IPL 2023: ಆರ್ಸಿಬಿ ಮಾಯಾಂಕ್ ರವರನ್ನು ಖರೀದಿ ಮಾಡಲು ಭರ್ಜರಿ ಅವಕಾಶ, ಹರಾಜಿಗೂ ಮುನ್ನವೇ ಬೆಲೆ ಕಡಿಮೆ ಮಾಡಿಕೊಂಡ ಟಾಪ್ 4 ಆಟಗಾರರು ಯಾರ್ಯಾರು ಗೊತ್ತೇ?
IPL 2023: ಆರ್ಸಿಬಿ ಮಾಯಾಂಕ್ ರವರನ್ನು ಖರೀದಿ ಮಾಡಲು ಭರ್ಜರಿ ಅವಕಾಶ, ಹರಾಜಿಗೂ ಮುನ್ನವೇ ಬೆಲೆ ಕಡಿಮೆ ಮಾಡಿಕೊಂಡ ಟಾಪ್ 4 ಆಟಗಾರರು ಯಾರ್ಯಾರು ಗೊತ್ತೇ?
IPL 2023: ಭಾರತದ ದೊಡ್ಡ ಟೂರ್ನಿ ಐಪಿಎಲ್ ನ 16 (IPL 16) ನೇ ಸೀಸನ್ ಮುಂದಿನ ವರ್ಷ ನಡೆಯಲಿದೆ, ಇದಕ್ಕಾಗಿ ಮಿನಿ ಹರಾಜು ಪ್ರಕ್ರಿಯೆ ಡಿಸೆಂಬರ್ 23ರಂದು ಕೇರಳದ ಕೊಚ್ಚಿಯಲ್ಲಿ (Kochi) ನಡೆಯಲಿದೆ. ಹರಾಜು ಪ್ರಕ್ರಿಯೆಗಾಗಿ ಎಲ್ಲಾ ಫ್ರಾಂಚೈಸಿಗಳು ತಯಾರಿದ್ದು, ಬಲಿಷ್ಠ ಮತ್ತು ಪ್ರಬಲ ಆಟಗಾರರ ಮೇಲೆ ಕಣ್ಣಿಟ್ಟಿದೆ. ಐಪಿಎಲ್ ನಲ್ಲಿ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು ಮಯಾಂಕ್ ಅಗರ್ವಾಲ್ (Mayank Agarwal). ಇದೀಗ ಇವರು ಹರಾಜಿನಲ್ಲಿ ನಮ್ಮ ಬೆಲೆಯನ್ನು ಕಡಿಮೆ ಮಾಡಿಕೊಂಡಿದ್ದು, ಆರ್ಸಿಬಿ ತಂಡಕ್ಕೆ ಇವರನ್ನು ಖರೀದಿ ಮಾಡುವ ಅವಕಾಶ ಹೆಚ್ಚಾಗಿದೆ. ಹೀಗೆ ಈ ಹರಾಜು ಪ್ರಕ್ರಿಯೆಗೆ ತಮ್ಮ ಬೇಸ್ ಪ್ರೈಸ್ ಕಡಿಮೆ ಮಾಡಿಕೊಂಡ 4 ಆಟಗಾರರ ಬಗ್ಗೆ ಇಂದು ತಿಳಿಸುತ್ತೇವೆ ನೋಡಿ..
ಅಜಿಂಕ್ಯಾ ರಹಾನೆ (Ajinkya Rahane) :- ಮುಂಬೈ ಮೂಲದ ಇವರು ರಾಜಸ್ತಾನ್ ರಾಯಲ್ಸ್ (Rayals) ತಂಡದ ಪರವಾಗಿ ಆಡುತ್ತಿದ್ದರು. ಆದರೆ ಕಳೆದ ಸೀಸನ್ ನಲ್ಲಿ ಕಳಪೆ ಫಾರ್ಮ್ ನಲ್ಲಿ ಇದ್ದ ಕಾರಣ ಇವರನ್ನು ರಾಜಸ್ತಾನ್ ರಾಯಲ್ಸ್ ತಂಡ ಬಿಡುಗಡೆ ಮಾಡಿತು. 7 ಪಂದ್ಯಗಳಲ್ಲಿ 133 ರನ್ಸ್ ಮಾತ್ರವೇ ಗಳಿಸಿದ್ದರು. ಫಾರ್ಮ್ ನಲ್ಲಿ ಇಲ್ಲದ ಕಾರಣ ಇವರನ್ನು ಬೇರೆ ತಂಡಗಳು ಖರೀದಿ ಮಾಡುವುದು ಕಷ್ಟ ಎನ್ನುವ ಕಾರಣಕ್ಕೆ, ಇವರು ತಮ್ಮ ಬೇಸ್ ಪ್ರೈಸ್ ಅನ್ನು 1 ಕೋಟಿ ಇಂದ 50 ಲಕ್ಷಕ್ಕೆ ಇಳಿಸಿದ್ದಾರೆ. ಇದನ್ನು ಓದಿ.. Cricket News: ರೋಹಿತ್ ರವರನ್ನು ತೆಗೆದುಹಾಕಿದರೆ, ಅವರ ಸ್ಥಾನವನ್ನು ಸಮರ್ಥವಾಗಿ ತುಂಬುವ ಆಟಗಾರರು ಯಾರ್ಯಾರು ಗೊತ್ತೇ??
ಮನಿಷ್ ಪಾಂಡೆ (Manish Pandey) :- ಇವರು ಕೆರಿಯರ್ ನ ಆರಂಭದಲ್ಲಿ ಅತ್ಯುತ್ತಮವಾಗಿ ಆಡಿದ್ದಾರೆ. ಐಪಿಎಲ್ (IPL) ನಲ್ಲಿ ಅತಿಚಿಕ್ಕ ವಯಸ್ಸಿಗೆ ಶತಕ ಸಿಡಿಸಿದ ಬ್ಯಾಟ್ಸ್ಮನ್ ಎನ್ನಿಸಿಕೊಂಡಿದ್ದರು ಮನಿಷ್ ಪಾಂಡೆ. ಆದರೆ 2022ರ ಐಪಿಎಲ್ ನಲ್ಲಿ ಇವರು ಉತ್ತಮ ಪ್ರದರ್ಶನ ನೀಡಲಿಲ್ಲ. 6 ಪಂದ್ಯಗಳಲ್ಲಿ ಕೇವಲ 88 ರನ್ಸ್ ಗಳಿಸಿದರು. ಪ್ರಸ್ತುತ ಇವರು ಫಾರ್ಮ್ ನಲ್ಲಿಲ್ಲ. ಹಾಗಾಗಿ ಮನಿಷ್ ಪಾಂಡೆ ಅವರು 1 ಕೋಟಿ ಇಂದ ತಮ್ಮ ಬೇಸ್ ಪ್ರೈಸ್ ಅನ್ನು 50 ಲಕ್ಷಕ್ಕೆ ಇಳಿಸಿದ್ದಾರೆ.
ಗೇಲ್ ಜೆಮಿಸನ್ (Kyle Jamieson) :- ನ್ಯೂಜಿಲೆಂಡ್ ತಂಡದ ವೇಗಿ ಗೇಲ್ ಅವರು 2021ರ ಐಪಿಎಲ್ ನಲ್ಲಿ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದರು. ಇವರ ಎಕಾನಮಿ 9.60 ಇತ್ತು. ಹಾಗಾಗಿ ಇವರನ್ನು ಖರೀದಿ ಮಾಡಲು ಹೆಚ್ಚು ಜನರು ಬಯಸಿದ್ದರು. ಈ ವರ್ಷ ಗೇಲ್ ಜೆಮಿಸನ್ ಅವರು, ತಮ್ಮ ಬೇಸ್ ಪ್ರೈಸ್ ಅನ್ನು ಕಡಿಮೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಇದನ್ನು ಓದಿ..Cricket News: ಬಿಗ್ ನ್ಯೂಸ್: ಬಾಂಗ್ಲಾ ಸೋಲಿನ ನಂತರ ನಾಯಕತ್ವ ಕಳೆದುಕೊಳ್ಳಲಿದ್ದಾರೆಯೇ ರೋಹಿತ್: ನಾಲ್ಕು ಆಟಗಾರರು ನಾಯಕನ ರೇಸ್ ನಲ್ಲಿ. ಯಾರ್ಯಾರು ಗೊತ್ತೆ?
ಮಯಾಂಕ್ ಅಗರ್ವಾಲ್ :- ಕರ್ನಾಟಕದವರಾದ (Mayank Agarwal) ಮಯಾಂಕ್, ಪಂಜಾಬ್ ತಂಡಕ್ಕಾಗಿ 2019, 2020 ಮತ್ತು 2021ರಲ್ಲಿ ಆಡಿದ್ದಾರೆ. ಪಂಜಾಬ್ ತಂಡಕ್ಕಾಗಿ ಅತ್ಯುತ್ತಮ ಪ್ರದರ್ಶನ ನೀಡಿದ ಕಾರಣ, ಮಯಾಂಕ್ ಅವರಿಗೆ ತಂಡದ ನಾಯಕನಾಗಿ ಆಯ್ಕೆಮಾಡಲಾಯಿತು. ಆವರೆಗೂ ನಾಯಕನಾಗಿ ಅನುಭವ ಇಲ್ಲದ ಮಯಾಂಕ್ ಅವರು, ಅನುಭವ ಇಲ್ಲದೆ, ಎಡವಿದರು. ಫಾರ್ಮ್ ಕಳೆದುಕೊಂಡರು, ನಾಯಕನಾಗಿ 13 ಪಂದ್ಯಗಳಲ್ಲಿ ಕೇವಲ 196 ರನ್ಸ್ ಗಳಿಸಿದರು. ಇದರಿಂದ ಇವರಿಗೆ ಎರಡನೇ ಅವಕಾಶ ಕೊಡದೆ ಪಂಜಾಬ್ ತಂಡ ರಿಲೀಸ್ ಮಾಡಿದ್ದು, ತಮ್ಮ ಬೇಸ್ ಪ್ರೈಸ್ ಅನ್ನು 1 ಕೋಟಿಗೆ ಇಳಿಸಿ ಐಪಿಎಲ್ ಹರಾಜಿಗೆ ಬರುತ್ತಿದ್ದಾರೆ ಮಯಾಂಕ್ ಅಗರ್ವಾಲ್.