Cricket News: ಗಾಯಗೊಂಡ ರೋಹಿತ್ ಬದಲು ತಂಡ ಸೇರಿಕೊಂಡಿರುವ ಈ ಅಭಿಮನ್ಯು ನಿಜಕ್ಕೂ ಯಾರು ಗೊತ್ತೇ?? ಈತನ ಹಿನ್ನೆಲೆ ಏನು ಗೊತ್ತೆ?

Cricket News: ಗಾಯಗೊಂಡ ರೋಹಿತ್ ಬದಲು ತಂಡ ಸೇರಿಕೊಂಡಿರುವ ಈ ಅಭಿಮನ್ಯು ನಿಜಕ್ಕೂ ಯಾರು ಗೊತ್ತೇ?? ಈತನ ಹಿನ್ನೆಲೆ ಏನು ಗೊತ್ತೆ?

Cricket News: ಭಾರತ ತಂಡ (Team India) ಬಂಗ್ಲಾದೇಶ್ ವಿರುದ್ಧದ ಓಡಿಐ ಪಂದ್ಯಗಳನ್ನು ಮುಗಿಸಿದ ನಂತರ ಡಿಸೆಂಬರ್ 14ರಿಂದ ಇಂಡಿಯಾ ವರ್ಸಸ್ ಬಾಂಗ್ಲಾದೇಶ್ (India vs Bangladesh) ಟೆಸ್ಟ್ ಪಂದ್ಯಗಳು ಶುರುವಾಗಲಿದೆ. ಇದರಲ್ಲಿ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕು ಎನ್ನುವ ಒತ್ತಡ ಭಾರತ ತಂಡದ ಮೇಲೆ ಇದೆ. ಈ ಸಮಯದಲ್ಲಿ ಭಾರತ ತಂಡದಿಂದ ಪ್ರಮುಖ ಆಟಗಾರರೇ ಆಗಿದ್ದಾರೆ, ಎರಡನೇ ಓಡಿಐ ಪಂದ್ಯದಲ್ಲಿ ಕೈಬೆರಳಿಗೆ ಇಂಜುರಿ ಆದ ಕಾರಣ ಕ್ಯಾಪ್ಟನ್ ರೋಹಿತ್ ಶರ್ಮ (Rohit Sharma) ಈಗಾಗಲೇ ಬಾಂಗ್ಲಾದೇಶ್ ಇಂದ ಭಾರತಕ್ಕೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಸ್ಥಾನಕ್ಕೆ ಈಗ ಬಂದಿರುವುದು ಮತ್ತೊಬ್ಬ ಪ್ರಬಲ ಆಟಗಾರ ಅಭಿಮನ್ಯು ಈಶ್ವರನ್ (Abhimanyu Easwaran).

ಈ ಅಭಿಮನ್ಯು ನಿಜಕ್ಕೂ ಯಾರು ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲೂ ಇದೆ, ಅವರ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ.. ಅಭಿಮನ್ಯು ಅವರು ಭಾರತ ಎ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದು ತಂಡವನ್ನು ಮುನ್ನಡೆಸಿದ್ದ ಆಟಗಾರ. ಉತ್ತಮವಾಗಿ ಬ್ಯಾಟಿಂಗ್ ಮಾಡುವ ಇವರು, ಆಡಿದ ಎರಡು ಅಭ್ಯಾಸ ಪಂದ್ಯದಲ್ಲಿ 141 ಮತ್ತು 157 ರನ್ಸ್ ಸಿಡಿಸಿದ್ದಾರೆ. ಇನ್ನು ದೇಶೀಯ ಪಂದ್ಯಗಳಲ್ಲಿ ಬೆಂಗಾಲ್ (Team Bengal) ತಂಡದ ಪರವಾಗಿ ಆಡುವ ಇವರು, ಇಲ್ಲಿಯವರೆಗೂ ಆಡಿರುವ 78 ಮ್ಯಾಚ್ ಗಳಲ್ಲಿ 45.33 ಆವರೇಜ್ ನಲ್ಲಿ, 5576 ರನ್ಸ್ ಸಿಡಿಸಿದ್ದಾರೆ. ಅಭಿಮನ್ಯು ಅವರಿಗೆ ಈಗ 27 ವರ್ಷ ವಯಸ್ಸಾಗಿದೆ. ಇದನ್ನು ಓದಿ..Cricket News: ರೋಹಿತ್ ರವರನ್ನು ತೆಗೆದುಹಾಕಿದರೆ, ಅವರ ಸ್ಥಾನವನ್ನು ಸಮರ್ಥವಾಗಿ ತುಂಬುವ ಆಟಗಾರರು ಯಾರ್ಯಾರು ಗೊತ್ತೇ??

ಇವರು ಬಲಗೈ ಬ್ಯಾಟ್ಸ್ಮನ್, ಈ ಹಿಂದೆ ಹಲವು ಸಾರಿ ಟೀಮ್ ಇಂಡಿಯಾ ಟೆಸ್ಟ್ ಸ್ಕ್ವಾಡ್ ನಲ್ಲಿ ಸ್ಥಾನ ಪಡೆದರು ಕೂಡ, ಪ್ಲೇಯಿಂಗ್ 11ನಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಈ ಸಾರಿ ಟೀಮ್ ಇಂಡಿಯಾಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಅವರ ಬದಲಾಗಿ ಎಂಟ್ರಿ ಕೊಟ್ಟಿದ್ದಾರೆ, ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ಶುಭಮನ್ ಗಿಲ್ (Shubhman Gill) ಅವರು ಓಪನರ್ ಆಗಿ ಬರಲಿದ್ದು, ಅಭಿಮನ್ಯು ಅವರು ಬ್ಯಾಕಪ್ ಓಪನರ್ ಆಗಿ ಇರುತ್ತಾರೆ ಎಂದು ಮಾಹಿತಿ ಸಿಕ್ಕಿದೆ. ರೋಹಿತ್ ಶರ್ಮಾ ಅವರಷ್ಟೇ ಅಲ್ಲದೆ, ಮೊಹಮ್ಮದ್ ಶಮಿ (Mohammad Shami) ಮತ್ತು ರವೀಂದ್ರ ಜಡೇಜಾ (Ravindra Jadeja) ಅವರು ಕೂಡ ಇಂಜುರಿ ಕಾರಣದಿಂದ ಟೀಮ್ ಇಂಡಿಯಾ ಇಂದ ಹೊರಗಿದ್ದು, ಅವರ ಬದಲಾಗಿ ನವದೀಪ್ ಸೈನಿ (Navdeep Saini) ಮತ್ತು ಸೌರಭ್ ಕುಮಾರ್ (Saurabh Kumar) ಅವರಿಗೆ ಸ್ಥಾನ ಸಿಗಬಹುದು ಎನ್ನಲಾಗುತ್ತಿದೆ. ಇದನ್ನು ಓದಿ.. Cricket News: ಭಾರತ ತಂಡಕ್ಕೆ ಮತ್ತೊಬ್ಬ ಹಾರ್ಧಿಕ್ ಪಾಂಡ್ಯ ಸಿಕ್ಕಿಬಿಟ್ಟ ಎಂದ ಶಿವರಾಮಕೃಷ್ಣ. ಆಯ್ಕೆ ಮಾಡಿದ್ದೂ ಯಾರನ್ನು ಗೊತ್ತೇ?