Cricket News: ಟೀಮ್ ಇಂಡಿಯಾ ದಲ್ಲಿ ಮಹತ್ವದ ಬದಲಾವಣೆ; ಶ್ರೀಲಂಕಾ ವಿರುದ್ಧ ಸರಣಿಗೆ ತಂಡ ಘೋಷಣೆ. ಅಚ್ಚರಿಯಾಗಿ ಹೊರಹೋಗಿದ್ದು ಯಾರು ಗೊತ್ತೆ?

Cricket News: ಟೀಮ್ ಇಂಡಿಯಾ ದಲ್ಲಿ ಮಹತ್ವದ ಬದಲಾವಣೆ; ಶ್ರೀಲಂಕಾ ವಿರುದ್ಧ ಸರಣಿಗೆ ತಂಡ ಘೋಷಣೆ. ಅಚ್ಚರಿಯಾಗಿ ಹೊರಹೋಗಿದ್ದು ಯಾರು ಗೊತ್ತೆ?

Kannada News: ಪ್ರಸ್ತುತ ಟೀಮ್ ಇಂಡಿಯಾ (Team India) ಬಾಂಗ್ಲಾದೇಶ್ (India vs Bangladesh) ವಿರುದ್ಧ ಟೆಸ್ಟ್ ಪಂದ್ಯದ ಟೂರ್ನಿ ಆಡುತ್ತಿದೆ. ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಎರಡನೇ ಟೆಸ್ಟ್ ಪಂದ್ಯ ಡಿಸೆಂಬರ್ 22ರಿಂದ 26ರ ವರೆಗು ನಡೆಯಲಿದೆ. ಇದಾದ ಬಳಿಕ ತವರಿನಲ್ಲಿ ಶ್ರೀಲಂಕಾ (Srilanka) ವಿರುದ್ಧ ಮೂರು ಟಿ20 ಮತ್ತು ಏಕದಿನ ಸರಣಿ ಪಂದ್ಯಗಳನ್ನು ಆಡಲಿದೆ ಭಾರತ ತಂಡ, ಇದು 2023ರ ಜನವರಿ 3 ರಿಂದ ಶುರುವಾಗಲಿದ್ದು, ಅದಕ್ಕಾಗಿ ಇನ್ನೇನು ತಂಡವನ್ನು ಪ್ರಕಟಣೆ ಮಾಡಬೇಕಿದೆ. ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಶ್ರೀಲಂಕಾ ವಿರುದ್ಧದ ಸರಣಿಯಿಂದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ (Rohit Sharma) ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು, ತಂಡಕ್ಕೆ ಇನ್ಯಾರು ಸೆಲೆಕ್ಟ್ ಆಗಬಹುದು ಎಂದು ತಿಳಿಸುತ್ತೇವೆ ನೋಡಿ..

ಕೆ.ಎಲ್.ರಾಹುಲ್ (K L Rahul) ಅವರಿಗು ಶ್ರೀಲಂಕಾ ಸರಣಿಯಿಂದ ವಿಶ್ರಾಂತಿ ನೀಡಬಹುದು ಎನ್ನಲಾಗುತ್ತಿದೆ. ಇನ್ನು ಓಪನರ್ ಗಳಾಗಿ ಇಶಾನ್ ಕಿಶನ್ (Ishan Kishan) ಮತ್ತು ಸಂಜು ಸ್ಯಾಮ್ಸನ್ (Sanju Samson) ಅವರು ಆಯ್ಕೆಯಾಗಬಹುದು ಎಂದು ಹೇಳಲಾಗುತ್ತಿದೆ, ಇವರಿಬ್ಬರು ಈಗ ಅತ್ಯುತ್ತಮವಾದ ಫಾರ್ಮ್ ನಲ್ಲಿದ್ದಾರೆ. ಇನ್ನು ರಿಷಬ್ ಪಂತ್ (Rishab Pant) ಅವರಿಗು ತಂಡದಲ್ಲಿ ಸ್ಥಾನ ಸಿಗುತ್ತದೆ, ಇವರು ಮಧ್ಯಮ ಕ್ರಮಾಂಕದಲ್ಲಿ ಆಡಬಹುದು ಎನ್ನಲಾಗುತ್ತಿದೆ. ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ (Virat Kohli) ಅವರು ವಿಶ್ರಾಂತಿ ಪಡೆಯುವ ಕಾರಣ, ಸೂರ್ಯಕುಮಾರ್ ಯಾದವ್ (Suryakumar Yadav) ಅವರು 3ನೇ ಕ್ರಮಾಂಕದಲ್ಲಿ ಆಡಬಹುದು ಎನ್ನಲಾಗುತ್ತಿದೆ. ಹಾರ್ದಿಕ್ ಪಾಂಡ್ಯ (Hardik Pandya) ಅವರು ಟೀಮ್ ಇಂಡಿಯಾ ಕ್ಯಾಪ್ಟನ್ ಆಗಿ, ತಂಡವನ್ನು ಲೀಡ್ ಮಾಡಬಹುದು. ಇವರ ಜೊತೆಗೆ ದೀಪಕ್ ಚಹರ್ (Deepak Chahar), ವಾಷಿಂಗ್ಟನ್ ಸುಂದರ್ (Washington Sundar) ಅವರು ಕೂಡ ತಂಡಕ್ಕೆ ಆಯ್ಕೆಯಾಗಬಹುದು. ಇದನ್ನು ಓದಿ..Cricket News: ತಂಡದಲ್ಲಿ ಇನ್ನು ನಡೆಯಲ್ಲ ರೋಹಿತ್ ಶರ್ಮ ಆಟ, ರೋಹಿತ್ ಸ್ಥಾನ ತುಂಬಲು ಬರುತ್ತಿರುವ ಖಡಕ್ ಆಟಗಾರರು ಯಾರ್ಯಾರು ಗೊತ್ತೆ?

ಇನ್ನು ಹರ್ಷಲ್ ಪಟೇಲ್ (Harshal Patel) ಅವರು ಕೂಡ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಇದೆ. ಬೌಲರ್ ಗಳ ಆಯ್ಕೆ ಬಗ್ಗೆ ಹೇಳುವುದಾದರೆ, ಮುಖ್ಯ ವೇಗಿ ಬೌಲರ್ ಆಗಿ ಭುವನೇಶ್ವರ್ ಕುಮಾರ್ (Bhuvneshwar Kumar) ಇದ್ದಾರೆ, ಅರ್ಷದೀಪ್ ಸಿಂಗ್ (Arshdeep Singh), ಉಮ್ರಾನ್ ಮಲಿಕ್ (Umran Malik), ಮತ್ತು ಮೊಹಮ್ಮದ್ ಸಿರಾಜ್ (Mohammad Siraj) ಪ್ರಮುಖ ಆಯ್ಕೆ ಆಗುತ್ತಾರೆ. ಸ್ಪಿನ್ನರ್ ಗ ಪೈಕಿ ಯುಜವೇಂದ್ರ ಚಾಹಲ್ (Yuzvendra Chahal) ಮತ್ತು ಕುಲದೀಪ್ ಯಾದವ್ (Kuldeep Yadav) ಅವರು ಕೂಡ ಆಯ್ಕೆಯಾಗಬಹುದು. ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧದ ಮೂರು ಟಿ20 ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿದ್ದು, ಜನವರಿ 3ರಂದು ಮೊದಲ ಟಿ20, ಜನವರಿ 5ರಂದು ಎರಡನೆಯ ಟಿ20, ಜನವರಿ 7ರಂದು ಮೂರನೇ ಟಿ20. ಮೊದಲ ಏಕದಿನ ಪಂದ್ಯ ಜನವರಿ 10ರಂದು, ಎರಡನೇ ಏಕದಿನ ಪಂದ್ಯ ಜನವರಿ 12ರಂದು, ಮೂರನೇ ಏಕದಿನ ಪಂದ್ಯ ಜನವರಿ 15ರಂದು ನಡೆಯಲಿದೆ. ಇದನ್ನು ಓದಿ..Investment Tips: ಕೇವಲ ದಿನಕ್ಕೆ 200 ರೂಪಾಯಿ ಉಳಿತಾಯ ಮಾಡಿ ಇಲ್ಲಿ ಹೂಡಿಕೆ ಮಾಡಿದರೆ, ಲಕ್ಷ ಲಕ್ಷ ಲಾಭ ಗಳಿಸುವುದು ಖಚಿತ.