ಕರುನಾಡ ವಾಣಿ
ಇದು ನಿಮ್ಮ ಧ್ವನಿ

Cricket News: ರಾಹುಲ್ ಬೇಡ ಬೇಡ, ರೋಹಿತ್ ಜೊತೆಗೆ ಈತ ಬ್ಯಾಟಿಂಗ್ ಆರಂಭಿಸಲಿ ಎಂದ ಗಂಭೀರ್, ಈತ ನಿಜಕ್ಕೂ ರಾಹುಲ್ ಸ್ಥಾನ ತುಂಬುವನೇ? ನೆಟ್ಟಿಗರು ಪ್ರಶ್ನೆ?

Cricket News: ರಾಹುಲ್ ಬೇಡ ಬೇಡ, ರೋಹಿತ್ ಜೊತೆಗೆ ಈತ ಬ್ಯಾಟಿಂಗ್ ಆರಂಭಿಸಲಿ ಎಂದ ಗಂಭೀರ್, ಈತ ನಿಜಕ್ಕೂ ರಾಹುಲ್ ಸ್ಥಾನ ತುಂಬುವನೇ? ನೆಟ್ಟಿಗರು ಪ್ರಶ್ನೆ?

212

Cricket News: ಇಂಡಿಯಾ ವರ್ಸಸ್ ಬಾಂಗ್ಲಾದೇಶ್ (India vs Bangladesh) ಏಕದಿನ ಪಂದ್ಯಗಳ ಸರಣಿ ಮುಗಿದ ನಂತರ, ಈಗ ಭಾರತ ತಂಡವು, ಇಂಡಿಯಾ ವರ್ಸಸ್ ಶ್ರೀಲಂಕಾ (India vs Srilanka) ಪಂದ್ಯಗಳಿಗೆ ಅಭ್ಯಾಸ ನಡೆಸುತ್ತಿದೆ. ಈ ಸಮಯದಲ್ಲಿ ಭಾರತ ತಂಡದಲ್ಲಿ ಯಾರೆಲ್ಲಾ ಆಟಗಾರರು ಇರಲಿದ್ದಾರೆ, ಓಪನರ್ ಯಾರಾಗಬಹುದು ಎನ್ನುವ ಚರ್ಚೆಗಳೆಲ್ಲವು ಜೋರಾಗಿಯೇ ನಡೆಯುತ್ತಿದೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಿಂದ ಶಿಖರ್ ಧವನ್ (Shikhar Dhawan) ಅವರನ್ನು ಹೊರಗಿಡಲಾಗಿದೆ, ಹಾಗಾಗಿ ರೋಹಿತ್ ಶರ್ಮಾ (Rohit Sharma) ಅವರ ಜೊತೆಗೆ ಓಪನರ್ ಆಗಿ ಇನ್ನಿಂಗ್ಸ್ ಶುರು ಮಾಡುವುದು ಯಾರು ಎನ್ನುವ ಪ್ರಶ್ನೆ ಶುರುವಾಗಿದೆ..

Follow us on Google News

ಈ ಪ್ರಶ್ನೆಗೆ ಟೀಮ್ ಇಂಡಿಯಾದ (Team India) ಮಾಜಿ ಎಡಗೈ ಆಟಗಾರ ಗೌತಮ್ ಗಂಭೀರ್ (Gautam Gambhir) ಉತ್ತರ ಕೊಟ್ಟಿದ್ದಾರೆ, ಇವರು ಹೇಳುವ ಹಾಗೆ, ಬಾಂಗ್ಲಾದೇಶ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಕೇವಲ 131 ಎಸೆತಗಳಲ್ಲಿ ಬರೋಬ್ಬರಿ 210 ರನ್ಸ್ ಗಳಿಸಿದ ಸೆನ್ಸೇಷನಲ್ ಬ್ಯಾಟ್ಸ್ಮನ್ ಇಶಾನ್ ಕಿಶನ್ (Ishan Kishan) ಅವರನ್ನು ಆಯ್ಕೆ ಮಾಡಿದ್ದಾರೆ. ಏಕದಿನ ಸರಣಿಯಲ್ಲಿ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡ ಇಶಾನ್, ದ್ವಿಶತಕ ಭಾರಿಸಿ, ದಿಗ್ಗಜರ ಸಾಲಿಗೆ ಸೇರಿಕೊಂಡರು, ಇದರಿಂದ ಕಿಶನ್ ಅವರೇ ಗೌತಮ್ ಗಂಭೀರ್ ಅವರ ಮೊದಲ ಆಯ್ಕೆ ಆಗಿದ್ದಾರೆ.. “ಟೀಮ್ ಇಂಡಿಯಾದ ಓಪನರ್ ಬಗ್ಗೆ ಚರ್ಚೆ ಎಂದರೆ ಅದು ನನಗೆ ಆಶ್ಚರ್ಯ ತಂದಿದೆ, ಕಳೆದ ಪಂದ್ಯದಲ್ಲಿ ಇಶಾನ್ ಕಿಶನ್ ದ್ವಿಶತಕ ಸಿಡಿಸಿದರು, ಅವರನ್ನು ತಂಡದಿಂದ ಹೊರಗಿಡುವ ಪ್ರಶ್ನೆಯೇ ಇಲ್ಲ, ಎನ್ನುವುದಂತೂ ಸ್ಪಷ್ಟ. ಇದನ್ನು ಓದಿ..Cricket News: ದ್ರಾವಿಡ್ ಗೆ ಬಿಗ್ ಶಾಕ್ ಕೊಡಲು ಮುಂದಾದ ಬಿಸಿಸಿಐ: ಅಂದು ಕೊಹ್ಲಿ ಗೆ ದ್ರಾವಿಡ್ ಮಾಡಿದನ್ನು, ಇದೀಗ ದ್ರಾವಿಡ್ ಗೆ ಮಾಡಲಿದೆಯೇ ಬಿಸಿಸಿಐ??

ಟೀಮ್ ಇಂಡಿಯಾದಲ್ಲಿ ದ್ವಿಶತಕ ಸಿಡಿಸಿರುವ ಇವರೇ, ಇನ್ನಿಂಗ್ಸ್ ಶುರು ಮಾಡಬೇಕು.. 35ನೇ ಓವರ್ ನಡೆಯುವಾಗ ಅವರು ದ್ವಿಶತಕ ಸಿಡಿಸಿದರು. ಇವರ ಹಿಂದೆ ಯಾರಿದ್ದಾರೆ ಎಂದು ಇಲ್ಲಿ ನೋಡುತ್ತಾ ಇರಬಾರದು. ಅದರ ಬದಲಾಗಿ ಅವರಿಗೆ ಹೆಚ್ಚು ಸಮಯ ಆಡುವ ಅವಕಾಶ ಕೊಡಬೇಕು, ಅವರಿಗೆ ವಿಕೆಟ್ ಕೀಪಿಂಗ್ ನಿಭಾಯಿಸುವುದಕ್ಕೂ ಬಿಡಬೇಕು. ಹಾಗಾಗಿ ಅವರು ಎರಡು ಕೆಲಸವನ್ನು ಮಾಡಿದ ಹಾಗೆ ಆಗುತ್ತದೆ. ಇದರ ಬಗ್ಗೆ ಚರ್ಚೆ ಮಾಡಬಾರದು..” ಎಂದಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಕೆ.ಎಲ್.ರಾಹುಲ್ (K L Rahul) ಅವರು ಮಧ್ಯಮ ಕ್ರಮಾಂಕದಲ್ಲಿ ಆಡಲಿರುವ ಕಾರಣ, ಇಶಾನ್ ಕಿಶನ್ ಅವರೇ ಓಪನರ್ ಸ್ಥಾನಕ್ಕೆ ಉತ್ತಮ ಆಯ್ಕೆ ಆಗಿದ್ದಾರೆ. ಇದನ್ನು ಓದಿ..Cricket News: ಶಿಖರ್ ಧವನ್ ಹೇಳಿದ ಆ ಒಂದು ಮಾತು ಕೇಳಿದ್ದರೇ, ರಿಷಬ್ ರವರಿಗೆ ಅಪಘಾತವೇ ಆಗುತ್ತಿರಲಿಲ್ಲ. ಏನೆಂದು ಹೇಳಿದ್ದರು ಗೊತ್ತೇ??