Pro Kabaddi League: ಗೂಳಿಗಳ ಆರ್ಭಟದ ಮುಂದೆ ಮಕಾಡೆ ಮಲಗಿದ ಕಳೆದ ಬಾರಿ ವಿನ್ನರ್ಸ್ ದಬಾಂಗ್ ಡೆಲ್ಲಿ. ಹೇಗಿತ್ತು ಗೊತ್ತೇ ಬುಲ್ಸ್ ಆರ್ಭಟ?
Pro Kabaddi League: ಗೂಳಿಗಳ ಆರ್ಭಟದ ಮುಂದೆ ಮಕಾಡೆ ಮಲಗಿದ ಕಳೆದ ಬಾರಿ ವಿನ್ನರ್ಸ್ ದಬಾಂಗ್ ಡೆಲ್ಲಿ. ಹೇಗಿತ್ತು ಗೊತ್ತೇ ಬುಲ್ಸ್ ಆರ್ಭಟ?
Pro Kabaddi League: 2022ರ ಪ್ರೊ ಕಬಡ್ಡಿ ಲೀಗ್ (Pro Kabaddi League) ನಲ್ಲಿ ನಮ್ಮ ಬೆಂಗಳೂರು ಬುಲ್ಸ್ (Bengaluru Bulls vs Dabang Delhi) ತಂಡ ಆರಂಭದಿಂದಲು ಉತ್ತಮ ಪ್ರದರ್ಶನವನ್ನೇ ನೀಡುತ್ತಾ ಬಂದಿದೆ. ಈ ಟೂರ್ನಿಯ ಮೊದಲ ಎಲಿಮಿನೇಟರ್ ಪಂದ್ಯ ನಿನ್ನೆ ನಡೆದಿದ್ದು, ದಬಾಂಗ್ ಡೆಲ್ಲಿ ತಂಡವನ್ನು ನಮ್ಮ ಬೆಂಗಳೂರು ಬುಲ್ಸ್ ತಂಡ ಸೋಲಿಸಿದೆ. 56-24 ಅಂಕಗಳ ಅಂತರದಲ್ಲಿ ಬೆಂಗಳೂರು ಬುಲ್ಸ್ ತಂಡವು ದಬಾಂಗ್ ಡೆಲ್ಲಿ ತಂಡವನ್ನು ಸೋಲಿಸಿ, ಗೆಲುವಿನ ನಗೇಬೀರಿ, ಸೆಮಿ ಫೈನಲ್ಸ್ ಗೆ ಲಗ್ಗೆ ಇಟ್ಟಿದೆ. ಈ ಪಂದ್ಯಾವು ಮುಂಬೈ, NSCI ಸರ್ದಾರ್ ವಲ್ಲಭಾಯ್ ಪಟೇಲ್ ಸ್ಟೇಡಿಯಂ ಡೊಮ್ ನಲ್ಲಿ ನಡೆದಿದೆ. ಲೀಗ್ ಹಂತದ ಪಂದ್ಯಗಳು ನಡೆಯುವಾಗ, ದಬಾಂಗ್ ಡೆಲ್ಲಿ ತಂಡ 6ನೇ ಸ್ಥಾನದಲ್ಲಿದ್ದು ಲ್ಲೇ ಆಫ್ಸ್ ಗೆ ಬಂದಿತು. 246 ಪಾಯಿಂಟ್ಸ್ ಪಡೆದ ನವೀನ್ ಕುಮಾರ್ ಅವರು ಅಗ್ರಸ್ಥಾನದಲ್ಲಿದ್ದಾರೆ.
ನಿನ್ನೆಯ ಪಂದ್ಯದ ಶುರುವಿಂದಲೇ, ಬೆಂಗಳೂರು ಬುಲ್ಸ್ ತಂಡದ ಅಬ್ಬರ ಊಹೆ ಮಾಡದಷ್ಟು ಜೋರಾಗಿಯೇ ಆಡಲು ಶುರು ಮಾಡಿತು. ವಿಕಾಸ್ ಕಂಡೋಲ (Vikas Kandola) ಅವರು ಉತ್ತಮ ಪ್ರದರ್ಶನ ನೀಡಿದರು. ಭರತ್ (Bharath) ಅವರು ಎದುರಾಳಿ ತಂಡಕ್ಕೆ ಭಯ ಬರುವ ಹಾಗೆ ಕಾಡಿದರು. ಡೆಲ್ಲಿ ತಂಡದ ನವೀನ್ ಕುಮಾರ್ ಅವರಿಗೆ ಹೆಚ್ಚು ಪಾಯಿಂಟ್ಸ್ ಪಡೆಯಲು ಬಿಡದ ಬೆಂಗಳೂರು ತಂಡ, ಅತ್ಯುತ್ತಮ ಪ್ರದರ್ಶನವನ್ನೇ ನೀಡಿತು. ಬುಲ್ಸ್ ತಂಡದ ಡಿಫೆಂಡರ್ ಪಾರ್ತಿಬನ್ (Parthiban) ಅವರು ಡೆಲ್ಲಿ ತಂಡದ ರೈಡರ್ ಗಳನ್ನು ಕಟ್ಟಿ ಹಾಕುವಲ್ಲಿ, ಸಕ್ಸಸ್ ಕಂಡರು. ನಿನ್ನೆಯ ಪಂದ್ಯದಲ್ಲಿ ವಿಕಾಸ್ ಕಂಡೋಲ ಅವರು 13 ರೈಡಿಂಗ್ ಪಾಯಿಂಟ್ಸ್, ಭರತ್ ಅವರು 15 ರೈಡಿಂಗ್ ಪಾಯಿಂಟ್ಸ್ ಗಳಿಸಿದರು. ಇದನ್ನು ಓದಿ..FIFA World Cup: ಹೊರಬಿದ್ದ ಮೇಲೆ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವನ್ನು ಆಯ್ಕೆ ಮಾಡಿದ ರೊನಾಲ್ಡೊ: ಗೆಲ್ಲುವುದು ಯಾರು ಅಂತೇ ಗೊತ್ತೇ??
ಇದರಿಂದ ಬೆಂಗಳೂರು ಬುಲ್ಸ್ ತಂಡ ಗೆಲ್ಲಲು ಸಹಾಯವಾಯಿತು. ನಿನ್ನೆಯ ಪಂದ್ಯ ಅರ್ಧ ಮುಗಿಯುವುದಕ್ಕಿಂತ ಮೊದಲೇ, ದಬಾಂಗ್ ಡೆಲ್ಲಿ ತಂಡವನ್ನು ಎರಡಿ ಸಾರಿ ಸಾರಿ ಆಲೌಟ್ ಮಾಡಿತ್ತು ಬೆಂಗಳೂರು ಬುಲ್ಸ್. ಅರ್ಧ ಪಂದ್ಯ ಮುಗಿದ ವೇಳೆಗೆ, ಬೆಂಗಳೂರು ಬುಲ್ಸ್ ತಂಡ 31-15 ಪಾಯಿಂಟ್ಸ್ ಗಳ ಅಂತರದಲ್ಲಿ ಮುಂದೆ ಇತ್ತು. ಡಿಫೆಂಡ್ ನಡೆಯುವಾಗ, ಪಾರ್ತಿಬನ್ ಅವರು ಆಡಿದ ಶೈಲಿಗೆ ದಬಾಂಗ್ ಡೆಲ್ಲಿ ತಂಡ ಸೋತು ಹೋಯಿತು, 7 ಟ್ಯಾಕಲ್ ಪಾಯಿಂಟ್ಸ್ ಪಡೆದರು ಪಾರ್ತಿಬನ್. ದಬಾಂಗ್ ಡೆಲ್ಲಿ ತಂಡವನ್ನು ಸೋಲಿಸಿ, ಬೆಂಗಳೂರು ಬುಲ್ಸ್ ತಂಡ ಸೆಮಿಫೈನಲ್ಸ್ ಗೆ ಎಂಟ್ರಿ ಕೊಟ್ಟಿದ್ದು, ಡಿಸೆಂಬರ್ 15ರಂದು, ರಾತ್ರಿ 7:30 ಕ್ಕೆ ಬೆಂಗಳೂರು ಬುಲ್ಸ್ ವರ್ಸಸ್ ಜೈಪುರ್ ಪಿಂಕ್ ಪ್ಯಾಂಥರ್ಸ್ (Jaipur Pink Panthers) ತಂಡಗಳ ನಡುವೆ ಸೆಮಿಫೈನಲ್ಸ್ ಪಂದ್ಯ ನಡೆಯಲಿದೆ. ಇದನ್ನು ಓದಿ..Investment Tips: ಕೇವಲ ದಿನಕ್ಕೆ 200 ರೂಪಾಯಿ ಉಳಿತಾಯ ಮಾಡಿ ಇಲ್ಲಿ ಹೂಡಿಕೆ ಮಾಡಿದರೆ, ಲಕ್ಷ ಲಕ್ಷ ಲಾಭ ಗಳಿಸುವುದು ಖಚಿತ.