RCB IPL 2023: ಆರ್ಸಿಬಿ ಈ ಬಾರಿ ಭರ್ಜರಿ ಪ್ಲಾನ್ ಮಾಡಿದೆ, ಆದ ಕಾರಣ ಈ ಬಾರಿ ಫೈನಲ್ ಪಕ್ಕ ಎಂದ ಆಸ್ಟ್ರೇಲಿಯಾ ಮಾಜಿ ಆಟಗಾರ.

RCB IPL 2023: ಆರ್ಸಿಬಿ ಈ ಬಾರಿ ಭರ್ಜರಿ ಪ್ಲಾನ್ ಮಾಡಿದೆ, ಆದ ಕಾರಣ ಈ ಬಾರಿ ಫೈನಲ್ ಪಕ್ಕ ಎಂದ ಆಸ್ಟ್ರೇಲಿಯಾ ಮಾಜಿ ಆಟಗಾರ.

RCB IPL 2023: ಐಪಿಎಲ್ 16 (IPL 16) ರ ಮಿನಿ ಹರಾಜು (IPL Auction) ಪ್ರಕ್ರಿಯೆ ಡಿಸೆಂಬರ್ 23ರಂದು ನಡೆದಿದೆ. ಎಲ್ಲಾ ಫ್ರಾಂಚೈಸಿಗಳು ಒಳ್ಳೆಯ ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನಮ್ಮ ಆರ್ಸಿಬಿ (RCB) ತಂಡ ಕಡಿಮೆ ಹಣ ಇದ್ದರು ಕೂಡ, ಉತ್ತಮವಾದ ಆಟಗಾರರನ್ನೇ ಆಯ್ಕೆಮಾಡಿಕೊಂಡಿದೆ. ಈ ವರ್ಷ ಹರಾಜಿಗಿಂತ ಮೊದಲು 5 ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಿತ್ತು ಆರ್ಸಿಬಿ. ಅವರ ರೀಪ್ಲೇಸ್ಮೆಂಟ್ ಆಗಿ, 7 ಆಟಗಾರರನ್ನು ಹರಾಜಿನಲ್ಲಿ ಖರೀದಿ ಮಾಡಿದೆ. ಅವರಲ್ಲಿ ಇಬ್ಬರು ವಿದೇಶಿ ಆಟಗಾರರು, ಇನ್ನುಳಿದವರು ದೇಶೀಯ ಆಟಗಾರರಾಗಿದ್ದಾರೆ..

ಸೋನು ಯಾದವ್ (Sonu Yadav), ಅವಿನಾಶ್ ಸಿಂಗ್ (Avinash Singh), ರಜನ್ ಕುಮಾರ್ (Rajan Kumar), ಮನೋಜ್ ಭಾಂಡಗೆ (Manoj Bhandaje), ವಿಲ್ ಜಾಕ್ಸ್ (Will Jacks), ಹಿಮಾಂಶು ಶರ್ಮಾ (Himanshu Sharma) ಮತ್ತು ರೀಸ್ ಟೋಪ್ಲೆ (Reece Topley), ಆರ್ಸಿಬಿ ತಂಡ ಖರೀದಿ ಮಾಡಿದ ಆಟಗಾರರು ಇವರು. ಈ ವರ್ಷ ಟ್ರೋಫಿ ಗೆಲ್ಲಲೇಬೇಕು ಎನ್ನುವ ಪ್ಲಾನ್ ಇಂದ ಆರ್ಸಿಬಿ ತಂಡ ಈ ಆಯ್ಕೆಗಳನ್ನು ಮಾಡಿದೆ. ಇದೀಗ ಆರ್ಸಿಬಿ ತಂಡದ ಪರವಾಗಿ ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಟಾಮ್ ಮೂಡಿ ಅವರು ಮಾತನಾಡಿದ್ದು, ಆರ್ಸಿಬಿ ಆಯ್ಕೆಯನ್ನು ಮೆಚ್ಚಿ, ಈ ಬಾರಿ ಆರ್ಸಿಬಿ ಕಪ್ ಗೆಲ್ಲುವುದು ಪಕ್ಕಾ ಎಂದು ಹೇಳಿದ್ದಾರೆ, ಅಷ್ಟೇ ಅಲ್ಲದೆ ಅದಕ್ಕೆ ಕಾರಣವನ್ನು ಸಹ ನೀಡಿದ್ದಾರೆ.. ಟಾಮ್ ಮೂಡಿ (Tom Moody) ಅವರು ಹೇಳಿದ್ದೇನು ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ..RCB IPL 2023: ಹರಾಜಿನ ನಂತರ ಒಟ್ಟಾರೆಯಾಗಿ ಆರ್ಸಿಬಿ ತಂಡ ಹೇಗಿದೆ ಗೊತ್ತೆ? ಕಡಿಮೆ ಹಣದಲ್ಲಿಯೂ ಕೊನೆಗೆ ಯಾರನ್ನು ಖರೀದಿ ಮಾಡಿದೆ ಗೊತ್ತೇ??

“ಹರಾಜಿನಲ್ಲಿ ಅತ್ಯುತ್ತಮವಾದ ಆಯ್ಕೆಗಳನ್ನು ಮಾಡಿರುವ ಕಾರಣದಿಂದ ಆರ್ಸಿಬಿ ತಂಡವನ್ನು ಫೈನಲ್ಸ್ ನಲ್ಲಿ ನೋಡಬಹುದು ಎಂದು ನನಗೆ ಅನ್ನಿಸುತ್ತದೆ. ಆರ್ಸಿಬಿ ತಂಡದ ಬಳಿ ಹೆಚ್ಚು ಹಣ ಇರಲಿಲ್ಲ, ಆದರೆ ತಮ್ಮ ಬಳಿ ಇದ್ದ ಹಣದಲ್ಲಿ ಅವರು ಚಾಣಾಕ್ಷ ರೀತಿಯಲ್ಲಿ ಬುದ್ಧಿವಂತಿಕೆ ಇಂದ ಆಯ್ಕೆಗಳನ್ನು ಮಾಡಿಕೊಂಡಿದ್ದಾರೆ. ವಿಲ್ ಜಾಕ್ಸ್ ಅವರು ಅತ್ಯುತ್ತಮವಾದ ಆಯ್ಕೆ, ಬಹಳ ವರ್ಷಗಳ ವರೆಗು ನೋಡುವುದಾದರೆ, ಇವರು ತಂಡದಲ್ಲಿ ಇರಲು ಅರ್ಹರು, ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell) ಅವರಿಗೆ ಉತ್ತಮ ಬದಲಿ ಆಟಗಾರ..”ಎಂದು ಹೇಳುವ ಮೂಲಕ ಆರ್ಸಿಬಿ ತಂಡಕ್ಕೆ ಬೆಂಬಲ ಸೂಚಿಸಿದ್ದಾರೆ ಟಾಮ್ ಮೂಡಿ. ಇದನ್ನು ಓದಿ.. Automobiles: ಏನು ಬದಲಾಯಿಸಬೇಡಿ, ಡ್ರೈವ್ ಮಾಡುವಾಗ ಇದೊಂದು ಚಿಕ್ಕ ಕೆಲಸ ಮಾಡಿ, ಕಾರ್ ಮೈಲೇಜ್ ಜಾಸ್ತಿ ಆಗುತ್ತೆ. ಏನು ಮಾಡಬೇಕು ಗೊತ್ತೇ?