ಕರುನಾಡ ವಾಣಿ
ಇದು ನಿಮ್ಮ ಧ್ವನಿ

RCB IPL 2023: ಇನ್ನು ಲೆಧರ್ ಬಾಲ್ ನಲ್ಲಿ ಅನುಭವವಿಲ್ಲದ ಪ್ಲೇಯರ್ ಅನ್ನು ಮುಗಿಬಿದ್ದು ಖರೀದಿ ಮಾಡಿದ್ದು ಯಾಕೆ ಗೊತ್ತೇ?? 60 ಲಕ್ಷ ಸುಮ್ಮನೆ ಕೊಟ್ಟಿಲ್ಲ.

2,428

Get real time updates directly on you device, subscribe now.

RCB IPL 2023: ಐಪಿಎಲ್ ಮಿನಿ ಹರಾಜಿನಲ್ಲಿ (IPL Auction) ನಮ್ಮ ಆರ್ಸಿಬಿ (RCB) ತಂಡ 7 ಆಟಗಾರರನ್ನು ಖರೀದಿ ಮಾಡಿದೆ. ಇವರಲ್ಲಿ ಇಬ್ಬರು ವಿದೇಶಿ ಆಟಗಾರರು ಹಾಗೂ 5 ದೇಶೀಯ ಆಟಗಾರರನ್ನು ಆರ್ಸಿಬಿ ತಂಡ ಖರೀದಿ ಮಾಡಿದೆ. ಆರ್ಸಿಬಿ ತಂಡದ ಬಳಿ 8.75 ಕೋಟಿ ರೂಪಾಯಿ ಮಾತ್ರ ಇತ್ತು, ಇಷ್ಟು ಹಣದಲ್ಲಿ ಆರ್ಸಿಬಿ ಬುದ್ಧಿವಂತಿಕೆ ಇಂದ ಆಟಗಾರರನ್ನು ಆಯ್ಕೆ ಮಾಡಿದೆ, ಈ ಬಾರಿ ಆರ್ಸಿಬಿ ಖರೀದಿ ಮಾಡಿರುವವರಲ್ಲಿ ಹಮ್ಮು ಕಾಶ್ಮೀರದ ಆಟಗಾರ ಅವಿನಾಶ್ ಸಿಂಗ್ (Avinash Singh) ಕೂಡ ಒಬ್ಬರು. ಅವಿನಾಶ್ ಅವರು ಕಾಶ್ಮೀರ್ ತಂಡದ ಪರವಾಗಿ ದೇಶೀಯ ಪಂದ್ಯದಲ್ಲಿ ಕೂಡ ಆಡಿಲ್ಲ. ಹಾಗಿದ್ದರೂ ಇವರನ್ನು ಆರ್ಸಿಬಿ ತಂಡ ಯಾಕೆ ಖರೀದಿ ಮಾಡಿದೆ ಎನ್ನುವ ಚರ್ಚೆ ಈಗ ಶುರುವಾಗಿದೆ..

ಅವಿನಾಶ್ ಸಿಂಗ್ ಅವರು ಇದುವರೆಗೂ ಲೆದರ್ ಬಾಲ್ ನಲ್ಲಿ ಒಂದು ಪಂದ್ಯವನ್ನು ಕೂಡ ಆಡಿಲ್ಲ, ಹಾಗಿದ್ದರು ಕೂಡ ಮಿನಿ ಹರಾಜಿನಲ್ಲಿ, ಇವರ ಬೇಸ್ ಪ್ರೈಸ್ 20 ಲಕ್ಷ ಇದ್ದರು ಕೂಡ, ಕೆಕೆಆರ್ (KKR) ತಂಡ ಮತ್ತು ಆರ್ಸಿಬಿ ತಂಡ ಪೈಪೋಟಿ ಮೇಲೆ ಇವರನ್ನು 60 ಲಕ್ಷಕ್ಕೆ ಖರೀದಿ ಮಾಡಿತು. ದೇಶೀಯ ಟೂರ್ನಿಯಲ್ಲಿ ಇವರು ಆಡದೆ ಇದ್ದರು ಕೂಡ ಆರ್ಸಿಬಿ ಇವರನ್ನು ಖರೀದಿ ಮಾಡಲು ಒಂದು ಮುಖ್ಯ ಕಾರಣ ಇದೆ, ಅದೇನೆಂದರೆ, ಆರ್ಸಿಬಿ ತಂಡ ಕಾಶ್ಮೀರದಲ್ಲಿ ಅಭ್ಯಾಸ ಶಿಬಿರ ಆಯೋಜಿಸಿತ್ತು, ಇದರಲ್ಲಿ ಅವಿನಾಶ್ ಸಿಂಗ್ ಅವರ ಬೌಲಿಂಗ್ ನೋಡಿ, ಆರ್ಸಿಬಿ ತಂಡ ಆಯೋಜಕರು ಇಂಪ್ರೆಸ್ ಆಗಿದ್ದರು. ಇದಾದ ಬಳಿಕ ಖುದ್ದು ಅವಿನಾಶ್ ಅವರೇ ಪುಣೆಗೆ ಹೋಗಿ ತರಬೇತಿ ಪಡೆದಿದ್ದಾರೆ. ಇದನ್ನು ಓದಿ..RCB IPL 2023: ಆರ್ಸಿಬಿ ಈ ಬಾರಿ ಭರ್ಜರಿ ಪ್ಲಾನ್ ಮಾಡಿದೆ, ಆದ ಕಾರಣ ಈ ಬಾರಿ ಫೈನಲ್ ಪಕ್ಕ ಎಂದ ಆಸ್ಟ್ರೇಲಿಯಾ ಮಾಜಿ ಆಟಗಾರ.

ಪುಣೆಯಲ್ಲಿ ಉತ್ತಮವಾದ ತರಬೇತಿ ಪಡೆದು ಬಂದಿದ್ದಾರೆ ಅವಿನಾಶ್. ಅವಿನಾಶ್ ಅವರ ಪ್ರತಿಭೆಯನ್ನು ಆರ್ಸಿಬಿ ತಂಡ ನೋಡಿದ್ದ ಕಾರಣ ಅವರನ್ನು ಖರೀದಿ ಮಾಡಲು ಆಸಕ್ತಿ ತೋರಿತು, ಆದರೆ ಕೆಕೆಆರ್ ತಂಡ ಕೂಡ ಅವಿನಾಶ್ ಅವರನ್ನು ಖರೀದಿ ಮಾಡುವಲ್ಲಿ ಪೈಪೋಟಿ ನೀಡಿತು. ಕೊನೆಗೆ 60 ಲಕ್ಷಕ್ಕೆ ಆರ್ಸಿಬಿ ತಂಡದ ಪಾಲಾಗಿದ್ದಾರೆ ಅವಿನಾಶ್ ಸಿಂಗ್. ಮೊದಲ ಬಾರಿಯೇ ಇವರಿಗೆ ಆರ್ಸಿಬಿ ಅಂತಹ ಬಲಿಷ್ಠ ತಂಡದಲ್ಲಿ ಆಡುವ ಅವಕಾಶ ಸಿಕ್ಕಿದೆ. ಈ ಅವಕಾಶವನ್ನು ಅವಿನಾಶ್ ಸಿಂಗ್ ಅವರು ಹೇಗೆ ಬಳಸಿಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ.. Automobiles: ಏನು ಬದಲಾಯಿಸಬೇಡಿ, ಡ್ರೈವ್ ಮಾಡುವಾಗ ಇದೊಂದು ಚಿಕ್ಕ ಕೆಲಸ ಮಾಡಿ, ಕಾರ್ ಮೈಲೇಜ್ ಜಾಸ್ತಿ ಆಗುತ್ತೆ. ಏನು ಮಾಡಬೇಕು ಗೊತ್ತೇ?

Get real time updates directly on you device, subscribe now.