Cricket News: ಬಿಗ್ ನ್ಯೂಸ್: ಬಾಂಗ್ಲಾ ಸೋಲಿನ ನಂತರ ನಾಯಕತ್ವ ಕಳೆದುಕೊಳ್ಳಲಿದ್ದಾರೆಯೇ ರೋಹಿತ್: ನಾಲ್ಕು ಆಟಗಾರರು ನಾಯಕನ ರೇಸ್ ನಲ್ಲಿ. ಯಾರ್ಯಾರು ಗೊತ್ತೆ?

Cricket News: ಬಿಗ್ ನ್ಯೂಸ್: ಬಾಂಗ್ಲಾ ಸೋಲಿನ ನಂತರ ನಾಯಕತ್ವ ಕಳೆದುಕೊಳ್ಳಲಿದ್ದಾರೆಯೇ ರೋಹಿತ್: ನಾಲ್ಕು ಆಟಗಾರರು ನಾಯಕನ ರೇಸ್ ನಲ್ಲಿ. ಯಾರ್ಯಾರು ಗೊತ್ತೆ?

Cricket News: ಟೀಮ್ ಇಂಡಿಯಾದ (Team India) ಮೂರು ವಿಭಾಗದ ಪಂದ್ಯಗಳ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಬಹಳ ಕಷ್ಟದ ಸಮಯ ಎದುರಿಸುತ್ತಿದ್ದಾರೆ. ಸಾಲು ಸಾಲು ಸಾಲುಗಳನ್ನು ಅನುಭಾವಿಸುತ್ತಿದ್ದಾರೆ. ಏಷ್ಯಾಕಪ್ (Asiacup), ಟಿ20 ವರ್ಲ್ಡ್ ಕಪ್ (T20 World Cup) ಈಗ ಬಾಂಗ್ಲಾದೇಶ್ (India vs Bangladesh) ವಿರುದ್ಧದ ಸೀರೀಸ್ ಹೀಗೆ ಪದೇ ಪದೇ ಸೋಲು ಮಾಡುತ್ತಿರುವುದರಿಂದ, ರೋಹಿತ್ ಶರ್ಮ (Rohit Sharma) ಅವರನ್ನು ಕ್ಯಾಪ್ಟನ್ಸಿ ಇಂದ ಕೆಳಗಿಳಿಸಬೇಕು ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರೋಹಿತ್ ಅವರ ಮೇಲೆ ಒತ್ತಡ ಹೆಚ್ಚಾಗುತ್ತಿರುವುದಂತೂ ನಿಜ, ಆದರೆ ಓಡಿಐ ವರ್ಲ್ಡ್ ಕಪ್ (ODI World Cup) ಗೆ ಇನ್ನು ಕೆಲವೇ ತಿಂಗಳುಗಳು ಇರುವಾಗ ನಾಯಕನನ್ನು ಬದಲಾವಣೆ ಮಾಡಿದರೆ, ಐಸಿಸಿ ಟ್ರೋಫಿ (ICC Trophy) ಗೆಲ್ಲುವ ಮತ್ತೊಂದು ಕನಸು ಭಗ್ನವಾಗುತ್ತದೆ. ಹಾಗಾಗಿ ಏಕದಿನ ವಿಶ್ವಕಪ್ ಗಿಂತ ಮೊದಲು ಅಥವಾ ನಂತರ ನಾಯಕ ಬದಲಾಗುವ ಸಾಧ್ಯತೆ ಇದೆ. ರೋಹಿತ್ ಶರ್ಮಾ ಅವರು ನಾಯಕತ್ವ ವಹಿಸಿಕೊಳ್ಳಬಹುದಾದ ಆಟಗಾರರು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ.

ಶ್ರೇಯಸ್ ಅಯ್ಯರ್ (Shreyas Iyer) :- ಓಡಿಐ ತಂಡದ ಕ್ಯಾಪ್ಟನ್ ಆಗಲು ಮೊದಲ ಆಯ್ಕೆ ಶ್ರೇಯಸ್ ಅಯ್ಯರ್ ಆಗಿರುತ್ತಾರೆ. ಏಕೆಂದರೆ ಪ್ರಸ್ತುತ 50 ಓವರ್ ಗಳ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಶ್ರೇಯಸ್ ಅಯ್ಯರ್ ಅವರು, ನಂಬಿಕೆ ಉಳಿಸಿಕೊಂಡಿರುವ ಬ್ಯಾಟ್ಸ್ಮನ್ ಆಗಿದ್ದಾರೆ. ಮೊದಲಿಗೆ ಐಪಿಎಲ್ (IPL) ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ಕ್ಯಾಪ್ಟನ್ ಆಗಿ ನಾಯಕತ್ವ ನಡೆಸಿದ್ದ, ಪ್ರಸ್ತುತ ಕೊಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ತಂಡದ ಕ್ಯಾಪ್ಟನ್ ಆಗಿದ್ದು, ಶ್ರೇಯಸ್ ಅಯ್ಯರ್ ಅವರು ಓಡಿಐ ತಂಡದ ಕ್ಯಾಪ್ಟನ್ ಆಗಲು ಒಳ್ಳೆಯ ಆಯ್ಕೆ ಆಗಿದ್ದಾರೆ. ಇದನ್ನು ಓದಿ..Cricket News: ಬಾಂಗ್ಲಾ ದೇಶದ ವಿರುದ್ಧ ಸರಣಿ ಸೋತ ಭಾರತಕ್ಕೆ ಸ್ಪಷ್ಟ ಎಚ್ಚರಿಕೆ ಕೊಟ್ಟ ವೀರೇಂದ್ರ ಸೆಹ್ವಾಗ್ ಹೇಳಿದ್ದೇನು ಗೊತ್ತೇ?? ನಿಜಕ್ಕೂ ಭಾರತ ಈ ಹಂತಕ್ಕೆ ತಲುಪಿದೆಯೇ?

ಹಾರ್ದಿಕ್ ಪಾಂಡ್ಯ (Hardik Pandya) :- ಪ್ರಸ್ತುತ ಟಿ20 ತಂಡದ ಕ್ಯಾಪ್ಟನ್ ಆಯ್ಕೆಯಾಗಲು ಪ್ರಮುಖ ಆಯ್ಕೆಯಾಗಿ ಇರುವುದು ಹಾರ್ದಿಕ್ ಪಾಂಡ್ಯ ಅವರು. ಈಗಾಗಲೇ ಟಿ20 ತಂಡಡ್ಸ್ ಕ್ಯಾಪ್ಟನ್ ಆಗಿ ಹಾರ್ದಿಕ್ ಪಾಂಡ್ಯ ಅವರೇ ಆಯ್ಕೆಯಾಗುತ್ತಾರೆ ಎನ್ನಲಾಗುತ್ತಿದ್ದು, ಹಾರ್ದಿಕ್ ಪಾಂಡ್ಯ ಅವರಿಗೆ ಇರುವುದು ಫಿಟ್ನೆಸ್ ಸಮಸ್ಯೆ, ಫಿಟ್ನೆಸ್ ಬಗ್ಗೆ ಪಾಂಡ್ಯ ಅವರು ಕಷ್ಟಪಡುತ್ತಿದ್ದಾರೆ. ಪಾಂಡ್ಯ ಅವರು 12 ತಿಂಗಳಿಗಿಂತ ಹೆಚ್ಚಿನ ಸಮಯದಿಂದ ಯಾವುದೇ ಇಂಜುರಿಗೆ ಒಳಗಾಗಿಲ್ಲ. ಹಾಗಾಗಿ ಅದೊಂದು ಸಮಸ್ಯೆಯನ್ನು ಸರಿಮಾಡಿಕೊಂಡರೆ, ಓಡಿಐ ತಂಡಕ್ಕೂ ಇವರೇ ಕ್ಯಾಪ್ಟನ್ ಆಗುವುದು ಖಂಡಿತ.

ರಿಷಬ್ ಪಂತ್ (Rishab Pant) :- ಇವರು ಓಡಿಐ ತಂಡದ ಕ್ಯಾಪ್ಟನ್ ಆಗಬಹುದಾದ ಪ್ರಮುಖ ಸ್ಪರ್ಧಿ. ಪ್ರಸ್ತುತ ಇವರು ಫಾರ್ಮ್ ನಲ್ಲಿಲ್ಲ, ಆದರೆ ರಿಷಬ್ ಪಂತ್ ಅವರು ಬ್ಯಾಟಿಂಗ್ ನಲ್ಲಿ ಫಾರ್ಮ್ ಗೆ ಮರಳಿದರೆ, ಓಡಿಐ ತಂಡದ ಕ್ಯಾಪ್ಟನ್ ಆಗುವ ಪ್ರಮುಖ ಸ್ಪರ್ಧಿ ಆಗಿರುತ್ತಾರೆ. ಇವರು ಓಡಿಐ ತಂಡದ ಕ್ಯಾಪ್ಟನ್ ಆಗಿ ಜವಾಬ್ದಾರಿ ನಿಭಾಯಿಸುವಲ್ಲಿ ಯಶಸ್ವಿಯಾಗುತ್ತಾರೆ.. ಇದನ್ನು ಓದಿ.. Cricket News: ಬಿಗ್ ನ್ಯೂಸ್: ಬಾಂಗ್ಲಾ ವಿರುದ್ಧ ಸರಣಿ ಸೋತ ತಕ್ಷಣ ಪ್ರತಿಕ್ರಿಯೆ ನೀಡಿದ ಬಿಸಿಸಿಐ. ರೋಹಿತ್ ವಿರುದ್ಧ ಗರಂ ಆಗಿ ಹೇಳಿದ್ದೇನು ಗೊತ್ತೆ?

ಕೆ.ಎಲ್.ರಾಹುಲ್ (K L Rahul) :- ಪ್ರಸ್ತುತ ಇವರು ಟೀಮ್ ಇಂಡಿಯಾದ ವೈಸ್ ಕ್ಯಾಪ್ಟನ್ ಆಗಿದ್ದು, ಓಡಿಐ ತಂಡದ ಕ್ಯಾಪ್ಟನ್ ಆಗಲು ಅರ್ಹರಾದ ಸ್ಪರ್ಧಿ ಆಗುತ್ತಾರೆ. ಆದರೆ ಕೆ.ಎಲ್.ರಾಹುಲ್ ಅವರು ಪ್ರಸ್ತುತ ಒಳ್ಳೆಯ ಫಾರ್ಮ್ ನಲ್ಲಿಲ್ಲ, ಹಾಗಾಗಿ ಸ್ಥಿರವಾದ ಪ್ರದರ್ಶನ ನೀಡಿ ಸಾಬೀತುಮಾಡಿಕೊಂಡರೆ, ಇವರು ಓಡಿಐ ತಂಡದ ಕ್ಯಾಪ್ಟನ್ ಆಗುವ ಅವಕಾಶ ಇವರಿಗೆ ಸಿಗಬಹುದು..