Cricket News: ಆ ಒಂದು ಶತಕ ಕೊಹ್ಲಿ ಅದೃಷ್ಟವನ್ನೇ ಬದಲಿಸಿ ಬಿಡ್ತು: ಬಾಂಗ್ಲಾ ದೇಶ ಸರಣಿಯ ಮಧ್ಯದಲ್ಲಿಯೇ ಕೊಹ್ಲಿ ಗೆ ಸಿಹಿ ಸುದ್ದಿ.
Cricket News: ಆ ಒಂದು ಶತಕ ಕೊಹ್ಲಿ ಅದೃಷ್ಟವನ್ನೇ ಬದಲಿಸಿ ಬಿಡ್ತು: ಬಾಂಗ್ಲಾ ದೇಶ ಸರಣಿಯ ಮಧ್ಯದಲ್ಲಿಯೇ ಕೊಹ್ಲಿ ಗೆ ಸಿಹಿ ಸುದ್ದಿ.
Cricket News: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ (Virat Kohli) ಅವರು ಮೂರು ವರ್ಷಗಳಿಂದ ಫಾರ್ಮ್ ಕಳೆದುಕೊಂಡಿದ್ದರು, ಇದರಿಂದ ಅವರ ಅಭಿಮಾನಿಗಳು ಬೇಸರಕ್ಕೂ ಒಳಗಾಗಿದ್ದರು. ಆದರೆ ಏಷ್ಯಾಕಪ್ (Asiacup) ನಲ್ಲಿ ಉತ್ತಮ ಪ್ರದರ್ಶನ ನೀಡಿ, ಶತಕ ಗಳಿಸುವ ಮೂಲಕ ಫಾರ್ಮ್ ಗೆ ಮರಳಿ ಬಂದರು. ಆಗಿನಿಂದ, ಟಿ20 ವಿಶ್ವಕಪ್ (T20 World Cup) ಸೇರಿದಂತೆ ಎಲ್ಲಾ ಸರಣಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಲೇ ಬಂದಿದ್ದಾರೆ. ಈಗಷ್ಟೇ ಮುಗಿದ ಬಾಂಗ್ಲಾದೇಶ್ ವಿರುದ್ಧದ ಓಡಿಐ (ODI World Cup) ಸರಣಿಯ ಮೂರನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಶತಕ ಸಿಡಿಸಿದರು.
2019ರ ಆಗಸ್ಟ್ ನಂತರ, ಓಡಿಐ ಪಂದ್ಯಗಳಲ್ಲಿ ವಿರಾಟ್ ಅವರು ಸಿಡಿಸಿದ ಮೊದಲ ಅರ್ಧಶತಕ ಇದಾಗಿದ್ದು, 91 ಎಸೆತಗಳಲ್ಲಿ ಬರೋಬ್ಬರಿ 113 ರನ್ಸ್ ಸಿಡಿಸಿದರು ವಿರಾಟ್ ಕೊಹ್ಲಿ, ಈ ಮೂಲಕ ಐಸಿಸಿ ಬಿಡುಗಡೆ ಮಾಡಿರುವ ರಾಂಕಿಂಗ್ ನಲ್ಲಿ, ಎರಡು ಸ್ಥಾನ ಹೆಚ್ಚಿಸಿಕೊಂಡು ಮುಂದಕ್ಕೆ ಬಂದಿರುವ ವಿರಾಟ್ ಕೊಹ್ಲಿ ಅವರು, ಈಗ 8ನೇ ಸ್ಥಾನಕ್ಕೆ ಬಂದಿದ್ದಾರೆ. ಇದು ನಿಜಕ್ಕೂ ವಿರಾಟ್ ಅವರ ಅಭಿಮಾನಿಗಳಿಗೆ ಬಹಳ ಸಂತೋಷದ ವಿಷಯ ಆಗಿದೆ. ಅದೇ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಸ್ಟಾರ್ ಆಗಿದ್ದ ಇಶಾನ್ ಕಿಶನ್ (Ishan Kishan) ಅವರು 117 ಸ್ಥಾನಗಳು ಮುಂದಕ್ಕೆ ಬಂದು, ಐಸಿಸಿ (ICC) ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಬಂದು ನಿಂತಿದ್ದಾರೆ. ಕಿಶನ್ ಅವರು ಬಹಳ ಬೇಗ ದ್ವಿಶತಕ ಗಳಿಸಿದರು. ಇದನ್ನು ಓದಿ..Cricket News: ಈ ಬಾರಿಯ ಕೊನೆಯ ವಿಶ್ವಕಪ್ ಆಡುತ್ತಿರುವ ಟಾಪ್ 5 ಆಟಗಾರರು ಯಾರ್ಯಾರು ಗೊತ್ತೇ?? ಲೆಜೆಂಡ್ ಆಟಗಾರರಿಗೆ ಇದೆ ಕೊನೆಯದು.
ಇನ್ನು ಟೀಮ್ ಇಂಡಿಯಾದ ಶ್ರೇಯಸ್ ಅಯ್ಯರ್ (Shreyas Iyer) ಅವರು, ಢಾಕಾದಲ್ಲಿನ (Dhaka) ಸರಣಿಯಲ್ಲಿ, 82 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡುವ ಮೂಲಕ ಬ್ಯಾಟಿಂಗ್ ಪಟ್ಟಿಯಲ್ಲಿ, 20ನೇ ಸ್ಥಾನದಿಂದ 15ನೇ ಸ್ಥಾನಕ್ಕೆ ಏರಿದ್ದಾರೆ. ಬೌಲರ್ ಗಳ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಮೊಹಮ್ಮದ್ ಸಿರಾಜ್ (Mohammad Siraj) ಅವರು 22ನೇ ಸ್ಥಾನಕ್ಕೆ ಏರಿದ್ದಾರೆ. ಇನ್ನು ನಮ್ಮ ಟೀಮ್ ಇಂಡಿಯಾದ ಜೋಡಿ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೋಹ್ಲಿ (Virat Kohli) ಜೋಡಿ, ಆರು ಸ್ಥಾನಗಳನ್ನು ಹೆಚ್ಚು ಮಾಡಿಕೊಂಡು ಈಗ 7ನೇ ಸ್ಥಾನಕ್ಕೆ ಬಂದು ನಿಂತಿದ್ದಾರೆ. ಒಟ್ಟಿನಲ್ಲಿ ವಿರಾಟ್ ಕೋಹ್ಲಿ ಅವರ ಅಭಿಮಾನಿಗಳಿಗೆ ಇದು ಸಂತೋಷದ ವಿಚಾರ ಆಗಿದೆ. ಇದನ್ನು ಓದಿ.. Investment Tips: ಕೇವಲ ದಿನಕ್ಕೆ 200 ರೂಪಾಯಿ ಉಳಿತಾಯ ಮಾಡಿ ಇಲ್ಲಿ ಹೂಡಿಕೆ ಮಾಡಿದರೆ, ಲಕ್ಷ ಲಕ್ಷ ಲಾಭ ಗಳಿಸುವುದು ಖಚಿತ.