ಕರುನಾಡ ವಾಣಿ
ಇದು ನಿಮ್ಮ ಧ್ವನಿ

Cricket News: ಕೇವಲ 15 ರನ್ ಗೆ ಆಲ್ ಔಟ್ ಆದ ತಂಡದಲ್ಲಿ ನಿಜಕ್ಕೂ ಯಾವೆಲ್ಲ ಟಾಪ್ ಪ್ಲೇಯರ್ಸ್ ಇದ್ದರೂ ಗೊತ್ತೇ? ಬ್ರೆಟ್ ಲೀ ಹೇಳಿದ್ದೇನು ಗೊತ್ತೇ?

Cricket News: ಕೇವಲ 15 ರನ್ ಗೆ ಆಲ್ ಔಟ್ ಆದ ತಂಡದಲ್ಲಿ ನಿಜಕ್ಕೂ ಯಾವೆಲ್ಲ ಟಾಪ್ ಪ್ಲೇಯರ್ಸ್ ಇದ್ದರೂ ಗೊತ್ತೇ? ಬ್ರೆಟ್ ಲೀ ಹೇಳಿದ್ದೇನು ಗೊತ್ತೇ?

410

Cricket News: ಬಹು ನಿರೀಕ್ಷಿತ ಬಿಗ್ ಬ್ಯಾಶ್ ಲೀಗ್ (Big Bash League) ಶುರುವಾಗಿದ್ದು, ನಿನ್ನೆ ನಡೆದ ಅಡಿಲೇಡ್ ಸ್ಟ್ರೈಕರ್ಸ್ (Adelaide Strikers) ವರ್ಸಸ್ ಸಿಡ್ನಿ ಥಂಡರ್ಸ್ (Sydney Thunders) ನಡುವಿನ ಪಂದ್ಯದಲ್ಲಿ, ಹಿಂದೆಂದೂ ಕಂಡಿರದ ಹಾಗೆ ಅತ್ಯಂತ ಕನಿಷ್ಠ ರನ್ಸ್ ಗೆ ಕೇವಲ 15 ರನ್ಸ್ ಗಳಿಗೆ ಸಿಡ್ನಿ ತಂಡ ಆಲ್ ಔಟ್ ಆಗಿದೆ. ಈ ರೀತಿ ಆಗಿದ್ದಕ್ಕೆ ಆಸ್ಟ್ರೇಲಿಯಾ ತಂಡದ ಹಿರಿಯ ಆಟಗಾರ ಬ್ರೆಟ್ ಲೀ (Brett Lee) ಅವರು ಸಿಡ್ನಿ ಥಂಡರ್ಸ್ ತಂಡವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ಅಡಿಲೇಡ್ ತಂಡವು 140 ರನ್ಸ್ ಗಳ ಗುರಿಯನ್ನು ಸಿಡ್ನಿ ಥಂಡರ್ಸ್ ಟ್ಯಾಂಡಕ್ಕೆ ನೀಡಿತು. ಆದರೆ ಇದರ ಅರ್ಧದಷ್ಟನ್ನು ಕೂಡ ಸಿಡ್ನಿ ತಂಡ ಪೂರ್ತಿಗೊಳಿಸಲು ಸಾಧ್ಯವಾಗಲಿಲ್ಲ.

Follow us on Google News

ಕೇವಲ 15 ರನ್ಸ್ ಗೆ ಆಲೌಟ್ ಆದ ಸಿಡ್ನಿ ಥಂಡರ್ಸ್ ತಂಡದಲ್ಲಿ, ಅಲೆಕ್ಸ್ ಹೇಲ್ಸ್ (Alex Hales) ರಿಲೀ ರುಸ್ಸೋ (Rilee Russo), ಡೇನಿಯಲ್ ಸ್ಯಾಮ್ಸ್ (Daniel Sams) ಅವರಂತಹ ಅನುಭವ ಇರುವ ಉತ್ತಮವಾದ ಆಟಗಾರರು ಇದ್ದರು ಕೂಡ, ಇವರುಗಳು ಸಹ ಪವರ್ ಪ್ಲೇ ಸಮಯದಲ್ಲೇ ವಿಕೆಟ್ ಕಳೆದುಕೊಂಡು, ಡಗೌಟ್ ಗೆ ತೆರಳಿದರು. ಈ ಹೀನಾಯ ಸೋಲನ್ನು ನೋಡಿದ ನಂತರ, ಆಸ್ಟ್ರೇಲಿಯಾದ ಮಾಜಿ ಆಟಗಾರ ಬ್ರೆಟ್ ಲೀ ಅವರು ಟೀಕೆ ಮಾಡಿ, ಮಾತನಾಡಿದ್ದಾರೆ, “ಸಿಡ್ನಿ ಥಂಡರ್ಸ್ ತಂಡ ನೀಡಿದ ಭಯಂಕರ ಪ್ರದರ್ಶನ ಇದು. ಈ ಪಂದ್ಯ ನೋಡಿದ ಮೇಲೆ ನನಗೆ ಮಾತುಗಳೇ ಬರುತ್ತಿಲ್ಲ. ತಂಡದ ಬೌಲಿಂಗ್ ನಿಜಕ್ಕೂ ಬಹಳ ಚೆನ್ನಾಗಿತ್ತು. ಇದನ್ನು ಓದಿ..Cricket News: ತಂಡದಲ್ಲಿ ಇನ್ನು ನಡೆಯಲ್ಲ ರೋಹಿತ್ ಶರ್ಮ ಆಟ, ರೋಹಿತ್ ಸ್ಥಾನ ತುಂಬಲು ಬರುತ್ತಿರುವ ಖಡಕ್ ಆಟಗಾರರು ಯಾರ್ಯಾರು ಗೊತ್ತೆ?

ಆದರೆ ಬ್ಯಾಟಿಂಗ್ ನಲ್ಲಿ ಕೇವಲ 15 ರನ್ ಗಳು. ಇದರ ಬಗ್ಗೆ ಹೇಳೋದಕ್ಕೆ ನನ್ನಲ್ಲಿ ಮಾತುಗಳಿಲ್ಲ. ಇಂಥ ಪಂದ್ಯವನ್ನು ನಾನು ಇವರೆಗು ನೋಡಿದ್ದೇ ಇಲ್ಲ. ಇಂಥ ಕ್ರಿಕೆಟ್ ಪಂದ್ಯವನ್ನು ನಾನು ನೋಡಿಯೇ ಇಲ್ಲ..” ಎಂದಿದ್ದಾರೆ. ಅಡಿಲೇಡ್ ತಂಡ 9 ವಿಕೆಟ್ಸ್ ಕಳೆದುಕೊಂಡು, 139 ರನ್ಸ್ ಗಳಿಸಿ, 140 ರನ್ ಗಳ ಗುರಿ ನೀಡಿತು. ಸಿಡ್ನಿ ತಂಡವು, 3ನೇ ಎಸೆತದಿಂದಲೇ ವಿಕೆಟ್ಸ್ ಕಳೆದುಕೊಳ್ಳಲು ಶುರು ಮಾಡಿತು, 10 ರನ್ಸ್ ಗಳಿಸುವಷ್ಟರಲ್ಲೇ, 6 ವಿಕೆಟ್ ಕಳೆದುಕೊಂಡಿತ್ತು. 15 ರನ್ ಗಳಷ್ಟರಲ್ಲಿ ಎಲ್ಲಾ ವಿಕೆಟ್ಸ್ ಕಳೆದುಕೊಂಡಿತು. ಕೊನೆಯ ಪ್ಲೇಯರ್ ಬ್ರೆಂಡನ್ ಡಾಗ್ಗೆಟ್ (Brendon Dogget) 4 ರನ್ ಗಳಿಸಿದ್ದೇ ಹೆಚ್ಚು ಸ್ಕೋರ್ ಆಯಿತು. ವೈಡ್ ಎಸೆತದಿಂದ 2 ರನ್ ಗಳು ಬಂದವು. ಪವರ್ ಪ್ಲೇ ಮುಗಿಯುವುದಕ್ಕಿಂತ ಮೊದಲೇ ಪಂದ್ಯ ಮುಗಿದಿತ್ತು. ಇದನ್ನು ಓದಿ.. Cricket News: ಟೀಮ್ ಇಂಡಿಯಾ ದಲ್ಲಿ ಮಹತ್ವದ ಬದಲಾವಣೆ; ಶ್ರೀಲಂಕಾ ವಿರುದ್ಧ ಸರಣಿಗೆ ತಂಡ ಘೋಷಣೆ. ಅಚ್ಚರಿಯಾಗಿ ಹೊರಹೋಗಿದ್ದು ಯಾರು ಗೊತ್ತೆ?