RCB IPL 2023: ಹರಾಜಿನ ನಂತರ ಒಟ್ಟಾರೆಯಾಗಿ ಆರ್ಸಿಬಿ ತಂಡ ಹೇಗಿದೆ ಗೊತ್ತೆ? ಕಡಿಮೆ ಹಣದಲ್ಲಿಯೂ ಕೊನೆಗೆ ಯಾರನ್ನು ಖರೀದಿ ಮಾಡಿದೆ ಗೊತ್ತೇ??
RCB IPL 2023: ಹರಾಜಿನ ನಂತರ ಒಟ್ಟಾರೆಯಾಗಿ ಆರ್ಸಿಬಿ ತಂಡ ಹೇಗಿದೆ ಗೊತ್ತೆ? ಕಡಿಮೆ ಹಣದಲ್ಲಿಯೂ ಕೊನೆಗೆ ಯಾರನ್ನು ಖರೀದಿ ಮಾಡಿದೆ ಗೊತ್ತೇ??
RCB IPL 2023: ಐಪಿಎಲ್16 (IPL 16) ರ ಮಿನಿ ಹರಾಜು ಪ್ರಕ್ರಿಯೆ ನಿನ್ನೆಯಷ್ಟೇ ನಡೆದಿದ್ದು, ಎಲ್ಲ ಫ್ರಾಂಚೈಸಿಗಳು ಬೆಸ್ಟ್ ಆಟಗಾರರನ್ನು ಆರಿಸಿಕೊಂಡಿದೆ. ನಮ್ಮ ಆರ್ಸಿಬಿ (RCB) ತಂಡ ಕೂಡ ಇದ್ದ ಕಡಿಮೆ ಹಣದಲ್ಲಿ ಉತ್ತಮ ಆಟಗಾರರನ್ನು ಆಯ್ಕೆ ಮಾಡಿಕೊಂಡಿದೆ. ಹರಾಜಿಗಿಂತ ಮೊದಲು ಆರ್ಸಿಬಿ ತಂಡ ಐವರು ಆಟಗಾರರನ್ನು ಟೀಮ್ ಇಂದ ರಿಲೀಸ್ ಮಾಡಿತ್ತು, ಈಗ ಹರಾಜಿನಲ್ಲಿ 7 ಆಟಗಾರರನ್ನು ಖರೀದಿ ಮಾಡಿದೆ. ಒಟ್ಟಾರೆಯಾಗಿ ಆರ್ಸಿಬಿ ತಂಡದಲ್ಲಿ ಈಗ 25 ಬಲಿಷ್ಠ ಆಟಗಾರರಿದ್ದಾರೆ. ಇಂಗ್ಲೆಂಡ್ ತಂಡದ ಇಬ್ಬರು ವಿದೇಶಿ ಆಟಗಾರರನ್ನು ಕೋಟಿ ಕೋಟಿ ಕೊಟ್ಟು ಖರೀದಿ ಮಾಡಿದೆ ಆರ್ಸಿಬಿ, ಬೇರೆ ಆಟಗಾರರನ್ನು ಇನ್ನು ಕಡಿಮೆ ಬೆಲೆಗೆ ಖರೀದಿ ಮಾಡಿದೆ.
ಇಂಗ್ಲೆಂಡ್ ನ ಉತ್ತಮ ಬ್ಯಾಟ್ಸ್ಮನ್ ವಿಲ್ ಜಾಕ್ಸ್ (Will Jacks) ಅವರನ್ನು ಬರೊಬ್ಬರಿ 3.20 ಕೋಟಿ ರೂಪಾಯಿಗೆ ಖರೀದಿ ಮಾಡಲಾಗಿದೆ. ಅಷ್ಟೇ ಅಲ್ಲದೆ ರೀಸ್ ಟೋಪ್ಲೆ (Reece Topley) ಅವರನ್ನು 1.90 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದೆ. ಇನ್ನು ಹಿಮಾಂಷು ಶರ್ಮ ಅವರನ್ನು 20 ಲಕ್ಷ ಕೊಟ್ಟು ಖರೀದಿ ಮಾಡಿದೆ, ರಜನ್ ಕುಮಾರ್ (Rajan Kumar) ಅವರನ್ನು 70 ಲಕ್ಷ ಕೊಟ್ಟು ಖರೀದಿ. ಒಟ್ಟಾರೆಯಾಗಿ 25 ಆಟಗಾರರ ತಂಡ ಆಗಿರುವ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೇಗಿದೆ ಗೊತ್ತಾ? 25 ಆಟಗಾರರು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ.. ಮೊದಲನೆಯದಾಗಿ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ (Faf du Plessis) ಅವರಿದ್ದಾರೆ. ಇದನ್ನು ಓದಿ..RCB IPL 2023: ಆರ್ಸಿಬಿ ಸುಮ್ಮನೆ 3 ಕೋಟಿ ಕೊಟ್ಟಿಲ್ಲ, ಅಷ್ಟಕ್ಕೂ ಈತ ಯಾರು ಗೊತ್ತೇ?? ಯಾಕೆ ಇಷ್ಟು ಕೋಟಿ ಕೊಟ್ಟಿದ್ದಾರೆ ಎಂದು ತಿಳಿದರೆ ಭೇಷ್ ಅಂತೀರಾ.
ಇನ್ನುಳಿದ ಹಾಗೆ ಮಾಜಿ ಕ್ಯಾಪ್ಟನ್ ವಿರಾಟ್ ಕೋಹ್ಲಿ (Virat Kohli), ಫಿನಿಷರ್ ದಿನೇಶ್ ಕಾರ್ತಿಕ್ (Dinesh Karthik), ಫಿನ್ ಅಲೆನ್ (Finn Alen), ರಜತ್ ಪಾಟಿದಾರ್ (Rajat Patidar), ಅನುಜ್ ರಾವತ್ (Anuj Rawat), ಸುಯಶ್ ಪ್ರಭು ದೇಸಾಯಿ (Suyash Prabhu Desai), ಮಹಿಪಾಲ್ ಲೋಮ್ರರ್ (Mahipal Lomror), ಶಾಬಾಜ್ ಅಹ್ಮದ್ (Shahbaz Ahmad), ವನಿಂದು ಹಸರಂಗ (Vanindu Hasaranga), ಡೇವಿಡ್ ವಿಲ್ಲಿ (David Villi), ಕರ್ಣ್ ಶರ್ಮ (Karn Sharma), ಹರ್ಷಲ್ ಪಟೇಲ್ (Harshal Patel), ಜೋಶ್ ಹೇಜಲ್ ವುಡ್ (Josh Hazelwood), ಆಕಾಶ್ ದೀಪ್ ಸಿಂಗ್ (Akash Deepsingh), ಮೊಹಮ್ಮದ್ ಸಿರಾಜ್ (Mohammad Siraj), ಸಿದ್ಧಾರ್ಥ್ ಕೌಲ್ (Siddharth Kaul), ರೀಸ್ ಟೋಪ್ಲಿ, ವಿಲ್ ಜಾಕ್ಸ್, ಹಿಮಾಂಷು ಶರ್ಮ, ಮನೀಶ್ ಭಂಡಾಜೆ (Manish Bhandaje), ಸೋನು ಯಾದವ್, ರಜನ್ ಕುಮಾರ್ ಮತ್ತು ಅವಿನಾಶ್ ಸಿಂಗ್.. ಇಷ್ಟು ಆಟಗಾರರು ತಂಡದಲ್ಲಿದ್ದಾರೆ. ಇದನ್ನು ಓದಿ.. Automobiles: ಏನು ಬದಲಾಯಿಸಬೇಡಿ, ಡ್ರೈವ್ ಮಾಡುವಾಗ ಇದೊಂದು ಚಿಕ್ಕ ಕೆಲಸ ಮಾಡಿ, ಕಾರ್ ಮೈಲೇಜ್ ಜಾಸ್ತಿ ಆಗುತ್ತೆ. ಏನು ಮಾಡಬೇಕು ಗೊತ್ತೇ?