ಕರುನಾಡ ವಾಣಿ
ಇದು ನಿಮ್ಮ ಧ್ವನಿ

UPI Kannada: ಅಪ್ಪಿ ತಪ್ಪಿ ಮಿಸ್ ಆಗಿ ಬೇರೆಯವರಿಗೆ ಹಣ ವರ್ಗಾವಣೆ ಮಾಡಿದರೆ, ಸುಲಭವಾಗಿ ವಾಪಸ್ ಪಡೆಯುವುದು ಹೇಗೆ ಗೊತ್ತೇ?

57

Get real time updates directly on you device, subscribe now.

UPI Kannada: ಒಂದು ಕಾಲದಲ್ಲಿ ಒಂದು ಬ್ಯಾಂಕ್ ಖಾತೆಯಿಂದ ಮತ್ತೊಂದು ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಬೇಕು ಎಂದರೆ ಬಹಳ ಸಮಯ ತೆಗೆದುಕೊಳ್ಳುತ್ತಿತ್ತು, ಬ್ಯಾಂಕ್ ಗೆ ಹೋಗಿ, ಫಾರ್ಮ್ ತೆಗೆದುಕೊಂಡು, ಅದನ್ನು ಫಿಲ್ ಮಾಡಿ ಕೊಟ್ಟರೆ, ಕೆಲವು ಗಂಟೆಗಳ ನಂತರ, ಅಥವಾ ಒಂದು ದಿನ ಅಥವಾ ಎರಡು ದಿನಗಳ ನಂತರ ಆ ವ್ಯಕ್ತಿಯ ಬ್ಯಾಂಕ್ ಖಾತೆಗೆ ಹೋಗುತ್ತಿತ್ತು, ಆದರೆ ಈಗ ಎಲ್ಲವೂ ಕೆಲವೇ ಕೆಲವು ಸೆಕೆಂಡ್ಸ್ ಗಳಲ್ಲಿ ನಡೆಯುತ್ತದೆ. ಮೊಬೈಲ್ ನಲ್ಲಿ ಕೆಲವೇ ಸೆಕೆಂಡ್ ಗಳಲ್ಲಿ ಒಬ್ಬರ ಬ್ಯಾಂಕ್ ಖಾತೆಯಿಂದ ಮತ್ತೊಬ್ಬರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಬಹುದು. ಇದು ಒಳ್ಳೆಯದು, ಆದರೆ ಕೆಲವೊಮ್ಮೆ ತಂತ್ರಜ್ಞಾನದಿಂದ ತೊಂದರೆಯು ಆಗಬಹುದು.

ಒಬ್ಬರ ಖಾತೆಗೆ ಹಣ ಹಾಕಲು ಹೋಗಿ, ಮತ್ತೊಂದು ಖಾತೆಗೆ ಹಣ ಹಾಕುವಂಥಹ ಹಲವು ಘಟನೆಗಳು ನಡೆಯುವುದನ್ನು ನೋಡಿದ್ದೇವೆ. ಯುನಿಫೈಡ್ ಪೇಮೆಂಟ್ಸ್ ಇಂಟರ್ಫೆಸ್ (UPI) ಮೂಲಕ ಈಗ ಹಣ ವರ್ಗಾವಣೆ ಸುಲಭ, ಗೂಗಲ್ ಪೇ (Google Pay) ಫೋನ್ ಪೇ (PhonePe), ಪೇಟಿಎಮ್ (PayTM) ಇದೆಲ್ಲವೂ ಸಹ ಪೇಮೆಂಟ್ಸ್ ಮಾಡುವ ಮಾಧ್ಯಮ ಆಗಿದ್ದು, ಆದರೆ ಇವುಗಳನ್ನು ಬಳಸುವಾಗ ಕೆಲವೊಮ್ಮೆ ತಪ್ಪು ಯುಪಿಐ ಐಡಿ ಬಳಕೆ ಇಂದ ತಪ್ಪು ಅಕೌಂಟ್ ಗಳಿಗೆ ಹಣ ವರ್ಗಾವಣೆ ಆಗಿರುತ್ತದೆ. ಒಂದು ವೇಳೆ ನಿಮಗೂ ಆ ರೀತಿ ಆದಾಗ ಏನು ಮಾಡಬೇಕು ಎಂದು ಈಗ ತೋರಿಸುತ್ತೇವೆ ನೋಡಿ.. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India) ನೀಡಿರುವ ಗೈಡ್ ಲೈನ್ಸ್ ಗಳ ಪ್ರಕಾರ, ಡಿಜಿಟಲ್ ಟ್ರಾನ್ಸಕ್ಷನ್ (Digital Transactions) ನಲ್ಲಿ ಆಕಸ್ಮಿಕವಾಗಿ ತಪ್ಪು ನಡೆದರೆ, ಅದಕ್ಕಾಗಿ ಮೊದಲು ನೀವು ಆ ಅಪ್ಲಿಕೇಶನ್ ಗೆ ವರದಿ ಮಾಡಿ ಕಂಪ್ಲೇಂಟ್ ಮಾಡಬೇಕು. ಇದನ್ನು ಓದಿ..FIFA World Cup: ಗೋಲ್ಡನ್ ಬೂಟ್ ರೇಸ್ ನಲ್ಲಿ ವಿಶ್ವಶ್ರೇಷ್ಠ ಆಟಗಾರರು: ಮೆಸ್ಸಿ -ಎಂಬಪ್ಪೆ ನಡುವೆ ನೇರ ಪೈಪೋಟಿ. ಯಾರಿಗೆ ಸಿಗಲಿದೆ ಗೊತ್ತೇ?

ಎಕ್ಸಾಂಪಲ್ ಕೊಡುವುದಾದರೆ, ಗೂಗಲ್ ಪೇ ನಲ್ಲಿ ಹಣ ಕಳಿಸುವಾಗ ತಪ್ಪು ವಹಿವಾಟು ನಡೆದರೆ, ಆ ಅಪ್ಲಿಕೇಶನ್ ಗೆ ವರದಿ ಮಾಡಬೇಕು. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NCPI) ಇದಕ್ಕೆ ಸಹ ಕಂಪ್ಲೇಂಟ್ ಮಾಡಬೇಕು. ಈ ವಹಿವಾಟು ಅದರ ಜೊತೆಗೆ ವ್ಯಾಪಾರಿ ವಹಿವಾಟು ಬಗ್ಗೆ ಕೂಡ ಕಂಪ್ಲೇಂಟ್ ಮಾಡಬಹುದು. ಇದನ್ನು ಮಾಡುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ..

ಸ್ಟೆಪ್ 1 :- ಮೊದಲು ನೀವು https://www.npci.org.in/ ಈ ವೆಬ್ಸೈಟ್ ಓಪನ್ ಮಾಡಿ.
ಸ್ಟೆಪ್ 2 :- ನಂತರ ಇದರಲ್ಲಿ ಗೆಟ್ ಇನ್ ಟಚ್ ವಿಥ್ ಯುಪಿಐ (Get in touch with UPI) ಆಪ್ಶನ್ ಆಯ್ಕೆ ಮಾಡಿ, ಯುಪಿಐ ಕಂಪ್ಲೇಂಟ್ (UPI Complaint) ಮೇಲೆ ಕ್ಲಿಕ್ ಮಾಡಿ.
ಸ್ಟೆಪ್ 3 :- ನಂತರ ಕಂಪ್ಲೇಂಟ್ ಮೇಲೆ ಟ್ರಾನ್ಸಕ್ಷನ್ ಮೇಲೆ ಕ್ಲಿಕ್ ಮಾಡಿ.
ಸ್ಟೆಪ್ 4 :- ಪರ್ಸನ್ ಟು ಪರ್ಸನ್ (Person to Person) ಅಥವಾ ಪರ್ಸನ್ ಟು ಮರ್ಚೆಂಟ್ (Person to Merchant) ಮೇಲೆ ಕ್ಲಿಕ್ ಮಾಡಿ.
ಸ್ಟೆಪ್ 5 :- Incorrectly Transfered to Another Account ಎನ್ನುವ ಆಪ್ಶನ್ ಅನ್ನು ಕ್ಲಿಕ್ ಮಾಡಿ.
ಇಲ್ಲಿ ಕಂಪ್ಲೇಂಟ್ ಮಾಡಿದ ನಂತರ ನಿಮ್ಮ ಹಣ ನಿಮಗೆ ವಾಪಸ್ ಬರಬಹುದು. ಒಂದು ವೇಳೆ ಬರದೆ ಹೋದರೆ, ನೀವು ಒಮ್ಮೆ ಬ್ಯಾಂಕ್ ಗೆ ಹೋಗಿ ದೂರು ನೀಡಬಹುದು. ಇದನ್ನು ಓದಿ..Investment Tips: ಕೇವಲ ದಿನಕ್ಕೆ 200 ರೂಪಾಯಿ ಉಳಿತಾಯ ಮಾಡಿ ಇಲ್ಲಿ ಹೂಡಿಕೆ ಮಾಡಿದರೆ, ಲಕ್ಷ ಲಕ್ಷ ಲಾಭ ಗಳಿಸುವುದು ಖಚಿತ.

Get real time updates directly on you device, subscribe now.