Jio Recharge Plans: ಬಿಗ್ ನ್ಯೂಸ್: ನೂತನ ವರ್ಷಕ್ಕಾಗಿ ಭರ್ಜರಿ ಆಫರ್ ಕೊಟ್ಟ ಜಿಯೋ: ಲಾಭ ತಿಳಿದರೆ ಇರುವ ಪ್ಯಾಕ್ ಬಿಟ್ಟು ರಿಚಾರ್ಜ್ ಮಾಡಿಸ್ತೀರಾ.

Jio Recharge Plans: ಬಿಗ್ ನ್ಯೂಸ್: ನೂತನ ವರ್ಷಕ್ಕಾಗಿ ಭರ್ಜರಿ ಆಫರ್ ಕೊಟ್ಟ ಜಿಯೋ: ಲಾಭ ತಿಳಿದರೆ ಇರುವ ಪ್ಯಾಕ್ ಬಿಟ್ಟು ರಿಚಾರ್ಜ್ ಮಾಡಿಸ್ತೀರಾ.

Jio Recharge Plans: ನಮ್ಮ ದೇಶದಲ್ಲಿ ನಂಬರ್1 ಸ್ಥಾನದಲ್ಲಿರುವ ಟೆಲಿಕಾಂ ಸಂಸ್ಥೆ ಜಿಯೋ. ಅತಿಹೆಚ್ಚು ಗ್ರಾಹಕರು ಈ ನೆಟ್ವರ್ಕ್ ಬಳಸುತ್ತಾರೆ. ಗ್ರಾಹಕರಿಗೆ ಬಜೆಟ್ ಫ್ರೆಂಡ್ಲಿ ಆಗಿರುವ ಅನೇಕ ಪ್ಲಾನ್ ಗಳನ್ನು ಜಿಯೋ ಸಂಸ್ಥೆ ಹೊರತರುತ್ತದೆ. ಇದೀಗ ಜಿಯೋ ಸಂಸ್ಥೆಯು ಹೊಸ ವರ್ಷಕ್ಕಾಗಿ ಒಂದು ಭರ್ಜರಿಯಾಗಿ ಹೊಸ ಆಫರ್ ನೀಡುತ್ತಿದ್ದು, ಹಿಂದಿನ ಆಫರ್ ಗಳಿಗಿಂತ ಇದರಲ್ಲಿ ಹೆಚ್ಚು ಪ್ರಯೋಜನಗಳನ್ನು ನೀವು ಪಡೆಯಬಹುದು. ಗ್ರಾಹಕರನ್ನು ಸೆಳೆಯಲಿರುವ ಈ ಹೊಸ ಆಫರ್ ಹೇಗಿದೆ? ಇದರ ವಿಶೇಷತೆಗಳೇನು ಎಂದು ತಿಳಿಸುತ್ತೇವೆ ನೋಡಿ..

ಇನ್ನು ಕೆಲವೇ ದಿನಗಳಲ್ಲಿ ಹೊಸ ವರ್ಷ ಬರಲಿದೆ, ಇದು 2023ರ ವರ್ಷ. ಈ ಹೊಸ ವರ್ಷಕ್ಕೆ 2023 ರೂಪಾಯಿಯ ಹೊಸ ಯೋಜನೆಯನ್ನು ಜಿಯೋ ಸಂಸ್ಥೆ ಹೊರತಂದಿದೆ. ಈ ಪ್ಲಾನ್ ನಲ್ಲಿ ನಿಮಗೆ ಬರೋಬ್ಬರಿ 630ಜಿಬಿ ಡೇಟಾ ಸಿಗಲಿರುವುದು ವಿಶೇಷವಾಗಿದೆ. ಇದು ದೀರ್ಘಾವಧಿಯ ಯೋಜನೆ ಆಗಿದ್ದು, 252 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಪ್ಲಾನ್ ನಲ್ಲಿ ನಿಮಗೆ ದಿನಕ್ಕೆ 2.5ಜಿಬಿ ಡೇಟಾ ಸಿಗಲಿದೆ. 252 ದಿನಗಳಿಗೆ ಪೂರ್ತಿಯಾಗಿ 630 ಜಿಬಿ ಡೇಟಾ ನಿಮ್ಮದಾಗಲಿದೆ. ಇದರ ಜೊತೆಗೆ 252 ದಿನಗಳ ಕಾಲ ಎಲ್ಲಾ ನೆಟ್ವರ್ಕ್ ಗಳಿಗು ಅನ್ ಲಿಮಿಟೆಡ್ ಕರೆಗಳು, ದಿನಕ್ಕೆ 100 ಉಚಿತ ಎಸ್.ಎಂ.ಎಸ್.ಲಭ್ಯವಿರುತ್ತದೆ. ಅಷ್ಟೇ ಅಲ್ಲದೆ, ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋಗೆ ಸಂಬಂಧಿಸಿದ ಬೇರೆ ಆಪ್ ಗಳು ಲಭ್ಯವಿರುತ್ತದೆ. ಇದನ್ನು ಓದಿ..Airtel Plans Kannada: ಇನ್ನು ಮುಂದೆ ಏರ್ಟೆಲ್ ಗ್ರಹರಾಕರಿಗೆ ಡಿಸ್ನಿ + ಹಾಟ್ ಸ್ಟಾರ್ ಸಂಪೂರ್ಣ ಉಚಿತ. ಮಸ್ತ್ ರಿಚಾರ್ಜ್ ಪ್ಲಾನ್.

ಇದಿಷ್ಟೆ ಅಲ್ಲದೆ, ಜಿಯೋದಲ್ಲಿ ಒಂದು ವರ್ಷಗಳ ವ್ಯಾಲಿಡಿಟಿ ಇರುವ ಪ್ಲಾನ್ ಗಳು ಸಹ ಇದೆ. ಅದರಲ್ಲಿ ಒಂದು ₹2999 ರೂಪಾಯಿಯ ಪ್ಲಾನ್, ಇದರ ವ್ಯಾಲಿಡಿಟಿ 365 ದಿನಗಳು, ಒಂದು ವರ್ಷ ಪೂರ್ತಿ ನಿಮಗೆ ದಿನಕ್ಕೆ 2.5ಜಿಬಿ ಡೇಟಾ, ಎಲ್ಲಾ ನೆಟ್ವರ್ಕ್ ಗಳಿಗು ಅನಿಯಮಿತ ಕರೆಗಳು, 100 ಉಚಿತ ಎಸ್.ಎಂ.ಎಸ್ ಗಳು ಹಾಗೂ ಜಿಯೋ ಟಿವಿ, ಜಿಯೋ ಸಿನಿಮಾ ಪ್ರಯೋಜನ ಸಿಗುತ್ತದೆ.
₹2879 ರೂಪಾಯಿಯ ಪ್ಲಾನ್ ನಲ್ಲಿ ದಿನಕ್ಕೆ 2ಜಿಬಿ ಡೇಟಾ, ಉಚಿತ ಕರೆಗಳು, ದಿನಕ್ಕೆ 100 ಉಚಿತ ಎಸ್.ಎಂ.ಎಸ್ ಗಳು ಇದರ ಜಿಯೋ ಟಿವಿ, ಜಿಯೋ ಸಿನಿಮಾ ಇದೆಲ್ಲವೂ ಸಿಗುತ್ತದೆ. ಈ ಪ್ಲಾನ್ ನ ವ್ಯಾಲಿಡಿಟಿ 365 ದಿನಗಳು. ₹2545 ರೂಪಾಯಿಯ ಪ್ಲಾನ್ ನಲ್ಲಿ ದಿನಕ್ಕೆ 1.5ಜಿಬಿ ಡೇಟಾ, ಉಚಿತ ಕರೆಗಳು, ದಿನಕ್ಕೆ 100 ಎಸ್.ಎಂ.ಎಸ್ ಹಾಗೂ ಜಿಯೋ ಟಿವಿ ಜಿಯೋ ಸಿನಿಮಾ ಮತ್ತು ಇನ್ನಿತರ ಸೌಲಭ್ಯ ಸಿಗುತ್ತದೆ. ಈ ಪ್ಲಾನ್ ನ ವ್ಯಾಲಿಡಿಟಿ 336 ದಿನಗಳು. ಇದನ್ನು ಓದಿ.. Automobiles: ಏನು ಬದಲಾಯಿಸಬೇಡಿ, ಡ್ರೈವ್ ಮಾಡುವಾಗ ಇದೊಂದು ಚಿಕ್ಕ ಕೆಲಸ ಮಾಡಿ, ಕಾರ್ ಮೈಲೇಜ್ ಜಾಸ್ತಿ ಆಗುತ್ತೆ. ಏನು ಮಾಡಬೇಕು ಗೊತ್ತೇ?