IPL 2023: ಈ ಬಾರಿಯ ಹರಾಜಿನಲ್ಲಿ ಆರ್ಸಿಬಿ ನಿಜಕ್ಕೂ ಖರೀದಿ ಮಾಡಬೇಕಾದ ಟಾಪ್ 5 ಆಟಗಾರರು ಯಾರ್ಯಾರು ಗೊತ್ತೇ??

IPL 2023: ಈ ಬಾರಿಯ ಹರಾಜಿನಲ್ಲಿ ಆರ್ಸಿಬಿ ನಿಜಕ್ಕೂ ಖರೀದಿ ಮಾಡಬೇಕಾದ ಟಾಪ್ 5 ಆಟಗಾರರು ಯಾರ್ಯಾರು ಗೊತ್ತೇ??

IPL 2023: ಆರ್ಸಿಬಿ (RCB) ತಂಡ ಈಗ ಐಪಿಎಲ್ ಆಕ್ಷನ್ (IPL Auction) ಗೆ ತಯಾರಾಗಿದೆ. ಆರ್ಸಿಬಿ ತಂಡವು ಇದುವರೆಗೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಕಳೆದ ವರ್ಷ ಪ್ಲೇಆಫ್ಸ್ ತಲುಪಿ ಕ್ವಾಲಿಫೈಯರ್ ರೌಂಡ್ ನ್ಯೂಲಿ ಸೋತು ಹೋಯಿತು ಆರ್ಸಿಬಿ. ಹಾಗಾಗಿ 2023ಕ್ಕೆ ಬಲಿಷ್ಠ ತಂಡದ ಜೊತೆಗೆ ಬರುವ ಪ್ಲಾನ್ ಮಾಡಿದೆ. ಈಗಾಗಲೇ 5 ಆಟಗಾರರನ್ನು ಬಿಡುಗಡೆ ಮಾಡಿ, ಮುಖ್ಯ ತಂಡವನ್ನು ಉಳಿಸಿಕೊಂಡಿರುವ ಆರ್ಸಿಬಿ ಬಳಿ 8.75 ಕೋಟಿ ರೂಪಾಯಿ ಇದೆ. ಇದರಲ್ಲಿ ಮ್ಯಾಕ್ಸಿಮಂ 7 ಆಟಗಾರರನ್ನು, ಅದರಲ್ಲಿ ಇಬ್ಬರು ವಿದೇಶಿ ಆಟಗಾರರನ್ನು ಆರ್ಸಿಬಿ ಆಯ್ಕೆ ಮಾಡಬಹುದು. ಆರ್ಸಿಬಿ ಆಯ್ಕೆ ಮಾಡಬಹುದಾದ ಆ ಐವರು ಆಟಗಾರರು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ.

ಸ್ಯಾಮ್ ಕರನ್ (Sam Curran) :- ಇಂಜುರಿ ಕಾರಣದಿಂದ ಇವರು ಕಳೆದ ವರ್ಷ ಐಪಿಎಲ್ ನಲ್ಲಿ ಆಡಿಲ್ಲ. ಆದರೆ ಇಂಜುರಿ ನಂತರ 2022ರ ಟಿ20 ವರ್ಲ್ಡ್ ಕಪ್ (T20 World Cup) ನಲ್ಲಿ ಅದ್ಭುತ ಪ್ರದರ್ಶನ ನೀಡಿ, ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಅವಾರ್ಡ್ ಸಹ ಪಡೆದರು. ಐಪಿಎಲ್ ನಲ್ಲಿ ಈ ಹಿಂದೆ ಪಂಜಾಬ್ ಮತ್ತು ಸಿ.ಎಸ್.ಕೆ (CSK) ತಂಡದ ಪರವಾಗಿ ಆಡಿದ್ದಾರೆ ಇಂಗ್ಲೆಂಡ್ ತಂಡದ ಈ ಆಲ್ ರೌಂಡರ್. ಅದ್ಬುತ ಬೌಲಿಂಗ್ ಜೊತೆಗೆ ಫಿನಿಷರ್ ಆಗಿ ಕೂಡ ಎಲ್ಲಾ ಸಾಮರ್ಥ್ಯ ಹೊಂದಿದ್ದಾರೆ ಸ್ಯಾಮ್. ಇವರನ್ನು ಖರೀದಿ ಮಾಡುವ ಪ್ಲಾನ್ ನಲ್ಲಿ ಆರ್ಸಿಬಿ ತಂಡವಿದೆ. ಸ್ಯಾಮ್ ಕರನ್ ಅವರ ಬೇಸ್ ಪ್ರೈಸ್ 2ಕೋಟಿ, ಈ ವರ್ಷ ಐಪಿಎಲ್ ನಲ್ಲಿ 6 ರಿಂದ 7 ಕೋಟಿ ರೂಪಾಯಿಗೆ ಮಾರಾಟವಾಗಬಹುದು.

ಸಿಕಂದರ್ ರಾಜಾ (Sikander Raza) :- ನ್ಯೂಜಿಲೆಂಡ್ (New Zealand) ತಂಡದ ಈ ಆಲ್ ರೌಂಡರ್ ಕೂಡ ಈ ವರ್ಷ ಉತ್ತಮ ಪ್ರದರ್ಶನ ನೀಡದಿದ್ದರೆ. ಉತ್ತಮವಾಗಿ ಬೌಲಿಂಗ್ ಮಾಡುವುದರ ಜೊತೆಗೆ ಬ್ಯಾಟಿಂಗ್ ನಲ್ಲಿ ಸಹ ಒಳ್ಳೆಯ ಕೊಡುಗೆ ನೀಡಬಲ್ಲರು. ಗ್ಲೆನ್ ಮ್ಯಾಕ್ಸ್ವೆಲ್ ಅವರ ಹಾಗೆ ಫಿಟ್ನೆಸ್ ಹೊಂದಿರುವ ಇವರನ್ನು, ಮ್ಯಾಕ್ಸ್ವೆಲ್ ಅವರ ಜೊತೆಗೆ ಆಡಲು ಸರಿಹೋಗುತ್ತಾರೆ. ಆರ್ಸಿಬಿ ಬಜೆಟ್ ಗು ಇವರು ಸರಿಹೋಗುವ ಕಾರಣ, ಆರ್ಸಿಬಿ ತಂಡ ಖರೀದಿಸಲು ಒಳ್ಳೆಯ ಆಯ್ಕೆ, ಇವರ ಬೇಸ್ ಪ್ರೈಸ್ 50 ಲಕ್ಷ, ಆಕ್ಷನ್ ನಲ್ಲಿ 1 ರಿಂದ 3 ಕೋಟಿ ರೂಪಾಯಿವರೆಗು ಮಾರಾಟ ಆಗಬಹುದು.

ಜಯದೇವ್ ಉನಕ್ದತ್ (Jaydev Unakdat) :- ಇವರು ಕೂಡ ಈಗ ಒಳ್ಳೆಯ ಫಾರ್ಮ್ ನಲ್ಲಿದ್ದಾರೆ, ಈ ಹಿಂದೆ ಆರ್ಸಿಬಿ ತಂಡವನ್ನು ಸೇರಿಸಿ ಐಪಿಎಲ್ ನ ಹಲವು ಫ್ರಾಂಚೈಸಿಗಳಲ್ಲಿ ಆಡಿದ್ದಾರೆ. ಈಗ ನ್ಯಾಷನಲ್ ಟೀಮ್ ನಲ್ಲಿ ಸಹ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ವರ್ಷ ಮುಂಬೈ ಇಂಡಿಯನ್ಸ್ (Mumbai Indians) ತಂಡ ಇವರನ್ನು ರಿಲೀಸ್ ಮಾಡಿದೆ. ಹಾಗಾಗಿ ಹಲವು ತಂಡಗಳು ಇವರನ್ನು ಖರೀದಿ ಮಾಡಲು ಆಸಕ್ತಿ ತೋರಿಸಿದೆ. ಆರ್ಸಿಬಿ ತಂಡಕ್ಕೆ ಲೆಫ್ಟ್ ಆರ್ಮ್ ಬೌಲರ್ ಆಗಿ ಒಳ್ಳೆಯ ಆಯ್ಕೆಯಾಗುತ್ತಾರೆ. ಒಂದು ವೇಳೆ ಸ್ಯಾಮ್ ಕರನ್ ಅವರನ್ನು ಖರೀದಿ ಮಾಡಲು ಸಾಧ್ಯವಾಗದೆ ಹೋದರೆ ಇವರು ಒಳ್ಳೆಯ ಆಯ್ಕೆ ಆಗುತ್ತಾರೆ. ಇವರ ಬೇಸ್ ಪ್ರೈಸ್ 50 ಲಕ್ಷ, ಆಕ್ಷನ್ ನಲ್ಲಿ 1 ರಿಂದ 2.5ಕೋಟಿ ರೂಪಾಯಿಗೆ ಮಾರಾಟ ಆಗಬಹುದು.

ಮಯಾಂಕ್ ಅಗರ್ವಾಲ್ (Mayank Agarwal) :- ಇವರು ಪಂಜಾಬ್ ತಂಡದ ಕ್ಯಾಪ್ಟನ್ ಆಗಿದ್ದರು, ಆದರೆ ಕಳೆದ ಸೀಸನ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣ, ಮಯಾಂಕ್ ಅವರನ್ನು ಪಂಜಾಬ್ ತಂಡದಿಂದ ರಿಲೀಸ್ ಮಾಡಲಾಗಿದೆ. ಈಗ ಇವರನ್ನು ಖರೀದಿ ಮಾಡುವ ಪ್ಲಾನ್ ನಲ್ಲಿದೆ ಆರ್ಸಿಬಿ. ಇವರು 2011ರಲ್ಲಿ ಐಪಿಎಲ್ ಗೆ ಎಂಟ್ರಿ ಕೊಟ್ಟಿದ್ದು, ಆರ್ಸಿಬಿ ತಂಡದ ಮೂಲಕ. ಕಳೆದ ಸೀಸನ್ ನಲ್ಲಿ ಇವರು ಒಳ್ಳೆಯ ಫಾರ್ಮ್ ನಲ್ಲಿರಲಿಲ್ಲ. ಆದರೂ ತಂಡಕ್ಕೆ ಒಳ್ಳೆಯ ಕೊಡುಗೆ ನೀಡುವುದರಲ್ಲಿ ಯಾವುದೇ ಸಂಶಯ ಇಲ್ಲ. ಆರ್ಸಿಬಿ ತಂಡ ಇವರನ್ನು ಖರೀದಿ ಮಾಡಿದರೆ, ನಮ್ಮ ರಾಜ್ಯದ ಆಟಗಾರ ತಂಡದಲ್ಲಿ ಇದ್ದ ಹಾಗೆ ಆಗುತ್ತದೆ. ಇವರ ಬೇಸ್ ಪ್ರೈಸ್ 1 ಕೋಟಿ, ಆಕ್ಷನ್ ನಲ್ಜ್ 1 ರಿಂದ 3 ಕೋಟಿಗೆ ಮಾರಾಟ ಆಗಬಹುದು.

ಶ್ರೇಯಸ್ ಗೋಪಾಲ್ (Shreyas Gopal) :- ಕರ್ನಾಟಕದ ಮತ್ತೊಬ್ಬ ಆಟಗಾರ ಇವರು, ಇವರನ್ನು ಸನ್ ರೈಸರ್ಸ್ ಹೈದರಾಬಾದ್ (Sun Risers Hyderabad) ತಂಡ ಬಿಡುಗಡೆ ಮಾಡಿದ್ದು, ಆರ್ಸಿಬಿ ತಂಡ ಇವರನ್ನು ಖರೀದಿಸಿದರೆ, ಒಳ್ಳೆಯ ಆಯ್ಕೆ ಆಗುತ್ತಾರೆ. ವನಿಂದು ಹಸರಂಗ (Vanindu Hasaranga) ಅವರ ಹಾಗೆ ಸ್ಪಿನ್ ಬೌಲಿಂಗ್ ಉತ್ತಮವಾಗಿ ಮಾಡುವುದರ ಜೊತೆಗೆ, ಬ್ಯಾಟಿಂಗ್ ನಲ್ಲಿ ಸಹ ಒಳ್ಳೆಯ ಕೊಡುಗೆ ನೀಡುತ್ತಾರೆ. ಹಾಗಾಗಿ ಇವರನ್ನು ಖರೀದಿ ಮಾಡುವುದು ಆರ್ಸಿಬಿ ತಂಡಕ್ಕೆ ಪ್ರಯೋಜನಕಾರಿ, ಇವರ ಬೇಸ್ ಪ್ರೈಸ್ 20 ಲಕ್ಷ, 20 ಲಕ್ಷದಿಂದ 1 ಕೋಟಿಗೆ ಆಕ್ಷನ್ ನಲ್ಲಿ ಮಾರಾಟ ಆಗಬಹುದು.