IPL 2023: ಈ ಬಾರಿ ಆರ್ಸಿಬಿ ಕಣ್ಣಿಟ್ಟಿರುವ ಮೂವರು ದಾಂಡಿಗರು ಯಾರ್ಯಾರು ಗೊತ್ತೇ? ಇವರು ಬಂದ್ರೆ ಕಪ್ ನಮ್ಮದೇನೆ. ಯಾರ್ಯಾರು ಗೊತ್ತೇ?

IPL 2023: ಈ ಬಾರಿ ಆರ್ಸಿಬಿ ಕಣ್ಣಿಟ್ಟಿರುವ ಮೂವರು ದಾಂಡಿಗರು ಯಾರ್ಯಾರು ಗೊತ್ತೇ? ಇವರು ಬಂದ್ರೆ ಕಪ್ ನಮ್ಮದೇನೆ. ಯಾರ್ಯಾರು ಗೊತ್ತೇ?

IPL 2023: 2022ರ ಐಪಿಎಲ್ ನಲ್ಲಿ (IPL) ಆರ್ಸಿಬಿ (RCB) ತಂಡ ಒಳ್ಳೆಯ ಪ್ರದರ್ಶನವನ್ನೇ ನೀಡಿತು, ಆದರೆ ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಪ್ಲೇ ಆಫ್ಸ್ ಹಂತದಲ್ಲಿ ಆರ್ಸಿಬಿ ಸೋತಿತು. ಮುಂದಿನ ವರ್ಷ ಗೆಲ್ಲಬೇಕು ಎಂದು ಉತ್ಸಾಹದಲ್ಲಿರುವ ಆರ್ಸಿಬಿ ತಂಡ, ತಂಡದ ಬಹುತೇಕ ಆಟಗಾರರನ್ನು ಉಳಿಸಿಕೊಂಡು 5 ಆಟಗಾರರನ್ನು ಮಾತ್ರ ರಿಲೀಸ್ ಮಾಡಿದೆ. ಹಾಗಾಗಿ ಐಪಿಎಲ್ ಆಕ್ಷನ್ ಗೆ ಆರ್ಸಿಬಿ ಬಳಿ ಇರುವುದು 8.75ಕೋಟಿ ರೂಪಾಯಿ ಮಾತ್ರ. ಹಾಗಾಗಿ ಈ ಬಾರಿ ಆಕ್ಷನ್ ನಲ್ಲಿ ಮೂವರು ಆಟಗಾರರ ಮೇಲೆ ಆರ್ಸಿಬಿ ಕಣ್ಣಿಟ್ಟಿದೆ. ಆ ಮೂವರು ಆಟಗಾರರು ಯಾರು ಎಂದು ತಿಳಿಸುತ್ತೇವೆ ನೋಡಿ..

ಮಯಾಂಕ್ ಅಗರ್ವಾಲ್ (Mayank Agarwal) :- ಬೆಂಗಳೂರಿನ (Bangalore) ಹುಡುಗ, ಪಂಜಾಬ್ ತಂಡದ ಮಾಜಿ ಕ್ಯಾಪ್ಟನ್ ಮಯಾಂಕ್ ಅಗರ್ವಾಲ್ ಅವರನ್ನು ಖರೀದಿ ಮಾಡಲು ಆರ್ಸಿಬಿ ತಂಡಕ್ಕೆ ಆಸಕ್ತಿ ಇದೆ. ಮಯಾಂಕ್ ಉತ್ತಮ ಆಟಗಾರ ಆಗಿದ್ದು, ಸ್ಪಿನ್ ಬೌಲರ್ ಗಳ ವಿರುದ್ಧ ಉತ್ತಮವಾಗಿ ರನ್ಸ್ ಗಳಿಸುತ್ತಾರೆ. ಹಾಗಾಗಿ ಅವರನ್ನು ಖರೀದಿ ಮಾಡಲು ಬಯಸಿದೆ ಆರ್ಸಿಬಿ ಮ್ಯಾನೇಜ್ಮೆಂಟ್. ಆದರೆ ಕ್ರಿಕೆಟ್ ತಜ್ಞರು, ಮಯಾಂಕ್ ಅಗರ್ವಾಲ್ ಅವರನ್ನು ಖರೀದಿ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ. ಆರ್ಸಿಬಿ ತಂಡದ ಬ್ಯಾಟಿಂಗ್ ಲೈನಪ್ ಸ್ಟ್ರಾಂಗ್ ಆಗಿದೆ. ಅದರ ನಡುವೆ ಮಯಾಂಕ್ ಅಗರ್ವಾಲ್ ಅವರು ಹೊಂದಿಕೊಳ್ಳಬೇಕಿದೆ. ಇದನ್ನು ಓದಿ.. IPL 2023: ಆರ್ಸಿಬಿ ಮಾಯಾಂಕ್ ರವರನ್ನು ಖರೀದಿ ಮಾಡಲು ಭರ್ಜರಿ ಅವಕಾಶ, ಹರಾಜಿಗೂ ಮುನ್ನವೇ ಬೆಲೆ ಕಡಿಮೆ ಮಾಡಿಕೊಂಡ ಟಾಪ್ 4 ಆಟಗಾರರು ಯಾರ್ಯಾರು ಗೊತ್ತೇ?

ನಿಕೋಲಸ್ ಪೂರನ್ (Nicholas Pooran) :- ಇವರನ್ನು ಖರೀದಿ ಮಾಡಲು ಆರ್ಸಿಬಿ ತಂಡಕ್ಕೆ ಆಸಕ್ತಿ ಇದೆ. ಆದರೆ ಇವರನ್ನು ಖರೀದಿ ಮಾಡಲು ಆಗದೆ ಇರಬಹುದು, ಯಾಕೆಂದರೆ ಕಳೆದ ಸೀಸನ್ ನಲ್ಲಿ 10 ಕೋಟಿಗೆ ಮಾರಾಟವಾಗಿದ್ದರು ಪೂರನ್.. ಈ ಬಾರಿ 5 ಕೋಟಿಗಾದರು ಮಾರಾಟವಾಗುತ್ತಾರೆ. ಜೊತೆಗೆ ಆರ್ಸಿಬಿ ತಂಡದಲ್ಲಿ ಈಗಾಗಲೇ ವಿದೇಶಿ ಆಟಗಾರರು ಇದ್ದಾರೆ, ಫಾಫ್ ಡು ಪ್ಲೆಸಿಸ್ (Far du Plessis), ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell), ವನಿಂದು ಹಸರಂಗ (Vanindu Hasaranga) ಮತ್ತು ಜೋಶ್ ಹೇಜಲ್ ವುಡ್ (Josh Hazelwood) ಇದ್ದಾರೆ. ವಿದೇಶಿ ಆಟಗಾರರ ನಾಲ್ಕು ಸ್ಥಾನಗಳು ಕೂಡ ಪೂರ್ತಿಯಾಗಿದೆ.

ಕೈಲ್ ಜೇಮಿಸನ್ (Kyle Jamieson) :- ನ್ಯೂಜಿಲೆಂಡ್ (New Zealand) ತಂಡದ ಆಲ್ ರೌಂಡರ್ ಆಗಿರುವ ಇವರನ್ನು ಖರೀದಿ ಮಾಡಲು ಆರ್ಸಿಬಿ ತಂಡ ಆಸಕ್ತಿ ತೋರಿಸಬಹುದು. ಆದರೆ 2021ರಲ್ಲಿ 10 ಕೋಟಿ ಕೊಟ್ಟು ಖರೀದಿ ಮಾಡಿದ್ದರು ಕೂಡ, ಅವರು ಉತ್ತಮ ಪ್ರದರ್ಶನ ನೀಡಿರಲಿಲ್ಲ. ಹಾಗಾಗಿ ಈ ಬಾರಿ ಖರೀದಿ ಮಾಡಿದರೆ, ಕಡಿಮೆ ಹಣಕ್ಕೆ ಖರೀದಿ ಮಾಡಬಹುದು. ಆರ್ಸಿಬಿ ತಂಡದಿಂದ ಜೇಸನ್ ಬೆಹ್ರೆನ್ಡಾರ್ಫ್ (Kyle Jamieson) ಅವರನ್ನು ರಿಲೀಸ್ ಮಾಡಿರುವುದರಿಂದ, ಇವರು ಉತ್ತಮ ಆಯ್ಕೆ ಆಗುತ್ತಾರೆ. ಇದನ್ನು ಓದಿ.. IPL 2023: ಈ ಬಾರಿ ಜಾರಿಗೆ ತಂದಿದ್ದ ಬದಲಿ ಆಟಗಾರ ನಿಯಮ ಇಂಪ್ಯಾಕ್ಟ್ ಪ್ಲೇಯರ್ ರೂಲ್ಸ್ ನಲ್ಲಿ ಬಾರಿ ಟ್ವಿಸ್ಟ್ ಕೊಟ್ಟ ಬಿಸಿಸಿಐ. ಏನು ಅಂತೇ ಗೊತ್ತೇ?