Cricket News: ವಿರಾಟ್ ನಂತರ ಈತನೇ ಮುಂದಿನ ದೊಡ್ಡ ಬ್ಯಾಟ್ಸಮನ್ ಎಂದು ಮತ್ತೊಬ್ಬ ಆಟಗಾರರನ್ನು ಆಯ್ಕೆ ಮಾಡಿದ ಜಾಫರ್. ಮತ್ತೊಬ್ಬ ಕೊಹ್ಲಿ ಸಿಕ್ಕಿ ಬಿಟ್ಟನೇ??

Cricket News: ವಿರಾಟ್ ನಂತರ ಈತನೇ ಮುಂದಿನ ದೊಡ್ಡ ಬ್ಯಾಟ್ಸಮನ್ ಎಂದು ಮತ್ತೊಬ್ಬ ಆಟಗಾರರನ್ನು ಆಯ್ಕೆ ಮಾಡಿದ ಜಾಫರ್. ಮತ್ತೊಬ್ಬ ಕೊಹ್ಲಿ ಸಿಕ್ಕಿ ಬಿಟ್ಟನೇ??

Cricket News: ಭಾರತ ವರ್ಸಸ್ ಬಾಂಗ್ಲಾದೇಶ್ (India vs Bangladesh) ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ್ ಪೂಜಾರ (Cheteshwar Poojara) ಅವರು ಮೊದಲ ಇನ್ನಿಂಗ್ಸ್ ನಲ್ಲಿ 90 ರನ್ಸ್ ಗಳಿಸಿ, ಎರಡನೇ ಇನ್ನಿಂಗ್ಸ್ ನಲ್ಲಿ ಸೆಂಚುರಿ ಗಳಿಸಿದ್ದಾರೆ. ಹಾಗು ಶುಬ್ಮನ್ ಗಿಲ್ (Shubhman Gill) ಅವರು ಕೂಡ ಶತಕ ಗಳಿಸಿರುವ ಬಗ್ಗೆ ಹಿರಿಯ ಆಟಗಾರ ವಾಸಿಂ ಜಾಫರ್ (Wasim Jaffer) ಅವರು ಸಂತೋಷದ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಶುಕ್ರವಾರದ ಮೊದಲ ಟೆಸ್ಟ್ ಪಂದ್ಯದಲ್ಲಿ ಶುಭಮನ್ ಗಿಲ್ ಅವರು ಟೆಸ್ಟ್ ಪಂದ್ಯದಲ್ಲಿ ಮೊದಲ ಸೆಂಚುರಿ ಭಾರಿಸಿದರು, ಗಿಲ್ ಮತ್ತು ಚೇತೇಶ್ವರ್ ಪೂಜಾರ ಅವರ ಜೊತೆಗೆ ಪಾರ್ಟ್ನರ್ಶಿಪ್ ನಲ್ಲಿ 113 ರನ್ಸ್ ಸಹ ಗಳಿಸಿದರು. 152 ಎಸೆತಗಳಲ್ಲಿ 110 ರನ್ಸ್ ಗಳಿಸಿದರು.

ಟೆಸ್ಟ್ ಗಿಂತ ಮೊದಲು ಒನ್ ಡೇ ಕ್ರಿಕೆಟ್ ನಲ್ಲಿ ಸಹ ಸೆಂಚುರಿ ಭಾರಿಸಿದರು. ಆದರೆ 2021ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಮ್ಯಾಚ್ ನಲ್ಲಿ ಟೀಮ್ ಇಂಡಿಯಾ (Team India) ಭರ್ಜರಿ ಗೆಲುವು ಕಂಡಾಗ, ಇವರಿಗೆ ವರ್ಸಸ್ 90 ಯಲ್ಲಿ ಸೆಂಚುರಿ ಭಾರಿಸಲು ಸಾಧ್ಯವಾಗಲಿಲ್ಲ. ಇಂಥಹ ಉತ್ತಮ ಆಟಗಾರನ ಬಗ್ಗೆ, ವಾಸಿಂ ಜಾಫರ್ ಅವರು ಹೇಳಿದ್ದು ಹೀಗೆ, “ಶುಭಮನ್ ಗಿಲ್ ಅವರು ಸೆಂಚುರಿ ಭಾರಿಸಿರುವುದು ಒಳ್ಳೆಯದು. ಮೊದಲಿಗೆ ಅವರಿಗೆ ಅವಕಾಶ ಸಿಗಲಿಲ್ಲ, ಈಗ ಅವರು ಉತ್ತಮ ಪ್ರದರ್ಶನ ನೀಡುತ್ತಿರುವುದನ್ನು ನೋಡಲು ಸಂತೋಷ ಆಗುತ್ತದೆ. ಅವರೊಬ್ಬ ಕ್ಲಾಸ್ ಆಟಗಾರ, ವಿರಾಟ್ ಕೊಹ್ಲಿ (Virat Kohli) ಅವರ ನಂತರ ಭಾರತ ತಂಡ ಗಮನ ಹರಿಸಬೇಕಾಗಿರುವುದು ಶುಭಮನ್ ಗಿಲ್ ಅವರ ಬಗ್ಗೆ, ಅವರೊಬ್ಬ ಶ್ರೇಷ್ಠ ಆಟಗಾರ ಆಗುತ್ತಾರೆ. ಗಿಲ್ ಅವರಿಂದ ಇನ್ನು ಅನೇಕ ವಿಷಯಗಳನ್ನು ಎದುರು ನೋಡುತ್ತಿದ್ದೇನೆ.. ” ಎಂದು ಹೇಳಿದ್ದಾರೆ ವಾಸಿಂ ಜಾಫರ್. ಇದನ್ನು ಓದಿ..Cricket News: ಕೇವಲ 15 ರನ್ ಗೆ ಆಲ್ ಔಟ್ ಆದ ತಂಡದಲ್ಲಿ ನಿಜಕ್ಕೂ ಯಾವೆಲ್ಲ ಟಾಪ್ ಪ್ಲೇಯರ್ಸ್ ಇದ್ದರೂ ಗೊತ್ತೇ? ಬ್ರೆಟ್ ಲೀ ಹೇಳಿದ್ದೇನು ಗೊತ್ತೇ?

ಈಗ ರೋಹಿತ್ ಶರ್ಮಾ (Rohit Sharma) ಅವರು ಎರಡನೇ ಟೆಸ್ಟ್ ಗೆ ಮರಳಿ ಬರುವ ಸಾಧ್ಯತೆ ಇರುವುದರಿಂದ, ಗಿಲ್ ಅವರು ತಂಡದಿಂದ ಹೊರಗಿಡಬಹುದು ಎಂದು ಹೇಳಲಾಗುತ್ತಿದೆ, ಅದರ ಬಗ್ಗೆ ಮಾತನಾಡಿರುವ ವಾಸಿಂ ಜಾಫರ್ ಅವರು, “ಬ್ಯಾಟ್ಸ್ಮನ್ ಗಳ ಪ್ರದರ್ಶನ ಚೆನ್ನಾಗಿರುವಾಗ, ಬೌಲರ್ ಗಳನ್ನು ಹೊರಗಿಡುತ್ತಾರೆ, ಇದು ಬಹಳ ಹಿಂದಿನಿಂದ ನಡೆದಿದೆ. ಒಬ್ಬ ಬೌಲರ್ ಅನ್ನು ಕಡಿಮೆ ಮಾಡಿ, ಬ್ಯಾಟ್ಸ್ಮನ್ ಅನ್ನು ಸೇರಿಸಿಕೊಳ್ಳಬಹುದು. ಸ್ಪಿನ್ನರ್ ಒಬ್ಬರು ತಂಡದಲ್ಲಿ ಇರಬೇಕು ಎಂದು ನಾನು ನಿರೀಕ್ಷೆ ಮಾಡುತ್ತೇನೆ. ಗಿಲ್ ಅವರಿಗೆ ಅವಕಾಶ ಕೊಟ್ಟರೆ ಅವರು ಅದನ್ನು ಸರಿಯಾಗಿ ಬಳಸಿಕೊಳ್ಳುತ್ತಾರೆ ಎನ್ನುವ ನಂಬಿಕೆ ನನಗೆ ಇದೆ..” ಎಂದು ಹೇಳಿದ್ದಾರೆ ವಾಸಿಂ ಜಾಫರ್. ಈ ಮೂಲಕ ಶುಭಮನ್ ಗಿಲ್ ಅವರು ವಿರಾಟ್ ಕೊಹ್ಲಿ ಅವರ ಸ್ಥಾನವನ್ನು ತುಂಬಬಲ್ಲ ಆಟಗಾರ ಎಂದು ವಾಸಿಂ ಜಾಫರ್ ಅವರು ತಿಳಿಸಿದ್ದಾರೆ.. ಇದನ್ನು ಓದಿ.. Investment Tips: ಕೇವಲ ದಿನಕ್ಕೆ 200 ರೂಪಾಯಿ ಉಳಿತಾಯ ಮಾಡಿ ಇಲ್ಲಿ ಹೂಡಿಕೆ ಮಾಡಿದರೆ, ಲಕ್ಷ ಲಕ್ಷ ಲಾಭ ಗಳಿಸುವುದು ಖಚಿತ.