲ್ಲ, ಈ ತೀರ್ಪಿಗೆ ಜೋರ್ಡನ್ ಅವರು ಕೂಡ ಮೈದಾನದಲ್ಲೇ ಕೋಪಗೊಂಡಿದ್ದರು. ಆದರೆ, ಇದರ ಬಗ್ಗೆ ಚರ್ಚೆಗಳು ಹೆಚ್ಚಾಗಿದ್ದು, ಈ ರೀತಿಯು ಬ್ಯಾಟ್ಸ್ಮನ್ ಗಳನ್ನು ಔಟ್ ಮಾಡಬಹುದೇ ಎಂದು ನೆಟ್ಟಿಗರು ಚರ್ಚೆ ಮಾಡುವುದಕ್ಕೆ ಶುರು ಮಾಡಿದ್ದಾರೆ. ಇದನ್ನು ಓದಿ..Cricket News: ರಾಹುಲ್ ಬೇಡ ಬೇಡ, ರೋಹಿತ್ ಜೊತೆಗೆ ಈತ ಬ್ಯಾಟಿಂಗ್ ಆರಂಭಿಸಲಿ ಎಂದ ಗಂಭೀರ್, ಈತ ನಿಜಕ್ಕೂ ರಾಹುಲ್ ಸ್ಥಾನ ತುಂಬುವನೇ? ನೆಟ್ಟಿಗರು ಪ್ರಶ್ನೆ?
Michael Neser’s juggling act ends Silk’s stay!
Cue the debate about the Laws of Cricket… #BBL12 pic.twitter.com/5Vco84erpj
— cricket.com.au (@cricketcomau) January 1, 2023