FIFA World Cup: ಗೋಲ್ಡನ್ ಬೂಟ್ ರೇಸ್ ನಲ್ಲಿ ವಿಶ್ವಶ್ರೇಷ್ಠ ಆಟಗಾರರು: ಮೆಸ್ಸಿ -ಎಂಬಪ್ಪೆ ನಡುವೆ ನೇರ ಪೈಪೋಟಿ. ಯಾರಿಗೆ ಸಿಗಲಿದೆ ಗೊತ್ತೇ?
FIFA World Cup: ಗೋಲ್ಡನ್ ಬೂಟ್ ರೇಸ್ ನಲ್ಲಿ ವಿಶ್ವಶ್ರೇಷ್ಠ ಆಟಗಾರರು: ಮೆಸ್ಸಿ -ಎಂಬಪ್ಪೆ ನಡುವೆ ನೇರ ಪೈಪೋಟಿ. ಯಾರಿಗೆ ಸಿಗಲಿದೆ ಗೊತ್ತೇ?
FIFA World Cup: ಫಿಫಾ ವರ್ಲ್ಡ್ ಕಪ್ ರಂಗು ಇನ್ನೇನು ಮುಗಿಯುವ ಹಂತಕ್ಕೆ ಬಂದು ನಿಂತಿದೆ, ಚಾಂಪಿಯನ್ಸ್ ಆಗಲು ಉಳಿದಿರುವುದು ಇನ್ನೊಂದು ಹೆಜ್ಜೆ ಮಾತ್ರ. ಫಿನಾಲೆಯಲ್ಲಿ ಫ್ರಾನ್ಸ್ (France) ಮತ್ತು ಅರ್ಜೆಂಟಿನ (Argentina) ತಂಡದ ನಡುವೆ ಪೈಪೋಟಿ ನಡೆಯಲಿದೆ. ಇನ್ನು ಕೆಲವೇ ಸಮಯದಲ್ಲಿ ಫಿಫಾ ವರ್ಲ್ಡ್ ಕಪ್ ಫಿನಾಲೆ ನಡೆಯಲಿದ್ದು, ಯಾವ ತಂಡ ಗೆಲ್ಲುತ್ತದೆ ಎನ್ನುವ ಕುತೂಹಲದ ಜೊತೆಗೆ, ಅತಿಹೆಚ್ಚು ಗೋಲ್ ಹೊಡೆದವರಿಗೆ ಸಿಗುವ ಗೋಲ್ಡನ್ ಬೂಟ್ (Golden Boot) ಅವಾರ್ಡ್ ಮತ್ತು ಅತ್ಯುತ್ತಮ ಆಟಗಾರನಿಗೆ ಸಿಗುವ ಗೋಲ್ಡನ್ ಬಾಲ್ (Golden Ball) ಅವಾರ್ಡ್ ಯಾವ ಆಟಗಾರನಿಗೆ ಸಿಗುತ್ತದೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ, ಹಾಗಿದ್ದರೆ, ಯಾವ ಆಟಗಾರನಿಗೆ ಈ ಪ್ರಶಸ್ತಿಗಳು ಸಿಗಬಹುದು ಎಂದು ನಿಮಗೆ ತಿಳಿಸುತ್ತೇವೆ ನೋಡಿ..
ಫ್ರಾನ್ಸ್ ತಂಡದ ಸ್ಟಾರ್ ಪ್ಲೇಯರ್ ಕೈಲಿನ್ ಎಂಬಪ್ಪೆ (Kylian Mbappe) ಮತ್ತು ಅರ್ಜೆಂಟಿನ ತಂಡದ ಲೆಜೆಂಡ್ ಪ್ಲೇಯರ್ ಲಿಯೋನೆಲ್ ಮೆಸ್ಸಿ (Lionel Messi) ಒಬ್ಬರು 5 ಗೋಲ್ ಗಳನ್ನು ಹೊಡೆದಿದ್ದು, ಇವರಿಬ್ಬರ ನಡುವೆ ಗೋಲ್ಡನ್ ಬೂಟ್ ಗೆ ಭಾರಿ ಪೈಪೋಟಿ ಇದೆ. ಹಾಗೆಯೇ ಅರ್ಜೆಂಟಿನ ತಂಡದ ಜೂಲಿಯನ್ ಅಲ್ವಾರೆಜ್ (Julian Alvarez) ಮತ್ತು ಫ್ರಾನ್ಸ್ ನ ಒಲಿವಿಯರ್ ಗಿರೌಡ್ (Olivier Giroud) ಇಬ್ಬರು ರೇಸ್ ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ, ಇವರಿಬ್ಬರು 4 ಗೋಲ್ ಹೊಡೆದಿದ್ದಾರೆ. ಇನ್ನು ಒಟ್ಟಾರೆಯಾಗಿ ನೋಡುವುದಾದರೆ, ಗೋಲ್ಡನ್ ಬಾಲ್ ಪ್ರಶಸ್ತಿಗೆ ಮೆಸ್ಸಿ ಅವರು ಅರ್ಹರಾದ ಆಟಗಾರ ಎನ್ನಬಹುದು, ಏಕೆಂದರೆ ಅವರು 5 ಗೋಲ್ ಹೊಡೆದು, 3 ಗೋಲ್ ಹೊಡೆಯಲು ಅಸಿಸ್ಟ್ ಸಹ ಮಾಡಿದ್ದಾರೆ. ಇದನ್ನು ಓದಿ..FIFA World Cup: ಹೊರಬಿದ್ದ ಮೇಲೆ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವನ್ನು ಆಯ್ಕೆ ಮಾಡಿದ ರೊನಾಲ್ಡೊ: ಗೆಲ್ಲುವುದು ಯಾರು ಅಂತೇ ಗೊತ್ತೇ??
ಲಿಯೋನೆಲ್ ಮೆಸ್ಸಿ ಅವರನ್ನು ಹೊರತುಪಡಿಸಿ, ಗೋಲ್ಡನ್ ಬಾಲ್ ಲಿಸ್ಟ್ ನಲ್ಲಿರುವುದು ಫ್ರಾನ್ಸ್ ತಂಡದ ಕೈಲಿನ್ ಎಂಬಪ್ಪೆ, ಇವರು ಕೂಡ ಅತ್ಯುತ್ತ ಪ್ರದರ್ಶನ ನೀಡಿ, ಫುಟ್ ಬಾಲ್ ಪ್ರಿಯರು ಫಿದಾ ಆಗುವ ಹಾಗೆ ಮಾಡಿದ್ದಾರೆ. ಫ್ರಾನ್ಸ್ ತಂಡ ಫೈನಲ್ಸ್ ಗೆ ತಲುಪಿರುವುದಕ್ಕೆ ಕೈಲಿನ್ ಎಂಬಪ್ಪೆ ಅವರ ಎಫರ್ಟ್ಸ್ ಸಾಕಷ್ಟಿದೆ. ಇವರಿಬ್ಬರ ನಂತರ ಗೋಲ್ಡನ್ ಬಾಲ್ ಪೈಪೋಟಿಯಲ್ಲಿ ಮೂರನೇ ಸ್ಥಾನದಲ್ಲಿ ಇರುವುದು, ಫ್ರಾನ್ಸ್ ತಂಡದ ಅಂಟೋಯ ಗ್ರೀಜ್ ಮನ್ (Antoine Griezmann), ಇಡೀ ಇಡೀ ಟೂರ್ನಮೆಂಟ್ ನಲ್ಲಿ ಫ್ರೆಂಚ್ ಮಿಡ್ ಫೀಲ್ಡ್ ಅನ್ನು ಬಹಳ ಚೆನ್ನಾಗಿ ನಿಭಾಯಿಸಿದರು, ಸಮಯದಲ್ಲಿ ರಕ್ಷಣೆಗೂ ಕೂಡ ಸಹಾಯ ಮಾಡಿದ್ದಾರೆ. ಇಷ್ಟೇ ಅಲ್ಲದೆ, ಮೊರೊಕ್ಕೋ ಮತ್ತು ಕ್ರೋವೇಶಿಯ ತಂಡ ಫಿನಾಲೆಗೆ ಬಂದಿಲ್ಲ, ಆದರೆ ಆದರೆ ಲೂಕಾ ಮೆಡ್ರಿಕ್ ಹಾಗು ಸೋಫಿಯಾನೆ ಅಮರವತ್ ಇವರು ಕೂಡ ಉತ್ತಮ ಪ್ರದರ್ಶನ ನೀಡಿದ್ದಾರೆ, ಇವರಿಬ್ಬರು ಕೂಡ ಗೋಲ್ಡನ್ ಬಲ್ ಪಡೆಯುವವರ ಲಿಸ್ಟ್ ನಲ್ಲಿದ್ದಾರೆ. ಇದನ್ನು ಓದಿ.. Investment Tips: ಕೇವಲ ದಿನಕ್ಕೆ 200 ರೂಪಾಯಿ ಉಳಿತಾಯ ಮಾಡಿ ಇಲ್ಲಿ ಹೂಡಿಕೆ ಮಾಡಿದರೆ, ಲಕ್ಷ ಲಕ್ಷ ಲಾಭ ಗಳಿಸುವುದು ಖಚಿತ.