ಕರುನಾಡ ವಾಣಿ
ಇದು ನಿಮ್ಮ ಧ್ವನಿ

Cricket News: ಸುಮ್ಮನೆ ಇರಲಾರದೆ ಕೆಣಕಿ ತಾಳ್ಮೆಯನ್ನು ಕಳೆದುಕೊಂಡ ರಾಹುಲ್, ಆದರೂ ಕಲಿತಿಲ್ಲ ಪಾಠ. ನೆಟ್ಟಿಗರು ಫುಲ್ ಗರಂ ಆಗಿದ್ದು ಯಾಕೆ ಗೊತ್ತೇ?

114

Get real time updates directly on you device, subscribe now.

Cricket News: ಇಂಡಿಯಾ ವರ್ಸಸ್ ಬಾಂಗ್ಲಾದೇಶ್ (India vs Bangladesh) ಟೆಸ್ಟ್ ಸೀರೀಸ್ ನ ಮೊದಲ ಪಂದ್ಯ ನಡೆದಿದ್ದು, ಏಕದಿನ ಸರಣಿಯಲ್ಲಿ ಬಾಂಗ್ಲಾದೇಶ್ ತಂಡದ ವಿರುದ್ಧ ಅನುಭವಿಸಿದ ವೈಫಲ್ಯವನ್ನು ಈಗಲಾದರೂ ಸರಿಮಾಡಿಕೊಂಡು, ಹಿಂದಿನ ಟೂರ್ನಿಯ ತಪ್ಪನ್ನು ಸರಿಮಾಡಿಕೊಂಡು ಭಾರತ ತಂಡ (Team India) ಗೆದ್ದರೆ ಸಾಕು ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಹಾಗೆ ಪಂದ್ಯ ಶುರುವಾಗುವಾಗ, ಪಂದ್ಯದಲ್ಲಿ ಟಾಸ್ ಗೆದ್ದ ತಕ್ಷಣವೇ ಕ್ಯಾಪ್ಟನ್ ಕೆ.ಎಲ್.ರಾಹುಲ್ (K L Rahul) ಅವರು ಎರಡನೇ ಯೋಚನೆ ಮಾಡದೆಯೇ, ಬ್ಯಾಟಿಂಗ್ ಆಯ್ದುಕೊಂಡರು.

ಈ ಸಾರಿ ಫಾರ್ಮ್ ಗೆ ಬರಬೇಕು, ಉತ್ತಮ ಪ್ರದರ್ಶನ ನೀಡಬೇಕು ಎಂದು ಆತ್ಮವಿಶ್ವಾಸದಿಂದ ಕೆ.ಎಲ್.ರಾಹುಲ್ ಅವರು ಶುಭಮನ್ ಗಿಲ್ (Shubhman Gill) ಅವರೊಡನೆ ಓಪನರ್ ಆಗಿ ಕಣಕ್ಕೆ ಇಳಿದರು. ಆದರೆ ಇಬ್ಬರು ಓಪನರ್ ಗಳು ಸಹ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಶುಭಮನ್ ಗಿಲ್ ಅವರು, ಬೇಡದ ಶಾಟ್ ಪ್ಲೇ ಮಾಡಿ, ಬಹಳ ಬೇಗ ವಿಕೆಟ್ ಒಪ್ಪಿಸಿದರು. ಆಗ ಭಾರತ ತಂಡದ ಸ್ಕೋರ್ 50 ಕೂಡ ಆಗಿರಲಿಲ್ಲ. ರೋಹಿತ್ ಶರ್ಮಾ (Rohit Sharma) ಅವರ ಅನುಪಸ್ಥಿತಿಯಲ್ಲಿ ಶುಭಮನ್ ಗಿಲ್ ಉತ್ತಮ ಓಪನಿಂಗ್ ನೀಡಲಿಲ್ಲ. ಇನ್ನು ಕೆ.ಎಲ್.ರಾಹುಲ್ ಅವರ ಕಥೆ ಕೂಡ ಇದೇ ರೀತಿ ಆಯಿತು. ಇದನ್ನು ಓದಿ.. Cricket News: ಈ ಬಾರಿಯ ಕೊನೆಯ ವಿಶ್ವಕಪ್ ಆಡುತ್ತಿರುವ ಟಾಪ್ 5 ಆಟಗಾರರು ಯಾರ್ಯಾರು ಗೊತ್ತೇ?? ಲೆಜೆಂಡ್ ಆಟಗಾರರಿಗೆ ಇದೆ ಕೊನೆಯದು.

ಕೆ.ಎಲ್.ರಾಹುಲ್ ಅವರಿಗೆ ಈ ಪಂದ್ಯದಲ್ಲಿ ತಾಳ್ಮೆ ಇದ್ದ ಹಾಗೆ ಕಾಣಲಿಲ್ಲ, ಔಟ್ ಆದ ಬಾಲ್ ಅನ್ನು ಅವಷ್ಯಕತೆ ಇಲ್ಲದೆ ಕೆಣಕಿ ಕ್ಲೀನ್ ಬೌಲ್ಡ್ ಆದರು ರಾಹುಲ್. ಟಿ20 ಮತ್ತು ಓಡಿಐ ನಲ್ಲಿ ಸ್ಥಿರ ಪ್ರದರ್ಶನ ನೀಡದ ರಾಹುಲ್ ಅವರು ಟೆಸ್ಟ್ ಪಂದ್ಯದಲ್ಲಿ ಕಂಬ್ಯಾಕ್ ಮಾಡಬಹುದು ಎನ್ನುವ ನಿರೀಕ್ಷೆ ಇತ್ತು, ಆದರೆ ಹಿಂದೆ ಮಾಡಿದ ತಪ್ಪನ್ನೇ ಮಾಡಿ ಔಟ್ ಆದರು. ರಾಹುಲ್ ಅವರ ಈ ಅಸಡ್ಡೆಯ ಪ್ರದರ್ಶನದಿಂದ ಕ್ರಿಕೆಟ್ ಅಭಿಮಾನಿಗಳು ಸಹ ಕೋಪಗೊಂಡಿದ್ದಾರೆ. ಒಟ್ಟಿನಲ್ಲಿ ಟೀಮ್ ಇಂಡಿಯಾದ ಆರಂಭ ಚೆನ್ನಾಗಿಲ್ಲದೆ ಹೋದರು ಕೂಡ, ಕೊನೆಯಲ್ಲಿ 400ಕ್ಕಿಂತ ಹೆಚ್ಚು ರನ್ಸ್ ಗಳಿಸಿತು. ಇದನ್ನು ಓದಿ..Investment Tips: ಕೇವಲ ದಿನಕ್ಕೆ 200 ರೂಪಾಯಿ ಉಳಿತಾಯ ಮಾಡಿ ಇಲ್ಲಿ ಹೂಡಿಕೆ ಮಾಡಿದರೆ, ಲಕ್ಷ ಲಕ್ಷ ಲಾಭ ಗಳಿಸುವುದು ಖಚಿತ.

Get real time updates directly on you device, subscribe now.