RCB IPL 2023: ಖರೀದಿ ಮಾಡಿರುವ ಎಲ್ಲಾ ಆಟಗಾರರನ್ನು ಬಳಸಿಕೊಂಡು 11 ರ ಬಳಗ ರಚಿಸಿದರೆ, ಎಷ್ಟು ಬಲಿಷ್ಠವಾಗಲಿದೆ ಗೊತ್ತೇ ಆರ್ಸಿಬಿ? ಹನ್ನೊಂದರ ಬಳಗ ಹೀಗಿದ್ದರೆ ಕಪ್ ನಮ್ದೇ
RCB IPL 2023: ಖರೀದಿ ಮಾಡಿರುವ ಎಲ್ಲಾ ಆಟಗಾರರನ್ನು ಬಳಸಿಕೊಂಡು 11 ರ ಬಳಗ ರಚಿಸಿದರೆ, ಎಷ್ಟು ಬಲಿಷ್ಠವಾಗಲಿದೆ ಗೊತ್ತೇ ಆರ್ಸಿಬಿ? ಹನ್ನೊಂದರ ಬಳಗ ಹೀಗಿದ್ದರೆ ಕಪ್ ನಮ್ದೇ
RCB IPL 2023: ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆದ ಐಪಿಎಲ್ 2023ರ ಮಿನಿ ಹರಾಜಿನಲ್ಲಿ (IPL Mini Auction) ನಮ್ಮ್ ಆರ್ಸಿಬಿ (RCB) ತಂಡ ಭರ್ಜರಿಯಾಗಿ 7 ಉತ್ತಮ ಆಟಗಾರರನ್ನು ಖರೀದಿ ಮಾಡಿದೆ. ಐದು ಆಟಗಾರರನ್ನು ಹರಾಜಿಗಿಂತ ಮೊದಲು ಬಿಡುಗಡೆ ಮಾಡಿದ್ದ ಆರ್ಸಿಬಿ ಮೂಲ ತಂಡವನ್ನು ಹಾಗೆಯೇ ಉಳಿಸಿಕೊಂಡಿತ್ತು. ಇದೀಗ 7 ಹೊಸ ಆಟಗಾರರನ್ನು ಖರೀದಿ ಮಾಡಿದೆ. ಈ ಮೂಲಕ ಆರ್ಸಿಬಿ ಹೊಸ ತಂಡ ರಚಿಸಿ ಮುಂದಿನ ವರ್ಷ ಐಪಿಎಲ್ (IPL) ನಲ್ಲಿ ಕಪ್ ಗೆಲ್ಲುವ ಭರವಸೆಯಲ್ಲಿದೆ..
ಈ ಬಾರಿ ನಮ್ಮ ಆರ್ಸಿಬಿ ತಂಡದಲ್ಲಿ ಹಿರಿಯ ಮೂಲ ಆಟಗಾರರು ಹಾಗೆಯೇ ಇದ್ದಾರೆ. ಅವರಿಗೆ ಬ್ಯಾಕಪ್ ಆಗಿ 7 ಆಟಗಾರರನ್ನು ಆರ್ಸಿಬಿ ತಂಡ ಖರೀದಿ ಮಾಡಿದೆ. ಒಟ್ಟಿನಲ್ಲಿ ಹೊಸ ತಂಡ ಹೊಸ ಜೋಶ್ ಈಗ ಆರ್ಸಿಬಿ ಜೊತೆಗಿದೆ. ಈಗಾಗಲೇ ಇರುವ ಆಟಗಾರರು ಹೊಸದಾಗಿ ಬಂದಿರುವ ಆಟಗಾರರು ಎಲ್ಲರನ್ನು ಸೇರಿಸಿ, ಆಟ ಆಡುವುದಾದಾರೆ, ಬಲಿಷ್ಠ ಪ್ಲೇಯಿಂಗ್ 11 ಹೇಗಿರುತ್ತದೆ ಗೊತ್ತಾ? ಇಂದು ತಿಳಿಸುತ್ತೇವೆ ನೋಡಿ.. ಆರ್ಸಿಬಿ ತಂಡದಲ್ಲಿ ಪ್ಲೇಯಿಂಗ್ 11 ನಲ್ಲಿ ಹೆಚ್ಚು ಬದಲಾವಣೆ ಮಾಡುವ ಹಾಗೆ ಕಾಣುತ್ತಿಲ್ಲ, ಓಪನರ್ ಗಳಾಗಿ ವಿರಾಟ್ ಕೊಹ್ಲಿ VIrat Kohli) ಅವರು ಮಾತು ಫಾಫ್ ಡು ಪ್ಲೆಸಿಸ್ (Faf du Plessis) ಅವರು ಕಣಕ್ಕೆ ಇಳಿಯಲಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ರಜತ್ ಪಾಟಿದಾರ್ (Rajat Patidar) ಅವರು ಬ್ಯಾಟಿಂಗ್ ಗೆ ಬರಲಿದ್ದಾರೆ. ಕಳೆದ ವರ್ಷ ಶತಕ ಸಿಡಿಸಿದ್ದರು.
ನಾಲ್ಕನೇ ಕ್ರಮಾಂಕಕ್ಕೆ ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell) ಅವರು ಫಿಕ್ಸ್ ಆಗಿದ್ದಾರೆ, ಐದನೇ ಕ್ರಮಾಂಕದಲ್ಲಿ ಮಹಿಪಾಲ್ ಲೊಮ್ರೊರ್ (Mahipal Lomror) ಅವರು ಆಡಲಿದ್ದಾರೆ. ಆರನೇ ಕ್ರಮಾಂಕದಲ್ಲಿ ನಮ್ಮ ತಂಡದ ಆಪತ್ಬಾಂಧವ, ವಿಕೆಟ್ ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ (Dinesh Karthik) ಅವರು ಕಣಕ್ಕೆ ಇಳಿಯಲಿದ್ದಾರೆ. ತಂಡದ ಆಲ್ ರೌಂಡರ್ ಗಳ ಜವಾಬ್ದಾರಿಯನ್ನು ಇನ್ನು ಶಾಬಾಜ್ ಅಹ್ಮದ್ (Shahbaz Ahmad) ಮತ್ತು ಹರ್ಷಲ್ ಪಟೇಲ್ (Harshal Patel) ನಿರ್ವಹಿಸಬಹುದು. ಸ್ಪಿನ್ ಮಾಂತ್ರಿಕನ ಸ್ಥಾನ ವನಿಂದು ಹಸರಂಗ (Vanindu Hasaranga) ಅವರದ್ದು, ಜೋಶ್ ಹೇಜಲ್ ವುಡ್ (Josh Hazelwood) ಮತ್ತು ಮೊಹಮ್ಮದ್ ಸಿರಾಜ್ (Mohammad Siraj) ವೇಗಿ ಬೌಲರ್ ಗಳಾಗಿ ಕಣಕ್ಕೆ ಇಳಿಯಲಿದ್ದಾರೆ. ನಮ್ಮ ತಂಡಕ್ಕೆ ಬಂದಿರುವ ಹೊಸ ಆಟಗಾರರು, ಅವಿನಾಶ್ ಸಿಂಗ್ (Avinash Singh), ರೀಸ್ ಟೋಪ್ಲೇ (Reece Topley), ಹಿಮಾಂಷು ಶರ್ಮ (Himanshu Sharma), ವಿಲ್ ಜಾಕ್ಸ್ (Will Jacks), ಮನೋಜ್ ಭಂಡಾಗೆ (Manoj Bhandaje), ರಜನ್ ಕುಮಾರ್ (Rajan Kumar) ಮತ್ತು ಸೋನು ಯಾದವ್ (Sonu Yadav).