Cricket News: ಭಾರತದ ಬೌಲರ್ ಸಿರಾಜ್ ಜೊತೆ ಕಿರಿಕ್: ಕೊಹ್ಲಿ ತೋರಿಸಿದರು ಅಸಲಿ ಅವತಾರ. ಹೇಗಿತ್ತು ಗೊತ್ತೇ ಕಿಂಗ್ ಪ್ರತಿಕ್ರಿಯೆ??
Cricket News: ಭಾರತದ ಬೌಲರ್ ಸಿರಾಜ್ ಜೊತೆ ಕಿರಿಕ್: ಕೊಹ್ಲಿ ತೋರಿಸಿದರು ಅಸಲಿ ಅವತಾರ. ಹೇಗಿತ್ತು ಗೊತ್ತೇ ಕಿಂಗ್ ಪ್ರತಿಕ್ರಿಯೆ??
Cricket News: ಭಾರತ ವರ್ಸಸ್ ಬಾಂಗ್ಲಾದೇಶ್ (India vs Bangladesh) ಟೆಸ್ಟ್ ಪಂದ್ಯಾವಳಿ ಶುರುವಾಗಿದ್ದು, ಚಿಟ್ಟೋಗ್ರಾಮ್ (Chittogram) ನಲ್ಲಿ ನಡೆಯುತ್ತಿದೆ. ಈ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡ ಬ್ಯಾಟಿಂಗ್ ಮಾಡಿ, ಅದ್ಭುತ ಪ್ರದರ್ಶನ ನೀಡಿ ಬರೋಬ್ಬರಿ 404ರನ್ ಗಳ ಗುರಿಯನ್ನು ಬಾಂಗ್ಲಾದೇಶ್ ತಂಡಕ್ಕೆ ನೀಡಿತು. ಈ ಗುರಿ ಬೆನ್ನತ್ತಿದ ಬಾಂಗ್ಲಾದೇಶ್ ತಂಡ ಆರಂಭದಲ್ಲೇ 56 ರನ್ ಗಳಿಸಿ, 4 ವಿಕೆಟ್ಸ್ ಕಳೆದುಕೊಂಡಿತ್ತು, ಪ್ರಮುಖ ವಿಕೆಟ್ ಗಳನ್ನೇ ಕಳೆದುಕೊಂಡು ಕಷ್ಟದಲ್ಲಿದ್ದಾಗ, ಟೀಮ್ ಇಂಡಿಯಾದ (Team India) ಬೌಲರ್ ಮೋಹಮ್ಮದ್ ಸಿರಾಜ್ (Mohammad Siraj) ಮತ್ತು ಬಾಂಗ್ಲಾದೇಶ್ ಬ್ಯಾಟ್ಸ್ಮನ್ ಲಿಟ್ಟನ್ ದಾಸ್ (Litton Das) ನಡುವೆ ಮೈದಾನದಲ್ಲೇ ಕಿರಿಕ್ ನಡೆದಿದೆ..
ಎರಡನೇ ಇನ್ನಿಂಗ್ಸ್ ನಲ್ಲಿ 14ನೇ ಓವರ್ ನಡೆಯುವಾಗ ಈ ಘಟನೆ ನಡೆದಿದ್ದು, ಸಿರಾಜ್ ಅವರು ಬೌಲಿಂಗ್ ಮಾಡಲು ಬಂದಾಗ, ಲಿಟ್ಟನ್ ದಾಸ್ ಅವರಿಗೆ ಏನನ್ನೋ ಹೇಳುತ್ತಾರೆ, ಆಗ ಲಿಟ್ಟನ್ ದಾಸ್ ಅವರು ಸರಿಯಾಗಿ ಕೇಳಿಸಲಿಲ್ಲ ಮತ್ತೊಮ್ಮೆ ಹೇಳು ಎನ್ನುವ ಹಾಗೆ ಸನ್ನೆ ಮಾಡುತ್ತಾರೆ, ಆಗ ಸಿರಾಜ್ ಮತ್ತು ಲಿಟ್ಟನ್ ದಾಸ್ ನಡುವೆ ಮಾತಿನ ಚಕಾಮಕಿ ಶುರುವಾಗುತ್ತದೆ, ಕೊನೆಗೆ ಅವರಿಬ್ಬರನ್ನು ಜಗಳ ನಿಲ್ಲಿಸಲು ಅಂಪೈರ್ ಗಳು ಬರುತ್ತಾರೆ. ಈ ಓವರ್ ಗಿಂತ ಮೊದಲು ಸಿರಾಜ್ ಅವರ ಬೌಲಿಂಗ್ ನಲ್ಲಿ ಲಿಟ್ಟನ್ ದಾಸ್ ಅವರು ಉತ್ತಮವಾಗಿ ರನ್ಸ್ ಗಳಿಸಿರುತ್ತಾರೆ. ಇದನ್ನು ಓದಿ..Cricket News: ಆ ಒಂದು ಶತಕ ಕೊಹ್ಲಿ ಅದೃಷ್ಟವನ್ನೇ ಬದಲಿಸಿ ಬಿಡ್ತು: ಬಾಂಗ್ಲಾ ದೇಶ ಸರಣಿಯ ಮಧ್ಯದಲ್ಲಿಯೇ ಕೊಹ್ಲಿ ಗೆ ಸಿಹಿ ಸುದ್ದಿ.
ಈ ಜಗಳ ಮುಗಿದು, ಬೌಲಿಂಗ್ ಮಾಡುವ ಮರು ಬಾಲ್ ನಲ್ಲೇ ಲಿಟ್ಟನ್ ದಾಸ್ ಅವರನ್ನು ಔಟ್ ಮಾಡುತ್ತಾರೆ ಸಿರಾಜ್. ಅದಕ್ಕೆ ವಿರಾಟ್ ಕೋಹ್ಲಿ (Virat Kohli) ಅವರು ಕೂಡ ಸಾಥ್ ನೀಡುತ್ತಾರೆ, ಲಿಟ್ಟನ್ ದಾಸ್ ಅವರಿಗೆ ಇನ್ ಕಟರ್ ಬಾಲ್ ಹಾಕುತ್ತಾರೆ ಸಿರಾಜ್, ಲಿಟ್ಟನ್ ಅವರಿಗೆ ಅದನ್ನು ಗ್ರಹಿಸಿ ಆಡಲು ಸಾಧ್ಯವಾಗಲಿಲ್ಲ. ಬಾಲ್ ಬ್ಯಾಟ್ ನ ತುದಿಗೆ ತಾಗಿ, ನೇರವಾಗಿ ವಿಕೆಟ್ ಗೆ ಹೊಡೆಯಿತು, ಬೌಲ್ಡ್ ಆದರು ಲಿಟ್ಟನ್. ಆಗ ಸಿರಾಜ್ ಲಿಟ್ಟನ್ ಅವರ ಕಡೆಗೆ ನೋಡಿ, ಸುಮ್ಮನೆ ಇರುವಂತೆ ಸನ್ನೆ ಮಾಡಿದರು. ಆಗ ವಿರಾಟ್ ಕೊಹ್ಲಿ ಅವರು ಕೂಡ ಬಾಂಗ್ಲಾದೇಶ್ ಕಡೆ ನೋಡಿ, ಲಿಟ್ಟನ್ ದಾಸ್ ಅವರ ರೀತಿಯಲ್ಲೇ ಸನ್ನೆ ಮಾಡಿದರು. ಒಟ್ಟಿನಲ್ಲಿ ಶುರುವಾದ ಜಗಳ ವಿಕೆಟ್ ಮೂಲಕ ಕೊನೆಯಾಯಿತು. ಇದನ್ನು ಓದಿ.. Investment Tips: ಕೇವಲ ದಿನಕ್ಕೆ 200 ರೂಪಾಯಿ ಉಳಿತಾಯ ಮಾಡಿ ಇಲ್ಲಿ ಹೂಡಿಕೆ ಮಾಡಿದರೆ, ಲಕ್ಷ ಲಕ್ಷ ಲಾಭ ಗಳಿಸುವುದು ಖಚಿತ.
King reaction🔥🔥 pic.twitter.com/BgrMcOz9XT
— Anshul sharma ☁️ (@Anshul__2304) December 15, 2022