Cricket News: ತಂಡದಲ್ಲಿ ಇನ್ನು ನಡೆಯಲ್ಲ ರೋಹಿತ್ ಶರ್ಮ ಆಟ, ರೋಹಿತ್ ಸ್ಥಾನ ತುಂಬಲು ಬರುತ್ತಿರುವ ಖಡಕ್ ಆಟಗಾರರು ಯಾರ್ಯಾರು ಗೊತ್ತೆ?
Cricket News: ತಂಡದಲ್ಲಿ ಇನ್ನು ನಡೆಯಲ್ಲ ರೋಹಿತ್ ಶರ್ಮ ಆಟ, ರೋಹಿತ್ ಸ್ಥಾನ ತುಂಬಲು ಬರುತ್ತಿರುವ ಖಡಕ್ ಆಟಗಾರರು ಯಾರ್ಯಾರು ಗೊತ್ತೆ?
Cricket News: ಟೀಮ್ ಇಂಡಿಯಾದ (Team India) ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma) ಅವರು ಒಂದು ವರ್ಷಗಳ ಕಾಲ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಿದ್ದಾರೆ. ಆದರೆ ಇನ್ನುಮುಂದೆ, ರೋಹಿತ್ ಶರ್ಮ ಅವರು ಕ್ಯಾಪ್ಟನ್ ಆಗಿ, ತಂಡವನ್ನು ಮುನ್ನಡೆಸುವದು ಕಷ್ಟ ಎಂದು ಹೇಳಲಾಗುತ್ತಿದೆ. ಇದಕ್ಕೆ ಹಲವು ಕಾರಣಗಳು ಇದೆ. ಒಂದು ರೋಹಿತ್ ಶರ್ಮಾ ಅವರಿಗೆ ಈಗಾಗಲೇ 35 ವರ್ಷಗಳು, ಹಾಗಾಗಿ ಅವರು ಇನ್ನು ಹೆಚ್ಚು ಸಮಯ ತಂಡದಲ್ಲಿ ಉಳಿಯುವುದು ಕಷ್ಟವೇ ಆಗಿದೆ.
ಜೊತೆಗೆ ರೋಹಿತ್ ಶರ್ಮಾ ಅವರಿಗೆ ಫಿಟ್ನೆಸ್ ಸಮಸ್ಯೆ ಕೂಡ ಇದೆ. ಮೊದಲಿದ್ದ ಹಾಗೆ ಅವರು ಫಿಟ್ ಆಗಿ ಇಲ್ಲ. ಫೀಲ್ಡಿಂಗ್ ನಲ್ಲಿ ಮೊದಲಿನ ವೇಗ ಇಲ್ಲ. ಜೊತೆಗೆ ಬ್ಯಾಟಿಂಗ್ ನಲ್ಲಿ ಕೂಡ ಉತ್ತಮ ಪ್ರದರ್ಶನ ನೀಡಿಲ್ಲ. ಆರಂಭಿಕನಾಗಿ ಬರುತ್ತಿದ್ದ ರೋಹಿತ್ ಶರ್ಮಾ ಅವರು ಸ್ಥಿರ ಪ್ರದರ್ಶನ ನೀಡುತ್ತಿರಲಿಲ್ಲ. ವೈಫಲ್ಯವನ್ನೇ ಅನುಭವಿಸುತ್ತಿದ್ದರು. ಹೆಚ್ಚು ರನ್ಸ್ ಗಳಿಸುತ್ತಿರಲಿಲ್ಲ. ಜೊತೆಗೆ ಇವರ ಕ್ಯಾಪ್ಟನ್ಸಿಯಲ್ಲಿ ಈ ವರ್ಷ ಭಾರತ ತಂಡ ಸತತವಾಗಿ ಸೋಲುಗಳನ್ನೇ ಕಾಣುತ್ತಾ ಬಂದಿದೆ. ಇದನ್ನು ಓದಿ.. Cricket News: ಆ ಒಂದು ಶತಕ ಕೊಹ್ಲಿ ಅದೃಷ್ಟವನ್ನೇ ಬದಲಿಸಿ ಬಿಡ್ತು: ಬಾಂಗ್ಲಾ ದೇಶ ಸರಣಿಯ ಮಧ್ಯದಲ್ಲಿಯೇ ಕೊಹ್ಲಿ ಗೆ ಸಿಹಿ ಸುದ್ದಿ.
ಮೊದಲನೆಯದಾಗಿ ಏಷ್ಯಾಕಪ್ ನಲ್ಲಿ ಭಾರತ ತಂಡ ಸೋಲು ಕಂಡಿತು, ನಂತರ ಟಿ20 ವಿಶ್ವಕಪ್ ನಲ್ಲಿ ಸಹ ಸೋಲು ಕಂಡಿತು. ಟಿ20 ನಲ್ಲಿ ಸೋತಾಗಲೇ ರೋಹಿತ್ ಶರ್ಮಾ ಅವರು ಇನ್ನುಮುಂದೆ ಟಿ20 ತಂಡದಲ್ಲಿ ಆಡುವುದು ಅಥವಾ ಕ್ಯಾಪ್ಟನ್ ಆಗಿರುವುದು ಅನುಮಾನವೇ ಎನ್ನುವ ಮಾತುಗಳು ಕೇಳಿಬಂದಿದ್ದವು. 2024ರಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿಗೆ (T20 World Cup) ಹೊಸ ತಂಡ ರಚಿಸಲಾಗುತ್ತದೆ ಎಂದು ಕೂಡ ಹೇಳಲಾಗಿತ್ತು. ಆದರೆ ಈಗ ರೋಹಿತ್ ಶರ್ಮಾ ಅವರು ಇರುವ ಪರಿಸ್ಥಿತಿ ನೋಡಿದರೆ, ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅವರು ಮುಂದುವರೆಯುವುದೇ ಅನುಮಾನ ಎನ್ನುವ ಹಾಗಿದೆ.
ರೋಹಿತ್ ಶರ್ಮಾ ಅವರ ಫಾರ್ಮ್ ಫಿಟ್ನೆಸ್ ವಯಸ್ಸು ಎಲ್ಲವನ್ನು ನೋಡಿದರೆ, ಸ್ಥಾನವನ್ನು ತುಂಬಲು ಟೆಸ್ಟ್ ಮತ್ತು ಓಡಿಐ ತಂಡದಲ್ಲಿ ಸಹ ಖಡಕ್ ಆಟಗಾರರು ಇದ್ದಾರೆ. ಪ್ರಸ್ತುತ ಟೆಸ್ಟ್ ತಂಡದಲ್ಲಿ ಶುಭಮನ್ ಗಿಲ್ (Shubhman Gill) ಅವರ ಪ್ರದರ್ಶನ ನೋಡಿದರೆ, ಅವರು ಕೆ.ಎಲ್.ರಾಹುಲ್ (K L Rahul) ಅವರೊಡನೆ ಆರಂಭಿಕ ಆಟಗಾರನಾಗಿ ಮುಂದುವರೆಯುವುದು ಬಹುತೇಕ ಖಚಿತವಾಗಿದೆ. ಶುಭಮನ್ ಗಿಲ್ ಅವರು ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದನ್ನು ಓದಿ..Cricket News: ಈ ಬಾರಿಯ ಕೊನೆಯ ವಿಶ್ವಕಪ್ ಆಡುತ್ತಿರುವ ಟಾಪ್ 5 ಆಟಗಾರರು ಯಾರ್ಯಾರು ಗೊತ್ತೇ?? ಲೆಜೆಂಡ್ ಆಟಗಾರರಿಗೆ ಇದೆ ಕೊನೆಯದು.
ಇನ್ನು ಓಡಿಐ ಪಂದ್ಯಕ್ಕೂ ರೋಹಿತ್ ಶರ್ಮಾ ಅವರ ಸ್ಥಾನ ತುಂಬವ ಬ್ಯಾಟ್ಸ್ಮನ್ ಸಿಕ್ಕಿದ್ದಾಗಿದೆ. ಅವರು ಮತ್ಯಾರು ಅಲ್ಲ ಇಶಾನ್ ಕಿಶನ್ ಅವರು, ಬಾಂಗ್ಲಾದೇಶ್ ವಿರುದ್ಧ ನಡೆದ ಮೂರನೇ ಓಡಿಐ ಪಂದ್ಯದಲ್ಲಿ ಇಶಾನ್ ಕಿಶನ್ (Ishan Kishan) ಅವರು, 131 ಎಸೆತಗಳಲ್ಲಿ ಭರ್ಜರಿ ದ್ವಿಶತಕ ಸಿಡಿಸಿದ್ದರು. ಈ ಒಂದು ಇನ್ನಿಂಗ್ಸ್ ಅವರ ಬಲ ಏನು ಎನ್ನುವುದನ್ನು ತಿಳಿಸಿದೆ. ಮುಂಬರುವ ಪಂದ್ಯಗಳಲ್ಲಿ ತಂಡದ ಓಪನರ್ ಬ್ಯಾಟ್ಸ್ಮನ್ ಆಗಿ ಇವರೇ ಬರುತ್ತಾರೆ ಎನ್ನುವ ನಂಬಿಕೆಯನ್ನು ಸೃಷ್ಟಿ ಮಾಡಿದೆ.
ಇನ್ನು ಟಿ20 ತಂಡದಲ್ಲಿ ಸಹ ರೋಹಿತ್ ಶರ್ಮಾ ಅವರ ಸ್ಥಾನ ತುಂಬಬಲ್ಲ ಬ್ಯಾಟ್ಸ್ಮನ್ ಇದ್ದಾರೆ, ಅವರು ಸಂಜು ಸ್ಯಾಮ್ಸನ್ (Sanju Samson) ಇವರು ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾದ ಖಾಯಂ ಆಟಗಾರನಾಗಿ ಇರುವುದು ಪಕ್ಕಾ ಎಂದು ಅನ್ನಿಸುತ್ತಿದೆ. 2024ನಲ್ಲಿ ವೆಸ್ಟ್ ಇಂಡೀಸ್ (West Indies) ಮತ್ತು ಅಮೆರಿಕಾದಲ್ಲಿ (America) ಟಿ20 ವಿಶ್ವಕಪ್ ನಡೆಯುವುದರಿಂದ, ಯುವ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಬಿಸಿಸಿಐ (BCCI) ಇದ್ದು, ಉತ್ತಮ ತಂಡವನ್ನು ಕಟ್ಟಲಿದೆ. ಇದನ್ನು ಓದಿ..Investment Tips: ಕೇವಲ ದಿನಕ್ಕೆ 200 ರೂಪಾಯಿ ಉಳಿತಾಯ ಮಾಡಿ ಇಲ್ಲಿ ಹೂಡಿಕೆ ಮಾಡಿದರೆ, ಲಕ್ಷ ಲಕ್ಷ ಲಾಭ ಗಳಿಸುವುದು ಖಚಿತ.