Cricket News: ಮೊದಲು ಆತನನ್ನು ಹೊರಗಿಟ್ಟು, ಶುಭ್ಮಂ ಗಿಲ್ ಗೆ ಹೆಚ್ಚು ಅವಕಾಶ ಕೊಡಿ ಎಂದ ಮೊಹಮ್ಮದ್ ಕೈಫ್. ಯಾರು ಹೊರಹೋಗಬೇಕಂತೆ ಗೊತ್ತೇ?
Cricket News: ಮೊದಲು ಆತನನ್ನು ಹೊರಗಿಟ್ಟು, ಶುಭ್ಮಂ ಗಿಲ್ ಗೆ ಹೆಚ್ಚು ಅವಕಾಶ ಕೊಡಿ ಎಂದ ಮೊಹಮ್ಮದ್ ಕೈಫ್. ಯಾರು ಹೊರಹೋಗಬೇಕಂತೆ ಗೊತ್ತೇ?
Cricket News: ಪ್ರಸ್ತುತ ಭಾರತ ವರ್ಸಸ್ ಬಾಂಗ್ಲಾದೇಶ್ (India vs Bangladesh) ಟೆಸ್ಟ್ ಪಂದ್ಯದ ಸರಣಿ ನಡೆಯುತ್ತಿದೆ. ಮೊದಲ ಟೆಸ್ಟ್ ನಲ್ಲಿ ಯುವ ಆಟಗಾರ ಶುಬ್ಮನ್ ಗಿಲ್ (Shubhman Gill) ಉತ್ತಮ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದರು. ಸೆಂಚುರಿ ಭಾರಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದರು. ಈ ಉತ್ತಮ ಪ್ರದರ್ಶನದಿಂದ ಎಲ್ಲರ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದಾರೆ. ಇದೀಗ ಮಾಜಿ ಆಟಗಾರ ಮೊಹಮ್ಮದ್ ಕೈಫ್ (Mohammad Kaif) ಅವರು ಕೂಡ ಶುಬ್ಮನ್ ಗಿಲ್ ಅವರ ಬಗ್ಗೆ ಮಾತನಾಡಿ, ಗಿಲ್ ಅವರಿಗೆ ಹೆಚ್ಚು ಅವಕಾಶ ಕೊಡಬೇಕು, ಬೇಕಿದ್ದರೆ ಆ ಇಬ್ಬರು ಆಟಗಾರರನ್ನು ಪ್ಲೇಯಿಂಗ್ 11 ಇಂದ ಹೊರಗಿಟ್ಟರು ಪರವಾಗಿಲ್ಲ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಮೊಹಮ್ಮದ್ ಕೈಫ್ ಅವರು ಹೇಳಿದ್ದೇನು ಎಂದು ತಿಳಿಸುತ್ತೇವೆ ನೋಡಿ.. “50 ಓವರ್ ಗಳ ಪಂದ್ಯದಲ್ಲಿ ಶುಬ್ಮನ್ ಗಿಲ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ, ಅವರಿಗೆ ಅವಕಾಶ ಕೊಡದೆ ಇರುವುದು ಸಾಧ್ಯವಿಲ್ಲ. ಬೇಕಿದ್ದರೆ ಕೆ.ಎಲ್.ರಾಹುಲ್ (K L Rahul) ಅಥವಾ ಶ್ರೇಯಸ್ ಅಯ್ಯರ್ (Shreyas Iyer) ಅವರನ್ನು ಪ್ಲೇಯಿಂಗ್ 11 ಇಂದ ಹೊರಗಿಡಬಹುದು. ಇದಕ್ಕೆ ಕಾರಣ ಹೇಳುವುದಾದರೆ, ಶುಬ್ಮನ್ ಗಿಲ್ ಅವರು ತಮಗೆ ಸಿಕ್ಕ ಅವಕಾಶಗಳನ್ನು ಬಹಳ ಚೆನ್ನಾಗಿ ಉಪಯೋಗಿಸಿಕೊಂಡು, ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎರಡನೇ ಟೆಸ್ಟ್ ಪಂದ್ಯಕ್ಕೆ ರೋಹಿತ್ ಶರ್ಮಾ ಅವರು ಬಂದರೆ, ನೇರವಾಗಿ ಆಡಲು ಆಗುವುದಿಲ್ಲ. ಎರಡನೆಯ ಟೆಸ್ಟ್ ಪಂದ್ಯದಲ್ಲೂ ಶುಬ್ಮನ್ ಗಿಲ್ ಅವರು ಮುಂದುವರಿಯಬೇಕು..” ಎಂದು ಹೇಳಿದ್ದಾರೆ ಮೊಹಮ್ಮದ್ ಕೈಫ್. ಇದನ್ನು ಓದಿ..Cricket News: ವಿರಾಟ್ ನಂತರ ಈತನೇ ಮುಂದಿನ ದೊಡ್ಡ ಬ್ಯಾಟ್ಸಮನ್ ಎಂದು ಮತ್ತೊಬ್ಬ ಆಟಗಾರರನ್ನು ಆಯ್ಕೆ ಮಾಡಿದ ಜಾಫರ್. ಮತ್ತೊಬ್ಬ ಕೊಹ್ಲಿ ಸಿಕ್ಕಿ ಬಿಟ್ಟನೇ??
ಅಕಸ್ಮಾತ್ ರೋಹಿತ್ (Rohit Sharma) ಅವರು ಫಿಟ್ ಆಗಿ ತಂಡಕ್ಕೆ ಮರಳಿದರೆ ಶುಬ್ಮನ್ ಗಿಲ್ ಅವರಿಗೆ ಅವಕಾಶ ಕೈತಪ್ಪಿ ಹೋಗಬಹುದು, ಎನ್ನುವ ಬಗ್ಗೆ ಮಾತನಾಡಿದ ಮೊಹಮ್ಮದ್ ಕೈಫ್, “ಶುಬ್ಮನ್ ಗಿಲ್ ಅವರನ್ನು ಪ್ಲೇಯಿಂಗ್ 11 ಇಂದ ಹೊರಗಿಡುವುದು ಟಫ್ ಟಾಸ್ಕ್. ಟೆಸ್ಟ್ ಪಂದ್ಯಗಳಲ್ಲಿ ಆಟಗಾರ ಸಂಯೋಜನೆ ಬದಲಾಯಿಸಬಾರದು. ಮೊದಲ ಟೆಸ್ಟ್ ಪಂದ್ಯದಲ್ಲಿ ತಂಡದಲ್ಲಿ 6 ಬೌಲರ್ ಗಳಿದ್ದರು, ಎರಡನೇ ಟೆಸ್ಟ್ ಪಂದ್ಯದಲ್ಲಿ 4 ಬೌಲರ್ ಗಳನ್ನು ಪ್ಲೇಯಿಂಗ್ 11 ಗೆ ತೆಗೆದುಕೊಂಡು ಶುಬ್ಮನ್ ಗಿಲ್ ಅವರಿಗೆ ಅವಕಾಶ ಕೊಡಬೇಕು.ಶುಬ್ಮನ್ ಗಿಲ್ ಈಗ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ಏನಾದರೂ ನಾನೇ ಅವರಾಗಿದ್ದರೆ, ಆಯ್ಕೆ ಆಗುತ್ತೇನೋ, ಇಲ್ಲವೋ ಎನ್ನುವ ಬಗ್ಗೆ ಯೋಚನೆ ಮಾಡದೆ ಸಿಕ್ಕ ಅವಕಾಶದಲ್ಲಿ ಉತ್ತಮವಾಗಿ ಆಡುತ್ತಿದ್ದೇ. ಮೂರು ರೀತಿಯ ಕ್ರಿಕೆಟ್ ನಲ್ಲಿ ಶುಬ್ಮನ್ ಗಿಲ್ ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಬ್ಯಾಟಿಂಗ್ ನಲ್ಲಿ ಒಳ್ಳೆಯ ಟೆಕ್ನಿಕ್ಸ್ ಕಲಿತಿರುವ ಇವರು ಉತ್ತಮವಾಗಿ ರನ್ಸ್ ಗಳಿಸುತ್ತಾರೆ. ಐಪಿಎಲ್ ನಲ್ಲೂ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ಹೇಳಿದ್ದಾರೆ ಮೊಹಮ್ಮದ್ ಕೈಫ್. ಇದನ್ನು ಓದಿ.. Cricket News: ತಂಡದಲ್ಲಿ ಇನ್ನು ನಡೆಯಲ್ಲ ರೋಹಿತ್ ಶರ್ಮ ಆಟ, ರೋಹಿತ್ ಸ್ಥಾನ ತುಂಬಲು ಬರುತ್ತಿರುವ ಖಡಕ್ ಆಟಗಾರರು ಯಾರ್ಯಾರು ಗೊತ್ತೆ?