Cricket News: ಬಿಗ್ ನ್ಯೂಸ್: ಬಾಂಗ್ಲಾ ವಿರುದ್ಧ ಸರಣಿ ಸೋತ ತಕ್ಷಣ ಪ್ರತಿಕ್ರಿಯೆ ನೀಡಿದ ಬಿಸಿಸಿಐ. ರೋಹಿತ್ ವಿರುದ್ಧ ಗರಂ ಆಗಿ ಹೇಳಿದ್ದೇನು ಗೊತ್ತೆ?

Cricket News: ಬಿಗ್ ನ್ಯೂಸ್: ಬಾಂಗ್ಲಾ ವಿರುದ್ಧ ಸರಣಿ ಸೋತ ತಕ್ಷಣ ಪ್ರತಿಕ್ರಿಯೆ ನೀಡಿದ ಬಿಸಿಸಿಐ. ರೋಹಿತ್ ವಿರುದ್ಧ ಗರಂ ಆಗಿ ಹೇಳಿದ್ದೇನು ಗೊತ್ತೆ?

Cricket News: ಭಾರತ ಕ್ರಿಕೆಟ್ ತಂಡ (Team India) ಟಿ20 ವಿಶ್ವಕಪ್ (T20 World Cup) ಸೆಮಿ ಫೈನಲ್ಸ್ ನಲ್ಲಿ ಸೋಲು ಕಂಡಿತು, ನಂತರ ನ್ಯೂಜಿಲೆಂಡ್ (India vs New Zealand) ವಿರುದ್ಧದ ಓಡಿಐ ಸರಣಿ, ಈಗ ಬಾಂಗ್ಲಾದೇಶ್ ವಿರುದ್ಧದ ಓಡಿಐ ಸರಣಿಯಲ್ಲಿ ಸತತವಾಗಿ ಸೋಲು ಕಂಡಿದೆ. ಬಾಂಗ್ಲಾದೇಶ್ (India vs Bangladesh) ವಿರುದ್ಧದ ಓಡಿಐ ನಲ್ಲಿ ವೈಟ್ ವಾಶ್ ಆಗುವ ಸಾಧ್ಯತೆಗಳೇ ಹೆಚ್ಚಿದೆ, ಸೋಲಿನ ಸಾರಮಾಲೆ ಭಾರತ ತಂಡವನ್ನು ಬಿಡುತ್ತಿಲ್ಲ. ಇದರಿಂದ ಭಾರತದ ಅಭಿಮಾನಿಗಳಿಗೆ ಮಾತ್ರವಲ್ಲ, ಬಿಸಿಸಿಐಗೆ (BCCI) ಕೂಡ ನಿರಾಸೆಯಾಗಿದ್ದು, ಇದೀಗ ತಂಡದ ಕುರಿತು ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಕ್ರಮ ಕೈಗೊಂಡಿದೆ ಬಿಸಿಸಿಐ.

ಬಾಂಗ್ಲಾದೇಶ್ ಸರಣಿ ಮುಗಿಸಿ ವಾಪಸ್ ಬಂದ ನಂತರ ಸಭೆ ನಡೆಸಲಿದ್ದು, ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma), ವಿರಾಟ್ ಕೊಹ್ಲಿ (Virat Kohli), ಹೆಡ್ ಕೋಚ್ ರಾಹುಲ್ ದ್ರಾವಿಡ್ (Rahul Dravid) ಮತ್ತು ವಿವಿಎಸ್ ಲಕ್ಷ್ಮಣ್ (VVS Lakshman) ಅವರಿಗೆ ಸಭೆಯ ಆಮಂತ್ರಣ ನೀಡಲಾಗಿದೆಯಂತೆ. ಇದರ ಬಗ್ಗೆ ಮಾತನಾಡಿರುವ ಬಿಸಿಸಿಐ ಅಧಿಕಾರಿ, “ಬಿಸಿಸಿಐ ನ ಕೆಲವು ಅಧಿಕಾರಿಗಳು ಇನ್ನಿತರ ಕೆಲಸಗಳಲ್ಲಿ ಬ್ಯುಸಿ ಇದ್ದ ಕಾರಣ, ಬಾಂಗ್ಲಾದೇಶ್ ಪ್ರವಾಸಕ್ಕೆ ಹೋಗುವುದಕ್ಕಿಂತ ಮೊದಲು, ತಂಡವನ್ನು ಮೀಟ್ ಮಾಡಲು ಆಗಲಿಲ್ಲ. ಆದರೆ ಅಲ್ಲಿಂದ ವಾಪಸ್ ಬಂದ ನಂತರ, ನಾವು ತಂಡದ ಮುಖ್ಯ ವ್ಯಕ್ತಿಗಳ ಜೊತೆಗೆ ಸಭೆ ನಡೆಸಲಿದ್ದೇವೆ. ಬಾಂಗ್ಲಾದೇಶ್ ಪ್ರವಾಸದ ಪಂದ್ಯದಲ್ಲಿ ಟೀಮ್ ಇಂಡಿಯಾ ನೀಡಿದ್ದು ಮುಜುಗರದ ಪ್ರದರ್ಶನ ಆಗಿದೆ. ಇದನ್ನು ನಾವು ನಿರೀಕ್ಷೆ ಮಾಡಿರಲಿಲ್ಲ..” ಎಂದು ಹೇಳಿದ್ದಾರೆ. ಇದನ್ನು ಓದಿ..Cricket News: ಒಂದು ಕಡೆ ಬಾಂಗ್ಲಾ ವಿರುದ್ಧ ಹೀನಾಯ ಸೋಲಿನ ಬೆನ್ನಲ್ಲೇ ಭಾರತಕ್ಕೆ ಮೂರು ಶಾಕ್: ಎತ್ತ ಸಾಗುತ್ತಿದೆ ಭಾರತ ತಂಡ?

ಈ ಮೂಲಕ ಬಿಸಿಸಿಐ ಗು ಭಾರತ ತಂಡದ ಪ್ರದರ್ಶನ ಇಷ್ಟವಾಗಿಲ್ಲ ಎಂದು ತಿಳಿದುಬಂದಿದೆ. ಹಲವು ಬದಲಾವಣೆಗಳನ್ನು ತರಲು ಮುಂದಾಗಿದೆ ಬಿಸಿಸಿಐ, ಮುಂದಿನ ವರ್ಷ ಶ್ರೀಲಂಕಾ (India vs Srilanka) ವಿರುದ್ಧ ನಡೆಯಲಿರುವ ಸರಣಿಯಲ್ಲಿ ರೋಹಿತ್ ಶರ್ಮಾ ಅವರ ಬದಲಾಗಿ ಹಾರ್ದಿಕ್ ಪಾಂಡ್ಯ (Hardik Pandya) ಅವರಿಗೆ ಕ್ಯಾಪ್ಟನ್ಸಿ ನೀಡಬೇಕು ಎನ್ನಲಾಗುತ್ತಿದೆ. ವೈಟ್ ಬಾಲ್ ಮತ್ತು ರೆಡ್ ಬಾಲ್ ಕ್ರಿಕೆಟ್ ಗೆ ಬೇರೆ ಬೇರೆ ಕೋಚ್ ಇಡಬೇಕು ಎಂದು ಯೋಜನೆ ಮಾಡಲಾಗಿದೆ. ಇಷ್ಟೇ ಅಲ್ಲದೆ, ಇನ್ನು ಪ್ರಮುಖ ಬದಲಾವಣೆಗಳು ಆಗಲಿದ್ದು, 2023ರ ಓಡಿಐ ವಿಶ್ವಕಪ್ (ODI World Cup) ಗೆ ರೋಹಿತ್ ಶರ್ಮಾ ಅವರೇ ಕ್ಯಾಪ್ಟನ್ ಆಗಿ ಮುಂದುವರೆಯಲಿದ್ದು, ಆಯ್ಕೆ ಸಮಿತಿ ಬದಲಾಯಿಸುವ ಕಡೆಗೆ ಗಮನ ಹರಿಸಿದೆ ಬಿಸಿಸಿಐ. ಇದನ್ನು ಓದಿ..Cricket News: ಬಾಂಗ್ಲಾ ದೇಶದ ವಿರುದ್ಧ ಸರಣಿ ಸೋತ ಭಾರತಕ್ಕೆ ಸ್ಪಷ್ಟ ಎಚ್ಚರಿಕೆ ಕೊಟ್ಟ ವೀರೇಂದ್ರ ಸೆಹ್ವಾಗ್ ಹೇಳಿದ್ದೇನು ಗೊತ್ತೇ?? ನಿಜಕ್ಕೂ ಭಾರತ ಈ ಹಂತಕ್ಕೆ ತಲುಪಿದೆಯೇ?