ಕರುನಾಡ ವಾಣಿ
ಇದು ನಿಮ್ಮ ಧ್ವನಿ

Kannada News: ಈ ವರ್ಷ ಬಿಡುಗಡೆಯಾಗಿ IMDB ರೇಟಿಂಗ್ ನಲ್ಲಿ ಮೊದಲ ಟಾಪ್ 10 ಸ್ಥಾನ ಪಡೆದ ಚಿತ್ರಗಳು ಯಾವ್ಯಾವು ಗೊತ್ತೇ?

213

Get real time updates directly on you device, subscribe now.

Kannada News: ಪ್ರಪಂಚಾದ್ಯಂತ ಬಿಡುಗಡೆ ಆಗುವ ಎಲ್ಲಾ ಸಿನಿಮಾಗಳಿಗೂ ಐಎಂಡಿಬಿ (IMDB) ರೇಟಿಂಗ್ ನೀಡಲಾಗುತ್ತದೆ. ಇದು ಸಿನಿಪ್ರಿಯರೆ ಸಿನಿಮಾಗಳಿಗೆ ನೀಡುವ ರೇಟಿಂಗ್ ಆಗಿದೆ. ಪ್ರತಿ ಸಿನಿಮಾಗು, ಆ ಸಿನಿಮಾ ಹೇಗಿದೆ, ಕಥೆ ಹೇಗಿದೆ ಎನ್ನುವುದರ ರೇಟಿಂಗ್ ನೀಡಲಾಗುತ್ತದೆ. ಈ ವರ್ಷ, 2022ರ ಆರಂಭದಿಂದ ಬಿಡುಗಡೆ ಆಗಿರುವ ಎಲ್ಲಾ ಸಿನಿಮಗಳ ಪೈಕಿ ಅತಿಹೆಚ್ಚು ರೇಟಿಂಗ್ ಪಡೆದಿರುವ ಟಾಪ್ 10 ಸಿನಿಮಾಗಳು ಯಾವುವು ಗೊತ್ತಾ? ಆ ಸಿನಿಮಾಗಳು ಯಾವುವು ಅವುಗಳಿಗೆ ಬಂದಿರುವ ರೇಟಿಂಗ್ ಎಷ್ಟು ಎಂದು ತಿಳಿಸುತ್ತೇವೆ ನೋಡಿ..

ಕನ್ನಡದ ಸಿನಿಮಾ ಚಾರ್ಲಿ 777 (777 Charlie) 8.9 ರೇಟಿಂಗ್ ಪಡೆದು, ಮೊದಲ ಸ್ಥಾನದಲ್ಲಿದೆ. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಿ ಎಲ್ಲರ ಮನಗೆದ್ದಿತ್ತು. ಎರಡನೇ ಸ್ಥಾನದಲ್ಲಿ 8.8 ರೇಟಿಂಗ್ ಪಡೆದಿರುವ ತಮಿಳಿನ ಸಿನಿಮಾ ರಾಕೆಟ್ರಿ (Rocketry) ಇದೆ. ಈ ಸಿನಿಮಾಗೆ ಎಲ್ಲೆಡೆ ಉತ್ತಮ ಅಭಿಪ್ರಾಯ ಕೇಳಿಬಂದಿತ್ತು. ಮೂರನೇ ಸ್ಥಾನದಲ್ಲಿ ಇತ್ತೀಚೆಗೆ ಕನ್ನಡದಲ್ಲಿ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಸೆನ್ಸೇಶನಲ್ ಹಿಟ್ ಆದ ಕಾಂತಾರ ಸಿನಿಮಾ ಇದೆ, ಈ ಸಿನಿಮಾಗೆ 8.6 ರೇಟಿಂಗ್ ಬಂದಿದೆ. ಕಾಂತಾರ (Kantara) ಸಿನಿಮಾ ದೇಶಾದ್ಯಂಯ ದೊಡ್ದ ಮಟ್ಟದಲ್ಲಿ ಸಂಚಲನ ಸೃಷ್ಟಿಸಿತ್ತು. ನಾಲ್ಕನೇ ಸ್ಥಾನದಲ್ಲಿ ತೆಲುಗಿನ ಸೀತಾರಾಮಂ (Sitaramam) ಸಿನಿಮಾ ಇದೆ, ಈ ಸಿನಿಮಾಗೆ 8.6 ರೇಟಿಂಗ್ ಬಂದಿದೆ. ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಇದನ್ನು ಓದಿ..Kannada News: ಕನ್ನಡ ಮಾಧ್ಯಮ ಓದುಗರಿಗೆ ಸಿಹಿ ಸುದ್ದಿ ಕೊಟ್ಟ ಸಚಿವ ಅಶ್ವಥ್ ನಾರಾಯಣ್: ಮಹತ್ವದ ಘೋಷಣೆ ಮಾಡಿ ಹೇಳಿದ್ದೇನು ಗೊತ್ತೇ??

8.4 ರೇಟಿಂಗ್ ಪಡೆದ ತೆಲುಗಿನ ವಿಕ್ರಂ (Vikram) ಸಿನಿಮಾ, 5ನೇ ಸ್ಥಾನದಲ್ಲಿದೆ. ಕಮಲ್ ಹಾಸನ್ (Kamal Hasan) ಅವರು ಹೀರೋ ಆಗಿ ನಟಿಸಿದ್ದ ಸಿನಿಮಾ ಒಳ್ಳೆಯ ಹೆಸರು ಮಾಡಿತ್ತು. 6ನೇ ಸ್ಥಾನದಲ್ಲಿ ಕನ್ನಡದ ಮತ್ತೊಂದು ಸಿನಿಮಾ ಕೆಜಿಎಫ್2 (KGF2) ನಿಂತಿದೆ, ಈ ಸಿನಿಮಾ ಬ್ಲಾಕ್ ಬಸ್ಟರ್ ಆಗಿ ದೊಡ್ಡ ಮಟ್ಟದಲ್ಲಿ ಬಾಕ್ಸ್ ಆಫೀಸ್ ಧೂಳೆಬ್ಬಿಸಿತ್ತು. 7ನೇ ಸ್ಥಾನದಲ್ಲಿ 8.3 ರೇಟಿಂಗ್ ಪಡೆದ ಬಾಲಿವುಡ್ ಸಿನಿಮಾ ಕಾಶ್ಮೀರ್ ಫೈಲ್ಸ್ (Kashmir Files) ಸಿನಿಮಾ ಇದೆ. ಇದಾದ ನಂತರ, 8ನೇ ಸ್ಥಾನದಲ್ಲಿರುವುದು, ತೆಲುಗಿನ ಮತ್ತೊಂದು ಸಿನಿಮಾ ಮೇಜರ್ (Major). ಈ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಿತ್ತು. 9ನೇ ಸ್ಥಾನದಲ್ಲಿ ವಿಶ್ವಮಟ್ಟದಲ್ಲಿ ಹೆಸರು ಮಾಡಿದ್ದ ಮತ್ತೊಂದು ಸಿನಿಮಾ ಆರ್.ಆರ್.ಆರ್ (RRR) ಇದೆ, ಈ ಸಿನಿಮಾಗೆ 8 ರೇಟಿಂಗ್ ಬಂದಿರುವುದು ನಿಜಕ್ಕೂ ಎಲ್ಲರಿಗೂ ಶಾಕ್ ನೀಡಿದೆ. 10ನೇ ಸ್ಥಾನದಲ್ಲಿ 7.9 ರೇಟಿಂಗ್ ಪಡೆದ ಪೊನ್ನಿಯಿನ್ ಸೆಲ್ವನ್ (Ponniyin Selvan) ಸಿನಿಮಾ ಇದೆ. ಇದನ್ನು ಓದಿ.. Investment Tips: ಕೇವಲ ದಿನಕ್ಕೆ 200 ರೂಪಾಯಿ ಉಳಿತಾಯ ಮಾಡಿ ಇಲ್ಲಿ ಹೂಡಿಕೆ ಮಾಡಿದರೆ, ಲಕ್ಷ ಲಕ್ಷ ಲಾಭ ಗಳಿಸುವುದು ಖಚಿತ.

Get real time updates directly on you device, subscribe now.