ಕರುನಾಡ ವಾಣಿ
ಇದು ನಿಮ್ಮ ಧ್ವನಿ

Cricket News: ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಎನಿಸಿರುವ ಮುಂದಿನ ವಿಶ್ವಕಪ್ ಗೆ ಮೊದಲ ಬೌಲರ್ ಅನ್ನು ಆಯ್ಕೆ ಮಾಡಿದ ಡಿಕೆ: ಈತನೇ ಬೆಸ್ಟ್ ಅಂದಿದ್ದು ಯಾರಿಗೆ ಗೊತ್ತೆ?

360

Get real time updates directly on you device, subscribe now.

Kannada News: ಪ್ರಸ್ತುತ ಭಾರತ ತಂಡವು (Team India) ಇಂಡಿಯಾ ವಾರ್ಡಸ್ ಬಾಂಗ್ಲಾದೇಶ್ (India vs Bangladesh) ಏಕದಿನ ಸರಣಿ ಪಂದ್ಯಗಳನ್ನು ಆಡುತ್ತಿದೆ. ಬಾಂಗ್ಲಾದೇಶದ ಢಾಕಾ ದ ಶೇರ್ ಬಾಂಗ್ಲಾ ಗ್ರೌಂಡ್ ನಲ್ಲಿ ಡಿಸೆಂಬರ್ 4ರಂದು ನಡೆದ ಮೊದಲ ಪಂದ್ಯದಲ್ಲಿ ಭಾರತ ತಂಡವು ಬಹಳ ಫೈಟ್ ಮಾಡಿ ಸೋತಿತು. ಟಾಸ್ ಸೋತ ಭಾರತ ಮೊದಲು ಬ್ಯಾಟಿಂಗ್ ಮಾಡಿತು, ಆದರೆ ಬ್ಯಾಟಿಂಗ್ ನಲ್ಲಿ ವೈಫಲ್ಯ ಅನುಭವಿಸಿತು. ಬ್ಯಾಟಿಂಗ್ ನಲ್ಲಿ ಮಿಂಚಿದ್ದು ಕೆ.ಎಲ್.ರಾಹುಲ್ (K L Rahul) ಅವರು ಮಾತ್ರ., 73 ರನ್ಸ್ ಗಳಿಸಿದರು. ಒಟ್ಟಾರೆಯಾಗಿ ಭಾರತ ತಂಡ 186ರನ್ಸ್ ಗೆ ಆಲೌಟ್ ಆಯಿತು.

ಇನ್ನು ಬೌಲಿಂಗ್ ನಲ್ಲಿ ಅತ್ಯುತ್ತಮ ಪ್ರದರ್ಶನ ಕಂಡುಬಂದಿತು, ವಿಶೇಷವಾಗಿ ಮೊಹಮ್ಮದ್ ಸಿರಾಜ್ (Mohammad Siraj) ಅವರು 10 ಓವರ್ ಬೌಲಿಂಗ್ ಮಾಡಿ, 32 ರನ್ಸ್ ನೀಡಿ, 3 ವಿಕೆಟ್ಸ್ ಪಡೆದರು. ಇನ್ನುಳಿದ ಬೌಲರ್ ಗಳು ಕೂಡ ಉತ್ತಮ ಪ್ರದರ್ಶನ ನೀಡಿ, 136ಕ್ಕೆ ಬಾಂಗ್ಲಾದೇಶ್ ತಂಡದ 9 ವಿಕೆಟ್ಸ್ ಪಡೆದಿದ್ದರು, ಆದರೆ ಕೊನೆಯಲ್ಲಿ ಮೆಹೆದಿ ಅವರ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ 51 ರನ್ ಗಳ ಜೊತೆಯಾಟದಿಂದ ಬಾಂಗ್ಲಾದೇಶ್ ಗೆದ್ದಿತು. ಮುಂದಿನ ವರ್ಷದ ಏಕದಿನ ವಿಶ್ವಕಪ್ (ODI World Cup) ಗೆ ಇದು ತಯಾರಿಕೆ ಆಗಿರುವುದರಿಂದ, ವಿಶ್ವಕಪ್ ಸ್ಕ್ವಾಡ್ ನಲ್ಲಿ ಅತ್ಯುತಮ ಆಟಗಾರರು ಇರಬೇಕಾಗುತ್ತದೆ. ಇದನ್ನು ಓದಿ..Cricket News: ಕೇವಲ ಉತ್ತಮ ಪ್ರದರ್ಶನನ ಮೂಲಕ ಏಕದಿನ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಂಡ ಟಾಪ್ ಮೂರು ಆಟಗಾರರು ಯಾರ್ಯಾರು ಗೊತ್ತೇ??

ಏಕದಿನ ವಿಶ್ವಕಪ್ ಬಗ್ಗೆ ಮಾತನಾಡಿದ ದಿನೇಶ್ ಕಾರ್ತಿಕ್ (Dinesh Karthik) ಅವರು, ಹಿಂದಿನ ಪಂದ್ಯ ನೋಡಿ, ಮೊಹಮ್ಮದ್ ಸಿರಾಜ್ ಅವರು ಬೆಸ್ಟ್ ಬೌಲರ್ ಎಂದು ಹೇಳಿದ್ದಾರೆ, “ಹೊಸ ಬಾಲ್ ಜೊತೆಗೆ ಸಿರಾಜ್ ಅವರು ಅಪಾಯಕಾರಿ ಬೌಲಿಂಗ್ ಮಾಡುತ್ತಿದ್ದಾರೆ. ಮಿಡ್ಲ್ ಓವರ್ ಗಳಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಾರೆ, ವಿಕೆಟ್ಸ್ ಅನ್ನು ಸಹ ಪಡೆಯುತ್ತಾರೆ. ಮುಂದಿನ ವಿಶ್ವಕಪ್ ಗೆ ಬಿಸಿಸಿಐ (BCCI) ಆಯ್ಕೆಮಾಡುವ ತಂಡದಲ್ಲಿ ಸಿರಾಜ್ ಅವರು ಮೊದಲ ಸಾಲಿನಲ್ಲಿ ಇರುವುದು ಖಂಡಿತ. ಇವರು ಜಸ್ಪ್ರೀತ್ ಬುಮ್ರ (Jasprit Bumrah) ಅವರಿಗೆ ಉತ್ತಮವಾಗಿ ಸಾಥ್ ನೀಡುತ್ತಾರೆ. ಸಿರಾಜ್ ಅವರು ಈಗ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ, ಸೌತ್ ಆಫ್ರಿಕಾ ವಿರುದ್ಧದ ಸೀರೀಸ್ ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದಿದ್ದರು. ನ್ಯೂಜಿಲೆಂಡ್ ವಿರುದ್ಧದ ಸೀರೀಸ್ ನಲ್ಲೂ ಉತ್ತಮ ಪ್ರದರ್ಶನ ನೀಡಿದರು. ವಿಶ್ವಕಪ್ ಗೆ ಆಯ್ಕೆಯಾಗುವ ಮೊದಲ ಬೌಲರ್ ಇವರೇ ಆಗಿರುತ್ತಾರೆ..” ಎಂದು ಹೇಳಿದ್ದಾರೆ ದಿನೇಶ್ ಕಾರ್ತಿಕ್. ಇದನ್ನು ಓದಿ.. Money Business: ಕೇವಲ 50 ಸಾವಿರ ಹೂಡಿಕೆ ಮಾಡಿದರೆ ಲಕ್ಷ ಲಕ್ಷ ಗಳಿಸುವ ಉತ್ತಮ ಬ್ಯುಸಿನೆಸ್ ಐಡಿಯಾ ಯಾವುದು ಗೊತ್ತೇ??

Get real time updates directly on you device, subscribe now.