Cricket News: ಒಂದು ಕಡೆ ಬಾಂಗ್ಲಾ ವಿರುದ್ಧ ಹೀನಾಯ ಸೋಲಿನ ಬೆನ್ನಲ್ಲೇ ಭಾರತಕ್ಕೆ ಮೂರು ಶಾಕ್: ಎತ್ತ ಸಾಗುತ್ತಿದೆ ಭಾರತ ತಂಡ?

Cricket News: ಒಂದು ಕಡೆ ಬಾಂಗ್ಲಾ ವಿರುದ್ಧ ಹೀನಾಯ ಸೋಲಿನ ಬೆನ್ನಲ್ಲೇ ಭಾರತಕ್ಕೆ ಮೂರು ಶಾಕ್: ಎತ್ತ ಸಾಗುತ್ತಿದೆ ಭಾರತ ತಂಡ?

Cricket News: ಇಂಡಿಯಾ ವರ್ಸಸ್ ಬಾಂಗ್ಲಾದೇಶ್ (India vs Bangladesh) ಓಡಿಐ ಸೀರೀಸ್ ನ ಎರಡನೇ ಪಂದ್ಯದಲ್ಲೂ ಭಾರತ ತಂಡ ಸೋತಿದೆ. ಭಾರತದ ಬೌಲಿಂಗ್ ಪ್ರದರ್ಶನ ಚೆನ್ನಾಗಿ ಶುರುವಾಯಿತು, 69 ರನ್ಸ್ ಗೆ 6 ವಿಕೆಟ್ಸ್ ಕಳೆದುಕೊಂಡಿತ್ತು ಬಾಂಗ್ಲಾದೇಶ್, ಆದರೆ ಮೆಹೆದಿ ಮತ್ತು ಮಹಮದ್ದುಲ್ಲ ಇಬ್ಬರು ಪಂದ್ಯವನ್ನು 271/7 ಸ್ಕೋರ್ ಗೆ ತೆಗೆದುಕೊಂಡು ಹೋದರು. ಭಾರತದ ಬ್ಯಾಟಿಂಗ್ ನಲ್ಲಿ ರೋಹಿತ್ ಶರ್ಮಾ (Rohit Sharma) ಅವರ ಧೈರ್ಯವನ್ನು ಮೆಚ್ಚಲೇಬೇಕು, ಕೈಗೆ ಇಂಜುರಿ ಆಗಿದ್ದರು ಕೂಡ ಮೈದಾನಕ್ಕೆ ಬಂದು ಬ್ಯಾಟಿಂಗ್ ಮಾಡಿ, ಉತ್ತಮ ಪ್ರದರ್ಶನ ನೀಡಿದರು. ಆದರೆ 2ನೇ ಪಂದ್ಯದ ಸೋಲಿನ ಬೆನ್ನಲ್ಲೆ ಈಗ ಭಾರತ ತಂಡಕ್ಕೆ ಒಂದು ದೊಡ್ಡ ಶಾಕ್ ಸಿಕ್ಕಿದೆ. ಮೂರು ಆಟಗಾರರು ಮುಂದಿನ ಪಂದ್ಯದಿಂದ ಹೊರಗುಳಿಯಲಿದ್ದಾರೆ.

ಕುಲದೀಪ್ ಸೇನ್ (Kuldeep Sen), ದೀಪಕ್ ಚಹರ್ (Deepak Chahar) ಮತ್ತು ರೋಹಿತ್ ಶರ್ಮಾ ಮೂವರು ಕೂಡ ಮುಂದಿನ ಪಂದ್ಯದಿಂದ ಹೊರಗುಳಿಯಬಹುದು ಎನ್ನಲಾಗುತ್ತಿದೆ. ಇದರ ಬಗ್ಗೆ ಹೆಡ್ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರು ಹೇಳಿದ್ದು ಹೀಗೆ, “ಕುಲದೀಪ್, ದೀಪಕ್ ಮತ್ತು ರೋಹಿತ್ ಮೂವರು ಖಂಡಿತವಾಗಿ ಮುಂದಿನ ಪಂದ್ಯದಿಂದ ಹೊರಗುಳಿಯುತ್ತಾರೆ, ಕುಲದೀಪ್ ಮತ್ತು ದೀಪಕ್ ಸೀರೀಸ್ ಇಂದ ಹೊರಗುಳಿಯುತ್ತಾರೆ ಎಂದು ಅನ್ನಿಸುತ್ತದೆ. ರೋಹಿತ್ ಖಂಡಿತವಾಗಿ ಮುಂದಿನ ಪಂದ್ಯದಿಂದ ಹೊರಗಿರುತ್ತಾರೆ, ಮುಂಬೈ (Mumbai) ಗೆ ಎಕ್ಸ್ಪರ್ಟ್ ಕನ್ಸಲ್ಟ್ ಮಾಡಿ, ಅವರ ಇಂಜುರಿ ಬಗ್ಗೆ ಪರೀಕ್ಷೆ ಮಾಡಿಸಬೇಕಿದೆ. ಅವರು ಟೆಸ್ಟ್ ಪಂದ್ಯಗಳಿಗೆ ವಾಪಸ್ ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಅದನ್ನ ಹೇಳೋದಕ್ಕೆ ಈಗ ಸಮಯ ಅಲ್ಲ. ಮುಂದೆ ಗೊತ್ತಾಗುತ್ತದೆ..” ಎಂದು ಹೇಳಿದ್ದಾರೆ ರಾಹುಲ್ ದ್ರಾವಿಡ್. ಇದನ್ನು ಓದಿ..Cricket News: ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಎನಿಸಿರುವ ಮುಂದಿನ ವಿಶ್ವಕಪ್ ಗೆ ಮೊದಲ ಬೌಲರ್ ಅನ್ನು ಆಯ್ಕೆ ಮಾಡಿದ ಡಿಕೆ: ಈತನೇ ಬೆಸ್ಟ್ ಅಂದಿದ್ದು ಯಾರಿಗೆ ಗೊತ್ತೆ?

“ರೋಹಿತ್ ಗೆ ಗಂಭೀರವಾಗಿ dislocation ಆಗಿತ್ತು, ಕೈಯಲ್ಲಿ ಒಂದೆರಡು ಸ್ಟಿಚ್ ಗಳು, ಇಂಜೆಕ್ಷನ್ಸ್ ಅದೆಲ್ಲ ಇದ್ದರು ಕೂಡ ಅಷ್ಟಮಟ್ಟಗಿನ ಧೈರ್ಯದಿಂದ ಆಡಿದ್ದು ಶ್ಲಾಘನೀಯ. ಎಲ್ಲಾ ಕ್ರೆಡಿಟ್ಸ್ ಅವರಿಗೆ ಹೋಗಬೇಕು. ಇನ್ನಿಂಗ್ಸ್ ಗೆ ಬಹಳ ಹತ್ತಿರಕ್ಕೆ ತಂಡವನ್ನು ತೆಗೆದುಕೊಂಡು ಹೋದರು. ಆ ಧೈರ್ಯ ಅದ್ಭುತವಾಗಿತ್ತು. ಆದರೆ ನಾವು ಕೊನೆಯಲ್ಲಿ ಗೆಲ್ಲಲು ಆಗಲಿಲ್ಲ..” ಎಂದಿದ್ದಾರೆ ರಾಹುಲ್ ದ್ರಾವಿಡ್. ಒಟ್ಟಿನಲ್ಲಿ ಭಾರತ ತಂಡಕ್ಕೆ ಒಂದರ ನಂತರ ಒಂದು ಆಘಾತಗಳು ಎದುರಾಗುತ್ತಲೇ ಇದೆ. ಇದರಿಂದ ತಂಡಕ್ಕೆ ಹಿನ್ನಡೆ ಆಗುವ ಸಾಧ್ಯತೆಗಳು ಹೆಚ್ಚಿದ್ದು, ಮುಂದಿನ ಪಂದ್ಯ ಏನಾಗುತ್ತದೆ ಎಂದು ನೋಡಬೇಕಿದೆ. ಇದನ್ನು ಓದಿ.. Money Business: ಕೇವಲ 50 ಸಾವಿರ ಹೂಡಿಕೆ ಮಾಡಿದರೆ ಲಕ್ಷ ಲಕ್ಷ ಗಳಿಸುವ ಉತ್ತಮ ಬ್ಯುಸಿನೆಸ್ ಐಡಿಯಾ ಯಾವುದು ಗೊತ್ತೇ??