IPL 2023: ಬಿಗ್ ನ್ಯೂಸ್: ಐಪಿಎಲ್ ಹರಾಜಿನಲ್ಲಿ ಆರ್ಸಿಬಿ ತಂಡ ಕಟ್ಟಿರುವ ಟಾಪ್ ಮೂವರು ಆಟಗಾರರು ಯಾರ್ಯಾರು ಗೊತ್ತೇ? ಇದಪ್ಪ ಗೇಮ್ ಪ್ಲಾನ್ ಅಂದ್ರೆ.

IPL 2023: ಬಿಗ್ ನ್ಯೂಸ್: ಐಪಿಎಲ್ ಹರಾಜಿನಲ್ಲಿ ಆರ್ಸಿಬಿ ತಂಡ ಕಟ್ಟಿರುವ ಟಾಪ್ ಮೂವರು ಆಟಗಾರರು ಯಾರ್ಯಾರು ಗೊತ್ತೇ? ಇದಪ್ಪ ಗೇಮ್ ಪ್ಲಾನ್ ಅಂದ್ರೆ.

IPL 2023: ಐಪಿಎಲ್16 (IPL 16) ಗಾಗಿ ನಡೆಯುವ ಮಿನಿ ಹರಾಜು ಪ್ರಕ್ರಿಯೇ ಡಿಸೆಂಬರ್ 23ರಂದು ಕೇರಳದ (Kerala) ಕೊಚ್ಚಿಯಲ್ಲಿ ನಡೆಯಲಿದೆ. ಇದಕ್ಕಾಗಿ ಎಲ್ಲಾ ತಂಡಗಳು ಭರ್ಜರಿ ತಯಾರಿ ನಡೆಸುತ್ತಿದ್ದು, ನಮ್ಮ ಆರ್ಸಿಬಿ ತಂಡ ಕೂಡ ಈಗಾಗಲೇ 5 ಆಟಗಾರರನ್ನು ರಿಲೀಸ್ ಮಾಡಿದೆ, ಜೇಸನ್ ಬೆಹರೆಂಡೋರ್ಫ್ (Jason Behrendorff) ಅವರನ್ನು ಮುಂಬೈ ಇಂಡಿಯನ್ಸ್ (Mumbai Indians) ತಂಡಕ್ಕೆ 75 ಲಕ್ಷಕ್ಕೆ ಟ್ರೇಡ್ ಮಾಡಿದೆ, ಇನ್ನು ಅನೀಶ್ವರ್ ಗೌತಮ್ (Anishwar Gowtham), ಲವನೀತ್ ಸಿಸೋಡಿಯಾ (Lavnit Sisodia), ಚಾಮ ಮಿಲಿಂದ್ (Chama Milind) ಹಾಗೂ ಶೇರ್ಫಾನ್ ರುಧರ್ (Sherfan Rutherford) ಫೋರ್ಡ್ ಅವರನ್ನು ಸಹ ತಂಡದಿಂದ ಕೈಬಿಡಲಾಗಿದ್ದು, ಪ್ರಸ್ತುತ ಆರ್ಸಿಬಿ ತಂಡದಲ್ಲಿ ಖಾಲಿ ಇರುವ ಸ್ಥಾನ 7, ಉಳಿದಿರುವ ಮೊತ್ತ 8.75ಕೋಟಿ ರೂಪಾಯಿಗಳು. ಹಾಗಾಗಿ ಬುದ್ಧಿವಂತಿಕೆ ಇಂದ ಆರ್ಸಿಬಿ ತಂಡ ಆಯ್ಕೆ ಮಾಡಬೇಕಿದೆ. ಈ ಸಮಯದಲ್ಲಿ ಮೂವರು ಆಟಗಾರರನ್ನು ಖರೀದಿ ಮಾಡಲು ಆರ್ಸಿಬಿ ತಂಡ ಪ್ಲಾನ್ ಮಾಡಿದ್ದು, ಆ ಪ್ರಮುಖ ಆಟಗಾರರು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ.

ಸ್ಯಾಮ್ ಕರನ್ (Sam Curran) :- ಪ್ರಸ್ತುತ ಇವರು ವಿಶ್ವದ ಅತ್ಯುತ್ತಮ ಆಲ್ ರೌಂಡರ್ ಗಳಲ್ಲಿ ಒಬ್ಬರು. ಡೆತ್ ಓವರ್ ಗಳಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡುತ್ತಾರೆ, ಆರ್ಸಿಬಿ ತಂಡದಲ್ಲಿ ಡೆತ್ ಓವರ್ ಸ್ಪೆಷಲಿಸ್ಟ್ ಆಗಿ ಹರ್ಷಲ್ ಪಟೇಲ್ (Harshal Patel) ಅವರು ಇದ್ದಾರೆ, ಜೊತೆಗೆ ಇವರು ಇದ್ದರೆ ತಂಡ ಇನ್ನು ಹೆಚ್ಚು ಬಲಶಾಲಿ ಆಗುತ್ತದೆ. 8 ವರ್ಷ ಇವರು ಟಿ20 ವಿಶ್ವಕಪ್ (T20 World Cup) ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಸಹ ಗೆದ್ದಿದ್ದಾರೆ. ಜೊತೆಗೆ ಸ್ಯಾಮ್ ಕರನ್ ಅವರು ಕೆಳ ಕ್ರಮಾಂಕದಲ್ಲಿ ಉತ್ತಮವಾಗಿ ಬ್ಯಾಟಿಂಗ್ ಸಹ ಮಾಡುತ್ತಾರೆ. ಹಾಗಾಗಿ ಇವರನ್ನು ಆರ್ಸಿಬಿ ತಂಡ ಖರೀದಿ ಮಾಡಿದರೆ, ತಂಡ ಇನ್ನು ಹೆಚ್ಚು ಸ್ಟ್ರಾಂಗ್ ಆಗುವುದು ಖಂಡಿತ. ಇದನ್ನು ಓದಿ..Cricket News: ಕೇವಲ 15 ರನ್ ಗೆ ಆಲ್ ಔಟ್ ಆದ ತಂಡದಲ್ಲಿ ನಿಜಕ್ಕೂ ಯಾವೆಲ್ಲ ಟಾಪ್ ಪ್ಲೇಯರ್ಸ್ ಇದ್ದರೂ ಗೊತ್ತೇ? ಬ್ರೆಟ್ ಲೀ ಹೇಳಿದ್ದೇನು ಗೊತ್ತೇ?

ಜೇಸನ್ ಹೋಲ್ಡರ್ (Jason Holder) :- ಇವರು ಈಗ ಆಲ್ ರೌಂಡರ್ ಆಗಿ ಒಳ್ಳೆಯ ಫಾರ್ಮ್ ನಲ್ಲಿದ್ದಾರೆ. ಆರ್ಸಿಬಿ ಬಳಿ ಬಿಡ್ ಮಾಡೋದಕ್ಕೆ ಹೆಚ್ಚು ಹಣ ಇಲ್ಲದೆ ಇರುವ ಕಾರಣ, ಒಂದು ಸ್ಯಾಮ್ ಕರನ್ ಅವರನ್ನು ಖರೀದಿ ಮಾಡಲು ಸಾಧ್ಯ ಆಗದೆ ಹೋದರೆ, ಜೇಸನ್ ಹೋಲ್ಡರ್ ಅವರನ್ನು ಖರೀದಿ ಆಡಬಹುದು. ಇವರು ಇತ್ತೀಚಿನ ದಿನಗಳಲ್ಲಿ ಟಿ20 ಪಂದ್ಯಗಳಲ್ಲಿ ಉತ್ತಮ ಫಾರ್ಮ್ ನಲ್ಲಿದ್ದಾರೆ. ಕಳೆದ ವರ್ಷ ಐಪಿಎಲ್ ನಲ್ಲಿ ಎಲ್.ಎಸ್.ಜಿ (LSG) ತಂಡದ ಪರವಾಗಿ, 12 ಪಂದ್ಯಗಳಲ್ಲಿ 14 ವಿಕೆಟ್ಸ್ ಪಡೆದರು. ಜೊತೆಗೆ ಬ್ಯಾಟಿಂಗ್ ನಲ್ಲೂ ಉತ್ತವಾಗಿದ್ದಾರೆ. ಉತ್ತಮವಾದ ಆಲ್ ರೌಂಡರ್ ಆಗಿರುವ ಇವರು ಆರ್ಸಿಬಿ ತಂಡಕ್ಕೆ ಒಳ್ಳೆಯ ಆಯ್ಕೆ ಆಗುತ್ತಾರೆ.

ಮಯಾಂಕ್ ಅಗರ್ವಾಲ್ (Mayank Agarwal) :- ಇವರು ಬೆಂಗಳೂರಿನ (Bangalore) ಆಟಗಾರನೇ ಆಗಿದ್ದಾರೆ. ಆರ್ಸಿಬಿ ತಂಡದಲ್ಲಿ ಈ ಹಿಂದೆ ಆಟವಾಡಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿದ ಅನುಭವ ಸಹ ಇದೆ. ಇವರು ಆರ್ಸಿಬಿ ತಂಡಕ್ಕೆ ಇವರು ಒಳ್ಳೆಯ ಓಪನಿಂಗ್ ಬ್ಯಾಟ್ಸ್ಮನ್ ಆಗುವುದು ಖಂಡಿತ. ಹಾಗಾಗಿ ಇವರನ್ನು ತಂಡಕ್ಕೆ ವಾಪಸ್ ಕರೆತಂದರೆ, ಆರ್ಸಿಬಿ ತಂಡಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತಿದೆ. ಇದನ್ನು ಓದಿ.. Investment Tips: ಕೇವಲ ದಿನಕ್ಕೆ 200 ರೂಪಾಯಿ ಉಳಿತಾಯ ಮಾಡಿ ಇಲ್ಲಿ ಹೂಡಿಕೆ ಮಾಡಿದರೆ, ಲಕ್ಷ ಲಕ್ಷ ಲಾಭ ಗಳಿಸುವುದು ಖಚಿತ.