RCB IPL 2023: ಆರ್ಸಿಬಿ ಸುಮ್ಮನೆ 3 ಕೋಟಿ ಕೊಟ್ಟಿಲ್ಲ, ಅಷ್ಟಕ್ಕೂ ಈತ ಯಾರು ಗೊತ್ತೇ?? ಯಾಕೆ ಇಷ್ಟು ಕೋಟಿ ಕೊಟ್ಟಿದ್ದಾರೆ ಎಂದು ತಿಳಿದರೆ ಭೇಷ್ ಅಂತೀರಾ.

RCB IPL 2023: ಆರ್ಸಿಬಿ ಸುಮ್ಮನೆ 3 ಕೋಟಿ ಕೊಟ್ಟಿಲ್ಲ, ಅಷ್ಟಕ್ಕೂ ಈತ ಯಾರು ಗೊತ್ತೇ?? ಯಾಕೆ ಇಷ್ಟು ಕೋಟಿ ಕೊಟ್ಟಿದ್ದಾರೆ ಎಂದು ತಿಳಿದರೆ ಭೇಷ್ ಅಂತೀರಾ.

RCB IPL 2023: ನಿನ್ನೆ ನಡೆದ ಐಪಿಎಲ್ 16ರ (IPL 16) ಮಿನಿ ಹರಾಜಿನಲ್ಲಿ ಎಲ್ಲಾ ಫ್ರಾಂಚೈಸಿಗಳು ಅತ್ಯುತ್ತಮ ತಂಡ ಕಟ್ಟಲು ಪ್ರಯತ್ನ ಪಟ್ಟವು. ಕಡಿಮೆ ಬೆಲೆಗೆ ಹೆಚ್ಚು ಆಟಗಾರರನ್ನು ಖರೀದಿಸುವ, ಸ್ಟಾರ್ ಪ್ಲೇಯರ್ ಗಳಿಗೆ ಕೋಟಿ ಕೋಟಿ ಸುರಿದು ಖರೀದಿ ಮಾಡಲು ಮುಂದಾಗಿದ್ದವು. ನಮ್ಮ ಆರ್ಸಿಬಿ (RCB) ತಂಡದ ಬಳಿ ಈ ವರ್ಷ ಇದ್ದದ್ದು ಕಡಿಮೆ ಹಣ. ಹಾಗಾಗಿ ಆರ್ಸಿಬಿ ತಂಡ ಬಹಳ ಸ್ಮಾರ್ಟ್ ಆಗಿ ಐಪಿಎಲ್ ಆಕ್ಷನ್ ನಲ್ಲಿ ಪ್ಲೇಯರ್ ಗಳನ್ನು ಖರೀದಿ ಮಾಡಿತು. ಅದರಲ್ಲೂ ಒಬ್ಬ ಆಟಗಾರನಿಗೆ ಬರೋಬ್ಬರಿ 3 ಕೋಟಿ ಕೊಟ್ಟು ಖರೀದಿ ಮಾಡಿದೆ..

ಆರ್ಸಿಬಿ ತಂಡ ಮೂರು ಪ್ರಮುಖ ಆಟಗಾರರನ್ನು ಖರೀದಿ ಮಾಡಿದೆ, 1.90 ಕೋಟಿ ರೂಪಾಯಿ ಕೊಟ್ಟು ಇಂಗ್ಲೆಂಡ್ ತಂಡದ ಲೆಫ್ಟ್ ಹ್ಯಾಂಡ್ ವೇಗಿ ರೀಸ್ ಟಾಪ್ಲೆ (Reece Topley) ಅವರನ್ನು ಖರೀದಿ ಮಾಡಿದೆ. ಅಷ್ಟೇ ಅಲ್ಲದೆ ಕೇವಲ 20 ಲಕ್ಷ ರೂಪಾಯಿಗೆ ಅನ್ ಕ್ಯಾಪ್ ಪ್ಲೇಯರ್ ಆಗಿರುವ ಹಿಮಾಂಷು (Himanshu) ಅವರನ್ನು ಖರೀದಿ ಮಾಡಿದೆ. ಜೊತೆಗೆ 3.20 ಕೋಟಿ ರೂಪಾಯಿ ಕೊಟ್ಟು, ಇಂಗ್ಲೆಂಡ್ ಬ್ಯಾಟ್ಸ್ಮನ್ ವಿಲ್ ಜಾಕ್ಸ್ (Will Jacks) ಅವರನ್ನು ಖರೀದಿ ಮಾಡಿದೆ. ಇವರನ್ನು ಅಷ್ಟು ದುಡ್ಡು ಕೊಟ್ಟು ಖರೀದಿ ಮಾಡಿದ್ದು ಯಾಕೆ ಎನ್ನುವ ಪ್ರಶ್ನೆ ಕೂಡ ಕೆಲವರಲ್ಲಿ ಇದೆ, ಆದರೆ ಈತ ಸಾಮಾನ್ಯವಾದ ಪ್ಲೇಯರ್ ಅಂತೂ ಅಲ್ಲ. ಇದನ್ನು ಓದಿ.. Cricket News: ಕಳೆದ ಪಂದ್ಯದಲ್ಲಿ ಪಂದ್ಯಶ್ರೇಷ್ಠ: ಈ ಪಂದ್ಯದಲ್ಲಿ ಸ್ಥಾನ ಕೂಡ ಕೊಟ್ಟಿಲ್ಲ. ದ್ರಾವಿಡ್, ರಾಹುಲ್ ಏನು ಮಾಡುತ್ತಿದ್ದಾರೆ?? ಸುನಿಲ್ ಗವಾಸ್ಕರ್ ಹೇಳಿದ್ದೇನು ಗೊತ್ತೇ??

ವಿಲ್ ಜಾಕ್ಸ್ ಅವರು ಪಂದ್ಯ ಒಂದರಲ್ಲಿ, 6 ಎಸೆತಗಳಲ್ಲಿ 6 ಸಿಕ್ಸರ್ ಗಳನ್ನು ಚಚ್ಚಿ, ದಾಖಲೆ ಬರೆದಿದ್ದರು. ಕೆಲ ವರ್ಷಗಳ ಹಿಂದೆ ದುಬೈ ನಲ್ಲಿ ನಡೆದ ಟಿ10 ಟೂರ್ನಿಯಲ್ಲಿ (T10 Tournament) , ಸರ್ರೆ ತಂಡದ ಪರವಾಗಿ ಆಡಿದ್ದ ವಿಲ್ ಜಾಕ್ಸ್, ಶತಕ ಭಾರಿಸಿದ್ದು ಕೇವಲ 25 ಎಸೆತಗಳಲ್ಲಿ, ಒಂದೇ ಓವರ್ ನಲ್ಲಿ ಸತತವಾಗಿ 6 ಸಿಕ್ಸರ್ ಭಾರಿಸಿ ಪ್ರಪಂಚದ ಎಲ್ಲಾ ಕ್ರಿಕೆಟಿಗರ ಗಮನ ತಮ್ಮತ್ತ ಇರುವ ಹಾಗೆ ಸೆಳೆದಿದ್ದರು. ಹಾಗಾಗಿ ಇವರನ್ನು ಖರೀದಿ ಮಾಡಿದೆ ಆರ್ಸಿಬಿ. ಇದನ್ನು ಓದಿ..Kannada News: ಎಲ್ಲಾ OTT ಗಳು ನೂರಾರು ಕೋಟಿ ಖರ್ಚು ಮಾಡಿ ಸಿನಿಮಾ ಖರೀದಿ ಮಾಡಿ ಚಿಲ್ಲರೆ ಹಣಕ್ಕೆ ಕೊಡುವುದು ಯಾಕೆ ಗೊತ್ತೇ??