ಕರುನಾಡ ವಾಣಿ
ಇದು ನಿಮ್ಮ ಧ್ವನಿ

FIFA World Cup: ದಿಡೀರ್ ಎಂದು ಉಲ್ಟಾ ಹೊಡೆದ ಮೆಸ್ಸಿ: ವಿಶ್ವಕಪ್ ಗೆದ್ದ ಖುಷಿಯಲ್ಲಿ ತೆಗೆದುಕೊಂಡ ನಿರ್ಧಾರ ಏನು ಗೊತ್ತೇ??

33

Get real time updates directly on you device, subscribe now.

FIFA World Cup: ಎಲ್ಲರೂ ಕಾದು ಕುಳಿತಿದ್ದ ಫಿಫಾ ವರ್ಲ್ಡ್ ಕಪ್ (FIFA World Cup) ಟೂರ್ನಿ ಭಾನುವಾರ ಮುಗಿದಿದೆ. ಕತಾರ್ (Qatar) ನಲ್ಲಿ ನಡೆದ ಈ ಟೂರ್ನಿಯಲ್ಲಿ ಈ ವರ್ಷ ಅರ್ಜೆಂಟಿನಾ (Argentina) ತಂಡ ಫೈನಲ್ಸ್ ಗೆದ್ದು, ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ. ತಂಡದ ನಾಯಕ ಲಿಯೋನಲ್ ಮೆಸ್ಸಿ (Lionel Messi) ಅವರ ಪಾತ್ರ ಈ ಗೆಲುವಿಗೆ ಬಹಳ ಮುಖ್ಯವಾಗಿತ್ತು. 2022ರ ಗೆಲುವಿನ ಜೊತೆಗೆ ಅರ್ಜೆಂಟೀನಾ ತಂಡ ಈಗ ಮೂರನೇ ಬಾರಿ ವರ್ಲ್ಡ್ ಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಈ ಮೂಲಕ ಲಿಯೋನಲ್ ಮೆಸ್ಸಿ ಅವರ ಕನದು ಕೂಡ ನನಸಾಗಿದೆ.

ಫೈನಲ್ಸ್ ಪಂದ್ಯದಲ್ಲಿ ಲಿಯೋನಲ್ ಮೆಸ್ಸಿ ಅವರು 2 ಗೋಲ್ ಹೊಡೆದಿದ್ದರು. ಫೈನಲ್ಸ್ ಪಂದ್ಯದಲ್ಲಿ ಫ್ರಾನ್ಸ್ (France) ಮತ್ತು ಅರ್ಜೆಂಟಿನ ಎರಡು ತಂಡಗಳು ಸಮವಾಗಿ ಪಾಯಿಂಟ್ಸ್ ಪಡೆದವು, ನಂತರ ಪೆನಾಲ್ಟಿ ಶೂಟೌಟ್ ನಲ್ಲಿ ಅರ್ಜೆಂಟಿನ ತಂಡ ಫ್ರಾನ್ಸ್ ತಂಡವನ್ನು ಸೋಲಿಸಿ ವರ್ಲ್ಡ್ ಕಪ್ ಗೆದ್ದಿತು. ಇನ್ನು ಮೆಸ್ಸಿ ಅವರು ಸೆಮಿಫೈನಲ್ಸ್ ನಲ್ಲಿ ಕ್ರೋಏಷ್ಯ ತಂಡವನ್ನು ಸೋಲಿಸಿ, ಫಿನಾಲೆಗೆ ಎಂಟ್ರಿ ಕೊಟ್ಟ ನಂತರ, ಫೈನಲ್ಸ್ ಪಂದ್ಯ ತಮ್ಮ ವೃತ್ತಿ ಜೀವನದ ಕೊನೆಯ ಪಂದ್ಯ ಆಗಿರಲಿದೆ ಎಂದು ಹೇಳಿದ್ದರು. ಇದರಿಂದ ಅವರ ಅಭಿಮಾನಗಳಿಗೆ ಬೇಸರ ಆಗಿದ್ದಂತೂ ನಿಜ. ಆದರೆ ಫಿನಾಲೆ ಮುಗಿದ ನಂತರ ತಮ್ಮ ಕೆರಿಯರ್ ಬಗ್ಗೆ ಮತ್ತೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.. ಇದನ್ನು ಓದಿ..Sports News: ಮೆಸ್ಸಿ ಅಥವಾ ರೊನಾಲ್ಡೊ ಎಂದಾಗ ಇವರಿಬ್ಬರಲ್ಲಿ ತನಗೆ ಇಷ್ಟವಾದ ಆಟಗಾರನನ್ನು ಆಯ್ಕೆ ಮಾಡಿ ಸುನಿಲ್. ಯಾರು ಅಂತೇ ಗೊತ್ತೆ?

ಲಿಯೋನಲ್ ಮೆಸ್ಸಿ ಅವರು ತಮ್ಮ ಕೆರಿಯರ್ ಬಗ್ಗೆ ಹೇಳಿದ್ದು ಹೀಗೆ.. “ಫಿಫಾ ವರ್ಲ್ಡ್ ಕಪ್ ಗೆಲ್ಲಬೇಕು ಎಂದು ಬಹಳ ವರ್ಷಗಳಿಂದ ಕಾಯುತ್ತಿದ್ದೆ, ಆ ಕನಸು ಈಗ ನನಸಾಗಿದೆ. ಈ ದಿನಕ್ಕಾಗಿ ತುಂಬಾ ಕಠಿಣ ಪರಿಶ್ರಮ ಪಟ್ಟಿದ್ದೇನೆ. ಈಗ ವಿಶ್ವಕಪ್ ಗೆದ್ದು ಚಾಂಪಿಯನ್ ಆಗಿ, ತಂಡದಲ್ಲಿ ಮುಂದಿನ ಕೆಲವು ಪಂದ್ಯಗಳನ್ನು ಆಡಬೇಕು ಎಂದು ಬಯಸುತ್ತೇನೆ..”ಎಂದು ಹೇಳಿದ್ದಾರೆ ಲಿಯೋನಲ್ ಮೆಸ್ಸಿ. ಇದೀಗ ಮೆಸ್ಸಿ ಅವರು ನಿವೃತ್ತಿ ರದ್ದು ಮಾಡಿ ಇನ್ನಷ್ಟು ಸಮಯ ಫುಟ್ ಬಾಲ್ ಆಡುವುದಾಗಿ ಹೇಳಿದ್ದು, ಅವರ ಅಭಿಮಾನಿಗಳಿಗೆ ಸಂತೋಷ ಹೆಚ್ಚಾಗುವ ಹಾಗೆ ಮಾಡಿದೆ. ಇದನ್ನು ಓದಿ..FIFA World Cup: ಗೋಲ್ಡನ್ ಬೂಟ್ ರೇಸ್ ನಲ್ಲಿ ವಿಶ್ವಶ್ರೇಷ್ಠ ಆಟಗಾರರು: ಮೆಸ್ಸಿ -ಎಂಬಪ್ಪೆ ನಡುವೆ ನೇರ ಪೈಪೋಟಿ. ಯಾರಿಗೆ ಸಿಗಲಿದೆ ಗೊತ್ತೇ?

Get real time updates directly on you device, subscribe now.