Cricket News: ಈ ಬಾರಿಯ ಕೊನೆಯ ವಿಶ್ವಕಪ್ ಆಡುತ್ತಿರುವ ಟಾಪ್ 5 ಆಟಗಾರರು ಯಾರ್ಯಾರು ಗೊತ್ತೇ?? ಲೆಜೆಂಡ್ ಆಟಗಾರರಿಗೆ ಇದೆ ಕೊನೆಯದು.

Cricket News: ಈ ಬಾರಿಯ ಕೊನೆಯ ವಿಶ್ವಕಪ್ ಆಡುತ್ತಿರುವ ಟಾಪ್ 5 ಆಟಗಾರರು ಯಾರ್ಯಾರು ಗೊತ್ತೇ?? ಲೆಜೆಂಡ್ ಆಟಗಾರರಿಗೆ ಇದೆ ಕೊನೆಯದು.

Cricket News: 2023ರಲ್ಲಿ ನಡೆಯುವ ಓಡಿಐ ವರ್ಲ್ಡ್ ಕಪ್ (ODI World Cup) ಈ ಸಾರಿ ಭಾರತದಲ್ಲೇ ನಡೆಯಲಿರುವುದು ವಿಶೇಷ. ವರ್ಲ್ಡ್ ಕಪ್ ಹೋಸ್ಟ್ ಮಾಡುತ್ತಿರುವ ಭಾರತ, ಗೆಲ್ಲುವ ಭರವಸೆಯೊಂದಿಗೆ ತಯಾರಿ ನಡೆಸಿದೆ, ಈ ಐಸಿಸಿ ಟ್ರೋಫಿ (ICC Trophy) ಗೆಲ್ಲುವ ಮೂಲಕ ಭಾರತ ತಂಡ ಮತ್ತೊಂದು ಟ್ರೋಫಿಯನ್ನು ಮನೆಗೆ ತರಲಿ ಎಂದು ಎಲ್ಲರೂ ಬಯಸುತ್ತಿದ್ದಾರೆ. ಈ ವರ್ಷ ನಮ್ಮ ತಂಡ ಸ್ಟ್ರಾಂಗ್ ಆಗಿದೆ, ಯುವ ಆಟಗಾರರು ಜೊತೆಗೆ ಕೆಲವು ಹಿರಿಯ ಆಟಗಾರರು ಕೂಡ ತಂಡಕ್ಕೆ ಒಳ್ಳೆಯ ಫಾರ್ಮ್ ನಲ್ಲಿ ಕಂಬ್ಯಾಕ್ ಮಾಡಿರುವುದು ಸಂತೋಷದ ವಿಚಾರವೇ ಆಗಿದೆ. ಯುವ ಆಟಗಾರರಿಗೆ ಇದೊಂದು ಅತ್ಯುತ್ಯಮ ಅವಕಾಶ. ಆದರೆ ತಂಡದಲ್ಲಿರುವ ಹಿರಿಯ ಆಟಗಾರರಿಗೆ ಇದು ಕೊನೆಯ ವರ್ಲ್ಡ್ ಕಪ್ ಆಗಬಹುದು. ಆ ಐವರು ಆಟಗಾರರು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ..

ಶಿಖರ್ ಧವನ್ (Shikhar Dhavan) :- ಕೆಲವು ವರ್ಷಗಳಿಂದ ಇವರು ಭಾರತ ತಂಡದಲ್ಲಿ ಓಡಿಐ ಪಂದ್ಯಗಳನ್ನು ಮಾತ್ರ ಆಡುತ್ತಿದ್ದಾರೆ. ಆದರೆ ಭಾರತ ತಂಡ ಸುಲಭವಾಗಿ ಇವರನ್ನು ನಂಬಬಹುದು, ಕೆ.ಎಲ್.ರಾಹುಲ್ (K L Rahul) ಮತ್ತು ರೋಹಿತ್ ಶರ್ಮಾ (Rohit Sharma) ಇಬ್ಬರ ಜೊತೆಗೂ ಒಳ್ಳೆಯ ಓಪನರ್ ಆಗಿ ಕಣಕ್ಕೆ ಇಳಿಯುತ್ತಾರೆ. ಬೇರೆ ಸೀನಿಯರ್ ಆಟಗಾರರು ರೆಸ್ಟ್ ನಲ್ಲಿದ್ದಾಗ, ಇವರು ಬಾಂಗ್ಲಾದೇಶ್ ವಿರುದ್ಧ ಇಂಡಿಯಾ ತಂಡವನ್ನು ಮುನ್ನಡೆಸಿದರು. ಇದನ್ನು ಓದಿ..Cricket News: ಗಾಯಗೊಂಡ ರೋಹಿತ್ ಬದಲು ತಂಡ ಸೇರಿಕೊಂಡಿರುವ ಈ ಅಭಿಮನ್ಯು ನಿಜಕ್ಕೂ ಯಾರು ಗೊತ್ತೇ?? ಈತನ ಹಿನ್ನೆಲೆ ಏನು ಗೊತ್ತೆ?

ದಿನೇಶ್ ಕಾರ್ತಿಕ್ (Dinesh Karthik) :- ಈ ವರ್ಷ ಐಪಿಎಲ್ ನಲ್ಲಿ ನೀಡಿದ ಅದ್ಬುತ ಪ್ರದರ್ಶನದಿಂದ ಟೀಮ್ ಇಂಡಿಯಾಗೆ ಭರ್ಜರಿ ಕಂಬ್ಯಾಕ್ ಮಾಡಿದರು ದಿನೇಶ್ ಕಾರ್ತಿಕ್. ಟಿ20 ವರ್ಲ್ಡ್ ಕಪ್ ನಲ್ಲಿ ಕೂಡ ಸ್ಥಾನ ಪಡೆದುಕೊಂಡರು. ಬ್ಯಾಟ್ಸ್ಮನ್ ಆಗಿ ಫಿನಿಷರ್ ಆಗಿ ಅತ್ಯುತ್ತಮ ಪ್ರದರ್ಶನ ನೀಡುವ ಇವರು, ವಿಕೆಟ್ ಕೀಪಿಂಗ್ ನಲ್ಲಿ ಸಹ ಉತ್ತಮವಾಗಿದ್ದಾರೆ. ಇವರು ಭಾರತ ತಂಡಕ್ಕಾಗಿ ಓಡಿಐ ನಲ್ಲಿ ಆಡಿದ್ದು 2019ರಲ್ಲಿ ಕೊನೆ, ಈ ವರ್ಷ ಆಯ್ಕೆಯಾದರೆ, ಇದು ಕಾರ್ತಿಕ್ ಅವರ ಕೊನೆಯ ಓಡಿಐ ವಿಶ್ವಕಪ್ ಆಗಬಹುದು.

ರವಿಚಂದ್ರನ್ ಅಶ್ವಿನ್ (Ravichandran Ashwin) :- ಇವರು ಟೆಸ್ಟ್ ಪಂದ್ಯಗಳಿಗೆ ಅತಿಹೆಚ್ಚು ಸೂಕ್ತ ಎಂದು ಹೇಳುತ್ತಾರೆ. ಅಶ್ವಿನ್ ಅವರು ಓಡಿಐಗೆ ಆಯ್ಕೆ ಆಗಿರುವುದು ಕಡಿಮೆ. ಇವರು ರವಿಚಂದ್ರನ್ ಅಶ್ವಿನ್ ಅವರಿಗಿಂತ ಕಿರಿಯ ಉತ್ತಮ ಸ್ಪಿನ್ನರ್ ಗಳು ತಂಡದಲ್ಲಿದ್ದಾರೆ. ಹಾಗಾಗಿ ಇವರು ಆಯ್ಕೆಯಾಗುವುದು ಖಚಿತವಿಲ್ಲ, ಒಂದು ವೇಳೆ ಆಯ್ಕೆಯಾದರೆ ಇದು ಅವರ ಕೊನೆಯ ಓಡಿಐ ವರ್ಲ್ಡ್ ಕಪ್ ಆಗುತ್ತದೆ. ಇದನ್ನು ಓದಿ..Cricket News: ಏಕದಿನಕ್ಕಾಗಿ ಬೆಸ್ಟ್ ತಂಡವನ್ನು ಆಯ್ಕೆ ಮಾಡಿದ ಆಕಾಶ ಚೋಪ್ರಾ. ಆಯ್ಕೆಯಾದವರು ಯಾರ್ಯಾರು ಗೊತ್ತೇ? ಸ್ಟಾರ್ ಪ್ಲೇಯರ್ ಇಲ್ಲ.

ಉಮೇಶ್ ಯಾದವ್ (Umesh Yadav) :- ಇವರು ಕೂಡ ಭಾರತ ತಂಡದ ಪರವಾಗಿ ಟೆಸ್ಟ್ ಪಂದ್ಯಗಳನ್ನು ಮಾತ್ರ ಆಡುತ್ತಿದ್ದ. ಇವರು ಟೀಮ್ ಇಂಡಿಯಾಗಾಗಿ ಓಡಿಐ ಪಂದ್ಯ ಆಡಿದ್ದು ಕೂಡ ಬಹಳ ಹಿಂದೆ, 2018ರಲ್ಲಿ. ಇವರು ಇಂಗ್ಲೆಂಡ್ ನಲ್ಲಿ ಆಡುತ್ತಿದ್ದಾರೆ. ಒಂದು ವೇಳೆ ಇವರು ಆಯ್ಕೆಯಾದರೆ, ಇದು ಉಮೇಶ್ ಯಾದವ್ ಅವರ ಕೊನೆಯ ಪಂದ್ಯ ಆಗುತ್ತದೆ.

ಇಶಾಂತ್ ಶರ್ಮ (Ishanth Sharma):- ಯುವ ಬೌಲರ್ ಆಗಿ ಇವರಿಗೆ ಒಳ್ಳೆಯ ಟ್ಯಾಲೆಂಟ್ ಇದ್ದರು ಕೂಡ, 50 ಓವರ್ ವರ್ಲ್ಡ್ ಕಪ್ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಇವರು ಟೀಮ್ ಇಂಡಿಯಾಗೆ ಬಂದಿದ್ದು 2007ರಲ್ಲಿ. ಇವರು ಭಾರತ ತಂಡದಿಂದ ದೂರವೇ ಇದ್ದಾರೆ. ಟೆಸ್ಟ್ ಪಂದ್ಯದಲ್ಲಿ ಯವಾಗಲಾದರು ಒಮ್ಮೆ ಆಯ್ಕೆಯಾಗಿದ್ದಾರೆ. ಬಹುತೇಕ ರಿಟೈರ್ ಆಗುವುದಕ್ಕೆ ಹತ್ತಿರದಲ್ಲಿದ್ದಾರೆ. ಹಾಗಾಗಿ ಒಂದು ವೇಳೆ ಓಡಿಐ ಗೆ ಆಯ್ಕೆಯಾದರೆ, ಇದು ಅವರಿಗೆ ಕೊನೆಯ ಪಂದ್ಯ ಆಗುತ್ತದೆ. ಇದನ್ನು ಓದಿ.. Investment Tips: ಕೇವಲ ದಿನಕ್ಕೆ 200 ರೂಪಾಯಿ ಉಳಿತಾಯ ಮಾಡಿ ಇಲ್ಲಿ ಹೂಡಿಕೆ ಮಾಡಿದರೆ, ಲಕ್ಷ ಲಕ್ಷ ಲಾಭ ಗಳಿಸುವುದು ಖಚಿತ.