IPL 2023: ಈ ಬಾರಿ ಕನ್ನಡಿಗರನ್ನು ಟಾರ್ಗೆಟ್ ಮಾಡಿದ RCB: ಒಮ್ಮೆಲೇ ಕಣ್ಣು ಇಟ್ಟಿರುವ 5 ಕನ್ನಡಿಗರು ಯಾರ್ಯಾರು ಗೊತ್ತೆ?? ಇವರೇ RCB ಟಾರ್ಗೆಟ್.

IPL 2023: ಈ ಬಾರಿ ಕನ್ನಡಿಗರನ್ನು ಟಾರ್ಗೆಟ್ ಮಾಡಿದ RCB: ಒಮ್ಮೆಲೇ ಕಣ್ಣು ಇಟ್ಟಿರುವ 5 ಕನ್ನಡಿಗರು ಯಾರ್ಯಾರು ಗೊತ್ತೆ?? ಇವರೇ RCB ಟಾರ್ಗೆಟ್.

IPL 2023: 2023ರ ಐಪಿಎಲ್16 (IPL 16) ನೇ ಸೀಸನ್ ಗಾಗಿ ನಮ್ಮ ಆರ್ಸಿಬಿ ತಂಡ ತಯಾರಿ ಮಾಡಿಕೊಂಡಿದೆ. ಆರ್ಸಿಬಿ (RCB) ತಂಡವು ಈಗಾಗಲೇ ಲವನೀತ್ ಸಿಸೋಡಿಯಾ (Lavneer Sisodia) ಸೇರಿದಂತೆ, ಕೆಲವು ವಿದೇಶಿ ಆಟಗಾರರನ್ನು ತಂಡದಿಂದ ರಿಲೀಸ್ ಮಾಡಿದೆ. ಈ ಸ್ಥಾನಗಳನ್ನು ತುಂಬಲು ಆರ್ಸಿಬಿ ಬಳಿ 8.75ಕೋಟಿ ರೂಪಾಯಿ ಇದೆ. ಈ ಹಣದಲ್ಲಿ ಕೆಲಗು ವಿದೇಶಿ ಆಟಗಾರರು ಮತ್ತು ಕೆಲವು ಕರ್ನಾಟಕದ (Karnataka), ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಆಡಿರುವ ಅನುಭವ ಇರುವ ಆಟಗಾರರನ್ನು ಖರೀದಿ ಮಾಡಲು ಆರ್ಸಿಬಿ ತಂಡ ಮುಂದಾಗಿದೆ. ಡಿಸೆಂಬರ್ 23ರಂದು ಕೇರಳದ ಕೊಚ್ಚಿಯಲ್ಲಿ ಐಪಿಎಲ್ ಆಕ್ಷನ್ (IPL Auction) ನಡೆಯಲಿದ್ದು, ಆರ್ಸಿಬಿ ಕಣ್ಣಿಟ್ಟಿರುವ ಕರ್ನಾಟಕದ ಆಟಗಾರರು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ..

ಎಲ್.ಆರ್.ಚೇತನ್ (L R Chetan) :- ಇವರು ಮಹಾರಾಜ ಟಿ20 (Maharaja T20) ಟೂರ್ನಿಯಲ್ಲಿ ಬೆಂಗಳೂರು ಬ್ಲಾಕ್ ಬಸ್ಟರ್ (Bengaluru Blockbuster) ತಂಡದ ಪರವಾಗಿ ಆಡಿದ್ದಾರೆ. ಮಯಾಂಕ್ ಅಗರ್ವಾಲ್ (Mayank Agarwal) ಅವರೊಡನೆ ಓಪನರ್ ಆಗಿ ಕಣಕ್ಕೆ ಇಳಿದಿದ್ದರು, 11 ಪಂದ್ಯಗಳಲ್ಲಿ 447 ರನ್ಸ್ ಗಳಿಸಿದರು. ಓಪನರ್ ಆಗುವ ಜೊತೆಗೆ, ಮಧ್ಯಮ ಕ್ರಮಾಂಕದಲ್ಲಿ ಕೂಡ ಉತ್ತಮ ಪ್ರದರ್ಶನ ನೀಡುತ್ತಾರೆ. ಜೊತೆಗೆ ವಿಕೆಟ್ ಕೀಪಿಂಗ್ ಸಹ ಉತ್ತಮವಾಗಿ ಮಾಡುತ್ತಾರೆ. ಇವರನ್ನು ಆರ್ಸಿಬಿ ತಂಡ ಖರೀದಿ ಮಾಡಬಹುದು. ಇದನ್ನು ಓದಿ..Cricket News: ಮೊದಲು ಆತನನ್ನು ಹೊರಗಿಟ್ಟು, ಶುಭ್ಮಂ ಗಿಲ್ ಗೆ ಹೆಚ್ಚು ಅವಕಾಶ ಕೊಡಿ ಎಂದ ಮೊಹಮ್ಮದ್ ಕೈಫ್. ಯಾರು ಹೊರಹೋಗಬೇಕಂತೆ ಗೊತ್ತೇ?

ಶ್ರೇಯಸ್ ಗೋಪಾಲ್ (Shreyas Gopal) :- ಇವರು 2019ರ ಐಪಿಎಲ್ ನಲ್ಲಿ ರಾಜಸ್ತಾನ್ ರಾಯಲ್ಸ್ (Rajasthan Royals) ತಂಡದ ಪರವಾಗಿ ಆಡಿದ್ದರು. ನಂತರದ ಸೀಸನ್ ಗಳಲ್ಲಿ ಉತ್ತಮ ಪ್ರದರ್ಶನ ನೀಡದ ಕಾರಣ ಇವರನ್ನು ರಾಜಸ್ತಾನ್ ರಾಯಲ್ಸ್ ತಂಡ ಕೈಬಿಟ್ಟಿತು. ಸ್ಪಿನ್ ಆಲ್ ರೌಂಡರ್ ಆಗಿರುವ ಶ್ರೇಯಸ್ ಗೋಪಾಲ್ ಅವರು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಹಳಷ್ಟು ಪಂದ್ಯಗಳನ್ನು ಆಡಿದ್ದಾರೆ. ಇವರು ವನಿಂದು ಹಸರಂಗ (Vanindu Hasaranga) ಅವರಿಗೆ ಬ್ಯಾಕಪ್ ಆಟಗಾರನಾಗಿ ಇರಬಹುದು. ಹಾಗಾಗಿ ಆರ್ಸಿಬಿ ತಂಡ ಇವರನ್ನು ಖರೀದಿ ಮಾಡಬಹುದು.

ವಿದ್ವತ್ ಕಾವೇರಪ್ಪ (Vidwath Kaverappa) :- ಇವರು ಕರ್ನಾಟಕ ತಂಡದ ಪರವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಬಲಗೈ ವೇಗಿ ಬೌಲರ್ ಆಗಿದ್ದಾರೆ. ಇವರು 6 36 ಎಕಾನಮಿಯಲ್ಲಿ ಸುಮಾರು 18 ವಿಕೆಟ್ಸ್ ಪಡೆದಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ (Vijay Hazare Trophy) ಸಹ, 17 ವಿಕೆಟ್ಸ್ ಪಡೆದಿದ್ದಾರೆ. ಆರ್ಸಿಬಿ ತಂಡ ಇವರನ್ನು ಖರೀದಿ ಮಾಡಿದರೆ, ಹರ್ಷಲ್ ಪಟೇಲ್ (Harshal Patel) ಮತ್ತು ಮೊಹಮ್ಮದ್ ಸಿರಾಜ್ (Mohammad Siraj) ಅವರಿಗೆ ಉತ್ತಮ ಬ್ಯಾಕಪ್ ಬೌಲರ್ ಆಗುತ್ತಾರೆ. ಇದನ್ನು ಓದಿ..IPL 2023: ಎಲ್ಲಾ ತಂಡಗಳಿಗೂ ಈ ವಿದೇಶಿಗರೇ ಬೇಕು, ಐವರ ಮೇಲೆ ಎಲ್ಲಾ ತಂಡಗಳ ಕಣ್ಣು. ಆರ್ಸಿಬಿ ಯಾರನ್ನು ಖರೀದಿ ಮಾಡಬೇಕು??

ಮನೋಜ್ ಬಂಡಾಜೆ (Manoj Bandaje) :- ಇವರು ಕೂಡ ಕರ್ನಾಟಕ ತಂಡದ ಒಳ್ಳೆಯ ಆಲ್ ರೌಂಡರ್ ಆಗಿದ್ದಾರೆ, ಇವರು ಆಡಿರುವ 16 ಪಂದ್ಯಗಳಲ್ಲಿ 116 ರನ್ಸ್ ಗಳಿಸಿದ್ದಾರೆ. ಹಾಗೆಯೇ 8 ವಿಕೆಟ್ಸ್ ಸಹ ಉರುಳಿಸಿದ್ದಾರೆ. ಆಲ್ ರೌಂಡರ್ ಆಗಿರುವ ಇವರು, ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಉತ್ತಮವಾಗಿರುವ ಕಾರಣ, ಇವರನ್ನು ಆಯ್ಕೆ ಮಾಡುವುದರಿಂದ ಶಾಬಾಜ್ ಅಹ್ಮದ್ (Shabaz Ahmad) ಮತ್ತು ಮಹಿಪಾಲ್ (Mahipal Lomror) ಅವರಿಗೆ ಬ್ಯಾಕಪ್ ಆಗಿರುತ್ತಾರೆ.

ವೈಶಾಕ್ ವಿಜಯ್ ಕುಮಾರ್ (Vyshak Vijay Kumar) :- ಇವರು ಪ್ರಥಮ ದರ್ಜೆ ಕ್ರಿಕೆಟ್ ಗೆ ಎಂಟ್ರಿ ಕೊಟ್ಟಿದ್ದು 2021ರಲ್ಲಿ. ಇತ್ತೀಚೆಗೆ ಸೈಯದ್ ಮುಷ್ತಾಕ್ ಅಲಿ (Syed Mushtaq Ali) ಟ್ರೋಫಿಯಲ್ಲಿ ಸಹ ಉತ್ತಮ ಪ್ರದರ್ಶನ ನೀಡಿದ್ದಾರೆ, 6.31 ಎಕಾನಮಿಯಲ್ಲಿ 15 ವಿಕೆಟ್ಸ್ ಉರುಳಿಸಿದ್ದಾರೆ. ಗಾಯದ ಕಾರಣ, ವಿಜಯ್ ಹಜಾರೆ ಟ್ರೋಫಿ ಇಂದ ಹೊರಗಿದ್ದರು, ಆದರೆ ರಣಜಿ ಟ್ರೋಫಿಯಲ್ಲಿ (Ranji Trophy) ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇವರನ್ನು ಆರ್ಸಿಬಿ ತಂಡ ಖರೀದಿ ಮಾಡಿದರೆ, ತಂಡಕ್ಕೆ ಉತ್ತಮ ವೇಗಿ ಬೌಲರ್ ಆಗಿದ್ದಾರೆ. ಇದನ್ನು ಓದಿ.. Cricket News: ವಿರಾಟ್ ನಂತರ ಈತನೇ ಮುಂದಿನ ದೊಡ್ಡ ಬ್ಯಾಟ್ಸಮನ್ ಎಂದು ಮತ್ತೊಬ್ಬ ಆಟಗಾರರನ್ನು ಆಯ್ಕೆ ಮಾಡಿದ ಜಾಫರ್. ಮತ್ತೊಬ್ಬ ಕೊಹ್ಲಿ ಸಿಕ್ಕಿ ಬಿಟ್ಟನೇ??