Cricket News: ಏಕದಿನಕ್ಕಾಗಿ ಬೆಸ್ಟ್ ತಂಡವನ್ನು ಆಯ್ಕೆ ಮಾಡಿದ ಆಕಾಶ ಚೋಪ್ರಾ. ಆಯ್ಕೆಯಾದವರು ಯಾರ್ಯಾರು ಗೊತ್ತೇ? ಸ್ಟಾರ್ ಪ್ಲೇಯರ್ ಇಲ್ಲ.

Cricket News: ಏಕದಿನಕ್ಕಾಗಿ ಬೆಸ್ಟ್ ತಂಡವನ್ನು ಆಯ್ಕೆ ಮಾಡಿದ ಆಕಾಶ ಚೋಪ್ರಾ. ಆಯ್ಕೆಯಾದವರು ಯಾರ್ಯಾರು ಗೊತ್ತೇ? ಸ್ಟಾರ್ ಪ್ಲೇಯರ್ ಇಲ್ಲ.

Cricket News: ನಮ್ಮ ಟೀಮ್ ಇಂಡಿಯಾ (Team India) ಬಾಂಗ್ಲಾದೇಶ್ ವಿರುದ್ಧದ ಓಡಿಐ (India vs Bangladesh) ಟೂರ್ನಿಯಲ್ಲಿ 2-1 ಅಂತರದಲ್ಲಿ ಸೋಲು ಕಂಡಿದೆ. ಮೊದಲ ಎರಡು ಪಂದ್ಯಗಳನ್ನು ಕೂಡ ಭಾರತ ತಂಡ ಸೋತಿತು, ಆಟಗಾರರ ನೀರಸ ಪ್ರದರ್ಶನದಿಂದ ಮೂರನೇ ಪಂದ್ಯವನ್ನು ವೈಟ್ ವಾಶ್ ಆಗುತ್ತಾ ಎಂದೇ ಎಲ್ಲರೂ ಭಾವಿಸಿದ್ದರು, ಆದರೆ ಮೂರನೇ ಪಂದ್ಯದಲ್ಲಿ ಭರ್ಜರಿ ಕಂಬ್ಯಾಕ್ ಮಾಡಿ, ದೊಡ್ಡ ಅಂತರದಲ್ಲಿ ಭಾರತ ತಂಡ ಗೆದ್ದಿತು. 2023ರಲ್ಲಿ ಭಾರತದಲ್ಲಿಯೇ ಏಕದಿನ ವಿಶ್ವಕಪ್ (ODI World Cup) ನಡೆಯಲಿದ್ದು, ಅದಕ್ಕಾಗಿ ಒಳ್ಳೆಯ ತಯಾರಿ ನಡೆಯುತ್ತಿದೆ. ಇದೀಗ ಟೀಮ್ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರಾ (Akash Chopra) ಅವರು ಏಕದಿನ ತಂಡಕ್ಕೆ ಬೆಸ್ಟ್ ಪ್ಲೇಯಿಂಗ್11 ಆಯ್ಕೆ ಮಾಡಿದ್ದಾರೆ. ಆ ತಂಡ ಹೇಗಿದೆ ಎಂದು ತಿಳಿಸುತ್ತೇವೆ ನೋಡಿ..

ಇವರ ತಂಡದಲ್ಲಿ ಇಬ್ಬರು ಪ್ರಮುಖ ಆಟಗಾರರು ಇಲ್ಲ ಎನ್ನುವುದು ಆಶ್ಚರ್ಯಕರ ವಿಷಯ ಆಗಿದೆ. ಆರಂಭಿಕ ಬ್ಯಾಟ್ಸ್ಮನ್ ಆಗಿ ರೋಹಿತ್ ಶರ್ಮ (Rohit Sharma) ಮತ್ತು ಅವರ ಜೊತೆಗೆ ಇಶಾನ್ ಕಿಶನ್ (Ishan Kishan) ಅವರನ್ನು ಆಯ್ಕೆ ಮಾಡಿದ್ದಾರೆ. ಇಶಾನ್ ಕಿಶನ್ ದ್ವಿಶತಕ ಗಳಿಸಿದ ನಂತರ ಅವರನ್ನು ಆಯ್ಕೆ ಮಾಡಲಾಗಿದೆ. ಕಿಂಗ್ ಕೊಹ್ಲಿ (Virat Kohli) ಅವರಿಗೆ 3ನೇ ಸ್ಥಾನ ನೋಡಿ, 4ನೇ ಸ್ಥಾನವನ್ನು ಶ್ರೇಯಸ್ ಅಯ್ಯರ್ (Shreyas Iyer) ಅವರಿಗೆ ನೀಡಿದ್ದಾರೆ, ಶ್ರೇಯಸ್ ಅಯ್ಯರ್ ಅವರನ್ನು ತಂಡದಿಂದ ಬಿಡುವುದಿಲ್ಲ ಎಂದು ಕೂಡ ಹೇಳಿದ್ದಾರೆ. ಟೀಮ್ ಇಂಡಿಯಾದ ವೈಸ್ ಕ್ಯಾಪ್ಟನ್ ಕೆ.ಎಲ್.ರಾಹುಲ್ (K L Rahul) ಅವರನ್ನು 5ನೇ ಕ್ರಮಾಂಕಕ್ಕೆ ಆಯ್ಕೆ ಮಾಡಿದ್ದಾರೆ. ಇನ್ನು 6ನೇ ಕ್ರಮಾಂಕಕ್ಕೆ ಶ್ರೇಷ್ಠ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಅವರನ್ನು ಆಯ್ಕೆ ಮಾಡಿದ್ದಾರೆ. ತಮ್ಮ ತಂಡಕ್ಕೆ 3 ಸ್ಪಿನ್ನರ್ ಗಳನ್ನು ಆಯ್ಕೆ ಮಾಡಿದ್ದಾರೆ ಆಕಾಶ್ ಚೋಪ್ರಾ. ವಾಷಿಂಗ್ಟನ್ ಸುಂದರ್ (Washington Sundar) ಅವರಿಗೆ ಖಂಡಿತವಾಗಿ ಸ್ಥಾನವಿದೆ ಎಂದು ಹೇಳಿದ್ದಾರೆ. ಇದನ್ನು ಓದಿ..Cricket News: ಭಾರತ ತಂಡಕ್ಕೆ ಮತ್ತೊಬ್ಬ ಹಾರ್ಧಿಕ್ ಪಾಂಡ್ಯ ಸಿಕ್ಕಿಬಿಟ್ಟ ಎಂದ ಶಿವರಾಮಕೃಷ್ಣ. ಆಯ್ಕೆ ಮಾಡಿದ್ದೂ ಯಾರನ್ನು ಗೊತ್ತೇ?

ಹಾಗೆಯೇ ಅಕ್ಷರ್ ಪಟೇಲ್ (Axar Patel) ಮತ್ತು ರವೀಂದ್ರ ಜಡೇಜಾ (Ravindra Jadeja) ಇಬ್ಬರಲ್ಲಿ ಫಿಟ್ ಆಗಿರುವ ಒಬ್ಬರಿಗೆ ಸ್ಥಾನ ಕೊಡುವುದಾಗಿ ಹೇಳಿದ್ದಾರೆ. ಕುಲದೀಪ್ ಯಾದವ್ (Kuldeep Yadav) ಮತ್ತು ಯುಜವೇಂದ್ರ ಚಾಹಲ್ (Yuzvendra Chahal) ಇಬ್ಬರಲ್ಲಿ ಒಬ್ಬರಿಗೆ ಸ್ಥಾನ ಕೊಡುವುದಾಗಿ ಹೇಳಿದ್ದಾರೆ. ಇನ್ನು ಜಸ್ಪ್ರೀತ್ ಬುಮ್ರ (Jasprit Bumrah) ಮತ್ತು ಮೊಹಮ್ಮದ್ ಸಿರಾಜ್ (Mohammd Siraj) ಅವರು ವೇಗಿಗಳಾಗಿ ಆಯ್ಕೆ ಮಾಡಿ ತಮ್ಮ 11ರ ಬಳಗವನ್ನು ಕಟ್ಟಿದ್ದಾರೆ. ಈ ತಂಡದಲ್ಲಿ ವಿಶ್ವಶ್ರೇಷ್ಠ ಆಟಗಾರ ಎನ್ನಿಸಿಕೊಂಡಿರುವ ಸೂರ್ಯಕುಮಾರ್ ಯಾದವ್ (Suryakumar Yadav) ಅವರು ಮತ್ತು ಶಿಖರ್ ಧವನ್ (Shikhar Dhavan) ಅವರನ್ನು ಆಯ್ಕೆ ಮಾಡಿಲ್ಲ ಎನ್ನುವುದೇ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. ಸೂರ್ಯಕುಮಾರ್ ಯಾದವ್ ಅವರ ಪ್ರದರ್ಶನ ಟಿ20 ಪಂದ್ಯಗಳಲ್ಲಿ ಇರುವ ಹಾಗೆ, ಏಕದಿನ ಪಂದ್ಯಗಳಲ್ಲಿ ಇಲ್ಲ, ಇದರಲ್ಲಿ 32 ಕ್ಕಿಂತ ಕಡಿಮೆ ಆವರೇಜ್ ಇದೆ ಎಂದು ಹೇಳಿದ್ದಾರೆ. ಇವರಿಬ್ಬರಿಗೆ ನನ್ನ ತಂಡದಲ್ಲಿ ಸ್ಥಾನವಿದೆ, ಆದರೆ ಆಡುವ 11ರ ಬಳಗದಲ್ಲಿ ಸ್ಥಾನವಿಲ್ಲ ಎಂದು ಹೇಳಿದ್ದಾರೆ. ಇದನ್ನು ಓದಿ.. Cricket News: ಗಾಯಗೊಂಡ ರೋಹಿತ್ ಬದಲು ತಂಡ ಸೇರಿಕೊಂಡಿರುವ ಈ ಅಭಿಮನ್ಯು ನಿಜಕ್ಕೂ ಯಾರು ಗೊತ್ತೇ?? ಈತನ ಹಿನ್ನೆಲೆ ಏನು ಗೊತ್ತೆ?