IPL 2023: ಕೋಟಿ ಕೋಟಿಗೆ ಸೇಲ್ ಆಗುತ್ತಿದ್ದ ಈ ಟಾಪ್ 5 ಆಟಗಾರರು ಈ ಬಾರಿ ಮಾರಾಟವಾಗದೆ ಉಳಿಯಬಹುದು. ಯಾರು ಗೊತ್ತೆ??
IPL 2023: ಕೋಟಿ ಕೋಟಿಗೆ ಸೇಲ್ ಆಗುತ್ತಿದ್ದ ಈ ಟಾಪ್ 5 ಆಟಗಾರರು ಈ ಬಾರಿ ಮಾರಾಟವಾಗದೆ ಉಳಿಯಬಹುದು. ಯಾರು ಗೊತ್ತೆ??
IPL 2023: 2023ರ ಐಪಿಎಲ್ (IPL 16) 16 ಆಕ್ಷನ್ ಗೆ ದಿನಗಣನೆ ಶುರುವಾಗಿದೆ. ಡಿಸೆಂಬರ್ 23ರಂದು ಕೇರಳದ ಕೊಚ್ಚಿಯಲ್ಲಿ ಐಪಿಎಲ್ ಹರಾಜು (IPL Auction) ಪ್ರಕ್ರಿಯೆ ನಡೆಯಲಿದ್ದು, 991 ಆಟಗಾರರು ಇದಕ್ಕಾಗಿ ಹೆಸರು ನೀಡಿದ್ದಾರೆ. ಅವರಲ್ಲಿ 600 ಆಟಗಾರರು ಹರಾಜಿಗೆ ಬರುವ ಸೂಚನೆ ಇದೆ. ಇವರಲ್ಲಿ ಸುಮಾರು 21 ಆಟಗಾರರು ತಮ್ಮ ಬೇಸ್ ಪ್ರೈಸ್ 2 ಕೋಟಿ ಇಟ್ಟಿದ್ದಾರೆ. ಅವರಲ್ಲಿ ಕೆಲವು ಆಟಗಾರರು ತಮ್ಮ ಬೇಸ್ ಪ್ರೈಸ್ ಗಿಂತ ಹೆಚ್ಚು ಹಣಕ್ಕೆ ಮಾರಾಟವಾಗಬಹುದು, ಇನ್ನು ಕೆಲವು ಬಹುನಿರೀಕ್ಷಿತ ಟಾಪ್ 5 ಆಟಗಾರರು, ಮಾರಾಟವಾಗದೆ ಹೋಗಬಹುದು. ಅಂತಹ ಐದು ಆಟಗಾರರ ಬಗ್ಗೆ ಇಂದು ತಿಳಿಸುತ್ತೇವೆ ನೋಡಿ..
ಕೇನ್ ವಿಲಿಯಮ್ಸನ್ (Kane Williamson) :- ಇವರು ನ್ಯೂಜಿಲೆಂಡ್ (New Zealand) ತಂಡದ ಆಟಗಾರ. ಐಪಿಎಲ್ ಆಕ್ಷನ್ ಗೆ 2023ರಲ್ಲಿ ತಮ್ಮ ಬೇಸ್ ಪ್ರೈಸ್ ಅನ್ನು 2 ಕೋಟಿ ಇಟ್ಟಿದ್ದಾರೆ, ಇವರನ್ನು ಇತ್ತೀಚೆಗೆ ಸನ್ ರೈಸರ್ಸ್ ಹೈದರಾಬಾದ್ (Sun Risers Hyderabad) ತಂಡ ಇವರನ್ನು ರಿಲೀಸ್ ಮಾಡಿತ್ತು. ಏಕೆಂದರೆ 2022ರ ಐಪಿಎಲ್ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಆಯ್ಕೆಯಾಗಿದ್ದ ಇವರು, ಉತ್ತಮ ಪ್ರದರ್ಶನ ನೀಡಲಿಲ್ಲ, 13 ಪಂದ್ಯಗಳಲ್ಲಿ 216 ರನ್ಸ್ ಮಾತ್ರವೇ ಗಳಿಸಿದರು. ಇವರು ಒಳ್ಳೆಯ ಫಾರ್ಮ್ ನಲ್ಲಿ ಇಲ್ಲದೆ ಇರುವುದರಿಂದ ಮಾರಾಟ ಆಗುವುದು ಕಷ್ಟವಾಗಿದೆ.
ಟೈಮಲ್ ಮಿಲ್ಸ್ (Tymal Mills) :- ಇಂಗ್ಲೆಂಡ್ (England) ತಂಡದ ಈ ಬೌಲರ್ ಈ ವರ್ಷ ಐಪಿಎಲ್ ಆಕ್ಷನ್ ಗೆ 2 ಕೋಟಿ ಬೇಸ್ ಪ್ರೈಸ್ ಇಟ್ಟಿದ್ದಾರೆ. ಕಳೆದ ವರ್ಷ ಮುಂಬೈ ಇಂಡಿಯನ್ಸ್ (Mumbai Indians) ತಂಡದ ಪರವಾಗಿ ಆಡಿದ ಇವರು ಐದು ಪಂದ್ಯಗಳಲ್ಲಿ ಕೇವಲ 6 ವಿಕೆಟ್ಸ್ ಪಡೆದಿದ್ದಾರೆ, ಹಾಗೆಯೇ ಹಾಗೂ ಇವರ ಎಕಾನಮಿ 11ರ ಮೇಲಿದ್ದ ಕಾರಣ ಪಂದ್ಯಗಳಿಂದಲೇ ಇವರನ್ನು ಹೊರಹಾಕಲಾಗಿತ್ತು, ಹಾಗಾಗಿ ಈ ವರ್ಷ ಇವರು ಆಕ್ಷನ್ ನಲ್ಲಿ ಮಾರಾಟ ಆಗದೆ ಇರುವ ಸಂಭವವೇ ಹೆಚ್ಚಾಗಿದೆ.
ಕ್ರಿಸ್ ಲಿನ್ (Chris Lynn) :- ಆಸ್ಟ್ರೇಲಿಯಾ (Australia) ತಂಡದ ಈ ಓಪನಿಂಗ್ ಬ್ಯಾಟ್ಸ್ಮನ್, ಕಳೆದ ವರ್ಷ ಐಪಿಎಲ್ ನಲ್ಲಿ ಆಡಿರಲಿಲ್ಲ. 2021ರಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ತಂಡದ ಪರವಾಗಿ ಕೇವಲ 1 ಪಂದ್ಯ ಆಡಿದ್ದರು. ಇದ್ದಕ್ಕಿದ್ದ ಹಾಗೆ ಆಸ್ಟ್ರೇಲಿಯಾ ತಂಡದಿಂದ ಕೂಡ ಹೊರಬಂದಿದ್ದರು. ಹಾಗಾಗಿ ಇವರು ಇಂಟರ್ನ್ಯಾಷನಲ್ ಪಂದ್ಯಗಳಲ್ಲಿ ಆಕ್ಟಿವ್ ಆಗಿಲ್ಲ. ಈ ವರ್ಷ ಐಪಿಎಲ್ ನಲ್ಲಿ ತಮ್ಮ ಬೇಸ್ ಪ್ರೈಸ್ 1 ಕೋಟಿ ಇಟ್ಟಿದ್ದು, ಇವರು ಮಾರಾಟ ಆಗದೇ ಹೋಗಬಹುದು.
ನಥನ್ ಕೌಲ್ಟರ್ ನೈಲ್ (Nathan Coulter Nile) :- ನೈಲ್ ಅವರು ಅಸ್ಟ್ರೇಲಿಯಾದ (Australia) ಬೌಲರ್ ಆಗಿದ್ದಾರೆ, ಇವರು ಕಳೆದ ವರ್ಷ ರಾಜಸ್ತಾನ್ ರಾಯಲ್ಸ್ (Rajasthan Royals) ತಂಡದ ಪರವಾಗಿ ಆಡಿದರು. ಒಂದೇ ಒಂದು ಪಂದ್ಯ ಆಡಿದ ನಂತರ ಇಂಜುರಿ ಆದ ಕಾರಣ, ಇವರನ್ನು ತಂಡದಿಂದ ರಿಲೀಸ್ ಮಾಡಲಾಯಿತು. ಈ ವರ್ಷದ ಆಕ್ಷನ್ ಗೆ ತಮ್ಮ ಬೇಸ್ ಪ್ರೈಸ್ 2 ಕೋಟಿ ಇಟ್ಟಿದ್ದು, ಇವರು ಅಷ್ಟು ಹಣಕ್ಕೆ ಮಾರಾಟ ಆಗುತ್ತಾರಾ ಎಂದು ಕಾದು ನೋಡಬೇಕಿದೆ.
ಆಂಜೆಲೋ ಮ್ಯೂಥಿಯೂಸ್ (Angelo Mathews) :- ಇವರು ಶ್ರೀಲಂಕಾ (Srilanka) ಆಟಗಾರ, 2017ರ ನಂತರ ಇವರು ಐಪಿಎಲ್ ಪಂದ್ಯಗಳಲ್ಲಿ ಆಡಿಲ್ಲ. 2017ರಲ್ಲು ಇವರು ಆಡಿದ್ದು ಕೇವಲ 3 ಪಂದ್ಯಗಳು. ಈಗ ಇವರು 2 ಕೋಟಿ ಬೇಸ್ ಹಣ ಇಟ್ಟಿದ್ದು, ಇವರನ್ನು ಖರೀದಿ ಮಾಡುತ್ತಾರಾ ಎಂದು ಕಾದು ನೋಡಬೇಕಿದೆ.