ಕರುನಾಡ ವಾಣಿ
ಇದು ನಿಮ್ಮ ಧ್ವನಿ

FIFA World Cup: ಹೀನಾಯವಾಗಿ ಪೋರ್ಚುಗಲ್ ವಿಶ್ವಕಪ್ ನಿಂದ ಹೊರಬಂದ ಮೇಲೆ ಕಣ್ಣೀರು ಹಿತ್ತಿದ್ದ ರೊನಾಲ್ಡೊ ಬಗ್ಗೆ ಕಿಂಗ್ ಕೊಹ್ಲಿ ಹೇಳಿದ್ದೇನು ಗೊತ್ತೇ??

804

Get real time updates directly on you device, subscribe now.

FIFA World Cup: ಈ ವರ್ಷ ಕತಾರ್ ನಲ್ಲಿ ಫಿಫಾ ವರ್ಲ್ಡ್ ಕಪ್ ನಡೆಯುತ್ತಿದ್ದು, ಯಾರು ಊಹಿಸದಂತಹ ಫಲಿತಾಂಶಗಳು ಹೊರಬರುತ್ತಿದೆ. ಅವುಗಳನ್ನು ನೋಡಿ ಫುಟ್ಬಾಲ್ ಅಭಿಮಾನಿಗಳು ಕೂಡ ಶಾಕ್ ಆಗಿರುವುದು ಖಂಡಿತ. ಈಗಾಗಲೇ ಕ್ವಾಟರ್ ಫೈನಲ್ಸ್ ಪಂದ್ಯಗಳು ಮುಗಿದು, ಸೆಮಿ ಫೈನಲ್ಸ್ ಹಂತಕ್ಕೆ ತಲುಪಿದೆ. ಬರೋಬ್ಬರಿ 5 ಸಾರಿ ಚಾಂಪಿಯನ್ಸ್ ಆಗಿರುವ ಬ್ರೆಜಿಲ್ ತಂಡ ಕ್ವಾಟರ್ ಫೈನಲ್ಸ್ ನಲ್ಲಿ ಸೋತಿತು, ಕ್ರಿಸ್ಟಿಯಾನೋ ರೊನಾಲ್ಡೊ ಅವರ ನಾಯಕತ್ವದ ಪೋರ್ಚುಗಲ್ ತಂಡ ಕೂಡ ಕ್ವಾಟರ್ ಫೈನಲ್ಸ್ ಹಂತದಲ್ಲಿ ಸೋಲು ಕಂಡಿದೆ. ಶನಿವಾರ ನಡೆದ ಮೊರಾಕ್ಕೊ ವರ್ಸಸ್ ಪೋರ್ಚುಗಲ್ ಪಂದ್ಯದಲ್ಲಿ ಪೋರ್ಚುಗಳ ತಂಡ ಸೋತಿದೆ.

ಯೋಸೆಫ್ ಎನ್ ನೈಸಿರಿ ಅವರು ಹೊಡೆದ ಒಂದು ಗೋಲ್ ಇಂದ ಮೊರಕ್ಕೋ ತಂಡ ಕ್ವಾಟರ್ ಫೈನಲ್ಸ್ ಗೆದ್ದು, ಸೆಮಿ ಫೈನಲ್ಸ್ ಹಂತವನ್ನು ಪ್ರವೇಶ ಮಾಡಿದೆ. ಈ ಮೂಲಕ ಫಿಫಾ ವರ್ಲ್ಡ್ ಕಪ್ ಪ್ರವೇಶ ಮಾಡಿದ ಆಫ್ರಿಕಾ ತಂಡ ಎಂದು ಹೆಸರು ಪಡೆದಿದೆ. ಇನ್ನು ಕ್ರಿಸ್ಟಿಯಾನೋ ರೊನಾಲ್ಡೊ ಅವರು ಆಡುತ್ತಿರುವ ಕೊನೆಯ ವರ್ಲ್ಡ್ ಕಪ್ ಇದಾಗಿತ್ತು, ಚಾಂಪಿಯನ್ಸ್ ಆಗಿ ರಿಟೈರ್ ಆಗಬೇಕು ಎಂದುಕೊಂಡಿದ್ದರು. ಆದರೆ ಈಗ ಅದು ಅಸಾಧ್ಯವಾಗಿದೆ. ಪಂದ್ಯ ಸೋತ ನಂತರ ಕ್ರಿಸ್ಟಿಯಾನೋ ರೊನಾಲ್ಡೊ ಅವರು ಕಣ್ಣೀರು ಹಾಕುತ್ತಾ ಹೊರಬಂದರು, ಇದನ್ನು ನೋಡಿ ಇಡೀ ಕ್ರೀಡಾ ಪ್ರಪಂಚ ಅವರಿಗೆ ಸಮಾಧಾನ ಮಾಡಿತು. ನಮ್ಮ ಟೀಮ್ ಇಂಡಿಯಾದ ಶ್ರೇಷ್ಠ ಕ್ರಿಕೆಟ್ ಆಟಗಾರ, ವಿರಾಟ್ ಕೊಹ್ಲಿ ಅವರು ಕೂಡ ಟ್ವೀಟ್ ಮಾಡುವ ಮೂಲಕ ಕ್ರಿಸ್ಟಿಯಾನೋ ರೊನಾಲ್ಡೊ ಅವರನ್ನು ಹಾಡಿ ಹೊಗಳಿದ್ದಾರೆ. ಇದನ್ನು ಓದಿ..Cricket News: ಬಾಂಗ್ಲಾ ದೇಶದ ವಿರುದ್ಧ ಸರಣಿ ಸೋತ ಭಾರತಕ್ಕೆ ಸ್ಪಷ್ಟ ಎಚ್ಚರಿಕೆ ಕೊಟ್ಟ ವೀರೇಂದ್ರ ಸೆಹ್ವಾಗ್ ಹೇಳಿದ್ದೇನು ಗೊತ್ತೇ?? ನಿಜಕ್ಕೂ ಭಾರತ ಈ ಹಂತಕ್ಕೆ ತಲುಪಿದೆಯೇ?

“ಇಲ್ಲಿಯವರೆಗೂ ನೀವು ಕ್ರೀಡೆಗೆ ಮತ್ತ್ ಕ್ರೀಡಾಭಿಮಾನಿಗಳಿಗೆ ನೀಡಿರುವ ಕೊಡುಗೆಯನ್ನು ಒಂದು ಟೈಟಲ್ ನಲ್ಲಿ ಅಥವಾ ಒಂದು ಟ್ರೋಫಿಯ ಮೂಲಕ ನಿರ್ಧಾರ ಮಾಡೋದಕ್ಕೆ ಅಗೋದಿಲ್ಲ. ಜನರ ಮೇಲೆ ನಿಮ್ಮ ಪ್ರಭಾವ ಇರುವ ಬಗ್ಗೆ ಹೇಳಲು ಯಾವುದೇ ಒಂದು ಶೀರ್ಷಿಕೆ ಸರಿಹೊಂದುವುದಿಲ್ಲ. ನೀವು ಆಡುವ ಶೈಲಿಯನ್ನು ನಾನು ಮತ್ತು ವಿಶ್ವದ ಅಭಿಮಾನಿಗಳು ನೋಡಿ ಸಂತೋಷಟ್ಟಿದ್ದೇವೆ. ದೇವರು ನೀಡಿರುವ ಒಂದು ಉಡುಗೊರೆ ನೀವು. ನೀವು ಮಾಡಿರುವ ಸಾಧನೆ ಎಲ್ಲರಿಗೂ ಗೊತ್ತಿದೆ..” ಎಂದು ಟ್ವೀಟ್ ಮಾಡಿದ್ದಾರೆ ಕಿಂಗ್ ಕೋಹ್ಲಿ. ಈ ಟ್ವೀಟ್ ಈಗ ವೈರಲ್ ಆಗುತ್ತಿದೆ. ಹಾಗೆಯೇ ಕ್ರೀಡಾ ಪ್ರೇಮಿಗಳು ರೊನಾಲ್ಡೊ ಅವರನ್ನು ನೋಡಿ ಸಂತೋಷಪಟ್ಟಿದ್ದಾರೆ. ಇದನ್ನು ಓದಿ.. Cricket News: ಗಾಯಗೊಂಡ ರೋಹಿತ್ ಬದಲು ತಂಡ ಸೇರಿಕೊಂಡಿರುವ ಈ ಅಭಿಮನ್ಯು ನಿಜಕ್ಕೂ ಯಾರು ಗೊತ್ತೇ?? ಈತನ ಹಿನ್ನೆಲೆ ಏನು ಗೊತ್ತೆ?

Get real time updates directly on you device, subscribe now.